Belagavi News :
Kawasaki Ninja 300 Launched: ಕವಾಸಕಿ ಇಂಡಿಯಾ ತನ್ನ ಜನಪ್ರಿಯ ನಿಂಜಾ 300 (Kawasaki Ninja 300) ಬೈಕ್ ನ 2027 ಮಾದರಿಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 350 ಸಿಸಿಗಿಂತ ಕಡಿಮೆ ಸಾಮರ್ಥ್ಯದ ವಿಭಾಗದಲ್ಲಿ ಅತ್ಯಂತ ಜನಪ್ರಿಯ ಸೂಪರ್ ಸ್ಪೋರ್ಟ್ ಬೈಕ್ ಗಳಲ್ಲಿ ಒಂದಾಗಿರುವ ನಿಂಜಾ 300, ಇದೀಗ ಹೊಸ ಸಿಂಗಲ್ ಕಲರ್ ಆಯ್ಕೆಯೊಂದಿಗೆ ಗ್ರಾಹಕರನ್ನು ಸೆಳೆಯಲು ಸಜ್ಜಾಗಿದೆ.
ಹೊಸ ಕವಾಸಕಿ ನಿಂಜಾ 300 ಬೈಕ್ ನ ಎಕ್ಸ್ ಶೋರೂಮ್ ಬೆಲೆಯಲ್ಲಿ ₹3.34 ಲಕ್ಷ ಎಂದು ನಿಗದಿಪಡಿಸಲಾಗಿದೆ. ಪ್ರಸ್ತುತ ಈ ವಿಭಾಗದಲ್ಲಿ yamaha ಆರ್ 3 ಮತ್ತು ಬೆನೆಲ್ಲಿ 302 ಆರ್ ಮುಂತಾದ ಮಾದರಿಗಳು ಲಭ್ಯವಿಲ್ಲದ ಕಾರಣ, ನಿಂಜಾ 300 ಮಲ್ಟಿ ಸಿಲಿಂಡರ್ ಸೂಪರ್ ಸ್ಪೋರ್ಟ್ ಬೈಕ್ ಗಳಲ್ಲಿ ಪ್ರಮುಖ ಆಯ್ಕೆಯಾಗಿ ಉಳಿದಿದೆ.
ಸಿಂಗಲ್ ಕಲರ್ ಆಯ್ಕೆಯಲ್ಲಿ ಹೊಸ ನಿಂಜಾ 300
ಕವಾಸಕಿ ಈ ಬಾರಿ ನಿಂಜಾ 300 ಅನ್ನು ಒಂದೇ ಬಣ್ಣದ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಗ್ರಾಹಕರಿಗೆ ಆಯ್ಕೆ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶದಿಂದ ಕಂಪನಿ ಕೇವಲ ಕ್ಲಾಸಿಕ್ "ಲೈಮ್ ಗ್ರೀನ್" ಬಣ್ಣವನ್ನು ಮಾತ್ರ ನೀಡಿದೆ.
ಹೊಸ ಲುಕ್ ನಲ್ಲಿ ಸಣ್ಣ ಬದಲಾವಣೆ
ಹೊಸ ಮಾದರಿಯ ವಿನ್ಯಾಸದಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಲಾಗಿದೆ. ಲೈಮ್ ಗ್ರೀನ್ ಬಣ್ಣಕ್ಕೆ ಹೊಂದಿಕೆಯಾಗುವಂತೆ ಬಿಳಿ ಮತ್ತು ನೀಲಿ ಬಣ್ಣದ ಪಟ್ಟಿಗಳನ್ನು ನೀಡಲಾಗಿದ್ದು ಅವು ಫೇರಿಂಗ್ ನಿಂದ ಹಿಂಭಾಗದವರೆಗೆ ವಿಸ್ತರಿಸುತ್ತವೆ. ಈ ಪಟ್ಟಿಗಳ ಮೇಲೆ ದೊಡ್ಡ ಅಕ್ಷರಗಳಲ್ಲಿ 'Ninja' ಬ್ರ್ಯಾಂಡಿಂಗ್ ನೀಡಲಾಗಿದೆ.
ಹೊಸ ವೈಶಿಷ್ಟ್ಯಗಳ ಪೈಕಿ ಹೊಸ ಟೈರ್ ವಿನ್ಯಾಸ ಪ್ರಮುಖ ಸೇರ್ಪಡೆಯಾಗಿದೆ. ಉಳಿದಂತೆ ಬೈಕ್ ನ ಮೂಲ ಸ್ಪೋರ್ಟಿ ವಿನ್ಯಾಸವನ್ನು ಮುಂದುವರಿಸಲಾಗಿದೆ.
ಫೀಚರ್ ಗಳಲ್ಲಿ ದೊಡ್ಡ ಬದಲಾವಣೆ ಇಲ್ಲ
2013ರಲ್ಲಿ ಬಿಡುಗಡೆಯಾದ ಮೂಲ ನಿಂಜಾ 300ಗೆ ಹೋಲಿಸಿದರೆ ಹೊಸ ಮಾದರಿಯಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ. ಹಳೆಯ ಹ್ಯಾಲೊಜೆನ್ ಹೆಡ್ ಲೈಟ್ ಗಳ ಬದಲಿಗೆ ಡ್ಯುಯಲ್ ಪ್ರೊಜೆಕ್ಟರ್ ಹೆಡ್ ಲೈಟ್ ಗಳನ್ನು ಅಳವಡಿಸಲಾಗಿದ್ದು, ಇದು ರಾತ್ರಿ ಸವಾರಿಯಲ್ಲಿ ಉತ್ತಮ ಬೆಳಕು ನೀಡುತ್ತದೆ.
ಟೈಲ್ ಲೈಟ್ ಮತ್ತು ಟರ್ನ್ ಇಂಡಿಕೇಟರ್ ಗಳು ಹಿಂದಿನ ಮಾದರಿಯಂತೆಯೇ ಉಳಿದಿವೆ. ಬೈಕ್ ನಲ್ಲಿ ಅನಲಾಗ್ ಟ್ಯಾಕೋಮೀಟರ್ ಮತ್ತು ಡಿಜಿಟಲ್ ಸ್ಪೀಡೋಮೀಟರ್ ಪ್ರಯೋಜನೆಯ ಇನ್ ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ.
ಅದೇ ಶಕ್ತಿಶಾಲಿ ಎಂಜಿನ್ ಮುಂದುವರಿಕೆ
ಕವಾಸಕಿ ನಿಂಜಾ 300ನಲ್ಲಿ ಎಂಜಿನ್ ಗೆ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ಅದೇ 296cc, ಪ್ಯಾರೆಲಲ್ - ಟ್ವಿನ್, ಲಿಕ್ವಿಡ್ - ಕೂಲ್ಡ್ ಎಂಜಿನ್ ಹೊಂದಿದ್ದು, 39bhp ಪವರ್ ಮತ್ತು 26.1Nm ಟರ್ಕ್ ಉತ್ಪಾದಿಸುತ್ತದೆ.
ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ಹಾಗೂ ಸ್ಪಿಪ್ ಅಂಡ್ ಅಸಿಸ್ಟ್ ಕ್ಲಚ್ ನೊಂದಿಗೆ ಜೋಡಿಸಲಾಗಿದೆ. ಸುರಕ್ಷತೆಗಾಗಿ ಎರಡು ಚಕ್ರಗಳಲ್ಲಿ ಡಿಸ್ಕ್ ಬ್ರೇಕ್ ಗಳು ಮತ್ತು ಡ್ಯುಯಲ್ -ಚಾನೆಲ್ ABS ಸೌಲಭ್ಯ ನೀಡಲಾಗಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಗಳು ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಸಸ್ಪೆನ್ಷನ್ ಅಳವಡಿಸಲಾಗಿದೆ.
ಸ್ಪೋರ್ಟ್ಸ್ ಬೈಕ್ ಪ್ರಿಯರ ನೆಚ್ಚಿನ ಮಾದರಿ
ನಿಂಜಾ 300 ತನ್ನ ಸ್ಪೋರ್ಟಿ ವಿನ್ಯಾಸ ಮತ್ತು ರೈಡಿಂಗ್ ಅನುಭವದಿಂದ ಬೈಕ್ ಪ್ರಿಯರಲ್ಲಿ ಜನಪ್ರಿಯವಾಗಿದೆ. ಹೊಸ ಮಾದರಿಯಲ್ಲೂ ZX-10R ಶೈಲಿಯ ದೊಡ್ಡ ವಿಂಡ್ ಸ್ಕ್ರೀನ್ ಮುಂದುವರಿಸಲಾಗಿದ್ದು, ಹೆಚ್ಚಿನ ವೇಗದ ಸವಾರಿಯ ವೇಳೆ ಉತ್ತಮ ಗಾಳಿ ರಕ್ಷಣೆ ನೀಡುತ್ತದೆ.
ಹೊಸ ಬಣ್ಣ ಮತ್ತು ಸಣ್ಣ ವಿನ್ಯಾಸ ಬದಲಾವಣೆಗಳೊಂದಿಗೆ ಕವಾಸಕಿ ನಿಂಜಾ 300 ಭಾರತೀಯ ಸ್ಪೋರ್ಟ್ಸ್ ಬೈಕ್ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ.