BELAGAVI NEWS :
ಬೆಂಗಳೂರು: ವಿದೇಶಗಳಲ್ಲಿ ನಡೆಯುವ ಹಾಕಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಅವಕಾಶ ಕಲ್ಪಿಸುವುದಾಗಿ ನಂಬಿಸಿ ಆಟಗಾರರಿಂದ ಲಕ್ಷಾಂತರ ರೂಪಾಯಿ ಪಡೆದು ವಂಚನೆ ನಡೆಸಿದ ಆರೋಪಕ್ಕೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ.
ಖೇಲೊ ಮಾಸ್ಟರ್ ಸಂಖ್ಯೆಯ ಖಜಾಂಜಿ ಎ.ಎನ್. ಸೋಮಯ್ಯ, ಅಧ್ಯಕ್ಷ ಹೆಚ್. ಎಂ. ಪ್ರಸನ್, ಕಾರ್ಯದರ್ಶಿ ಎನ್. ಮಧು ಹಾಗೂ ತಂಡದ ಮ್ಯಾನೇಜರ್ ಪಿ.ಕೆ. ತೇಜಶ್ರೀ ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.
ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಪೂರ್ಣಗೊಂಡು ಅಂತಿಮ ವರದಿ ಸಲ್ಲಿಕೆಯಾದ ಬಳಿಕ ಅದನ್ನು ಕಾನೂನುಬದ್ಧವಾಗಿ ಪ್ರಶ್ನಿಸಲು ಅರ್ಜಿದಾರರಿಗೆ ಅವಕಾಶವಿದ್ದು, ಈ ಹಂತದಲ್ಲಿ ಅರ್ಜಿ ಹಿಂಪಡೆಯಲು ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿತ್ತು. ಅರ್ಜಿದಾರರ ಈ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್, ಅರ್ಜಿಯನ್ನು ವಿಲೇವಾರಿ ಮಾಡಿದೆ.
ವಿದೇಶಿ ಕ್ರೀಡಾ ಅವಕಾಶಗಳ ಹೆಸರಿನಲ್ಲಿ ನಡೆಯುವ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಈ ಆದೇಶ ಮಹತ್ವ ಪಡೆದಿದ್ದು, ಪ್ರಕರಣದ ಮುಂದಿನ ಕಾನೂನು ಪ್ರಕ್ರಿಯೆಗೆ ದಾರಿ ಮಾಡಿ ಕೊಟ್ಟಿದೆ.
ವಿಚಾರಣೆ ವೇಳೆ ನ್ಯಾಯಪೀಠ, ಬಡ ಹಾಕಿ ಆಟಗಾರರಿಗೆ ವಂಚಿಸಿದ್ದಿರಿ. ಇದೇ ರೀತಿ ಕ್ರಿಕೆಟಿಗರಿಗೆ ವಂಚಿಸಲಾಗುವುದೇ? ಸಾಧ್ಯವೇ ಇಲ್ಲ. ನಂಬಿಸಿ ಆಟಗಾರರಿಗೆ ವಂಚಿಸುವುದರಿಂದ ಇದು ತನಿಖೆ ನಡೆಯಲೇಬೇಕಾದ ಪ್ರಕರಣವಾಗಿದೆ. ಹಾಕಿ ಆಟ, ಆದರೆ ಏನನ್ನೂ ಬಾಕಿ ಉಳಿಸಿಲ್ಲ ಎಂದು ತಿಳಿಸಿತು.
ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಮೊದಲಿಗೆ ಕೊರಿಯಾದಲ್ಲಿ ನಡೆಯುವ ಹಾಕಿ ಟೂರ್ನಿಗೆ ಕರೆದೋಯ್ಯಲಾಗುವುದು ಎಂದು 15 ಆಟಗಾರರಿಂದ ತಲಾ 15,000 ರೂ. ವಸೂಲಿ ಮಾಡಲಾಗಿತ್ತು. ವೀಸಾಗೆ ಅಗತ್ಯವಾದ ದಾಖಲೆ ಒದಗಿಸಲು ಆಟಗಾರರು ವಿಫಲರಾಗಿದ್ದರಿಂದ ಅದು ಸಾಧ್ಯವಾಗಲಿಲ್ಲ. ಆನಂತರ ಆಸ್ಟ್ರೇಲಿಯಾದಲ್ಲಿ ಟೂರ್ನಿ ನಡೆಸಲಾಗುತ್ತದೆ ಎಂದು ಪ್ರತಿಯೊಬ್ಬ ಆಟಗಾರರಿಂದ 1.50 ಲಕ್ಷ ರೂ. ಸಂಗ್ರಹಿಸಲಾಗಿತ್ತು. ಅದಕ್ಕೂ ವೀಸಾ ಪಡೆಯಲು ಆಟಗಾರರು ದಾಖಲೆ ಒದಗಿಸಲು ಸಾಧ್ಯವಾಗಿರಲಿಲ್ಲ ಆದರೆ ಶ್ರೀಲಂಕಾದಲ್ಲಿ ನಡೆದಿದ್ದ ಟೂರ್ನಿಗೆ ಆಟಗಾರರನ್ನು ಕರೆದೊಯ್ಯಲಾಗಿತ್ತು ಎಂದರು.
ವಿದೇಶಗಳಲ್ಲಿ ಹಾಕಿ ಪಂದ್ಯಾವಳಿಗಳಿಗೆ ಕರೆದೊಯ್ಯುವುದಾಗಿ ಭರವಸೆ ನೀಡಿ ಆಟಗಾರರಿಂದ ಲಕ್ಷಾಂತರ ರೂಪಾಯಿ ಸಂಗ್ರಹಿಸಿದ ಆರೋಪದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಅರ್ಜಿದಾರರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ದೂರುದಾರರ ಪರ ವಕೀಲರು ಎಲ್ಲರೂ ನ್ಯಾಯಾಲಯಕ್ಕೆ ಮಾಹಿತಿ ನೀಡಿ, ಮೊದಲಿಗೆ ಕೊರಿಯಾದಲ್ಲಿ ನಡೆಯುವ ಟೂರ್ನಿಗೆ ಕರೆದೋಯ್ಯುವುದಾಗಿ ಹೇಳಿ 15 ಆಟಗಾರದಿಂದ ತಲಾ ₹15,000 ಸಂಗ್ರಹಿಸಲಾಯಿತ್ತು. ಬಳಿಕ ಆಸ್ಟ್ರೇಲಿಯಾದಲ್ಲಿ ಟೂರ್ನಿ ಆಯೋಜಿಸಲಾಗುವುದು ಎಂದು ನಂಬಿಸಿ 17 ಆಟಗಾರರಿಂದ ತಲಾ ₹ 1.30 ಲಕ್ಷವನ್ನು ಬ್ಯಾಂಕ್ ವರ್ಗಾವಣೆ ಮೂಲಕ ಹಾಗೂ ₹ 1.70 ಲಕ್ಷವನ್ನು ನಗದುರೂಪದಲ್ಲಿ ಪಡೆಯಲಾಗಿದೆ ಎಂದು ವಿವರಿಸಿದರು.
ಇದರ ಜೊತೆಗೆ, ಆಟಗಾರರ ಹೆಸರಿನಲ್ಲಿ ಪ್ರಾಯೋಜಕತ್ವ (ಸ್ಪಾನ್ಸರ್ ಶಿಪ್) ದೊರಕಿಸುವ ನೆಪದಲ್ಲಿಯೂ ಹಣ ಸಂಗ್ರಹಿಸಲಾಗಿದ್ದು, ಆ ಮೊತ್ತವನ್ನು ಅರ್ಜಿದಾರರ ತಮ್ಮ ವೈಯಕ್ತಿಕ ಖಾತೆಗಳಿಗೆ ಜಮೆ ಮಾಡಿಕೊಂಡಿದ್ದಾರೆ ಎಂದು ನ್ಯಾಯಪೀಠದ ಗಮನಕ್ಕೆ ತರಲಾಯಿತು.
ವಾದ - ಪ್ರತಿವಾದ ಆಲಿಸಿದ ನ್ಯಾಯಪೀಠ, "ಎಷ್ಟು ಬಾರಿ ಜನರನ್ನು ವಂಚಿಸಲು ಸಾಧ್ಯ? ಕೋರಿಯಾ, ಆಸ್ಟ್ರೇಲಿಯಾ, ಶ್ರೀಲಂಕಾ... ನಿಮ್ಮನ್ನು ತಡೆಯದೇ ಬಿಟ್ಟಿದ್ದರೆ ಇನ್ನೂ ಬೇರೆ ದೇಶಗಳ ಹೆಸರಲ್ಲೂ ಜನರನ್ನು ನಂಬಿಸುತ್ತಿದ್ದೀರಿ ಎನ್ನುವ ಭಾವನೆ ಮೂಡುತ್ತಿದೆ"ಎಂದು ಕಟುವಾಗಿ ಟೀಕಿಸಿತು.
ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿದ ಹೈಕೋರ್ಟ್, ಆರೋಪಿಗಳ ವಿರುದ್ಧದ ತನಿಖೆ ಮುಂದುವರಿಯಬೇಕೆಂದು ಸೂಚಿಸುವ ಜೊತೆಗೆ ಸಂಗ್ರಹಿಸುವ ಹಣವನ್ನು ಎಲ್ಲಾ ಆರೋಪಿಗಳು ಮರಳಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿತು. ಅಂತಿಮವಾಗಿ ಪ್ರಕರಣ ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿತು.
ವಿದೇಶಿ ಕ್ರೀಡಾ ಟೂರ್ನಿಗಳ ಹೆಸರಿನಲ್ಲಿ ಆಟಗಾರರಿಗೆ ಆಮಿಷವೊಡ್ಡಿ ಹಣ ಸಂಗ್ರಹಿಸಿದ ಆರೋಪಗಳ ಕುರಿತು ಹೈಕೋರ್ಟ್ ನೀಡಿರುವ ಈ ಅಭಿಪ್ರಾಯವೂ ಕ್ರೀಡಾ ಕ್ಷೇತ್ರದಲ್ಲಿ ನಡೆಯುವ ವಂಚನೆಗಳ ವಿರುದ್ಧ ಕಠಿಣ ಸಂದೇಶವೆಂದು ಪರಿಗಣಿಸಲಾಗುತ್ತಿದೆ.
Also Read:
ಮತ್ತೆ ಬರ್ತಿದೆ ಐಮ್ಯಾಕ್ಸ : ಹೈದರಾಬಾದ್ ಸಿನಿ ಪ್ರಿಯರಿಗೆ ಗುಡ್ ನ್ಯೂಸ್