BELAGAVI NEWS :
ಇಂಡೋನೇಷ್ಯಾದಲ್ಲಿ ಐಐಎಂ ಬೆಂಗಳೂರಿನ ಹೊಸ ಕ್ಯಾಂಪಸ್ : ಪ್ರಧಾನಿ ಮೋದಿ ಘೋಷಣೆ, ASEAN ವಿದ್ಯಾರ್ಥಿಗಳಿಗೆ ಹೊಸ ಅವಕಾಶ
ಜಕಾರ್ತಾ,ಜುಲೈ7: ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಭಾರತೀಯ ನಿರ್ವಹಣಾ ಸಂಸ್ಥೆ ಬೆಂಗಳೂರು ತನ್ನ ಜಾಗತಿಕ ವಿಸ್ತರಣೆಯ ಭಾಗವಾಗಿ ಇಂಡೋನೇಷ್ಯಾದಲ್ಲಿ ಹೊಸ ಅಂತರಾಷ್ಟ್ರೀಯ ಕ್ಯಾಂಪಸ್ ಸ್ಥಾಪಿಸಲು ಮುಂದಾಗಿದೆ. ಈ ಮಹತ್ವದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಇಂಡೋನೇಷ್ಯಾ ಪ್ರವಾಸದ ವೇಳೆ ಜಕಾರ್ತಾ ದಲ್ಲಿ ಪ್ರಕಟಿಸಿದರು.
ಹೊಸ ಕ್ಯಾಂಪಸ್ ಇಂಡೋನೇಷ್ಯಾದ ಸಿಂಘಾಸರಿ ವಿಶೇಷ ಆರ್ಥಿಕ ವಲಯದಲ್ಲಿ ಸ್ಥಾಪನೆಯಾಗಲಿದ್ದು, ಇದು ಭಾರತದ ಎರಡನೇ ವಿದೇಶಿ ಐಐಎಂ ಕ್ಯಾಂಪಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಭಾರತವು ಜಾಗತಿಕ ಮಟ್ಟದಲ್ಲಿ ಉನ್ನತ ಶಿಕ್ಷಣದ ವಿಸ್ತರಣೆಗೆ ಒತ್ತು ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಯೋಜನೆ ಮಹತ್ವದ್ದಾಗಿದೆ.
ಹೊಸ ಕ್ಯಾಂಪಸ್ ನಲ್ಲಿ ಮ್ಯಾನೇಜ್ಮೆಂಟ್, ಕೃತಕ ಬುದ್ಧಿಮತ್ತೆ, ಉದ್ಯಮಶೀಲತೆ, ಡಿಜಿಟಲ್ ಇನೊವೇಶನ್ ಹಾಗೂ ನಾಯಕತ್ವ ಅಭಿವೃದ್ಧಿ ಸೇರಿದಂತೆ ಆಧುನಿಕ ಉದ್ಯಮ ಅಗತ್ಯಗಳಿಗೆ ಹೊಂದುವ ಕೋರ್ಸ್ ಗಳನ್ನು ಪರಿಚಯಿಸಲಾಗುತ್ತದೆ. ಇದರ ಮೂಲಕ ಇಂಡೋನೇಷಿಯಾ ಸೇರಿದಂತೆ ASEAN ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ವಿಶ್ವ ಮಟ್ಟದ ಭಾರತೀಯ ನಿರ್ವಹನ ಶಿಕ್ಷಣವನ್ನು ತಮ್ಮ ಪ್ರದೇಶದಲ್ಲೇ ಪಡೆಯುವ ಅವಕಾಶ ಸಿಗಲಿದೆ.
ಈ ಕ್ಯಾಂಪಸ್ ಭಾರತ-ಇಂಡೋನೇಷಿಯಾ ಶಿಕ್ಷಣ ಸರ್ಕಾರವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಸಂಶೋಧನೆ, ವಿದ್ಯಾರ್ಥಿ ವಿನಿಮಯ, ಕೈಗಾರಿಕಾ ಸೌಭಾಗ್ಯ ಮತ್ತು ಸ್ಮಾರ್ಟ್ ಆಪ್ ಪರಿಸರದ ಅಭಿವೃದ್ಧಿಗೆ ಹೊಸ ವೇದಿಕೆಯನ್ನು ಸೂಚಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ ಭಾರತದ ಹೆಚ್ಚುತ್ತಿರುವ ಜಾಗತಿಕ ಪ್ರಭಾವಕ್ಕೆ ಈ ಯೋಜನೆ ಮತ್ತೊಂದು ಮೈಲುಗಲ್ಲಾಗಿದ್ದು, ASEAN ಪ್ರದೇಶದ ಯುವ ಜನತೆಗೆ ಗುಣಮಟ್ಟದ ಶಿಕ್ಷಣ ಮತ್ತು ಅಂತರರಾಷ್ಟ್ರಿಯ ವೃತ್ತಿ ಅವಕಾಶಗಳ ದಾರಿಯನ್ನು ತೆರೆದಿಡಲಿದೆ.
ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಈ ವಿಷಯವನ್ನು ತಿಳಿಸಿದ್ದು, ಈ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿವೆ.
ಐಐಎಂ ಬೆಂಗಳೂರಿನ ವಿದೇಶಿ ಕ್ಯಾಂಪಸ್ ಗೆ ಚಾಲನೆ : ಭಾರತದ ಎರಡನೇ ಜಾಗತಿಕ ಐಐಎಂ ವಿಸ್ತರಣೆ
ಭಾರತದ ಪ್ರತಿಷ್ಠಿತ ನಿರ್ವಹಣಾ ಶಿಕ್ಷಣ ಸಂಸ್ಥೆಗಳ ಜಾಗತಿಕ ವಿಸ್ತರಣೆಯ ಭಾಗವಾಗಿ ಐಐಎಂ ವಿದೇಶದಲ್ಲಿ ತನ್ನ ಮೊದಲ ಕ್ಯಾಂಪಸ್ ಆರಂಭಿಸಲು ಮುಂದಾಗಿದೆ. ಇದು ಭಾರತದ ಐಐಎಂ ಸಂಸ್ಥೆಗಳ ಪೈಕಿ ವಿದೇಶದಲ್ಲಿ ಆರಂಭವಾಗುತ್ತಿರುವ ಎರಡನೇ ಕ್ಯಾಂಪಸ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇದಕ್ಕೂ ಮೊದಲು ಐಐಎಂ ಅಮದಾಬಾದ್ ದುಬೈನಲ್ಲಿ ತನ್ನ ವಿದೇಶಿ ಕ್ಯಾಂಪಸ್ ಆರಂಭಿಸುವುದಾಗಿ ಘೋಷಿಸಿತ್ತು. ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಐಐಟಿ ಮದ್ರಾಸ್ ಟಾಂಜಾನಿಯಾದಲ್ಲಿ ಹಾಗೂ ಐಐಟಿ ದೆಹಲಿ ಅಬುದಾಬಿಯಲ್ಲಿ ತನ್ನ ಶಾಖೆಗಳನ್ನು ಈಗಾಗಲೇ ಆರಂಭಿಸಿವೆ. ಇದೀಗ ಈ ಜಾಗತಿಕ ವಿಸ್ತರಣೆಯ ಸಾಲಿಗೆ ಐಐಎಂ ಬೆಂಗಳೂರು ಸೇರ್ಪಡೆಯಾಗಿದೆ.
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (NIRF - 2025) ಪ್ರಕಾರ, ಐಐಎಂ ಬೆಂಗಳೂರು ದೇಶದ ಎರಡನೇ ಅತ್ಯುತ್ತಮ ಮ್ಯಾನೇಜ್ಮೆಂಟ್ ಸಂಸ್ಥೆ ಎಂಬ ಸ್ಥಾನವನ್ನು ಪಡೆದಿದೆ. ಗುಣಮಟ್ಟದ ಶಿಕ್ಷಣ, ಸಂಶೋಧನೆ ಹಾಗೂ ಜಾಗತಿಕ ಮಟ್ಟದ ನಿರ್ವಹಣಾ ತರಬೇತಿಗೆ ಹೆಸರುವಾಸಿಯಾಗಿರುವ ಸಂಸ್ಥೆಯ ವಿದೇಶಿ ಕ್ಯಾಂಪಸ್ ಭಾರತದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಮಹತ್ವದ ಮೈಲುಗಲ್ಲಾಗಿದೆ.
ಇಂಡೋನೇಷ್ಯಾದಲ್ಲಿ ಐಐಎಂ ಕ್ಯಾಂಪಸ್ :ಎಲ್ಲಿ ಆರಂಭವಾಗಲಿದೆ? ಏನಿದರ ವಿಶೇಷ?
ಭಾರತದ ಪ್ರತಿಷ್ಠಿತ ಐಐಎಂ ಬೆಂಗಳೂರು ತನ್ನ ಮೊದಲ ವಿದೇಶಿ ಕ್ಯಾಂಪಸ್ ಅನ್ನು ಇಂಡೋನೇಷ್ಯಾದ ಮಲಾಂಗ್ನಲ್ಲಿರುವ 'ಸಿಂಘಾಸರಿ ವಿಶೇಷ ಆರ್ಥಿಕ ವಲಯ'ದಲ್ಲಿ ಸ್ಥಾಪಿಸಲಿದೆ. ಡಿಜಿಟಲ್ ಆರ್ಥಿಕತೆ, ನಾವಿನ್ಯತೆ ಮತ್ತು ಉನ್ನತ ಶಿಕ್ಷಣಕ್ಕಾಗಿ ಅಭಿವೃದ್ಧಿಪಡಿಸಲಾದ ಇಂಡೋನೇಷ್ಯಾದ ಮೊದಲ ವಿಶೇಷ ಆರ್ಥಿಕ ವಲಯ ಇದಾಗಿದ್ದು, ಜಾಗತಿಕ ಶಿಕ್ಷಣ ಕೇಂದ್ರವಾಗಿ ಬೆಳೆಯುವ ಗುರಿಯನ್ನು ಹೊಂದಿದೆ.
ASEAN ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಅನುಕೂಲ:
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ,ಈ ಕ್ಯಾಂಪಸ್ ನಿಂದ ಇಂಡೋನೇಷಿಯಾ ಮಾತ್ರವಲ್ಲದೆ ಆಗ್ನೇಯ ರಷ್ಯಾ ರಾಷ್ಟ್ರಗಳ ಒಕ್ಕೂಟ ಸದಸ್ಯ ರಾಷ್ಟ್ರಗಳಿಗೂ ವಿಶ್ವ ಮಟ್ಟದ ಶಿಕ್ಷಣ ಪಡೆಯಲು ಉತ್ತಮ ಅವಕಾಶ ದೊರೆಯಲಿದೆ.ಇದರಿಂದ ಭಾರತ ಮತ್ತು ಆಗ್ನೇಯ ಏಷ್ಯಾ ನಡುವಿನ ಶೈಕ್ಷಣಿಕ ಸಹಕಾರ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆ ಇದೆ.
ಭಾರತ - ಇಂಡೋನೇಷ್ಯಾ ಸರ್ಕಾರಕ್ಕೆ ಹೊಸ ಆಯಾಮ:
ಪ್ರಧಾನಿ ಮೋದಿ ಅವರ ಇಂಡೋನೇಷಿಯಾ ಬೇಟಿಯ ವೇಳೆ ಶಿಕ್ಷಣ ಕ್ಷೇತ್ರಕ್ಕೆ ಕೃತಕ ಬುದ್ಧಿಮತ್ತೆ, ದೂರಸಂಪರ್ಕ, ಆರೋಗ್ಯ, ಕೃಷಿ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಮಹತ್ವದ ಒಪ್ಪಂದಗಳು ನಡೆದಿವೆ. ವಿಶೇಷವಾಗಿ ಬ್ರಹ್ಮೋಸ್ಮ ಮತ್ತು ಅಸ್ತ್ರ ಕ್ಷಿಪಣಿ ಸೇರಿದಂತೆ ರಕ್ಷಣಾ ಸಹಕಾರಕೂ ಉತ್ತೇಜನ ದೊರೆತಿದೆ.
ಈ ಕಾರ್ಯಕ್ರಮದ ಪಾಲುದಾರಿಕೆ ಭಾರತ ಮತ್ತು ಇಂಡೋನೇಷ್ಯಾ ನಡುವಿನ ತಂತ್ರಜ್ಞಾನ, ಶಿಕ್ಷಣ ಹಾಗೂ ಆರ್ಥಿಕ ಸರ್ಕಾರವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ಎರಡು ದೇಶಗಳ ಅಭಿವೃದ್ಧಿಗೆ ಹೊಸ ಅವಕಾಶಗಳನ್ನು ಸೂಚಿಸುವ ನಿರೀಕ್ಷೆ ಇದೆ.