<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಬೆಳಗಾವಿ ಬಸ್ ನಿಲ್ದಾಣದಲ್ಲಿ ಹೈ ಅಲರ್ಟ್: 20ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು

ಬೆಳಗಾವಿ ಬಸ್ ನಿಲ್ದಾಣದಲ್ಲಿ ಹೈ ಅಲರ್ಟ್: 20ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದ ಪೊಲೀಸರು
Summary: Police have conducted a special operation at Belgaum Central Bus Stand on suspicion of illegal Bangladeshi immigrants and have detained over 20 people and brought them to the station for questioning. Document verification and identification work is ongoing, and high alert has been sounded in the city.

Belagavi news:

ಬೆಳಗಾವಿ, ಮೇ 23: ಕುಂದಾನಗರಿ ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರು ನೆಲೆಸಿರುವ ಶಂಕೆಯ ಹಿನ್ನೆಲೆ ಪೊಲೀಸರು ಬಾರಿ ಕಾರ್ಯಾಚರಣೆ ನಡೆಸಿದ್ದಾರೆ. ನಗರದಲ್ಲಿ ಹೆಚ್ಚುತ್ತಿರುವ ಅನುಮಾನಾಸ್ಪದ ಚಟುವಟಿಕೆಗಳ ಕುರಿತು ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ.

Belagavi Central Bus Stand ನಿಂದ 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದ ಪೊಲೀಸರು, ಅವರನ್ನು ವಿಚಾರಣೆಗಾಗಿ Malmaruti Police Station ಕರೆ ತಂದಿದ್ದಾರೆ. ಡಿಸಿಪಿ Narayana Bharamani ನೇತೃತ್ವದ ತಂಡವು ವಶಕ್ಕೆ ಪಡೆದವರ ದಾಖಲೆಗಳು, ಗುರುತಿನ ಚೀಟಿಗಳು ಹಾಗೂ ಸ್ಥಳೀಯ ಸಂಪರ್ಕಗಳ ಕುರಿತು ತೀವ್ರ ಪರಿಶೀಲನೆ ನಡೆಸುತ್ತಿದೆ.

ಪೊಲೀಸರ ಈ ಕಾರ್ಯಾಚರಣೆ ನಗರದಲ್ಲಿ ಆತಂಕ ಮೂಡಿಸಿದ್ದು, ಅಕ್ರಮ ವಲಸಿಗರ ವಿರುದ್ಧ ಇನ್ನಷ್ಟು ತಪಾಸನೆ ಮತ್ತು ಪರಿಶೀಲನೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸುವೆ.

Sponsored

ಬೆಳಗಾವಿಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರ ಬಗ್ಗೆ ಮೂಡಿದ್ದ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದರು. ಬೆಳಗಾವಿ ಸೆಂಟ್ರಲ್ ಬಸ್ ಸ್ಟಾಂಡ್ ನಲ್ಲಿ ತಪಾಸನೆ ನಡೆಸಿದ ಪೊಲೀಸರು, 20ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಠಾಣೆಗೆ ಕರೆ ತಂದರು.

ಪರಿಶೀಲನೆ ವೇಳೆ ಅವರು West Bengal ಮೂಲದ ಕಾರ್ಮಿಕರಾಗಿದ್ದು, ಮತದಾನ ಬಳಿಕ ಮರಳಿ ಕೆಲಸಕ್ಕೆ ಬಂದಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವರ್ಷಕ್ಕೆ ಪಡೆದವರ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ದಾಖಲೆಗಳನ್ನು ಪರಿಶೀಲಿಸಿದಾಗ ಅವು ಅಸಲಿಯಾಗಿರುವುದು ಪತ್ತೆಯಾಗಿದೆ.

ಇದಲ್ಲದೆ, ಎಲ್ಲರ ಬೆರಳಚ್ಚುಗಳನ್ನು ಸಂಗ್ರಸಿ ಮಾಹಿತಿ ದಾಖಲಿಸಿಕೊಂಡ ಬಳಿಕ ಅವರನ್ನು ಬಿಡುಗಡೆ ಮಾಡಲಾಗಿದೆ. ಆದರೆ ನಕಲಿ ದಾಖಲೆಗಳ ಬಳಕೆ ಅಥವಾ ಅಕ್ರಮ ವಲಸೆ ಸಂಪರ್ಕಗಳ ಕುರಿತು ಪೊಲೀಸರು ತನಿಖೆಯಲ್ಲೂ ಮುಂದುವರಿಸಿದ್ದಾರೆ.

ಶ್ರೀ ರಾಮ್ ಸೇನಾ ಜಿಲ್ಲಾಧ್ಯಕ್ಷ Ravi Kokitkar ನೇತೃತ್ವದ ತಂಡವು,"ಹುಬ್ಬಳ್ಳಿಯಲ್ಲೂ ಕೆಲವರ ತಪಾಸಣೆ ನಡೆದಿದ್ದು, ಮೂರು ಬಸ್ ಗಳಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನಗರಕ್ಕೆ ಬಂದಿದ್ದಾರೆ" ಎಂಬ ಅನುಮಾನ ವ್ಯಕ್ತಪಡಿಸಿ ಪೊಲೀಸರನ್ನು ತಪಾಸನೆ ನಡೆಸುವಂತೆ ಒತ್ತಾಯಿಸಿತ್ತು. ಈ ಮಾಹಿತಿ ಹಿನ್ನೆಲೆ ಹೈ ಅಲರ್ಟ್ ಆದ ಪೊಲೀಸರು ತಕ್ಷಣವೇ ಎಲ್ಲರನ್ನೂ Malmaruti Police Station ಗೆ ಕರೆತಂದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ವರ್ಷಕ್ಕೆ ಒಳಗಾದವರು,"ನಾವು ಬಾಂಗ್ಲಾದೇಶದವರಲ್ಲ, West Bengal ಮೂಲದವರು. Shahapur ದಲ್ಲಿ ಅಕ್ಕಸಾಲಿಗರಾಗಿ (ಬಂಗಾರದ ಕೆಲಸ) ಕೆಲಸ ಮಾಡುತ್ತಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ಮತದಾನ ಇರುವ ಕಾರಣ ಊರಿಗೆ ಹೋಗಿದ್ದೆವು, ಇದೀಗ ಮತ್ತೆ ಕೆಲಸಕ್ಕೆ ಮರಳಿದ್ದೇವೆ" ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ.

Sponsored

Narayana Bharamani ನೇತೃತ್ವದಲ್ಲಿ ಅಧಿಕಾರಿಗಳು ಸುಮಾರು 20 ಕ್ಕೂ ಹೆಚ್ಚು ಕಾರ್ಮಿಕರ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್ ಹಾಗೂ ವೋಟರ್ ಐಡಿ ಸೇರಿದಂತೆ ಗುರುತು ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿದ್ದಾರೆ. ಮೇಲ್ನೋಟಕ್ಕೆ ಎಲ್ಲಾ ದಾಖಲೆಗಳು ಅಸಲಿ ಯಾಗಿರುವಂತೆ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚಿನ ಸುರಕ್ಷತೆ ಹಾಗೂ ದೃಢೀಕರಣಕ್ಕಾಗಿ ಹೆಬ್ಬೆರಳ ಗುರುತುಗಳನ್ನು ಪಡೆದುಕೊಂಡು ವಿವರವಾದ ಪರಿಶೀಲನೆ ನಡೆಸಲಾಗಿದೆ. ತಾಂತ್ರಿಕ ಹಾಗೂ ದಾಖಲೆ ಆಧಾರಿತ ಯಾವುದೇ ಅಕ್ರಮ ಕಂಡು ಬರದ ಹಿನ್ನೆಲೆಯಲ್ಲಿ ವಿಚಾರಣೆಯ ನಂತರ ಎಲ್ಲಾ ಕಾರ್ಮಿಕರನ್ನು ಅವರವರ ನಿವಾಸ ಮತ್ತು ಕೆಲಸದ ಸ್ಥಳಗಳಿಗೆ ವಾಪಸ್ ಕಳುಹಿಸಲಾಗಿದೆ.

ಆದರೆ ನಕಲಿ ದಾಖಲೆಗಳ ಬಳಕೆ ಅಥವಾ ಯಾವುದೇ ಅಕ್ರಮ ಸಂಪರ್ಕದಲ್ಲಿರುವ ಸಾಧ್ಯತೆ ಕುರಿತು ಆಂತರಿಕ ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Also Read:

Sponsored

ಶಾಲಾ ಆವರಣದಲ್ಲಿ ಕೇಸರಿ ಶಾಲು ಬ್ಯಾನ್ ? ಮಧು ಬಂಗಾರಪ್ಪ ಸ್ಪಷ್ಟನೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online