<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಲೇಹ್ ನಲ್ಲಿ ಮಹತ್ವದ ಸಭೆ : ಲಡಾಕ್ ಸಮಸ್ಯೆ ಪರಿಹಾರಕ್ಕೆ ಮುಂದಾದ ಕೇಂದ್ರ

ಲೇಹ್ ನಲ್ಲಿ ಮಹತ್ವದ ಸಭೆ : ಲಡಾಕ್ ಸಮಸ್ಯೆ ಪರಿಹಾರಕ್ಕೆ ಮುಂದಾದ ಕೇಂದ್ರ
Summary: The Union Home Ministry's sub-committee on Ladakh is set to hold talks in the Union Territory for the first time. The discussions to be held in Leh are being considered a significant development in the resolution of the crisis and local demands.

BELAGAVI NEWS:

ಲಡಾಕ್ ನಲ್ಲಿ ಕಳೆದ ಮೇ 22 ರಿಂದ ಮುಂದುವರೆದಿರುವ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳವ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವಾಲಯ ನೇತೃತ್ವದ ಉಪಸಮಿತಿ ಮಹತ್ವದ ಹೆಜ್ಜೆ ಇಟ್ಟಿದೆ. ಸಮಸ್ಯೆಗಳ ಕುರಿತು ಚರ್ಚೆ ನಡೆಸಲು ಸಮಿತಿ ಇದೇ ವಾರ ಲಡಾಕ್ ನ ಲೇಹ್ ಗೆ ಭೇಟಿ ನೀಡಲಿದೆ.

ಲೇಹ್ ಅಪೆಕ್ಸ್ ಗುಂಪಿನ ಅಧ್ಯಕ್ಷ ಚೆರಿಂಗ್ ದೋರ್ಜೆ ಲಕ್ರುಕ್ ಅವರು ಸಭೆಯಲ್ಲಿ ಭಾಗವಹಿಸಲು ತಮಗೆ ಆಹ್ವಾನ ಬಂದಿರುವುದನ್ನು ದೃಢಪಡಿಸಿದ್ದಾರೆ. ಲಡಾಕ್ ಗೆ ಸಂಬಂಧಿಸಿದ ಪ್ರಮುಖ ಬೇಡಿಕೆಗಳು ಹಾಗೂ ಸ್ಥಳೀಯ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಕೇಂದ್ರ ಮತ್ತು ಲಡಾಕ್ ಪ್ರತಿನಿಧಿಗಳ ನಡುವಿನ ಈ ಮಾತುಕತೆ ಬಿಕ್ಕಟ್ಟು ಪರಿಹಾರದ ದಿಕ್ಕಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ ಎಂದು ನಿರೀಕ್ಷಿಸಲಾಗಿದೆ.

ಲಡಾಕ್ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯಲಿರುವ ಕೇಂದ್ರ ಗೃಹ ಸಚಿವಾಲಯದ ಉಪಸಮಿತಿ ಸಭೆಗೆ ಲೇಹ್ ಅಪೆಕ್ಸ್ ಗುಂಪು ಹಾಗೂ ಕಾರ್ಗಿಲ್ ಡೆಮಾಕ್ರೆಟಿಕ್ ಅಲೈಯನ್ಸ್ ಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ.

ಜುಲೈ 2ರಂದು ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲು ತಮಗೆ ಆಹ್ವಾನ ಬಂದಿದ್ದು, ಹಿಂದಿನ ಸಭೆಯಲ್ಲಿ ಚರ್ಚೆಯಾಗದೆ ಉಳಿದಿದ್ದ ಪ್ರಮುಖ ಅಂಶಗಳನ್ನು ಈ ಬಾರಿ ಪ್ರಸ್ತಾಪಿಸಲಾಗುವುದು ಎಂದು ಲೇಹ್ ಅಪೆಕ್ಸ್ ಗುಂಪಿನ ಅಧ್ಯಕ್ಷ ಚೆರಿಂಗ್ ದೋರ್ಜೆ ಲಕ್ರುಕ್ ತಿಳಿಸಿದ್ದಾರೆ.

ಇದೇ ವೇಳೆ, ಕಾರ್ಗಿಲ್ ಡೆಮೋಕ್ರಟಿಕ್ ಅಲೈಯನ್ಸ್‌ನ ಸಹವರ್ತಿ ಅಸ್ಗರ್ ಅಲಿ ಕರ್ಬಲೈ ಕೂಡ ಉಪಸಮಿತಿ ಸಭೆಯಲ್ಲಿ ಭಾಗವಹಿಸಲು ಆಹ್ವಾನ ದೊರೆಯುತ್ತಿರುವುದನ್ನು ಖಚಿತಪಡಿಸಿದ್ದಾರೆ.

ಲಡಾಕ್ ನ ಪ್ರಮುಖ ಬೇಡಿಕೆಗಳು ಮತ್ತು ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯುವ ನಿರೀಕ್ಷೆ ಇದೆ.

ಲಡಾಕ್ ವಿಚಾರಕ್ಕೆ ಸಂಬಂಧಿಸಿದ ಕೇಂದ್ರ ಗೃಹ ಸಚಿವಾಲಯದ ಉಪಸಮಿತಿ ಇದೆ ಮೊದಲ ಬಾರಿಗೆ ಕೇಂದ್ರ ಆಡಳಿತ ಪ್ರದೇಶದಲ್ಲಿ ನೇರವಾಗಿ ಮಾತುಕತೆ ನಡೆಸಲಿದೆ. ಈ ಹಿಂದೆ ಮೇ ತಿಂಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಲೇಹ್ ಗೆ ಭೇಟಿ ನೀಡಿದ್ದ ವೇಳೆ, ಲಡಾಕ್ ನ ವಿವಿಧ ಗುಂಪುಗಳು ತಮ್ಮ ಬೇಡಿಕೆಗಳ ಕುರಿತು ಉನ್ನತ ಮಟ್ಟದ ಸಮಿತಿಯೊಂದಿಗೆ ಚರ್ಚಿಸಲು ಒತ್ತಾಯಿಸಿದವು . ಆದರೆ ಆ ಸಂದರ್ಭದಲ್ಲಿ ಅಮಿತ್ ಶಾ ಅವರೊಂದಿಗೆ ನೇರ ಮಾತುಕತೆ ಸಾಧ್ಯವಾಗಿರಲಿಲ್ಲ.

ಲಡಾಕ್ ನ ಪ್ರಮುಖ ಬೇಡಿಕೆಗಳಲ್ಲಿ ಸಂವಿಧಾನದ ಆರನೇ ಪರಿಚ್ಛೇದದ ಅಡಿಯಲ್ಲಿ ಸಾಂವಿಧಾನಿಕ ರಕ್ಷಣೆ, ಪೂರ್ಣ ರಾಜ್ಯ ಸ್ಥಾನಮಾನ ಹಾಗೂ ಸ್ಥಳೀಯ ಜನರ ಹಿತಾಸಕ್ತಿಗಳನ್ನು ಕಾಪಾಡುವ ಕ್ರಮಗಳು ಸೇರಿವೆ. ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಲಡಾಕ್ ನ ವಿವಿಧ ಸಂಘಟನೆಗಳು ಕಳೆದ ಆರು ವರ್ಷಗಳಿಂದ ನಿರಂತರವಾಗಿ ಹೋರಾಟ ನಡೆಸುತ್ತಿವೆ.

ಇದೀಗ ನಡೆಯಲಿರುವ ಉಪಸಮಿತಿ ಸಭೆ ಬಿಕ್ಕಟ್ಟು ಪರಿಹಾರಕ್ಕೆ ಮಹತ್ವದ ಹೆಜ್ಜೆಯಾಗುವ ನಿರೀಕ್ಷೆ ಮೂಡಿಸಿದೆ,

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online