Belagavi News :
ರಾಜ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ (cervical cancer) ಪ್ರಕರಣಗಳ ಆತಂಕದ ನಡುವೆ, ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ HPV ಲಸಿಕೆ ನೀಡುವ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು ₹ 3 ಸಾವಿರದಿಂದ ₹ 5 19ವರೆಗೆ ವೆಚ್ಚವಾಗುತ್ತಿದ್ದ HPV ಲಸಿಕೆ ಇದೀಗ ಸರ್ಕಾರದ ವತಿಯಿಂದ ಉಚಿತವಾಗಿ ನೀಡಲಾಗುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದ್ದು, ಬೇಡಿಕೆ ಹೆಚ್ಚಾಗಿದೆ.
ಕೊರೋನಾ ಮಹಾಮಾರಿಯ ಅವಧಿಯಲ್ಲಿ ಹಲವು ಆರೋಗ್ಯ ಸಮಸ್ಯೆಗಳು ಹಿಂಬದಿಗೆ ಸರಿದಿದ್ದರೂ, ಇದೀಗ ಗರ್ಭಕಂಠ ಕ್ಯಾನ್ಸರ್ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ವಿಶೇಷ ಗಮನ ಹರಿಸಿದೆ. ಹದಿಹರೆಯ ಬಾಲಕಿಯರಿಂದ ಹಿಡಿದು ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುವ ಈ ಕ್ಯಾನ್ಸರ್ ತಡೆಗೆ HPV ಲಸಿಕೆ ಪ್ರಮುಖ ಮುನ್ನೆಚ್ಚರಿಕ ಕ್ರಮವಾಗಿದೆ.
HPV ವೈರಸ್ ನಿಂದ ಉಂಟಾಗುವ ಗರ್ಭಕಂಠ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಆರಂಭಿಸಿರುವ ಈ ಲಸಿಕೆ ಅಭಿಯಾನ, ಮಹಿಳೆಯರ ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸರ್ಕಾರದ ಉಚಿತ ಲಸಿಕೆ ಯೋಜನೆಯಿಂದ ಹೆಚ್ಚಿನ ಸಂಖ್ಯೆಯ ಬಾಲಕಿಯರು ಲಸಿಕೆ ಪಡೆಯುವ ಮೂಲಕ ಭವಿಷ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆ ಇದೆ.
ಕರ್ನಾಟಕದಲ್ಲಿ HPV ಲಸಿಕೆಗೆ ಹೆಚ್ಚಿದ ಬೇಡಿಕೆ - ಉಚಿತ ಲಸಿಕೆ ಅಭಿಯಾನಕ್ಕೆ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ :
ರಾಜ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ (cervical cancer ) ಪ್ರಕರಣಗಳ ಆತಂಕದ ಹಿನ್ನೆಲೆಯಲ್ಲಿ HPV ಲಸಿಕೆ ಪಡೆಯಲು ಮಹಿಳೆಯರು ಮತ್ತು ಪೋಷಕರು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಲಸಿಕೆ ಪಡೆಯಲು ಮುಂದೆ ಬರುತ್ತಿರುವ ಸಂಖ್ಯೆಯಲ್ಲಿ ಸುಮಾರು ಶೇ. 50ರಷ್ಟು ಹೆಚ್ಚಳ ಕಂಡು ಬಂದಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಈ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ HPV ಲಸಿಕೆಗೆ ಸುಮಾರು ₹ 3 ಸಾವಿರದಿಂದ ₹ 5 ಸಾವಿರದವರೆಗೆ ವೆಚ್ಚವಾಗುತ್ತಿತ್ತು. ದುಬಾರಿ ದರದ ಕಾರಣದಿಂದ ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬಗಳ ಹೆಣ್ಣು ಮಕ್ಕಳಿಗೆ ಲಸಿಕೆ ಪಡೆಯುವುದು ಕಷ್ಟವಾಗಿತ್ತು.
ಈ ಹಿನ್ನೆಲೆಯಲ್ಲಿ ಸ್ತ್ರೀರೋಗ ತಜ್ಞರ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತ HPV ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಿದೆ. ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವಲ್ಲಿ HPV ಲಸಿಕೆ ಪ್ರಮುಖ ಪಾತ್ರವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಬಾಲಕಿಯರು ಲಸಿಕೆ ಪಡೆಯುವಂತೆ ಆರೋಗ್ಯ ಇಲಾಖೆ ಜಾಗೃತಿ ಮೂಡಿಸುತ್ತಿದೆ.
ಗರ್ಭಕಂಠ ಕ್ಯಾನ್ಸರ್ ತಡೆಗೆ ಉಚಿತ ಲಸಿಕಾ ಅಭಿಯಾನ - ಪೋಷಕರು ಸದುಪಯೋಗ ಪಡೆಯಲು ಆರೋಗ್ಯ ಇಲಾಖೆ ಮನವಿ :
ಗರ್ಭಕಂಠ ಕ್ಯಾನ್ಸರ್ ಗೆ ಪ್ರಮುಖ ಕಾರಣಗಳನ್ನು ಮಾನವ ಪ್ಯಾಪಿಲೋಮಾ ವೈರಸ್ (HPV) ಸೋಂಕು ಪ್ರಮುಖವಾಗಿದೆ. ಇದರ ಜೊತೆಗೆ ಧೂಮಪಾನ ಮಧ್ಯಪಾನದಂತಹ ದುಶ್ಚಟಗಳು, ಬದಲಾಗುತ್ತಿರುವ ಜೀವನ ಶೈಲಿ, ಸುರಕ್ಷಿತ ಲೈಂಗಿಕ ಜೀವನ ಹಾಗೂ ಗರ್ಭ ನಿರೋಧಕಗಳ ಅಸಮರ್ಪಕ ಬಳಕೆ ಸೇರಿದಂತೆ ಹಲವು ಅಂಶಗಳು ಅಪಾಯವನ್ನು ಹೆಚ್ಚಿಸಬಹುದು.
ಗರ್ಭಕಂಠ ಕ್ಯಾನ್ಸರ್ ಗೆ ಕಾರಣವಾಗುವ ಪ್ರಮುಖ ಅಂಶಗಳು :
1. ಮಹಿಳೆಯರಲ್ಲಿ ಹೆಚ್ಚುತ್ತಿರುವ ಧೂಮಪಾನ ಹಾಗೂ ಮಧ್ಯಪಾನದ ಹವ್ಯಾಸ
2. ಬದಲಾಗುತ್ತಿರುವ ಪಾಶ್ಚಾತ್ಯ ಮತ್ತು ಆಧುನಿಕ ಜೀವನಶೈಲಿ.
3. ಅ ಸುರಕ್ಷಿತ ಲೈಂಗಿಕ ಸಂಪರ್ಕ ಹಾಗೂ ಗರ್ಭ ನಿರೋಧಕಗಳ ತಪ್ಪಾದ ಬಳಕೆ.
4. ಅತಿ ಕಡಿಮೆ ವಯಸ್ಸಿನಲ್ಲಿ ಋತುಸ್ರಾವ ಆರಂಭವಾಗುವುದು ಅಥವಾ ತಡವಾಗಿ ಋತುಬಂಧ ಸಂಭವಿಸುವುದು.
5. ದೇಹದಲ್ಲಿನ ಹಾರ್ಮೋನು ಬದಲಾವಣೆಗಳು ಹಾಗೂ ಸಂತಾನೋತ್ಪತ್ತಿಗೆ ಸಂಬಂಧಿಸಿದ ವಿವಿಧ ಅಂಶಗಳು.
HPV ಲಸಿಕೆ ಮೂಲಕ ತಡೆ ಸಾಧ್ಯ :
ಗರ್ಭಕಂಠ ಕ್ಯಾನ್ಸರ್ ಅನ್ನು ತಡೆಯಲು HPV ಲಸಿಕೆ ಪರಿಣಾಮಕಾರಿ ಮುನ್ನೆಚ್ಚರಿಕ ಕ್ರಮವಾಗಿದೆ. ಸರಿಯಾದ ಸಮಯದಲ್ಲಿ ಲಸಿಕೆ ಪಡೆಯುವುದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳಿದ್ದಾರೆ.
ಸರ್ಕಾರದ ಉಚ್ಚಲಸಿಕ ಅಭಿಯಾನದ ಮೂಲಕ ಅರ್ಹ ಹೆಣ್ಣು ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು, ಪೋಷಕರು ಈ ಅವಕಾಶವನ್ನು ಬಳಸಿಕೊಂಡು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು.
ಆರೋಗ್ಯಕರ ಭವಿಷ್ಯಕ್ಕಾಗಿ ಗರ್ಭಕಂಠ ಕ್ಯಾನ್ಸರ್ ತಡೆಗಟ್ಟುವ ಕ್ರಮಗಳನ್ನು ಅನುಸರಿಸಿ, ಲಸಿಕೆ ಪಡೆಯುವುದು ಅತ್ಯಂತ ಅಗತ್ಯವಾಗಿದೆ.