Belagavi news :
ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮೆಟ್ರೋ ದರದಲ್ಲಿ ಆಗುತ್ತಿರುವಂತಹ ಅನ್ಯಾಯಕ್ಕೆ ಕೇಂದ್ರ ಸರ್ಕಾರದಿಂದ ತಾತ್ಕಾಲಿಕ ಬ್ರೇಕ್ ಬಿದ್ದಿದೆ.ಇದರಿಂದ ತಿಳಿಯುವುದೇನೆಂದರೆ,ಪ್ರಯಾಣಿಕರ ಹಿತ ಕಾಯಲು ಸರ್ಕಾರ ಯಾವಾಗಲೂ ಬದ್ಧವಾಗಿರುತ್ತದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಲಾಗಿದೆ.
ಪ್ರಯಾಣಿಕರ ಹಿತ ದೃಷ್ಟಿಯಿಂದ ಉದ್ದೇಶಿತ ಮೆಟ್ರೋ ದರ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವರಾದಂತಹ ಮನೋಹರ್ ಲಾಲ್ ಖಟ್ಟರ್ಅವರು ಬಿಎಂಆರ್ ಸಿ ಎಲ್ ಗೆ ಕಷ್ಟ ನಿರ್ದೇಶನ ನೀಡಿದ್ದಾರೆ ಎಂದು ತೇಜಸ್ವಿ ಸೂರ್ಯ ಅವರು ತಿಳಿಸಿದ್ದಾರೆ. ಸಾರ್ವಜನಿಕರ ಹಿತ ಮತ್ತು ಪ್ರಯಾಣಿಕರ ಮೇಲಿನ ಆರ್ಥಿಕ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ.
ಈ ಮೆಟ್ರೋ ದರ ಪರಿಷ್ಕರಣಿಯ ಬಗ್ಗೆ ತೇಜಸ್ವಿ ಸೂರ್ಯ ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಈ ರೀತಿಯಾಗಿ ಹಂಚಿಕೊಂಡಿದ್ದಾರೆ,ಸೋಮವಾರದಿಂದ ಏರಿಕೆಯಾಗಬೇಕಿದ್ದ ಮೆಟ್ರೋ ದರವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಮೆಟ್ರೋ ದರ ಏರಿಕೆಯ ಬಗ್ಗೆ ನಾನು ಸಚಿವ ಮೋಹನ್ ಲಾಲ್ ಖಟ್ಟರ್ ಅವರೊಂದಿಗೆ ಮಾತನಾಡಿ ಸಂಭಾಷಣೆಯನ್ನು ನಡೆಸಿದ್ದೇನೆ ಎಂದು ತೇಜಸ್ವಿ ಸೂರ್ಯ ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ.
ಮೆಟ್ರೋ ದರ ಪರಿಷ್ಕರಣಿಯ ಬಗ್ಗೆ ಮಾತನಾಡುತ್ತಾ,ಭಾರತದಲ್ಲಿ ಬೆಂಗಳೂರು ಮೆಟ್ರೋ ಈಗಾಗಲೇ ಅತಿ ದುಬಾರಿ ದರವನ್ನು ಹೊಂದಿದೆ ಇನ್ನಷ್ಟು ದರ ಏರಿಕೆಯಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಉಂಟಾಗುತ್ತದೆ,ಅವರು ಸಂಕಷ್ಟಕ್ಕೆ ಸಿಲುಕುತ್ತಾರೆ, ಇದರಿಂದ ಸಾರಿಗೆ ಲಕ್ಷಾಂತರ ನಾಗರಿಕರಿಗೆ ಕೈಗೆಟ್ಟದಂತೆ ಮಾಡಲಿದೆ,ಎಂದು ಕೇಂದ್ರ ಸಚಿವರಿಗೆ ನಾನು ವಿವರವಾಗಿ ತಿಳಿಸಿದ್ದೇನೆ ಎಂದು ಹೇಳಿದರು.
ಇದೇ ವೇಳೆ ಅವರು ವಯಕ್ತಿಕವಾಗಿ ದರ ಏರಿಕೆ ನಿಗದಿ ಸಮಿತಿಯಲ್ಲಿನ ಲೋಪ ದೋಷಗಳನ್ನು ಪರಿಶೀಲಿಸುವ ಭರವಸೆ ನೀಡಿದ್ದು,ಒಂದು ವೇಳೆ ರಾಜ್ಯ ಸರ್ಕಾರ ಮನವಿ ಮಾಡಿದರೆ,ಹೊಸ ಸಮಿತಿ ರಚಿಸುವ ಬಗ್ಗೆ ಪರಿಗಣಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.ಜೊತೆಗೆ ಕೇಂದ್ರ ಸಚಿವರು ಉದ್ದೇಶಿತ ದರ ಏರಿಕೆಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲು ಸೂಚನೆ ನೀಡಿದ್ದಾರೆ.ಹಾಗಾಗಿ ಸೋಮವಾರದಿಂದ ಮೆಟ್ರೋ ದರ ಏರಿಕೆ ಜಾರೆಯಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಹೊಸದರ ನಿಗದಿ ಸಮಿತಿ ಮಾಡುವ ಪ್ರಕ್ರಿಯೆಗೆ ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯ ಅವರು ಮುಂದಡಿ ಇಡಬೇಕು ಎಂದು ಹೇಳಿದ್ದಾರೆ.ಈ ಮೂಲಕ ಮೆಟ್ರೋ ದರ ತಕ್ಷಣ ಕ್ರಮಬದ್ಧಗೊಳಿಸಲು ಅವಕಾಶ ನೀಡಬೇಕು ದಯವಿಟ್ಟು ಮುಖ್ಯಮಂತ್ರಿಗಳೇ ಇದಕ್ಕೆ ಉತ್ತರವನ್ನು ನೀಡಬೇಕು ಎಂದು ತೇಜಸ್ವಿ ಸೂರ್ಯ ಅವರು ಆಗ್ರಹಿಸಿದ್ದಾರೆ.ಜೊತೆಗೆ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಸ್ಪಷ್ಟವಾಗಿ ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.
ಹೊಸ ದರ ನಿಗದಿ ಸಮಿತಿ ಶಿಫಾರಸು ಮಾಡಿರುವ ದರಗಳನ್ನು ಮರುಪರಿಶೀಲಿಸುವಂತೆ ಮನವಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ನಿನ್ನೆಯಷ್ಟೇ ಮಾಧ್ಯಮ ಪ್ರಕಟಣೆ ಮೂಲಕ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.ನಮ್ಮ ಮೆಟ್ರೋ ರೈಲು ದರ ಏರಿಕೆಯಲ್ಲಿ ರಾಜ್ಯ ಸರ್ಕಾರದ ಪಾತ್ರವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.
ಇನ್ನಷ್ಟು ಓದಿರಿ:
ದ್ಯೆಯಿಂದ ಭವಿಷ್ಯ ನಿರ್ಮಿಸಿದ ಶಿಕ್ಷಕಿ: ವಿಶ್ವ ಮನ್ನಣೆ ಪಡೆದರು ರೂಬಲ್ ನಾಗಿ ಕಥೆ