<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಪ್ರಧಾನಿ ಮೋದಿ ಸಂದೇಶದ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ- ಇಂಧನ ಮಾರಾಟ ಅರ್ಧಕ್ಕೆ ಇಳಿಕೆ

ಪ್ರಧಾನಿ ಮೋದಿ ಸಂದೇಶದ ಬೆನ್ನಲ್ಲೇ ಬೆಂಗಳೂರಿನಲ್ಲಿ ಚಿನ್ನ- ಇಂಧನ ಮಾರಾಟ ಅರ್ಧಕ್ಕೆ ಇಳಿಕೆ
Summary: There has been a significant decline in gold and fuel sales in Bengaluru following Prime Minister Narendra Modi's recent message. According to reports, sales of the two categories have fallen by 50 percent, marking a significant change in the market. This change in consumer buying behavior has led to a debate in the trade community.

Belagavi news:

ಬೆಂಗಳೂರು ಮೇ 17: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆರ್ಥಿಕ ಹಿತಾಸಕ್ತಿ ಕಾಪಾಡಲು ಹಾಗೂ ಅಗತ್ಯವಿಲ್ಲದ ಖರ್ಚು ಕಡಿಮೆ ಮಾಡಲು ನೀಡಿರುವ ಕರೆಯ ಬೆನ್ನಲ್ಲೇ ಬೆಂಗಳೂರಿನ ಮಾರುಕಟ್ಟೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದೆ.

ನಗರದಲ್ಲಿ ಚಿನ್ನ ಹಾಗೂ ಬೆಳ್ಳಿ ಮಾರಾಟವು ಶೇಕಡ 50 ರಷ್ಟು ಇಳಿಕೆಯಾಗಿದ್ದು, ಸಾಮಾನ್ಯ ಖರೀದಿ ಚಟುವಟಿಕೆಗಳಲ್ಲಿ ಸ್ಪಷ್ಟ ಕುಸಿತ ದಾಖಲಾಗಿದೆ. ಅದೇ ವೇಳೆ ಪೆಟ್ರೋಲ್ ಮತ್ತು ಡೀಸೆಲ್ ಅಮ್ಮ ಮಾರಾಟದಲ್ಲಿಯೂ ಕೊಂಚ ಇಳಿಕೆ ಕಂಡು ಬಂದಿದ್ದು, ಇಂಧನ ಬಳಕೆಯಲ್ಲಿ ಜಾಗೃತಿ ಹೆಚ್ಚುತ್ತಿರುವ ಸೂಚನೆಗಳು ಗೋಚರಿಸುತ್ತಿವೆ.

ವ್ಯಾಪಾರ ವಲಯದ ಪ್ರಕಾರ, ಗ್ರಾಹಕರ ಖರೀದಿ ಮನೋಭಾವದಲ್ಲಿ ಉಂಟಾದ ಈ ಬದಲಾವಣೆ ಮುಂದಿನ ದಿನಗಳಲ್ಲಿ ಮಾರುಕಟ್ಟೆ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದು ಗಮನಾರ್ಹವಾಗಿದೆ. ತಾತ್ಕಾಲಿಕ ನೆರೆದಿದೆ ಪರಿಣಾಮವೋ ಅಥವಾ ದೀರ್ಘಕಾಲಿನ ಬದಲಾವಣೆಯೋ ಎಂಬುದನ್ನು ಮುಂದಿನ ವಾರಗಳಲ್ಲಿ ಸ್ಪಷ್ಟವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

Sponsored

ನಗರದಲ್ಲಿ ಇಂಧನ ಬಳಕೆಯಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿದ್ದು, ಪೆಟ್ರೋಲ್ ಬಂಕ್ ಗಳಲ್ಲಿ ಪ್ರತಿದಿನ 150 ರಿಂದ 250 ಲೀಟರ್ ಗಳಷ್ಟು ಇಂಧನ ಮಾರಾಟ ಕಡಿಮೆಯಾಗಿದೆ ಎಂದು ವರದಿಯಾಗಿದೆ.

ನಗರದ ನಾಗರಿಕರು ಸ್ವಂತ ವಾಹನಗಳ ಬಳಕೆಯನ್ನು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳಾದ ಮೆಟ್ರೋ ಮತ್ತು ಬಸ್ ಸೇವೆಗಳತ್ತ ಹೆಚ್ಚು ಮುಖ ಮಾಡುತ್ತಿರುವುದು ಈ ಇಳಿಕೆಗೆ ಪ್ರಮುಖ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ. ಇದರಿಂದ ನಗರ ಸಾರಿಗೆ ಮಾದರಿಯಲ್ಲಿ ಕ್ರಮೇಣ ಬದಲಾವಣೆ ಕಾಣಿಸುತ್ತಿದೆ ಎಂದು ವಲಯದವರು ಅಭಿಪ್ರಾಯ ಪಟ್ಟಿದ್ದಾರೆ.

ನಗರದಲ್ಲಿ ಚಿನ್ನಾಭರಣ ಮಾರುಕಟ್ಟೆಯಲ್ಲಿ ಕುಸಿತ ಕಂಡು ಬಂದಿದ್ದು, ಆಭರಣ ಪ್ರಿಯರು ಸಹ ಚಿನ್ನಾಭರಣ ಖರೀದಿಯನ್ನು ಗಣನೀಯವಾಗಿ ಕಡಿಮೆ ಮಾಡಿಕೊಂಡಿದ್ದಾರೆ ಎಂದು ವರ್ತಕರು ತಿಳಿಸಿದ್ದಾರೆ.

ಅಂಗಡಿಗಳು ಗ್ರಾಹಕರಿಲ್ಲದೆ ಪಿಕೋ ಎನ್ನುತ್ತಿದ್ದು, ಸಾಮಾನ್ಯ ಖರೀದಿ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿವೆ. ಮದುವೆ ಹಾಗೂ ಇತರ ಅನಿವಾರ್ಯ ಕಾರ್ಯಕ್ರಮಗಳಿಗಾಗಿ ಮಾತ್ರ ತಾಳಿ, ಬೊಟ್ಟು, ಉಂಗುರಗಳಂತಹ ಅಗತ್ಯ ಚಿನ್ನಾಭರಣಗಳನ್ನು ಜನರು ಖರೀದಿಸುತ್ತಿದ್ದಾರೆ ಎಂದು ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.

Sponsored

ಚಿನ್ನದ ಬೆಲೆ ಏರಿಕೆ ಹಾಗೂ ಖರ್ಚು ನಿಯಂತ್ರಣದ ಮನೋಭಾವ ಈ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಮಾರುಕಟ್ಟೆ ವಲಯದವರು ಅಭಿಪ್ರಾಯಪಟ್ಟಿದ್ದಾರೆ.

Also Read:

ಮಲೆ ಮಹದೇಶ್ವರನ ದರ್ಶನಕ್ಕೆ ಜನಸಾಗರ : ಹನಿ ಅಮಾವಾಸ್ಯೆಗೆ ಭಕ್ತರ ಅಲೆ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online