Belagavi News:
ಬಹುನಿರೀಕ್ಷಿತ ' ರಾಮಾಯಣ' ಚಿತ್ರದಲ್ಲಿ ರಾವಣದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್ ಅವರನ್ನು ಕಾಜಲ್ ಅಗರ್ವಾಲ್ ಅವರು " ಅದ್ಭುತ ನಟ " ಎಂದು ಶ್ಲಾಘಿಸಿದ್ದಾರೆ.
ಚಿತ್ರದ ಮೊದಲ ಭಾಗದ ಚಿತ್ರೀಕರಣದಲ್ಲಿ ರಾವಣ - ಮಂಡೋದರಿ ಪಾತ್ರಗಳಲ್ಲಿ ಯಶ್ ಮತ್ತು ಕಾಜಲ್ ಅಗರ್ವಾಲ್ ಜೋಡಿ ಯಶಸ್ವಿಯಾಗಿ ಭಾಗವಹಿಸಿದ್ದು, ಇವರಿಬ್ಬರ ತೆರೆ ಮೇಲಿನ ಕೆಮಿಸ್ಟ್ರಿ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದೆ.
ಭಾರತೀಯ ಸಿನಿಮಾದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ " ರಾಮಾಯಣ" ವು ಅದ್ದೂರಿ ನಿರ್ಮಾಣ, ಭವ್ಯ ದೃಶ್ಯಾವಳಿ ಮತ್ತು ಬೃಹತ್ ಬಜೆಟ್ ನಿಂದ ಗಮನ ಸೆಳೆಯುತ್ತಿದ್ದು, ಚಿತ್ರ ಪ್ರೇಮಿಗಳ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಬಹುನಿರೀಕ್ಷಿತ ರಾಮಾಯಣ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ದೊಡ್ಡ ತಾರಾಬಳಗ ಹೊಂದಿರುವ ಈ ಮಹಾಕಾವ್ಯ ಚಿತ್ರಕ್ಕೆ ದಕ್ಷಿಣ ಭಾರತದ ಸಿನಿ ಪ್ರೇಕ್ಷಕರಲ್ಲೂ ಹೆಚ್ಚಿನ ಕುತೂಹಲವಿದೆ.
ಈ ಚಿತ್ರದಲ್ಲಿ ನಟಿಸಿರುವ ಸೌತ್ ಸಿನಿರಂಗದ ಖ್ಯಾತ ನಟಿ ಕಾಜಲ್ ಅಗರ್ವಾಲ್ ಅವರು ಯಶ್ ಅವರ ನಟನ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಯಶ್ ಅವರನ್ನು " ಫೆನಾಮಿನಲ್ ಆ್ಯಕ್ಟರ್" ಎಂದು ಕರೆದಿರುವ ಕಾಜಲ್, ಅವರ ಜೊತೆ ಕೆಲಸ ಮಾಡಿದ ಅನುಭವ ಅದ್ಭುತವಾಗಿತ್ತು ಎಂದು ಹೇಳಿದ್ದಾರೆ.
ನಿಖಿಲ್ ದ್ವಿವೇದಿ ನಿರ್ಮಾಣದಲ್ಲಿ ಹಾಗೂ ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಮಹಾಕಾವ್ಯ ಆಧಾರಿತ ಸಿನೆಮಾದಲ್ಲಿ ಯಶ್ ಅವರು ಲಂಕಾಧಿಪತಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಕಾಜಲ್ ಅಗರ್ವಾಲ್ ಅವರು ರಾವಣನ ಪತ್ನಿ ಮಂಡೋದರಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಯಶ್ ಮತ್ತು ಕಾಜಲ್ ಅವರ ತೆರೆ ಮೇಲಿನ ಜೋಡಿ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದ್ದು, ಚಿತ್ರದ ಪಾತ್ರಗಳ ಕುರಿತ ಚರ್ಚೆ ಈಗಾಗಲೇ ಆರಂಭವಾಗಿದೆ.
ಮೊದಲ ಭಾಗದ ಶೂಟಿಂಗ್ ಕಂಪ್ಲೀಟ್!
ಬಹುನಿರೀಕ್ಷಿತ ' ರಾಮಾಯಣ ' ಚಿತ್ರದ ಮೊದಲ ಭಾಗದ ಚಿತ್ರಿಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಿತ್ರದ ಪ್ರಗತಿ ಕುರಿತು ಮಾತನಾಡಿದ ಕಾಜಲ್ ಅಗರ್ವಾಲ್ ಅವರು ಯಶ್ ಅವರ ಅಭಿನಯವನ್ನು ಶ್ಲಾಘಿಸಿ " ಯಶ್ ನಿಜಕ್ಕೂ ಒಬ್ಬ ಅದ್ಭುತ ನಟ" ಎಂದು ಹೇಳಿದ್ದಾರೆ.
ಸದ್ಯಕ್ಕೆ ಸಿನಿಮಾದ ಮೊದಲ ಭಾಗದ ಶೂಟಿಂಗ್ ಮಾತ್ರ ಪೂರ್ಣಗೊಂಡಿದ್ದು ಎರಡನೇ ಭಾಗದ ಚಿತ್ರೀಕರಣ ಇನ್ನಷ್ಟೇ ಆರಂಭವಾಗಬೇಕಿದೆ ಎಂದು ಕಾಜಲ್ ಮಾಹಿತಿ ನೀಡಿದ್ದಾರೆ.
ರಾವಣ ಮಂಡೋದರಿ ಪಾತ್ರಗಳಲ್ಲಿ ಯಶ್ ಮತ್ತು ಕಾಜಲ್ ಜೋಡಿ ಹೇಗೆ ಮೂಡಿ ಬರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದ್ದು, ಈ ಭವ್ಯ ಪೌರಾಣಿಕ ಚಿತ್ರಕಾಗಿ ಸಿನಿಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಬಹುನಿರೀಕ್ಷಿತ ರಾಮಾಯಣ ಸಿನಿಮಾದಲ್ಲಿ ರಾವಣ ಹಾಗೂ ಮಂಡೋದರಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಯಶ್ ಮತ್ತು ಕಾಜಲ್ ಅಗರ್ವಾಲ್ ಜೋಡಿ ತೆರೆಮೇಲೆ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಸಿನಿರಸಿಕರಲ್ಲಿ ಹೆಚ್ಚಾಗಿದೆ.
ಚಿತ್ರದ ಕಥೆಯಲ್ಲಿ ರಾವಣನ ಪಾತ್ರಕ್ಕೆ ಸಂಬಂಧಿಸಿದ ಪ್ರಮುಖ ದೃಶ್ಯಗಳು ಎರಡನೇ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರಲಿವೆ ಹೀಗಾಗಿ ರಾಮಾಯಣ 2 ನಲ್ಲಿ ಯಶ್ ಕಾಜಲ್ ಕಾಂಬಿನೇಷನ್ ಗೆ ಹೆಚ್ಚಿನ ಮಹತ್ವ ಸಿಗುವ ನಿರೀಕ್ಷೆಯಿದೆ.
ಮಹಾಕಾವ್ಯ ಆಧಾರಿತ ಈ ಬೃಹತ್ ಸಿನಿಮಾ ಬಾರಿ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದ್ದು, ಭಾರತೀಯ ಸಿನಿಮಾ ಇತಿಹಾಸದ ಅತ್ಯಂತ ದೊಡ್ಡ ಮತ್ತು ಅದ್ದೂರಿ ಚಿತ್ರಗಳ ಸಾಲಿನಲ್ಲಿ ಗುರುತಿಸಿಕೊಳ್ಳುವ ನಿರೀಕ್ಷೆ ಮೂಡಿಸಿದೆ.
ಯಶ್ ಅವರ ರಾವಣನ ಪಾತ್ರದ ಲುಕ್, ಅಭಿನಯ ಹಾಗೂ ಕಾಜಲ್ ಅವರ ಮಂಡೋದರಿ ಪಾತ್ರದೊಂದಿಗೆ ಅವರ ಕೆಮಿಸ್ಟ್ರಿ ಹೇಗಿರಲಿದೆ ಎಂಬುದನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
Also Read: