<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Sports

French Open 2026: ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆದ್ದು ಇತಿಹಾಸ ಸೃಷ್ಟಿಸಿದ ಅಲೆಕ್ಸಾಂಡರ್ ಜ್ವೆರೆವ್ !

French Open 2026: ಚೊಚ್ಚಲ ಗ್ರ್ಯಾಂಡ್ ಸ್ಲಾಮ್ ಗೆದ್ದು ಇತಿಹಾಸ ಸೃಷ್ಟಿಸಿದ ಅಲೆಕ್ಸಾಂಡರ್ ಜ್ವೆರೆವ್ !
Summary: German tennis star Alexander Zverev has made a historic achievement in the French Open 2026 tournament. He won the first Grand Slam title of his career and wrote a new chapter in tennis history. He gave a wonderful performance in the final match. Zverev has fulfilled a dream of many years.

belagavi news :

ಪ್ಯಾರಿಸ್ : ಜರ್ಮನಿಯ ಟೆನಿಸ್ ತಾರೆ ಅಲೆಕ್ಸಾಂಡರ್ ಜ್ವೆರೆವ್ ತಮ್ಮ ವೃತ್ತಿಜೀವನದ ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. 2026 ರ ಫ್ರೆಂಚ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಇಟಲಿಯ ಫ್ಲೇವಿಯೊ ಕೊಬೊಲಿಯನ್ನು ಮಣಿಸಿದ ಜ್ವೆರೆ ವ್, ಚೊಚ್ಚಲ ಬಾರಿಗೆ ಗ್ರ್ಯಾಂಡ್ ಸ್ಲಾಮ್ ಟ್ರೋಫಿಗೆ ಮುತ್ತಿಟ್ಟರು.

ರೋಚಕವಾಗಿ ನಡೆದ ಫೈೆನಲ್ ಪಂದ್ಯದಲ್ಲಿ ಎರಡನೇಶ್ರೇಯಾಂಕಿತ ಜ್ವೆರವ್ 6-1, 4-6, 6-4, 6-7, 6-1 ಸೆಟ್ ಗಳಿಂದ ಗೆಲುವು ಸಾಧಿಸಿದರು. ಸುಮಾರು 4 ಗಂಟೆ 16ನಿಮಿಷಗಳ ಕಾಲ ನಡೆದ ಈ ಹಣಾಹಣಿಯಲ್ಲಿ ಇಬ್ಬರೂ ಆಟಗಾರರು ಅದ್ಬುತ ಪ್ರದರ್ಶನ ನೀಡಿದರು. ಆದರೆ ನಿರ್ಣಾಯಕ ಐದನೇ ಸೆಟ್ ನಲ್ಲಿ ಜ್ವೆರೆವ್ ಸಂಪೂರ್ಣ ಮೇಲುಗೈ ಸಾಧಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡುರು.

ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಜ್ವೆರೆವ್ ಮೊದಲ ಸೆಟ್ ಅನ್ನು 6-1 ಅಂತರದಿಂದ ಸುಲಭವಾಗಿ ಗೆದ್ದುಕೊಂಡರು. ಆದರೆ ಇವಯ ಯುವ ಆಟಗಾರ ಕೊಬೊಲಿ ಎರಡನೇ ಸೆಟ್ ನಲ್ಲಿ ಭರ್ಜರಿ ಪುನರಾಗಮನ ಮಾಡಿ 6-4 ಅಂತರದಿಂದ ಸೆಟ್ ಗೆದ್ದರು. ಮೂರನೇ ಸೆಟ್ ನಲ್ಲಿ ಜ್ವೆರೆವ್ ಮತ್ತೊಮ್ಮೆ ಹಿಡಿತ ಸಾಧಿಸಿದರೆ, ನಾಲ್ಕನೇ ಸೆಟ್ ನಲ್ಲಿ ಕೊಬೊಲಿ ಟೈ ಬ್ರೇಕರ್ ನಲ್ಲಿ 7-5 ಅಂತರದಿಂದ ಗೆದ್ದು ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ಕೊಂಡೊಯ್ದರು.

Sponsored

ಐದನೇ ಹಾಗೂ ಅಂತಿಮ ಸೆಟ್ ನಲ್ಲಿ ಜ್ವೆರೆವ್ ತಮ್ಮ ಅನುಭವವನ್ನು ಪ್ರದರ್ಶಸಿದರು. ಆರಂಭದಲ್ಲೇ ಕೊಬೊಲಿಯ ಸರ್ವ್ ಮುರಿದು ಮುನ್ನಡೆ ಸಾಧಿಸಿದಿ ಅವರು, ಮತ್ತೊಮ್ಮೆ ಬ್ರೇಕ್ ಪಡೆದು ಎದುರಾಳಿಯ ಚಾಂಪಿಯನ್ ಕನಸಿಗೆ ತೆರೆ ಎಳೆದರು. ಅಂತಿಮವಾಗಿ 6-1 ಅಂತರದಿಂದ ಸೆಟ್ ಗೆದ್ದು ಫ್ರೆಂಚ್ ಓಪನ್ 2026ರ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಇನ್ನೊಂದೆಡೆ, ಕೇವಲ 24 ವರ್ಷದ ಫ್ಲೇವಿಯೊ ಕೊಬೊಲಿಗೆ ಇದು ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಫೈನಲ್ ಆಗಿತ್ತು. ಸೋಲಿನ ನಡುವೆಯೂ ಅವರು ನೀಡಿದ ಹೋರಾಟ ಟೆನಿಸ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

ಈಗೆಲುವಿನೊಂದಿಗೆ ಅಲೆಕ್ಸಾಂಡರ್ ಜ್ವೆರೆವ್ ತಮ್ಮ ವೃತ್ತಿಜೀವನದ ಬಹುದಿನಗಳ ಕನಸಾದ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದು ಟೆನಿಸ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದ್ದಾರೆ.

1937 ರಲ್ಲಿ ಜರ್ಮನಿಯ ಹನ್ರಿಕ್ ಹೆಂಕೆಲ್ ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿಯನ್ನು ಗೆದ್ದ ನಂತರ, ಜರ್ಮನ್ ಆಟಗಾರನೊಬ್ಬ ಫ್ರೆಂಚ್ ಓಪನ್ ಟ್ರೋಫಿ ಎತ್ತಿಹಿಡಿದಿರುವುದು ಇದೇಮೊದಲ ಬಾರಿ. ಹೀಗಾಗಿ ಸುಮಾರು 89 ವರ್ಷಗಳ ಬಳಿಕ ಜರ್ಮನಿಗೆ ಫ್ರೆಂಚ್ ಓಪನ್ ಕಿರೀಟ ದೊರೆತಂತಾಗಿದೆ.

Sponsored

ಇಟಲಿಯ ಫ್ಲೇವಿಯೊ ಕೊಬೊಲಿ ವಿರುದ್ದ ನಡೆದ ರೋಚಕ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಜ್ವೆರೆವ್ 6-1, 4-6, 6-4, 6-7, 6-1 ಸೆಟ್ ಗಳಿಂದ ಜಯ ಸಾಧಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ನಾಲ್ಕು ಗಂಟೆ 16 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಇಬ್ಬರು ಆಟಗಾರರು ಅದ್ಬುತ ಪ್ರದರ್ಶನ ನೀಡಿದರೂ, ಅಂತಿಮ ಸೆಟ್ ನಲ್ಲಿ ಜ್ವೆರೆವ್ ಅನುಭವ ಮೇಲಗೈ ಸಾಧಿಸಿತು.

ಬೋರಿಸ್ ಬೆಕರ್ ಬಳಿಕ ಮತ್ತೊಬ್ಬ ಜರ್ಮನ್ ಚಾಂಪಿಯನ್:

ಅಲೆಕ್ಸಾಂಡರ್ ಜ್ವೆರೆವ್ ಗಿಂತ ಮೊದಲು ಜರ್ಮನಿಯ ಪರ ಕೊನೆಯ ಗ್ರ್ಯಾಂಡ್ ಸ್ಲಾಮ್ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದ ಆಟಗಾರ ಬೋರಿಸ್ ಬೆಕರ್ ಆಗಿದ್ದರು. ಅವರು 1996 ರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆದ್ದಿದ್ದರು. ಇದೀಗ ಸುಮಾರು ಮೂರು ದಶಕಗಳ ಬಳಿಕ ಜ್ವೆರೆವ್ ಗ್ರ್ಯಾಂಡ್ ಸ್ಲಾಮ್ ಗೆದ್ದು ಜರ್ಮನ್ ಟೆನಿಸ್ ಗೆ ಹೊಸ ಗೌರವ ತಂದಿದ್ದಾರೆ.

ಅಪೂರ್ಣವಾಗಿದ್ದ ಕನಸು ನನಸು:

Sponsored

ಎಟಿಪಿ ಫೈನಲ್ ಮಸ್ಟರ್ಸ್ 1000 ಪ್ರಶಸ್ತಿಗಳು ಹಾಗೂ ಟೊಯೋಕ್ಯೋ ಒಲಂಪಿಕ್ಸ್ ಚಿನ್ನದ ಪದಕ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿದ್ದ ಜ್ವೆರೆವ್ ಗೆ ಗ್ರಾಂಡ್ ಸ್ಲಾಮ್ ಮಾತ್ರ ಕೈಗೆ ಸಿಕ್ಕಿರಲಿಲ್ಲ, 2020ರ ಯುಎಎಸ್ ಓಪನ್, 2024ರ ಫ್ರೆಂಚ್ ಓಪನ್ ಹಾಗೂ 2025 ರ ಆಸ್ಟ್ರೇಲಿಯನ್ ಓಪನ್ ಫೈನಲ್ ಗಳಲ್ಲಿ ಸೋಲು ಕಂಡಿದ್ದ ಅವರು ಕೊನೆಗೂ ಫ್ರೆಂಚ್ ಓಪನ್ 20206ರಲ್ಲಿ ಕನಸಿನ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಟೂರ್ನಿಯಾ ಫೇವರಿಟ್ ಆಗಿ ಹೊರಹಮ್ಮಿದ್ದ ಜೈರವ್:

ಫ್ರೆಂಚ್ ಓಪನ್ ಮೊದಲು ವಾರದಲ್ಲಿ ಅಗ್ರ ಶ್ರೇಯಾಂಕಿತ ಯಾನಿಕ ಸಿನ್ನರ ಅಚ್ಚರಿಯ ಸೋಲು ಕಂಡು ಟರ್ನಿಯಿಂದ ಹೊರ ಬಿದ್ದಿದ್ದರೂ ಬಳಿಕ 24 ಬಾರಿ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ನೊವಾಕ ಜೋಕೋ ವಿಚ್ ಕೂಡ ಸೋಲಿನ ಆಘಾತ ಅನುಭವಿಸಿದ್ದರು. ಇದೆ ವೇಳೆ ಗಾಯದ ಕಾರಣದಿಂದ ಹಾಲಿ ಚಾಂಪಿಯನ್ ಕಾರ್ಲೋಸ್ ಅಲ್ಕರಾದ ಟೂರ್ನಿಯಿಂದ ದೂರು ಉಳಿದಿದ್ದರು.

ಈ ಬೆಳವಣಿಗೆಗಳ ಬಳಿಕ ಅಲೆಕ್ಸಾಂಡರ್ ಜಯರವ್ ಪ್ರಶಸ್ತಿ ಗೆಲ್ಲುವ ಪ್ರಮುಖ ಸ್ಪರ್ಧಿಯಾಗಿ ಹೊರಹಮ್ಮಿದ್ದರೂ ನಿರೀಕ್ಷೆಯಂತೆ ಅವರು ಅದ್ಭುತ ಪ್ರದರ್ಶನ ನೀಡಿ ತಮ್ಮ ಮೊದಲ ಗ್ರ್ಯಾಂಡ್ ಸ್ಲಾಮ್ ಟ್ರೋಫಿಯನ್ನು ಗೆದ್ದು ಟೆನಿಸ್ ಅಭಿಮಾನಿಗಳ ಮನೆಗೆದ್ದಿದ್ದಾರೆ .

Sponsored

Also Read:

ದಕ್ಷಿಣ ಫಿಲಿಫೈನ್ಸ್ ನಲ್ಲಿ ಬಾರಿ ಭೂಕಂಪ: 7.8 ತೀವ್ರತೆ, ಕೆಲವೆಡೆ ಸುನಾಮಿ ಅಲೆಗಳ ಆತಂಕ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online