Balagavi News:
ನವದೆಹಲಿ: ಗ್ರೇಟರ್ ನೋಯ್ಡಾದ ಧೂಮ್ ಮಾಣಿಕ್ ಪುರ ಪ್ರದೇಶದಲ್ಲಿರುವ ರೆಂಟೊಮೊಜೊ ಕಂಪನಿಯ ಗೋದಾಮಿನಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು. ಲಕ್ಷಾಂತರ ರೂಪಾಯಿ ಮೌಲ್ಯದ ಸರಕುಗಳು ಬೆಂಕಿಗೆ ಆಹುತಿಯಾಗಿವೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ ಎಂಬುದು ಸಮಾಧಾನದ ಸಂಗತಿಯಾಗಿದೆ.
ಮಂಗಳವಾರ ತಡರಾತ್ರಿ ಸಂಭವಿಸಿದ ಈ ಅವಘಡದಲ್ಲಿ ಗೋದಾಮಿನಲ್ಲಿದ್ದ ರೆಫ್ರಿಜಿರೇಟರ್ ಗಳು, ಏರ್ ಕೂಲರ್ ಗಳು ಹಾಗೂ ವಿವಿಧ ಪೀಠೋಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಬೆಂಕಿಯ ತೀವ್ರತೆ ಎಷ್ಟರ ಮಟ್ಟಿಗೆ ಇದೆಂದರೆ, ದಟ್ಟ ಕಪ್ಪು ಹೊಗೆ ಹಲವು ಕಿಲೋಮೀಟರ್ ಗಳ ದರದಿಂದಲೂ ಗೋಚರಿಸಿತು.
ಘಟನೆ ಕುರಿತು ಮಾಹಿತಿ ದೊರೆಯುತ್ತದಂತೆಯೇ ಅಗ್ನಿಶಾಮಕ ದಳದ 16 ವಾಹನಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಚರಣೆ ಆರಂಭಿಸಿವೆ. ಸುಮಾರು 5 ಗಂಟೆಗಳ ಕಾಲ ನಿರಂತರವಾಗಿ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಅಧಿಕಾರಿಗಳು ಯಶಸ್ವಿಯಾದರು.
ಪ್ರಾಥಮಿಕ ತನಿಖೆಯ ಪ್ರಕಾರ, ತಡರಾತ್ರಿ ಬೀಸಿದ ಬಿರುಗಾಳಿಯಿಂದ ಬಲ್ಬ್ ಒಡೆದು ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಅದೇ ಬೆಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಬೆಂಕಿ ಕಾಣಿಸಿಕೊಂಡ ಕೆಲವೇ ಕ್ಷಣಗಳಲ್ಲಿ ಅದು ಗೋದಾಮಿನಾದ್ಯಂತೆ ವೇಗವಾಗಿ ಹರಡಿದ್ದು. ಭಾರಿ ಪ್ರಮಾಣದ ಆಸ್ತಿ ನಷ್ಟ ಉಂಟಾಗಿದೆ.
ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದು. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದರ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ. ಘಟನೆಯಿಂದ ಕಂಪನಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡ ಕೊಡಲೇ ಅಗ್ನಿಶಾಮಕ ದಡಕ್ಕೆ ಮಾಹಿತಿ ನೀಡಲಾಗಿತ್ತು. ಆರಂಭದಲ್ಲಿ ಎರಡು ಅಗ್ನಿಶಾಮಕ ವಾಹನಗಳನ್ನು ಸ್ಥಳಕ್ಕೆ ರವಾನಿಸಲಾಗಿದ್ದರು, ಬೆಂಕಿಯ ತೀವ್ರತೆ ಹಚ್ಚಿದ್ದ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಅಗ್ನಿಶಾಮಕ ಠಾಣೆಗಳಿಂದ ಹೆಚ್ಚುವರಿ ಘಟಕಗಳನ್ನು ಕರೆಸಲಾಯಿತು. ಬಳಿಕ ಸುಮಾರು 16 ಅಗ್ನಿಶಾಮಕ ದಳಗಳ ಸಿಬ್ಬಂದಿ ಹಲವು ಗಂಟೆಗಳ ಕಾಲ ನಿರಂತರ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಬೆಂಕಿಯಿಂದ ಗೋದಾಮಿನಲ್ಲಿದ್ದ ರೆಫ್ರಿಜಿರೇಟರ್ ಗಳು, ಏರ್ ಕೂಲರ್ ಗಳು ಹಾಗೂ ವಿವಿಧ ಪಿಠೋಪಕರಣಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ದಟ್ಟ ಕಪ್ಪು ಹೊಗೆ ಆಕಾಶದವರೆಗೂ ವ್ಯಾಸಿ ಸಿದ್ದರಿಂದ ಸ್ಥಳಿಯರಲ್ಲಿ ಆತಂಕ ಮನೆ ಮಾಡಿತ್ತು.
ಘಟನೆಯ ಕುರಿತು ಮಾತನಾಡಿದ ಪ್ರತ್ಯಕ್ಷ ದರ್ಶಿ ಜಿತೇಂದ್ರ ಬಾಬಾ, "ಬೆಂಕಿಯ ತೀವ್ರತೆ ಭಾರಿ ಪ್ರಮಾಣದಲ್ಲಿತ್ತು. ಆದರೆ ಅದೃಷ್ಟಶಾತ್ ಯಾರು ಗೋದಾಮಿನೊಳಗೆ ಸಿಲುಕಿಕೊಂಡಿರಲಿಲ್ಲ, "ಎಂದು ತಿಳಿಸಿದ್ದಾರೆ.
ಅಗ್ನಿಶಾಮಕ ಅಧಿಕಾರಿ ಪ್ರದೀಪ್ ಕುಮಾರ್ ಚೌಬೆ ಮಾಹಿತಿ ನೀಡಿ, "ರಾತ್ರಿ ಸಮಯವಾಗಿದ್ದ ಕಾರಣ ಗೋದಾಮಿನಲ್ಲಿ ಯಾವುದೇ ಸಿಬ್ಬಂದಿ ಇರಲಿಲ್ಲ. ಬೆಂಕಿಯ ತೀವ್ರತೆಯನ್ನು ಗಮನಿಸಿ ಸುತ್ತಮುತ್ತಲಿನ ಜಿಲ್ಲೆಗಳ ಅಗ್ನಿಶಾಮಕ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಹೆಚ್ಚುವರಿ ವಾಹನಗಳನ್ನು ನಿಯೋಜಿಸಲಾಯಿತು. ಘಟನೆಯ ನಿಖರ ಕಾರಣ ಪತ್ತೆ ಹಚ್ಚಲು ತನಿಖೆ ನಡೆಸಲಾಗುವುದು, "ಎಂದು ತಿಳಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬಿರುಗಾಳಿಯಿಂದ ಬಲ್ಬ್ ಒಡೆದು ಶಾರ್ಟ್ ಸರ್ಕ್ಯೂಟ್ ಉಂಟಾಗಿದ್ದು, ಅದೇ ಬೆಂಕಿಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಆದರೆ ನಿಖರ ಕಾರಣ ತನಿಖೆಯ ನಂತರವೇ ತಿಳಿಯಲಿದೆ.
Also Read:
ಜೆಡಿಎಸ್ - ಬಿಜೆಪಿ ಮೈತ್ರಿ ವಿರುದ್ಧ ಕಾಂಗ್ರೆಸ್ ಕುತಂತ್ರ : ಕುಮಾರಸ್ವಾಮಿ ವಾಗ್ದಾಳಿ