<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಫೈವ್ ಕಿಲ್ಲೆಡ್ ಇನ್ ಹಾರ್ರಿಫಿಕ್ ಬೈಕ್ ರೇಸ್ ಆಕ್ಸಿಡೆಂಟ್

ಫೈವ್ ಕಿಲ್ಲೆಡ್ ಇನ್ ಹಾರ್ರಿಫಿಕ್ ಬೈಕ್ ರೇಸ್ ಆಕ್ಸಿಡೆಂಟ್
Summary: Five people, including children, died in a horrific accident during a bike race when their sports bike collided with a car. The tragic incident, which was caused by speeding, has raised concerns among locals. The police have registered a case and started an investigation.

Belagavi News:

ಮೆಹಬೂಬ್ ನಗರ (ತೆಲಂಗಾಣ): ವೇಗವಾಗಿ ಬಂದ ಸ್ಪೋರ್ಟ್ಸ್ ಬೈಕ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಇವರು ಸಾವನ್ನಪ್ಪಿದ್ದ ದಾರುಣ ಘಟನೆ ಮೆಹಬೂಬ್ ನಗರದ ಹೊರವಲಯದಲ್ಲಿ ತಡರಾತ್ರಿ ನಡಿದಿದೆ. ನಗರದ ಬೈಪಾಸ್ ರಸ್ತೆಯ ಪಾಲಗೊಂಡ ಜಂಕ್ಷನ್ ನಲ್ಲಿ ಭಾನುವಾರ ಮಧ್ಯರಾತ್ರಿ ಈ ಭೀಕರ ಅಪಘಾತ ಸಂಭವಿಸಿದೆ.

ಸ್ಥಳೀಯ ನಿವಾಸಿಗಳು ಹಾಗೂ ಪೊಲೀಸರ ಪ್ರಕಾರ ಬಾಸಿತ್ ಕುಟುಂಬ ಸದಸ್ಯರೊಂದಿಗೆ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ. ಕಾರು ಪಾಲಕೊಂಡ ಜಂಕ್ಷನ್ ಯು- ಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಅತಿ ವೇಗದಲ್ಲಿ ಬಂದ ಸ್ಪೋರ್ಟ್ಸ್ ಬೈಕ್ ವಾಹನದ ಹಿಂಭಾಗಕ್ಕೆ ಡಿಕ್ಕಿ ಹೊಡೆದಿದೆ.

ಈ ಭೀಕರ ಅಪಘಾತದಲ್ಲಿ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಬಾಸಿತ್ ಅವನ ಪತ್ನಿ ಸಾರಾ (30), 9 ವರ್ಷದ ಮಗ ಹುಜೈಫಾ ಮತ್ತು 18 ತಿಂಗಳ ಮಗು ಅಮ್ಮರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಪೋರ್ಟ್ಸ್ ಬೈಕ್ ಸವಾರ ಹೈದರಾಬಾದ್ ನ ದಿವಾನ್ ದೇವ್ಡಿ ಪ್ರದೇಶದ ನಿವಾಸಿ ಅವೆಜ್ (26) ಕೂಡ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿಯಲ್ಲಿ ಕುಳಿತಿದ್ದ ಸ್ನೇಹಿತ ಮೆಹದಿಪಟ್ನಂನ ಯಾಕುಬ್ ಅಫ್ಜಲ್ (25) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

Sponsored

ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಹಲವರು ಕೂಡ ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಬಾಸಿತ್ ಅವರ ಸಹೋದರ ಮಾವನ ಪತ್ನಿ ರೇಷ್ಮಾ, ಅವರ ಮೂರು ವರ್ಷದ ಮಗು ಇಮಾದ್ ಹಾಗೂ ಬಾಸಿತ್ ಅವರ ಚಿಕ್ಕಮ್ಮ ಗೌಸಿಯಾ ಬೇಗಂ ಗಾಯಗೊಂಡಿದ್ದಾರೆ. ಇಮಾದ್ ಸ್ಥಿತಿ ಗಂಭೀರವಾಗಿದ್ದು ಕಾರು ಚಲಾಯಿಸುತ್ತಿದ್ದ ಬಾಸಿತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಕ್ರಿಶ್ಚಿಯನ್ ಪಲ್ಲಿಯಲ್ಲಿರುವ ಪಂಕ್ಷನ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಔತಣಕೂಟದಲ್ಲಿ ಭಾಗವಹಿಸಲು ಹೈದರಾಬಾದ್ ನಿಂದ ಯುವಕರ ಗುಂಪು ಬಂದಿತ್ತು. ಸುಮಾರು 12 ಸ್ಪೋರ್ಟ್ಸ್ ಬೈಕ್ಗಳಲ್ಲಿ ಆಗಮಿಸಿದ್ದ ಯುವಕರು ಕಾರ್ಯಕ್ರಮದ ಬಳಿಕ ಹೈದರಾಬಾದ್ ಗೆ ಯಾರು ಬೇಗ ತಲುಪುತ್ತಾರೆ ಎಂಬ ಸ್ಪರ್ಧೆಯಲ್ಲಿ ತೊಡಗಿಕೊಂಡು ವೇಗದ ಚಾಲನೆ ನಡೆಸಿದ್ದಾರೆ. ಅದೇ ರೀತಿ ವೇಗದ ಚಾಲನೆಯೇ ಈ ದುರಂತ ಗೆ ಕಾರಣವಾಗಿದೆ ಎಂದು ಪೊಲೀಸ್ ತನಿಕೆಯಿಂದ ತಿಳಿದು ಬಂದಿದೆ.

11 ಬೈಕಗಳು ಪಾಲಗೊಂಡ ಜಂಕ್ಷನ್ ನಿಂದ ಸುರಕ್ಷಿತವಾಗಿ ದಾಟಿದ್ದವು. ಆದರೆ ಕೊನೆಯ ಬೈಕ್ ನಿಯಂತ್ರಣ ತಪ್ಪಿ ಬಾರ್ಸಿ ಅವರ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಸ್ಥಳೀಯರು ಮಧ್ಯ ಪ್ರವೇಶಿಸುವ ಮೊದಲು ಕೆಲವು ಬೈಕ್ ಸವಾರರು ಮೃತ ಸ್ನೇಹಿತರ ಶವಗಳನ್ನು ಅಪಘಾತ ಸ್ಥಳದಿಂದ ಸ್ಥಳಾಂತರಿಸಲು ಪ್ರಯತ್ನಿಸಿದ ಘಟನೆ ನಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಈ ವೇಳೆ ಉಂಟಾದ ಗೊಂದಲ ಮತ್ತು ಆಕ್ರೋಶದ ನಡುವೆ ಹಲವಾರು ಬೈಕ್ ಸವಾಲರು ಸ್ಥಳದಿಂದ ಪರಾರಿ ಯಾಗಿದ್ದಾರೆ ಎಂದು ವರದಿಯಾಗಿದೆ .

ಈ ದುರಂತ ಘಟನೆಯು ಹೆದ್ದಾರಿಗಳು ಮತ್ತು ಬೈಪಾಸ್ ರಸ್ತೆಗಳಲ್ಲಿ ಸ್ಪೋರ್ಟ್ಸ್ ಬೈಕ್ ಸವಾರರ ಅಜಾಗರೂಕ ಚಾಲನೆ ಅಕ್ರಮ ರೇಸಿಂಗ್ ಮತ್ತು ಅತಿ ವೇಗದ ಚಾಲನೆ ಕುರಿತು ಗಂಭೀರ ಕಳವಳವನ್ನು ಹುಟ್ಟು ಹಾಕಿದೆ.

Sponsored

Also Read:

ವಿಧಾನಸಭೆಯಲ್ಲಿ ವಿಜಯ್ ಮೊದಲ ಭಾಷಣ : ಜನತೆಗೆ ನೀಡಿದ ಮಾತು ಈಡೇರಿಸುವ ಸಂಕಲ್ಪ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online