Belagavi News:
ಬೆಂಗಳೂರು ನಗರದ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ತ್ಯಾಜ್ಯ ಸಮಸ್ಯೆ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ, ಇನ್ಮುಂದೆ ಸಂಜೆ ವೇಳೆಯಲ್ಲೂ ಆಟೋ ಟಿಪ್ಪರ್ಗಳ ಮೂಲಕ ಸಂಗ್ರಹಿಸುವಂತೆ ಮುಕ್ತ ಆಯುಕ್ತ ಎಂ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದಲ್ಲಿ ಕಸ ರಾಶಿಯಾಗುವುದನ್ನು ತಡೆಯುವ ಉದ್ದೇಶದಿಂದ ಅಗತ್ಯವಿರುವ ಪ್ರದೇಶಗಳಲ್ಲಿ ಹೆಚ್ಚುವರಿ ಆಟೋ ಟಿಪ್ಪರ್ ಗಳನ್ನು ನಿಯೋಜಿಸಿ, ಕಸವನ್ನು ಸಕಾಲದಲ್ಲಿ ಸಂಗ್ರಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದರಿಂದ ಕಸದ ಸಮಸ್ಯೆ ಹೆಚ್ಚಿರುವ ಬಡಾವಣೆಗಳಲ್ಲಿ ಸ್ವಚ್ಛತೆ ಕಾಪಾಡಲು ಸಹಕಾರಿಯಾಗುತ್ತದೆ. ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾರ್ವಜನಿಕರೂ ಕಥದಲ್ಲಿ ನಿರ್ವಹಣೆಯಲ್ಲಿ ಸಹಕರಿಸುವಂತೆ ಮುಖ್ಯ ಆಯುಕ್ತರು ಮನವಿ ಮಾಡಿದ್ದಾರೆ. ಯಾವುದೇ ಪ್ರದೇಶದಲ್ಲಿ ಕಸ ರಾಶಿಯಾಗಿದ್ದರೆ ಅಥವಾ ಆಟೋ ಟಿಪ್ಪರ್ ನಿಗದಿತ ಸಮಯಕ್ಕೆ ಬಾರದಿದ್ದರೆ ತಕ್ಷಣವೇ ನಿಗಮಕ್ಕೆ ಮಾಹಿತಿ ನೀಡುವಂತೆ ಅವರು ಸೂಚಿಸಿದ್ದಾರೆ.
ನಗರ ಸ್ವಚ್ಛತೆ, ಸಾರ್ವಜನಿಕ ಆರೋಗ್ಯ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗುತ್ತದೆ ಜಿಬಿಎ ಈ ಕ್ರಮ ಕೈಗೊಂಡಿದ್ದು, ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸಂಜೀವೆಳೆಯು ಕಸ ಸಂಗ್ರಹ ವ್ಯವಸ್ಥೆ, ಜಾರಿಯಾಗಲಿದೆ.
ಬೆಂಗಳೂರು ಸ್ವಚ್ಛತೆಗೆ ಜಿಬಿಎ ಕಟ್ಟುನಿಟ್ಟಿನ ಕ್ರಮ : ರಸ್ತೆ ಬದಿಯಲ್ಲಿ ಕಸ ಎಸೆದರೆ ಕ್ರಮ, ಸಾರ್ವಜನಿಕರಿಗೆ ಮುಖ್ಯ ಆಯುಕ್ತರ ಮನವಿ:
ನಗರದಲ್ಲಿ ಸ್ವಚ್ಛತೆ ಕಾಪಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ರಸ್ತೆ ಬದಿಯಲ್ಲಿ ಕಸ ಎಸೆಯುವುದನ್ನು ತಡೆಯಲು ಅಧಿಕಾರಿಗಳಿಗೆ ಕಠಿಣ ನಿಗ ವಹಿಸುವಂತೆ ಮುಖ್ಯ ಆಯುಕ್ತರು ಸೂಚನೆ ನೀಡಿದ್ದಾರೆ.
ಕಸದ ನಿರ್ವಹಣೆಯಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದ ಅವರು, ಯಾವುದೇ ಪ್ರದೇಶದಲ್ಲಿ ಕಸ ರಾಶಿಯಾಗಿದ್ದರೆ, ಅಥವಾ ಆಟೋ ಟಿಪ್ಪರ್ ನಿಗದಿತ ಸಮಯಕ್ಕೆ ಬಾರದಿದ್ದರೆ ತಕ್ಷಣವೇ ನಿಗಮಕ್ಕೆ ಮಾಹಿತಿ ನೀಡುವಂತೆ ತಿಳಿಸಿದ್ದಾರೆ.
ಮಾಹಿತಿ ಬಂದ ತಕ್ಷಣ ನಿಗಮದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಲಿದ್ದು, ನಗರದಲ್ಲಿ ಎಲ್ಲೆಡೆ ಸ್ವಚ್ಛತೆ ಕಾಪಾಡಲು ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ಮುಖ್ಯ ಆಯುಕ್ತರು ಹೇಳಿದ್ದಾರೆ. ನಗರದ ತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಧಿಸಲು ಜಿಬಿಎ ಹಲವು ಕ್ರಮಗಳನ್ನು ಜಾರಿಗೆ ತರುತ್ತದೆ.
ಬೆಂಗಳೂರು ಕಸ ಸಮಸ್ಯೆ ನಿವಾರಣೆಗೆ ನಾಗರಿಕ ಸಹಕಾರ ಅಗತ್ಯ : ರಸ್ತೆ ಬದಿಯಲ್ಲಿ ಕಸ ಎಸಿ ಇದ್ದರೆ ಕಠಿಣ ದಂಡದ ಎಚ್ಚರಿಕೆ :
ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾರ್ವಜನಿಕರು ಸಕ್ರಿಯ ಸಹಭಾಗಿತ್ವ ಅತ್ಯಗತ್ಯ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತರು ತಿಳಿಸಿದ್ದಾರೆ. ನಾಗರಿಕರು ನಿಗಮ ದೊಂದಿಗೆ ಕೈಜೋಡಿಸಿದಾಗ ಮಾತ್ರ ತ್ಯಾಜ್ಯ ನಿರ್ವಹಣೆಯನ್ನು ಪರಿಣಾಮಕಾರಿಯಾಗಿ ಸುಧಾರಿಸಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಸ್ವಯಂಸೇವಕರು ರಸ್ತೆ ಬದಿಯಲ್ಲಿ ಕಸ ಎಸ ಯಾದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಎಸೆಯುವವರ ಬಗ್ಗೆ ತಕ್ಷಣ ನಿಗಮದ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
ನಗರವನ್ನು ಸ್ವಚ್ಛವಾಗಿರುವ ನಿಟ್ಟಿನಲ್ಲಿ ನಿಯಮ ಉಲ್ಲಂಘಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಸಯ್ಯ ಅವರ ವಿರುದ್ಧ ಕಠಿಣ ದಂಡಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ನಗರ ಸ್ವಚ್ಛತೆ ಮತ್ತು ಸಮರ್ಪಕ ತ್ಯಾಜ್ಯ ನಿರ್ವಹಣೆಗೆ ಪ್ರತಿಯೊಬ್ಬ ನಾಗರಿಕರ ಸಹಕಾರ ಅಗತ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಬೆಂಗಳೂರು ಕಸ ಸಂಗ್ರಹಕ್ಕೆ ಟೆಕ್ ಟಚ್ - ' ಮಾತ್ರ ' ಆ್ಯಪ್ ಮೂಲಕ ಕಸದ ವಾಹನಗಳ ಮೇಲೆ ಜಿಬಿಎ ನಿಗಾ :
ಬೆಂಗಳೂರಿನಲ್ಲಿ ಕಸ ಸಂಗ್ರಹಕ್ಕೆ ಜಿಬಿಎ ವಾಹನಗಳ ನಿಗದಿತ ಸಮಯಕ್ಕೆ ಬರುವುದಿಲ್ಲ ಎಂಬ ಸಾರ್ವಜನಿಕರ ದೂರುಗಳ ಹಿನ್ನೆಲೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಂತ್ರಜ್ಞಾನ ಆಧಾರಿತ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿದೆ. ' ಮಾತ್ರ' ಆ್ಯಪ್ ಮೂಲಕ ಕಸದ ವಾಹನಗಳ ಸಂಚಾರ ಹಾಗೂ ಕಸ ಸಂಗ್ರಹಣೆ ಪ್ರಕ್ರಿಯೆಯನ್ನು ರಿಯಲ್ ಟೈಮ್ ನಲ್ಲಿ ಮೇಲ್ವಿಚಾರಣೆ ಮಾಡಲು ಯೋಜನೆ ರೂಪಿಸಲಾಗಿದೆ.
ಪ್ರಯೋಗಿಕವಾಗಿ ಬೆಂಗಳೂರು ದಕ್ಷಿಣಾ ನಗರ ಪಾಲಿಕೆ ವ್ಯಾಪ್ತಿಯ ಕೋರಮಂಗಲದಲ್ಲಿ ಈ ಯೋಜನೆ ಜಾರಿಯಲ್ಲಿದ್ದು, ಕಸದ ವಾಹನಗಳ ಚಾಲಕರ ಮೊಬೈಲ್ ಗಳಲ್ಲಿ "ಮಾತ್ರ " ಆ್ಯಪ್ ಅನ್ನು ಅಳವಡಿಸಲಾಗಿದೆ. ವಾಹನಗಳು ನಿಗದಿತ ಮಾರ್ಗದಿಂದ ಬೇರೆಡೆ ಸಂಚರಿಸಿದರೆ ಅಥವಾ ಮಾರ್ಗ ತಪ್ಪಿದರೆ, ಅಧಿಕಾರಿಗಳಿಗೆ ತಕ್ಷಣ ಮಾಹಿತಿ ಲಭ್ಯವಾಗುವಂತೆ ವ್ಯವಸ್ಥೆ ರೂಪಿಸಲಾಗಿದೆ.
ಈ ತಂತ್ರಜ್ಞಾನ ಯಶಸ್ವಿ ಆದರೆ, ಉಳಿದ 4 ನಗರ ಪಾಲಿಕೆಗಳ ವ್ಯಾಪ್ತಿಗೂ "ಮಾತ್ರ" ಆ್ಯಪ್ ಆಧಾರಿತ ಮೇಲ್ವಿಚಾರಣ ವ್ಯವಸ್ಥೆಯನ್ನು ವಿಸ್ತರಿಸಲು ಜಿಬಿಎ ಚಿಂತನೆ ನಡೆಸಿದೆ. ಈ ಕ್ರಮದಿಂದ ಕಸ ಸಂಗ್ರಹಣೆಯಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಸಾರ್ವಜನಿಕರ ದೂರುಗಳು ಕಡಿಮೆಯಾಗುವ ನಿರೀಕ್ಷೆ ಇದೆ.
Also Read: