<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಕಾಂಗ್ರೆಸ್ ಸರ್ಕಾರಕ್ಕೆ ಸಮಯ ನೀಡಿ, ಅಸಮಾಧಾನಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ: ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ಸರ್ಕಾರಕ್ಕೆ ಸಮಯ ನೀಡಿ, ಅಸಮಾಧಾನಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ: ಸತೀಶ್ ಜಾರಕಿಹೊಳಿ
Summary: Efforts are being made to resolve the problems of the leaders due to dissatisfaction. Satish Jarkiholi said that the government is still in the takeoff phase and it will take some time to see the results of development works.

Belagavi News:

ಮುಖ್ಯಮಂತ್ರಿ ಆಗಲು ಕೇವಲ ಕೆಪಿಸಿಸಿ ಅಧ್ಯಕ್ಷರಾಗಿರಬೇಕೆಂಬ ನಿಯಮ ಇಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಕೆಲಸ ಮಾಡಿದವರಿಗೆ ಅದರ ಪ್ರತಿಫಲವಾಗಿ ಸಿಗುತ್ತದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಹಾಗೂ ಕೇಳಿದ ಪ್ರಶ್ನೆಗೆ ಉತ್ತರಿಸಿದವರು, ಯಾರಿಗಾದರೂ ಅಸಮಾಧಾನ ಇದ್ದರೆ ಅದನ್ನು ಸರಿಪಡಿಸುವ ಜವಾಬ್ದಾರಿ ಪಕ್ಷ ಮತ್ತು ಸರ್ಕಾರದ ಮೇಲಿದೆ ಎಂದರು. ಸರ್ಕಾರ ಇನ್ನೂ ಟೇಕ್ ಆಫ್ ಹಂತದಲ್ಲಿದ್ದು, ಅಭಿವೃದ್ಧಿ ಯೋಜನೆಗಳು ಹಾಗೂ ಆಡಳಿತದ ಫಲಿತಾಂಶ ಜನರಿಗೆ ತಲುಪಲು ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಸಚಿವ ಸಂಪುಟದಲ್ಲಿ ಹೆಚ್ಚುವರಿ ಖಾತೆ ಕುರಿತು ಪ್ರತಿಕ್ರಿಸಿದ ಸತೀಶ್ ಜಾರಕಿಹೊಳಿ, ಹೆಚ್ಚುವರಿ ಖಾತೆಗಾಗಿ ತಾವು ಬೇಡಿಕೆ ಸಲ್ಲಿಸಿದ್ದಾಗಿ ತಿಳಿಸಿದರು. ಮುಂದುವರೆದ ಸರ್ಕಾರದ ಕಾರ್ಯ ಕ್ಷಮತೆ ಹಾಗೂ ಪಕ್ಷದ ಸಂಘಟನೆಯ ಬಲವರ್ಧನೆಗೆ ಎಲ್ಲ ನಾಯಕರು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

Sponsored

ಕ್ರೀಡಾ ಖಾತೆ ಕೊಟ್ಟಿದ್ದರೆ ಕ್ರಾಂತಿ ಮಾಡುತ್ತಿದ್ದೆವು; ಕರ್ನಾಟಕವನ್ನು ನಂಬರ್ ಒನ್ ಮಾಡುತ್ತಿದ್ದೆವು - ಸತೀಶ್ ಜಾರಕಿಹೊಳಿ:

ಕ್ರೀಡಾ ಖಾತೆ ನೀಡಿದ್ದರೆ ರಾಜ್ಯದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿದ್ದೆವು ಮತ್ತು ಕರ್ನಾಟಕವನ್ನು ದೇಶದಲ್ಲೇ ನಂಬರ್ ವನ್ ಸ್ಥಾನಕ್ಕೆ ತರುತ್ತಿದ್ದೆವು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,ತಾವು ಕ್ರೀಡಾ ಖಾತೆ ನೀಡುವಂತೆ ಮನವಿ ಮಾಡಿದ್ದಾಗಿ ತಿಳಿಸಿದರು. ಆದರೆ ಆ ಖಾತೆಯನ್ನು ಬೇರೆಯವರಿಗೆ ನೀಡಲಾಗಿದೆ ಎಂದು ಹೇಳಿದರು.

" ಹಿಂದೆಯೂ ಧರಂ ಸಿಂಗ್ ಅವರ ಮುಖ್ಯಮಂತ್ರಿ ಅವಧಿಯಲ್ಲಿ ಕ್ರೀಡಾ ಖಾತೆ ಕೇಳಿದ್ದೆ. ಈ ಬಾರಿಯೂ ಕ್ರೀಡಾ ಇಲಾಖೆಯ ಜವಾಬ್ದಾರಿ ನೀಡುವಂತೆ ಮನವಿ ಮಾಡಿದ್ದೆ. ಕ್ರೀಡಾ ಖಾತೆ ಸಿಕ್ಕಿದ್ದರೆ ರಾಜ್ಯದ ಕ್ರೀಡಾ ವ್ಯವಸ್ಥೆಯಲ್ಲಿ ದೊಡ್ಡ ಮಟ್ಟದ ಬದಲಾವಣೆ ತಂದು, ಕರ್ನಾಟಕವನ್ನು ಕ್ರೀಡೆಯಲ್ಲಿ ನಂಬರ್ ಒನ್ ರಾಜ್ಯವನ್ನಾಗಿ ಮಾಡುತ್ತಿದ್ದೆವು" ಎಂದು ಜಾರಕಿಹೊಳಿ ಹೇಳಿದರು.

Sponsored

ಪ್ರಸ್ತುತ ಕ್ರೀಡಾ ಖಾತೆಯನ್ನು ಗೃಹ ಸಚಿವ ಡಾ. ಪರಮೇಶ್ವರ್ ಅವರಿಗೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದವರು,"ಪರಮೇಶ್ವರ್ ಅವರಿಗೆ ಕ್ರೀಡೆ ಬಗ್ಗೆ ವಿಶೇಷ ಆಸಕ್ತಿ ಇದೆ. ಅದಕ್ಕಾಗಿ ಅವರು ಕೇಳಿ ಖಾತೆ ಪಡೆದಿರಬಹುದು " ಎಂದು ಹೇಳಿದರು.

ಸಚಿವರ ಈ ಹೇಳಿಕೆ ರಾಜ್ಯ ರಾಜಕೀಯ ಹಾಗೂ ಸಚಿವ ಸಂಪುಟದ ಖಾತೆ ಹಂಚಿಕೆ ವಿಚಾರದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಸಿಎಂ ಆಗಲು ಕೆಪಿಸಿಸಿ ಅಧ್ಯಕ್ಷರೇ ಆಗಿರಬೇಕೆಂದಿಲ್ಲ; ಕೆಲಸ ಮಾಡಿದವರಿಗೆ ಫಲ ಸಿಗುತ್ತದೆ- ಸತೀಶ್ ಜಾರಕಿಹೊಳಿ:

ಮುಖ್ಯಮಂತ್ರಿ ಆಗಲು ಕೆಪಿಸಿಸಿ ಅಧ್ಯಕ್ಷ ಸ್ಥಾನವೇ ಅಗತ್ಯವಿಲ್ಲ. ಪಕ್ಷಕ್ಕಾಗಿ ಕೆಲಸ ಮಾಡಿದವರಿಗೆ ಅದರ ಪ್ರತಿಫಲ ಸಿಗುತ್ತದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದವರು, ಸಿದ್ದರಾಮಯ್ಯ ಅವರಿಗೆ ಬೆನ್ನಿಗೆ ಚೂರಿ ಹಾಕಲಾಗಿದೆ ಎಂಬ ಆರೋಪದ ಕುರಿತು ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಈ ಬಗ್ಗೆ ಐಟಿ ಸೆಲ್ ಮೂಲಕ ಅಪಪ್ರಚಾರ ನಡೆಸಲಾಗಿತ್ತು. ಕಾಂಗ್ರೆಸ್ ಪಕ್ಷದ ಶಕ್ತಿ ಕುಗ್ಗಿಸುವ ಪ್ರಯತ್ನ ನಡೆದಿತ್ತು ಎಂದು ಅವರು ಆರೋಪಿಸಿದರು.

Sponsored

"ಯತೀಂದ್ರ ಈ ವಿಚಾರವನ್ನು ಈ ಹಿಂದೆಯೇ ಹೇಳಿದ್ದರು, ಈಗಲೂ ಅದನ್ನೇ ಪುನರುಚ್ಚರಿಸಿದ್ದಾರೆ. ಅಹಿಂದ ಸಮುದಾಯವನ್ನು ಇನ್ನಷ್ಟು ಬಲಪಡಿಸುವ ಕೆಲಸ ಮುಂದುವರೆಯಲಿದೆ. ಇದರಿಂದ ನಮಗೆ ಯಾವುದೇ ರಾಜಕೀಯ ಹಾನಿಯಾಗಿಲ್ಲ. ಅಹಿಂದ ಸಂಘಟನೆಗಾಗಿ ನಾವು ಇದ್ದೇವೆ, ಇನ್ನು ಹಲವರು ಇದ್ದಾರೆ. ಕಾಲಕ್ಕೆ ತಕ್ಕಂತೆ ಹೊಸ ಬೇಡಿಕೆಗಳು ಮತ್ತು ಹೊಸ ನಾಯಕತ್ವದ ಚರ್ಚೆಗಳು ಬರುತ್ತಲೇ ಇರುತ್ತವೆ" ಎಂದು ಹೇಳಿದರು.

ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಕುರಿತು ನೀಡುತ್ತಿರುವ ಹೇಳಿಕೆಗಳ ಬಗ್ಗೆ ಪ್ರತಿಕ್ರಿಸಿದವರು,"ಡಿಕೆ ಶಿವಕುಮಾರ್ ಅವರು ಹೇಳಿಕೆ ನೀಡಿದರೆ ಅದರಲ್ಲಿ ತಪ್ಪೇನಿಲ್ಲ. ಅವರು ಪಕ್ಷವನ್ನು ಗೆಲ್ಲಿಸಿದರೆ ಅದರ ಫಲ ಅವರಿಗೆ ಸಿಗುತ್ತದೆ. ಈಗ ಅವರಿಗೆ ಜವಾಬ್ದಾರಿ ಕೊಟ್ಟಿರುವುದು ಕೆಲಸ ಮಾಡಲು. 2028ರ ಚುನಾವಣೆಗೆ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಕೆಲಸ ನಡೆಯಲಿದೆ" ಎಂದರು.

" ನಮಗೆ ಇನ್ನೂ ವಯಸ್ಸಿದೆ, ಸಮಯವು ಇದೆ. ಮುಂದಿನ ದಿನಗಳನ್ನು ಕಾಯೋಣ "ಎಂದು ಹೇಳುವ ಮೂಲಕ ಭವಿಷ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಕುತೂಹಲ ಮೂಡಿಸಿದರು.

Also Read:

Sponsored

ಒಮಾನ್ ಸಮೀಪ 20 ಭಾರತೀಯರಿಂದ ಹಡಗಿನ ಮೇಲೆ ದಾಳಿ:ಅಮೆರಿಕಾದ ಮತ್ತೊಂದು ಅಟ್ಯಾಕ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online