<?= $pageTitle ?>
Logo
ಮುಖಪುಟ ಓದುವುದು ಕೇಳು
Business

ಇರಾನ್-ಅಮೆರಿಕ ಒಪ್ಪಂದದ ಸುಳಿವು: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ

ಇರಾನ್-ಅಮೆರಿಕ ಒಪ್ಪಂದದ ಸುಳಿವು: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿತ
Summary: Global oil market activity has increased on the expectation of a deal between Iran and the US. As a result of this development, crude oil prices have fallen by more than 5 percent, and here is a complete breakdown of its impact on the global market and fuel prices.

Belagavi News:

ಇರಾನ್-ಅಮೆರಿಕ ಉದ್ವಿಗ್ನತೆ ತಗ್ಗಿದ ಪರಿಣಾಮ: ಕಚ್ಚಾ ತೈಲ ಬೆಲೆಯಲ್ಲಿ ಶೇ.5ಕ್ಕೂ ಹೆಚ್ಚು ಕುಸಿತ

ಟೋಕಿಯೋ (ಜಪಾನ್): ಇರಾನ್ ಮೇಲೆ ಅಮೆರಿಕ ಕಳೆದ ಎರಡು ರಾತ್ರಿಗಳಿಂದ ಯಾವುದೇ ದಾಳಿ ನಡೆಸಿದಿರುವುದು ಹೊಸ ಮಾತುಕತೆಗಳಿಗೆ ಅವಕಾಶ ಕಲ್ಪಿಸಿದೆ. ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಕಡಿಮೆಯಾಗುತ್ತಿರುವ ಸೂಚನೆಗಳ ನಡುವೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ.

ಏಷ್ಯಾದ ಮಾರುಕಟ್ಟೆಗಳಲ್ಲಿ ಅಂತರರಾಷ್ಟ್ರೀಯ ಮಾನದಂಡವಾಗಿರುವ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ.5.58 ರಷ್ಟು ಕುಸಿದು ಪ್ರತಿ ಬ್ಯಾರೆಲ್ ಗೆ 91.38 ಡಾಲರ್ ಗೆ ತಲುಪಿದೆ. ಇದೇ ವೇಳೆ ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೇಟ್ (WTI) ಕಚ್ಚಾ ತೈಲದ ಬೆಲೆ ಶೇ.5.46 ರಷ್ಟು ಇಳಿಕೆಯಾಗಿ 84.43 ಡಾಲರ್ ಗೆ ತಲುಪಿದೆ.

ಬ್ರೆಂಟ್ ಕಚ್ಚಾ ತೈಲ ಫ್ಯೂಚರ್ಸ್ ವಹಿವಾಟಿನಲ್ಲೂ ಕುಸಿತ ಕಂಡುಬಂದಿದ್ದು, ಶೇ.4.17 ರಷ್ಟು ಇಳಿಕೆಯೊಂದಿಗೆ ಪ್ರತಿ ಬ್ಯಾರೆಲ್ ಗೆ 92.74 ಡಾಲರ್ ಮಟ್ಟದಲ್ಲಿ ವಹಿವಾಟು ನಡೆಸಿದೆ.

ಮಾತುಕತೆ ನಿರೀಕ್ಷೆಯಿಂದ ತೈಲ ಮಾರುಕಟ್ಟೆಗೆ ನೆಮ್ಮದಿ;

ಅಮೆರಿಕ ಮತ್ತು ಇರಾನ್ ಪರಸ್ಪರ ದಾಳಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದು ಪಶ್ಚಿಮ ಏಷ್ಯಾದ ಉದ್ವಿಗ್ನತೆಯನ್ನು ತಗ್ಗಿಸಿದೆ. ಇದರಿಂದ ತೈಲ ಪೂರೈಕೆಯ ಮೇಲಿನ ಆತಂಕ ಕಡಿಮೆಯಾಗಿದ್ದು, ಕಚ್ಚಾ ತೈಲ ದರ ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.

ಭಾರತೀಯ ಷೇರು ಮಾರುಕಟ್ಟೆಗೆ ಚೇತರಿಕೆ;

ತೈಲ ಬೆಲೆ ಇಳಿಕೆ ಹಾಗೂ ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಬೆಳವಣಿಗೆಗಳ ಪರಿಣಾಮ ಭಾರತೀಯ ಷೇರು ಮಾರುಕಟ್ಟೆ ವಾರದ ಆರಂಭದಲ್ಲಿ ಉತ್ತಮ ವಹಿವಾಟು ಆರಂಭಿಸಿದೆ.

ಬಿಎಸ್ ಇ ಸೆನ್ಸೆಕ್ಸ್ 549.21 ಅಂಕಗಳು ಅಥವಾ ಶೇ.0.72ರಷ್ಟು ಏರಿಕೆಯಾಗಿ 76,608.98 ಅಂಕಗಳಿಗೆ ತಲುಪಿದೆ. ಎನ್ ಎಸ್ ಇ ನಿಫ್ಟಿ 50 166.85 ಅಂಕಗಳು ಅಥವಾ ಶೇ.0.70 ರಷ್ಟು ಏರಿಕೆಯಾಗಿ 23,934.30 ಅಂಕಗಳಿಗೆ ತಲುಪಿದೆ.

ಏಷ್ಯಾದ ಇತರ ಮಾರುಕಟ್ಟೆಗಳಲ್ಲೂ ಏರಿಕೆಯ ವಾತಾವರಣ ಕಂಡುಬಂದಿದ್ದು, ಗಿಫ್ಟ್ ನಿಫ್ಟಿ ಶೇ.0.48, ಜಪಾನ್ ನ ನಿಕ್ಕಿ ಶೇ.0.40, ಹ್ಯಾಂಗ್ ಸೆಂಗ್ ಶೇ.0.87 ಮತ್ತು ಶಾಂಘೈ ಕಾಂಪೋಸಿಟ್ ಶೇ.0.40 ರಷ್ಟು ಏರಿಕೆ ಕಂಡಿವೆ.

ರೂಪಾಯಿ ಮೌಲ್ಯದಲ್ಲಿ ಏರಿಕೆ;

ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಬಲಗೊಂಡಿದೆ. ಆರಂಭಿಕ ವಹಿವಾಟಿನಲ್ಲಿ ರೂಪಾಯಿ 35 ಪೈಸೆಗಳಷ್ಟು ಏರಿಕೆಯಾಗಿ ಪ್ರತಿ ಡಾಲರ್ ಗೆ 96.21 ಮಟ್ಟದಲ್ಲಿ ವಹಿವಾಟು ನಡೆಸಿದೆ. ಹಿಂದಿನ ವಹಿವಾಟಿನಲ್ಲಿ ರೂಪಾಯಿ ಕನಿಷ್ಠ ಮಟ್ಟದಿಂದ ಚೇತರಿಸಿಕೊಂಡು ಡಾಲರ್ ಎದರೂ 20 ಪೈಸೆ ಏರಿಕೆಯೊಂದಿಗೆ 96.53ರಲ್ಲಿ ಸ್ಥಿರಗೊಂಡಿತ್ತು .

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online