<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ತಾಯಿಯ ನೆನಪಿನಲ್ಲಿ ಎಚ್ ಡಿ ಕುಮಾರಸ್ವಾಮಿ ಬಾವುಕ : ಬದುಕಿನ ಅಮೂಲ್ಯ ಪಾಠ ಹಂಚಿಕೆ

ತಾಯಿಯ ನೆನಪಿನಲ್ಲಿ ಎಚ್ ಡಿ ಕುಮಾರಸ್ವಾಮಿ ಬಾವುಕ : ಬದುಕಿನ ಅಮೂಲ್ಯ ಪಾಠ ಹಂಚಿಕೆ
Summary: Union Minister HD Kumaraswamy has shared a heartfelt message in memory of his mother. His words, which say that the life lessons taught by his mother will never be forgotten, are attracting attention on social media.

Belagavi News:

ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ತಮ್ಮ ತಾಯಿಯ ಅಗಲಿಕೆಯ ನೆನಪಿನಲ್ಲಿ ಭಾವುಕ ಸಂದೇಶ ಹಂಚಿಕೊಂಡಿದ್ದಾರೆ. ಸಾರ್ವಜನಿ ತಾಯಿ ಜೀವನದಲ್ಲಿ ಕಲಿಸಿದ ಮೌಲ್ಯಗಳು, ಬದುಕಿನ ಪಾಠಗಳು ಮತ್ತು ಅವರ ತ್ಯಾಗವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

"ತಾಯಿ ಹೇಳಿಕೊಟ್ಟ ಬದುಕಿನ ಪಾಠವೇ ನನ್ನ ಜೀವನದ ದಾರಿ ದೀಪ, ಅವರ ಪ್ರೀತಿ, ಕಾಳಜಿ ಮತ್ತು ಆಶೀರ್ವಾದ ಸದಾ ನಮ್ಮೊಂದಿಗೆ ಇರುತ್ತದೆ. ಅಮ್ಮನ ನೆನಪುಗಳು ಪ್ರತಿದಿನವೂ ನನ್ನನ್ನು ಮತ್ತಷ್ಟು ದೃಢವಾಗಿರಲು ಪ್ರೇರೇಪಿಸುತ್ತವೆ, " ಎಂಬ ಭಾವನಾತ್ಮಕ ಮಾತುಗಳನ್ನು ಕುಮಾರಸ್ವಾಮಿ ಹಂಚಿಕೊಂಡಿದ್ದಾರೆ.

ಅವರ ಈ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಗಮನ ಸೆಳೆದಿದ್ದು, ಹಲವು ಪ್ರಕ್ರಿಯೆ ನೀಡಿ ತಾಯಿಯ ಮೇಲಿನ ಅವರ ಅಭಿಮಾನ ಮತ್ತು ಗೌರವವನ್ನು ಮೆಚ್ಚಿದ್ದಾರೆ. ಭಾವುಕ ಪೋಸ್ಟ್ ಗೆ ಸಾವಿರಾರು ಲೈಕ್ ಗಳು ಕಮೆಂಟ್ ಗಳು ಹಾಗೂ ಹಂಚಿಕೆಗಳು ಹರಿದು ಬರುತ್ತಿವೆ.

ಕುಮಾರಸ್ವಾಮಿ ಅವರ ಈ ಪೋಸ್ಟ್ ತಾಯಿ - ಮಗನ ಬಾಂಧವ್ಯ, ಕುಟುಂಬದ ಮೌಲ್ಯಗಳು ಮತ್ತು ಜೀವನದಲ್ಲಿ ತಾಯಿಯ ಪಾತ್ರವನ್ನು ಮತ್ತೊಮ್ಮೆ ನೆನಪಿಸುವಂತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

'ಅಮ್ಮ ಚೆನ್ನಮ್ಮ ನನಗೆ ಸುಸು ಹೆಚ್ಚು ಪ್ರೀತಿ ತೋರಿಸುತಿದ್ದರು' - ಭಾವುಕರಾದ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ :

ತಾಯಿ ಚನ್ನಮ್ಮ ಅವರ ಅಗಲಿಕೆ ಹಿನ್ನೆಲೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬಾವುಕರಾಗಿ ಮಾತನಾಡಿದರು. ತಾಯಿಯೊಂದಿಗೆ ಕಳೆದ ನೆನಪುಗಳನ್ನು ಹಂಚಿಕೊಂಡ ಅವರು, ತಮ್ಮ ಮೇಲಿದ್ದ ವಿಶೇಷ ಪ್ರೀತಿ ಮತ್ತು ಜೀವನದಲ್ಲಿ ನೀಡಿದ ಮಾರ್ಗದರ್ಶನವನ್ನು ಸ್ಮರಿಸಿ ಕಣ್ಣೀರಿಟ್ಟರು.

"ತಾಯಿ ಚನ್ನಮ್ಮ ಎಲ್ಲ ಮಕ್ಕಳನ್ನು ಸಮಾನವಾಗಿ ಬೆಳೆಸಿದ್ದರು. ಆದರೆ ನನ್ನ ವಿಷಯಕ್ಕೆ ಬಂದರೆ ಅವರಿಗೆ ನನ್ನ ಮೇಲೆ ತುತ್ತು ಹೆಚ್ಚು ಪ್ರೀತಿ ಇತ್ತು. ಬದುಕಿನಲ್ಲಿ ಹೇಗೆ ನಡೆದುಕೊಳ್ಳಬೇಕು, ಯಾವ ಮೌಲ್ಯಗಳನ್ನು ಪಾಲಿಸಬೇಕು ಎಂದು ಅನೇಕ ಬಾರಿ ನನಗೆ ಹಿತವಚನ ಹೇಳುತ್ತಿದ್ದರು. ಅವರು ನೀಡಿದ ಈ ಜೀವನದ ಪಾಠಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ" ಎಂದು ಕುಮಾರಸ್ವಾಮಿ ಭಾವುಕರಾಗಿ ಹೇಳಿದ್ದಾರೆ.

'ಎಲ್ಲ ಪಕ್ಷಗಳ ನಾಯಕರು ತಮ್ಮ ಮನೆಯ ಹಾರೈಕೆಯಲ್ಲಿ ಬೆಳೆದವರು ' - ಎಚ್ ಡಿ ಕುಮಾರಸ್ವಾಮಿ ಭಾವುಕ ಮಾತು :

ತಾಯಿ ಚನ್ನಮ್ಮ ಅವರ ಅಂತಿಮ ದರ್ಶನಕ್ಕೆ ವಿವಿಧ ರಾಜಕೀಯ ಪಕ್ಷಗಳ ನಾಯಕರು ಆಗಮಿಸಿ ಗೌರವ ಸಲ್ಲಿಸುತ್ತಿರುವ ಕುರಿತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಭಾವುಕರಾಗಿ ಪ್ರತಿಕ್ರಿಯಿಸಿದರು.

"ಹಲವು ಪಕ್ಷಗಳಲ್ಲಿ ಇರುವ ನಾಯಕರೆಲ್ಲರೂ ನಮ್ಮ ಮನೆಯ ಹಾರೈಕೆಯಲ್ಲಿ ಬೆಳೆದವರು, ನಮ್ಮ ಕುಟುಂಬದೊಂದಿಗೆ ಅವರಿಗೆ ವರ್ಷಗಳ ಆತ್ಮೀಯ ಸಂಬಂಧವಿದೆ. ಅದಕ್ಕಾಗಿಯೇ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಎಲ್ಲರೂ ಬಂದು ತಾಯಿಯ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸುತ್ತಿದ್ದಾರೆ" ಎಂದು ಹೇಳಿದರು.

ಇದೇ ವೇಳೆ ತಮ್ಮ ತಂದೆ ತಾಯಿಯ ದಾಂಪತ್ಯ ಜೀವನವನ್ನು ಸ್ಮರಿಸಿದ ಕುಮಾರಸ್ವಾಮಿ, "ಇಂದಿನವರೆಗೂ ಸಮಾಜಕ್ಕೆ ನಮ್ಮ ತಂದೆ ತಾಯಿಯ ದಾಂಪತ್ಯವೇ ಮಾದರಿಯಾಗಿದೆ. ಪರಸ್ಪರ ಗೌರವ, ತ್ಯಾಗ, ಪ್ರೀತಿ ಮತ್ತು ಕುಟುಂಬದ ಮೇಲಿನ ಪದ್ಧತಿಯಿಂದ ಅವರು ಬದುಕಿದ ರೀತಿಯು ಎಲ್ಲರಿಗೂ ಆದರ್ಶವಾಗಿದೆ" ಎಂದು ಭಾವುಕರಾಗಿ ನುಡಿದರು.

ಕುಟುಂಬದ ಮೌಲ್ಯಗಳು ಮತ್ತು ಮಾನವೀಯ ಸಂಬಂಧಗಳೇ ಜೀವನದ ದೊಡ್ಡ ಸಂಪತ್ತು ಎಂಬ ಸಂದೇಶವನ್ನು ತಮ್ಮ ತಂದೆ ತಾಯಿಯ ಬದುಕು ಸಾರಿದೆ ಎಂದು ಕುಮಾರಸ್ವಾಮಿ ಹೇಳಿದರು.

"ಗಂಡ ಪ್ರಧಾನಿ, ಮುಖ್ಯಮಂತ್ರಿ ಆದರೂ ಮನೆ ಬಿಟ್ಟು ಹೊರಬಂದವರಲ್ಲ" - ಚೆನ್ನಮ್ಮ ದೇವೇಗೌಡರ ಸರಳ ಜೀವನವನ್ನು ನೆನೆದ ಕುಮಾರಸ್ವಾಮಿ :

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ದೇವೇಗೌಡ ಅವರ ಸರಳ ಜೀವನ ಹಾಗೂ ಕುಟುಂಬದ ಮೇಲಿನ ನಿಷ್ಠೆಯನ್ನು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಬಾವುಕಾರ ನೆನಪಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, "ಗಂಡ ಪ್ರಧಾನಿಯಾಗಿದ್ದರೂ, ಮುಖ್ಯಮಂತ್ರಿ ಆಗಿದ್ದರು ಅವರ ಮನೆಯಿಂದ ಹೊರ ಬಂದವರಲ್ಲ. ಅವರಾಯಿತು, ಅವರ ದೇವರ ಮನೆ ಆಯಿತು ಎಂದು ಬದುಕಿನಂತಹ ಅಪರೂಪದ ವ್ಯಕ್ತಿತ್ವ ಅವರದ್ದು"ಎಂದು ಹೇಳಿದರು.

ಕುಟುಂಬ ಹಾ ಆರಾಧನೆಯಲ್ಲಿ ಜೀವನವನ್ನು ಕಳೆದ ವ್ಯಕ್ತಿತ್ವವನ್ನು ವಿಶೇಷವಾಗಿ ವಿವರಿಸಿದರು

ಕುಮಾರಸ್ವಾಮಿ ಅವರ ಮಾತುಗಳಲ್ಲಿ ಚೆನ್ನಮ್ಮ ದೇವೇಗೌಡರ ಸರಳತೆ, ಕುಟುಂಬ ಮೌಲ್ಯಗಳು ಹಾಗೂ ಆಧ್ಯಾತ್ಮಿಕ ವ್ಯಕ್ತವಾಯಿತು. ಅಧಿಕಾರ ಮತ್ತು ರಾಜಕೀಯದ ಬೆಳಕಿನಿಂದ ದೂರವಿದ್ದು , ಕುಟುಂಬ ಹಾಗೂ ದೇವರ ಆರಾಧನೆಯಲ್ಲಿ ಜೀವನವನ್ನು ಕಳೆದ ಅವರ ವ್ಯಕ್ತಿತ್ವವನ್ನು ಅವರು ವಿಶೇಷವಾಗಿ ಸ್ಮರಿಸಿದರು.

ಕುಮಾರಸ್ವಾಮಿ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆದಿದ್ದು, ದೇವೇಗೌಡರ ಕುಟುಂಬದ ಸರಳ ಜೀವನ ಶೈಲಿಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online