<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : 'ಟಾಕ್ಸಿಕ್’ ರಿಲೀಸ್ ಡೇಟ್ ಘೋಷಿಸಿದ ಯಶ್

ಯಶ್ ಅಭಿಮಾನಿಗಳಿಗೆ ಗುಡ್ ನ್ಯೂಸ್ : 'ಟಾಕ್ಸಿಕ್’ ರಿಲೀಸ್ ಡೇಟ್ ಘೋಷಿಸಿದ ಯಶ್
Summary: A big update has been released for the much-awaited film ‘Toxic’ starring Rocking Star Yash. The film team has officially announced the release date of the film, further increasing the expectations of the fans. The question of when the film Toxic, which has already created a lot of curiosity with Yash’s stylish look and different storyline, has now been answered.

BELAGVI NEWS :

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಬಹುದಿನಗಳ ಕಾಯುವಿಕೆಗೆ ಕೊನೆಗೂ ಉತ್ತರ ಸಿಕ್ಕಿದೆ. ದೇಶ-ವಿದೇಶಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ಟಾಕ್ಸಿಕ್ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಯಶ್ ಘೋಷಿಸಿದ್ದು, ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಬಹು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಆಗಸ್ಟ್ 26, 2026ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಗೆ ಬರಲಿದೆ.

ಈ ಘೋಷಣೆಯೊಂದಿಗೆ ಚಿತ್ರದ ಬಿಡುಗಡೆ ಕುರಿತು ಹರಿದಾಡುತ್ತಿದ್ದ ಎಲ್ಲ ಊಹಾಪೋಹ ಗಳಿಗೆ ತೆರೆ ಬಿದ್ದಿದೆ.ಆರಂಭದಲ್ಲಿ ಟಾಕ್ಸಿಕ್ ಸಿನಿಮಾ ಇದೇ ವರ್ಷದ ಜೂನ್ 4ರಂದು ಬಿಡುಗಡೆಯಾಗಲಿದೆ ಎನ್ನಲಾಗಿತ್ತು. ಆದರೆ ಜಾಗತಿಕ ಮಾರುಕಟ್ಟೆಯ ಪರಿಸ್ಥಿತಿ, ಅಂತರಾಷ್ಟ್ರೀಯ ಮಟ್ಟದ ಬಿಡುಗಡೆ ಯೋಜನೆಗಳು ಹಾಗೂ ಇತರ ಅನಿವಾರ್ಯ ಕಾರಣಗಳಿಂದ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಮುಂದೂಡಿತು.

ಇದೀಗ ಹೊಸ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಿರುವ ಯಶ್, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು, ಟೀಸರ್ ಅಪ್ಡೇಟ್ಗಳು ಮತ್ತು ಯಶ್ ಅವರ ವಿಭಿನ್ನ ಲುಕ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಟಾಕ್ಸಿಕ್ ಕನ್ನಡ ಚಿತ್ರರಂಗದ ಮತ್ತೊಂದು ಪ್ಯಾನ್-ವಿಶನ್ ಸಿನಿಮಾ ಆಗಿ ದಾಖಲೆ ಬರೆದಿರುವ ನಿರೀಕ್ಷೆ ಮೂಡಿಸಿದೆ. ಬಿಡುಗಡೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ #Toxic ಮತ್ತು #Yash ಟ್ರೆಂಡ್ ಆಗುತ್ತಿದ್ದು, ಅಭಿಮಾನಿಗಳು ಕಾತುರದಿಂದ ಆಗಸ್ಟ್ 26ರ ನಿರೀಕ್ಷೆಯಲ್ಲಿದ್ದಾರೆ.

Sponsored

'ತಂದೆಯನ್ನು ಗೌರವಿಸಿ....ಟಾಕ್ಸಿಕ್ ಚಿತ್ರ 26 - 8 - 2026 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ' ಎಂದು ಯಶ್ ಅವರು ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಫ್ಯಾನ್ ಇಂಡಿಯಾ ಸಿನಿಮಾ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಬಗ್ಗೆ ಅಭಿಮಾನಿಗಳಲ್ಲಿ ಮತ್ತೆ ಬಾರಿ ಕುತೂಹಲ ಮೂಡಿದೆ. ಆರಂಭದಲ್ಲಿ 2025ರ ಏಪ್ರಿಲ್ ೧೦ರಂದು ಬಿಡುಗಡೆಯಾಗಬೇಕಿದ್ದ ಈ ಚಿತ್ರವನ್ನು ನಂತರ 2026 ರ ಮಾರ್ಚ್ 19ಕ್ಕೆ ಮುಂದೂಡಲಾಗಿತ್ತು. ಬಳಿಕ ಜಾಗತಿಕ ಬಿಡುಗಡೆ ತಂತ್ರದ ಹಿನ್ನೆಲೆಯಲ್ಲಿ ಜೂನ್ 4,2026 ಕ್ಕೆ ಮರು ನಿಗದಿಪಡಿಸಲಾಗಿತ್ತು. ಆದರೆ ನಂತರ ಆ ದಿನಾಂಕವು ಬದಲಾಗಿದ್ದು, ಹೊಸ ಬಿಡುಗಡೆ ದಿನಾಂಕದ ಕುರಿತು ಹಲವು ಉಹಾಪೋಹಗಳು ಹರಿದಾಡಿದ್ದವು.

ಈ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಮತ್ತಷ್ಟು ತಡವಾಗಬಹುದು ಎಂಬ ವದಂತಿಗಳು ಜೋರಾಗಿದ್ದರು, ಚಿತ್ರತಂಡ ಹಂಚಿಕೊಂಡ ಶೂಟಿಂಗ್ ಸೆಟ್ ಫೋಟೋಗಳು ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆಯ ಮೂಡಿಸಿವೆ. ಫೋಟೋಗಳಲ್ಲಿ ಯಶ್ ಸ್ಟೈಲಿಶ್ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾ ಅಂತಿಮ ಹಂತದತ್ತ ಸಾಗುತ್ತಿರುವ ಸೂಚನೆ ನೀಡಿದೆ.

ಚಿತ್ರವನ್ನು ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ KVN Productionsನ ವೆಂಕಟ್ ಕೆ. ನಾರಾಯಣ್ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸುತ್ತಿವೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಹಲವು ಭಾಷೆಗಳ ಕಲಾವಿದರು ನಟಿಸಿದ್ದಾರೆ.

Sponsored

ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗುವ ಮುನ್ನವೇ ಯಶ್ ವಿದೇಶಗಳಲ್ಲಿ ಚಿತ್ರದ ಪ್ರಚಾರ ಆರಂಭಿಸಿದ್ದು, ಜಾಗತಿಕ ಮಟ್ಟದಲ್ಲಿ ಸಿನಿಮಾ ಬಿಡುಗಡೆಗೊಳಿಸುವ ಯೋಜನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇತ್ತೀಚಿನ ಅಧಿಕೃತ ಅಪ್ಡೇಟ್ ಪ್ರಕಾರ, ಟಾಕ್ಸಿಕ್ ಚಿತ್ರವು ವಿಶ್ವದಾದ್ಯಂತ ಆಗಸ್ಟ್ 26, 2026ರಂದು ಬಿಡುಗಡೆಯಾಗಲಿದೆ ಎಂದು ಯಶ್ ಘೋಷಿಸಿದ್ದಾರೆ.

ಸಿನಿಮಾದ ಮೇಲಿನ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಟೀಸರ್, ಟ್ರೇಲರ್ ಹಾಗೂ ಮತ್ತಷ್ಟು ಪ್ರಚಾರಾತ್ಮಕ ಅಪ್ಡೇಟ್ಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಟಾಕ್ಸಿಕ್:ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್ ಚಿತ್ರವು ತಾಂತ್ರಿಕವಾಗಿ ಹಾಗೂ ಕಲಾತ್ಮಕವಾಗಿ ಭಾರತೀಯ ಸಿನಿಮಾದಲ್ಲಿ ದೊಡ್ಡ ಮಟ್ಟದ ಫ್ಯಾನ್-ವಿಷನ್ ಪ್ರಾಜೆಕ್ಟ್ ಆಗಿ ರೂಪುಗೊಂಡಿದೆ.

ಪ್ರತಿಷ್ಠಿತ ರಾಷ್ಟ್ರ ಪ್ರಶಸ್ತಿ ವಿಜೇತೆ ನಿರ್ದೇಶಕಿ ಗೀತು ಮೋಹನ್ ದಾಸ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಕಥೆ ರೂಪಿಸುವಲ್ಲಿ ನಟ ಯಶ್ ಕೂಡ ಪ್ರಮುಖ ಸೃಜನಾತ್ಮಕ ಪಾತ್ರ ವಹಿಸಿದ್ದಾರೆ. ದೃಶ್ಯ ವೈಭವಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ಛಾಯಾಗ್ರಹಕ ರಾಜೀವ್ ರವಿ ಅವರ ಕ್ಯಾಮೆರಾ ಕೆಲಸ ದೊಡ್ಡ ಬಲವಾಗಿದ್ದು, ಚಿತ್ರಕ್ಕೆ ವಿಭಿನ್ನ ದೃಶ್ಯ ಭಾಷೆ ನೀಡುವ ನಿರೀಕ್ಷೆ ಇದೆ

Sponsored

ಸಂಗೀತ ವಿಭಾಗದಲ್ಲಿ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಅವರೇ ಮತ್ತೆ ಯಶ್ ಜೊತೆ ಕೈಜೋಡಿಸಿದ್ದು, ಬಾರಿ ಪ್ರಮಾಣದ ಹಿನ್ನೆಲೆ ಸಂಗೀತ ಮತ್ತು ಹಾಡುಗಳ ಮೂಲಕ ಚಿತ್ರದ ತೀವ್ರತೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ. ಸಂಕಲನವನ್ನು ಸಲಾರ್ ಹಾಗೂ ಕೆಜಿಎಫ್ ಸೇರಿದಂತೆ ದೊಡ್ಡ ಸಿನಿಮಾಗಳಲ್ಲಿ ಕೆಲಸ ಮಾಡಿದ ಉಜ್ವಲ್ ಕುಲಕರ್ಣಿ ನಿರ್ವಹಿಸಿದ್ದಾರೆ.

ನಿರ್ಮಾಣ ವಿನ್ಯಾಸದ ಜವಾಬ್ದಾರಿಯನ್ನು ಟಿಪಿ ಅಬಿದ್ ವಹಿಸಿಕೊಂಡಿದ್ದು, ಆಕ್ಷನ್ ಸೀಕ್ವೆನ್ಸ್ ಗಳಿಗೆ ಹಾಲಿವುಡ್ ಸ್ಟಂಟ್ ನಿರ್ದೇಶಕ ಜೆಜೆ ಪೆರ್ರಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಹರ್ಷ, ಇಮ್ರಾನ್ ಸರ್ದಾರಿಯಾ ಹಾಗೂ ಗಣೇಶ್ ಆಚಾರ್ಯ ಅವರ ನೃತ್ಯ ನಿರ್ದೇಶನ ಮತ್ತು ಮೋಹನ್ ಬಿ.ಕೆರೆ ಅವರ ಕಲಾ ನಿರ್ದೇಶನ ಚಿತ್ರದ ನಿರ್ಮಾಣ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸಿದೆ.

ಈ ಚಿತ್ರವನ್ನು KVN Productionsಮತ್ತು ಮಾನ್ಸ್ಟರ್ ಮೈಂಡ್ ಅಡಿಯಲ್ಲಿ ವೆಂಕಟ ಕೆ. ನಾರಾಯಣ್ ಮತ್ತು ಯಶ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಬಹುತಾರಾಗಣದ ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ ಹಾಗೂ ತಾರಾ ಸುತಾರಿಯಾ ಸೇರಿದಂತೆ ಭಾರತೀಯ ಚಿತ್ರರಂಗದ ಪ್ರಮುಖ ನಟಿಯರು ಪಾತ್ರ ನಿರ್ವಹಿಸುತ್ತಿದ್ದಾರೆ.

ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರಿಕರಿಸಲಾಗಿದ್ದು, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ. ಈ ಕಾರಣದಿಂದಲೇ ಟಾಕ್ಸಿಕ್ ಫ್ಯಾನ್ ಇಂಡಿಯಾ ಮಾತ್ರವಲ್ಲ, ಫ್ಯಾನ್ ಗ್ಲೋಬಲ್ ಸಿನಿಮಾ ಆಗಿ ಗಮನ ಸೆಳೆಯುತ್ತಿದೆ.

Sponsored

Also Read:

ಐತಿಹಾಸಿಕ ಹುಲಿಗೆಮ್ಮ ದೇವಾಲಯಕ್ಕೆ ಭರ್ಜರಿ ದೇಣಿಗೆ: 20 ದಿನದಲ್ಲಿ ₹1 ಕೋಟಿ ಸಂಗ್ರಹ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online