<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಕ್ಷಮೆಯಾಚಿಸಿದ ಕಾಮಿಡಿಯನ್ : "ಮತ್ತೊಂದು ಅವಕಾಶ ನೀಡಿ"-₹370 ಬಿರಿಯಾನಿ ವಿವಾದ

ಕ್ಷಮೆಯಾಚಿಸಿದ ಕಾಮಿಡಿಯನ್ : "ಮತ್ತೊಂದು ಅವಕಾಶ ನೀಡಿ"-₹370 ಬಿರಿಯಾನಿ ವಿವಾದ
Summary: A conversation about a Rs 370 biryani on a comedy show has turned controversial, with obscene and objectionable remarks by a viewer causing a debate on social media. In the wake of this, the comedian in question has apologized and requested to be given another chance in the future.

belagavi news :

ತೀರ ಅಶ್ಲೀಲ ಹೇಳಿಕೆಗಳನ್ನು ಒಳಗೊಂಡ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿ ಬಾರಿ ವಿವಾದ ಉಂಟಾದ ಬೆನ್ನಲ್ಲೇ ಜನಪ್ರಿಯ ಸ್ಟ್ಯಾಂಡ್ ಅಪ್ ಕಾಮಿಡಿಯನ್ ಪ್ರಣಿತ್ ಮೋರೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದಾರೆ. ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಭಾವನಾತ್ಮಕ ವಿಡಿಯೋ ಹಂಚಿಕೊಂಡು, ತಮ್ಮ ನಡೆಗೆ ವಿಷಾದ ವ್ಯಕ್ತಪಡಿಸಿದ್ದಾರೆ .

ಇತ್ತೀಚೆಗೆ ನಡೆದ ಸ್ಟ್ಯಾಂಡ್-ಅಪ್ ಶೋವೊಂದರಲ್ಲಿ ಪ್ರೇಕ್ಷಕ ಹಿಮಾಂಶು ಜಂಗ್ರಾ ತನ್ನ ವೈಯಕ್ತಿಕ ಘಟನೆಯನ್ನು ಹಂಚಿಕೊಂಡಿದ್ದು, ಅದರಲ್ಲಿ ಡೇಟಿಂಗ್ ವೇಳೆ ಬಿರಿಯಾನಿಗೆ ಖರ್ಚಾದ 370 ರೂಪಾಯಿ ಬಗ್ಗೆ ಮಾತನಾಡುವ ಸಂದರ್ಭದಲ್ಲೇ ಅಶ್ಲೀಲ ಹಾಗೂ ಅಸಭ್ಯ ಹೇಳಿಕೆಗಳು ಸೇರಿಕೊಂಡಿದ್ದವು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿ ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟನೆಗೆ ಸಂಬಂಧಿಸಿ ಪ್ರಣಿತ್ ಮೋರೆ, ಹಿಮಾಂಶು ಜಂಗ್ರಾ ಹಾಗೂ ಡಾ.ಸೇಜಲ್ ಪವಾರ್ ವಿರುದ್ಧ ಮಹಾರಾಷ್ಟ್ರ ಸೈಬರ್ ಪೋಲೀಸರು ದಾಖಲಿಸಿದ್ದಾರೆ. ಈ ಹಿನ್ನಲೆ ಪ್ರಣಿತ್ ಮೋರೆ ಕ್ಷಮೆಯಾಚಿಸಿ, ಸಾರ್ವಜನಿಕರಿಂದ ಎರಡನೇ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.

ತಪ್ಪು ಮಾಡಿರುವುದಾಗಿ ಒಪ್ಪಿಕೊಂಡ ಕಾಮಿಡಿಯನ್:

ವಿಡಿಯೋ ಮೂಲಕ ತಮ್ಮ ಫಾಲೋವರ್ಗನ್ನು ಉದ್ದೇಶಿಸಿ ಮಾತನಾಡಿದ ಪ್ರಣಿತ್ ಮೋರೆ, ತಮ್ಮ ವಿರುದ್ಧದ ಟೀಕೆಗಳನ್ನು ಒಪ್ಪಿಕೊಂಡರು. ಸಂವಾದದ ಸಮಯದಲ್ಲಿ ತಾವು ತಪ್ಪು ಮಾಡಿದಾಗಿ ಒಪ್ಪಿಕೊಂಡರು.

ಈ ವಿವಾದದ ಬಗ್ಗೆ ಬಹಳ ದಿನಗಳಿಂದ ಮಾತನಾಡಬೇಕೆಂದುಕೊಂಡಿದ್ದೆ ಎಂದು ಪ್ರದೀಪ್ ಮೋರೆ ಹೇಳಿದ್ದಾರೆ. ತಮ್ಮ instagram ಖಾತೆ ಸಸ್ಪೆಂಡ್ ಆಗಿದ್ದ ಕಾರಣ ತಕ್ಷಣ ಪ್ರತಿಕ್ರಿಸಲು ಸಾಧ್ಯವಾಗಲಿಲ್ಲ ಎಂದು ಅವರು ತಿಳಿಸಿದ್ದಾರೆ. ವೈರಲ್ ಆಗುತ್ತಿರುವ ವಿಡಿಯೋವನ್ನು ಜನರು ನೋಡಿರುವುದು ತಿಳಿದಿದ್ದು,

ಅದರಿಂದ ತಮಗೆ ದೇಶ ವ್ಯಕ್ತವಾಗುತ್ತಿದೆ ಮತ್ತು ಆದೇಶಕ್ಕೆ ತಾವು ಅರ್ಹನಾಗಿದ್ದೇನೆ ಎಂದು ಬಾಸಿಸುತ್ತೇನೆ ಎಂದು ಹೇಳಿದರು.

ಆ ಸಂದರ್ಭದಲ್ಲಿ ಇದ್ದ ವ್ಯಕ್ತಿ ಬಹಳಷ್ಟು ಅವಹೇಳನಕಾರಿ ಹಾಗೂ ಅಸಭ್ಯ ವಿಷಯಗಳನ್ನು ಹೇಳುತ್ತಿದ್ದರು, ಎಲ್ಲರೂ ನಗುತ್ತಿದ್ದ ಕಾರಣ ತಾನು ಅದೇ ರೀತಿಯಲ್ಲಿ ಪ್ರತಿಕ್ರಿಯಿಸಿದೆ ಎಂದು ಅವರು ವಿವರಿಸಿದ್ದಾರೆ. ಆದರೆ ಅದೇ ತಮ್ಮ ತಪ್ಪು ನಿರ್ಧಾರವಾಗಿದ್ದು, ಅಲ್ಲಿ ಮಧ್ಯಪ್ರವೇಶಸಿ ನಿಲ್ಲಿಸುವ ಅಥವಾ ಸ್ಪಷ್ಟ ನಿಲುವು ತೆಗೆದುಕೊಳ್ಳುವ ಅವಕಾಶ ಇದ್ದರು ಅದನ್ನು ಮಾಡಲಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.

"ನಾನು ಬಯಸಿದರೆ ಅವನನ್ನು ಅಲ್ಲೇ ನಿಲ್ಲಿಸಬಹುದಿತ್ತು ಅಥವಾ ನಿಲುವು ತೆಗೆದುಕೊಳ್ಳಬಹುದಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಅವನಿಗೆ ವೇದಿಕೆ ನೀಡಿದ ಕಾರಣದಿಂದ ಈ ಘಟನೆ ಉಲ್ಬನಗೊಂಡಿತು" ಎಂದು ಅವರು ಹೇಳಿದ್ದಾರೆ.

ಕೊನೆಯಲ್ಲಿ, ಈ ಘಟನೆಯಿಂದ ನೋವು ಅನುಭವಿಸಿದ ಮತ್ತು ಅಸಮಾಧಾನಗೊಂಡ ಎಲ್ಲರಿಗೂ ಕ್ಷಮೆ ಯಾಚಿಸುತ್ತೇನೆ ಎಂದು ಪ್ರಣಿತ್ ಮೋರೆ ಭಾವನಾತ್ಮಕವಾಗಿ ತಿಳಿಸಿದ್ದಾರೆ.

ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಂಪೂರ್ಣ ಸಹಕರಿಸುತ್ತಿರುವುದಾಗಿ ಕಾಮಿಡಿಯನ್ ಪ್ರಣಿತ್ ಮೋರೆ ದೃಢಪಡಿಸಿದ್ದಾರೆ.ತಮ್ಮ ವಿರುದ್ಧ ಯಾವುದೇ ಕಾನೂನು ಕ್ರಮಗಳಿದ್ದರೂ ತಾವು ತನಿಕಾ ಸಂಸ್ಥೆಗಳೊಂದಿಗೆ ಸಹಕರಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ.

ಅದೇ ವೇಳೆ ಸಾರ್ವಜನಿಕರಿಗೆ ಮನವಿ ಮಾಡಿರುವ ಅವರು, "ದಯವಿಟ್ಟು ನನಗೆ ಒಂದು ಅವಕಾಶ ನೀಡಿ. ನಾನು ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸುತ್ತಿದ್ದೇನೆ" ಎಂದು ತಿಳಿಸಿದ್ದಾರೆ. ಈ ಘಟನೆ ತಮ್ಮ ಜೀವನದಲ್ಲಿ ಒಂದು ಮಹತ್ವದ ಪಾಠವಾಗಿದ್ದು, ಅದರಿಂದ ಕಲಿತು ಮುಂದಕ್ಕೆ ಉತ್ತಮವಾಗಿ ನಡೆದುಕೊಳ್ಳುವ ಕೆಲಸ ಮಾಡುತಿರುವುದಾಗಿ ಹೇಳಿದ್ದಾರೆ.

ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ವರ್ತನೆಯನ್ನು ಸುಧಾರಿಸಲು ಪ್ರಯತ್ನಿಸುತ್ತಿರುವುದಾಗಿ ಹೇಳಿರುವ ಅವರು, ಭವಿಷ್ಯದಲ್ಲಿ ತಮ್ಮನ್ನು ಉತ್ತಮ ವ್ಯಕ್ತಿಯಾಗಿ ಜನರು ಕಾಣುವಂತೆ ಮಾಡುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಗುರು ಗ್ರಾಮದಲ್ಲಿ ನಡೆದ ಸ್ಟ್ಯಾಂಡ್ ಅಪ್ ಕಾಮಿಡಿ ಶೋನಲ್ಲಿ ಅಶ್ಲೀಲ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗಿದೆ ಎಂಬ ಆರೋಪವಿದೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವ್ಯಾಪಕವಾಗಿ ವೈರಲ್ ಆದ ಬಳಿಕ ಪ್ರಣಿತ್ ಮೋರೆ, ಹಿಮಾಂಶು ಜಂಗ್ರಾ, ಡಾ.ಸೇಜಲ್ ಪವಾರ್ ಸೇರಿ ಇತರರ ವಿರುದ್ಧ ಮಹಾರಾಷ್ಟ್ರ ಸೈಬರ್ ಎಫ್ ಐ ಆರ್ ದಾಖಲಿಸಿದೆ.

ಮಹಾರಾಷ್ಟ್ರ ಸೈಬರ್:ವಿಡಿಯೋ ವಿವಾದದಲ್ಲಿ ಗಂಭೀರ ಆರೋಪಗಳು

ಮಹಾರಾಷ್ಟ್ರ ಸೈಬರ್ ವಿಭಾಗದ ಪ್ರಕಾರ, ಈ ಪ್ರಕರಣವು ಯುಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ಸೇದಂತೆ ವಿವಿಧ ಆನ್ಲೈನ್ ಪ್ಲಾಟ್ ಫಾರ್ಮ್ ಗಳಲ್ಲಿ ಹಂಚಿಕೊಂಡ ವಿಡಿಯೋಗಳಿಗೆ ಸಂಬಂಧಿಸಿದೆ. ಈ ವಿಡಿಯೋಗಳಲ್ಲಿ ಮಹಿಳೆಯರು, ಅವರ ಒಪ್ಪಿಗೆ ಹಾಗೂ ಮೃತ ವ್ಯಕ್ತಿಗಳ ಕುರಿತು ಅಪೇಕ್ಷರ ಹೇಳಿಕೆಗಳು ಇರುವುದಾಗಿ ಆರೋಪಿಸಲಾಗಿದೆ.

ಒಂದು ಕ್ಲಿಪ್ ನಲ್ಲಿ ಮೃತ ಪುರುಷರ ದೇಹಗಳು ಹಾಗೂ ವೈದ್ಯಕೀಯ ಶಿಕ್ಷಣದಲ್ಲಿ ಬಳಸುವ ಶವಗಳ ಕುರಿತು ಡಾ. ಸೇಜಲ್ ಪವಾರ್ ಅವರು ನೀಡಿದ ಕಾಮಿಡಿಗಳು ಸೇರಿವೆ ಎಂದು ಹೇಳಲಾಗಿದೆ. ಈ ಹೇಳಿಕೆಗಳು ಮೃತರ ಗಣತೆಯ ಅವಮಾನ ಮಾಡುವಂತಿದೆ ಹಾಗೂ ಸಾರ್ವಜನಿಕ ಸಭ್ಯತೆಯ ಅಂಗೀಕೃತ ಮಾನದಂಡಗಳಿಗೆ ವಿರುದ್ಧವಾಗಿವೆ ಎಂದು ಮಹಾರಾಷ್ಟ್ರ ಸೈಬರ್ ಆರೋಪಿಸಿದೆ.

Also Read:

ವದಂತಿಗಳಿಗೆ ತೆರೆ ಹೇಳಿದ ಸಿಎಂ ಡಿಕೆಶಿ : ಪಂಚ ಗ್ಯಾರಂಟಿ ಯೋಜನೆ ಮುಂದುವರಿಕೆ ಖಚಿತ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online