Balagavi News:
ಚೆನ್ನೈ (ತಮಿಳುನಾಡು): ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟದ ಮೈತ್ರಿ ರಾಜಕಾರಣದ ಕುರಿತು ಡಿಎಂಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಲೋಕಸಭಾ ಚುನಾವಣೆ ಸಮಯದಲ್ಲಿ ಬೆಂಬಲ ಪಡೆಯುವ ಕಾಂಗ್ರೆಸ್, ರಾಜ್ಯದಲ್ಲಿ ಮೈತ್ರಿ ಒಗ್ಗಟ್ಟನ್ನು ಕಾಪಾಡಿಕೊಳ್ಳುವಲ್ಲಿ ವಿಫಲವಾಗುತ್ತಿದೆ ಎಂದು ಅದು ಟೀಕಿಸಿದೆ.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಜ್ಯೋತಿ ಪೂರ್ವ ಮೈತ್ರಿ ಮಾಡಿಕೊಂಡಿದ್ದ Indian National Congress ನಂತರದ ಹಂತದಲ್ಲಿ ವಿಭಿನ್ನ ಪಕ್ಷಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತೆ ನಡೆದುಕೊಂಡಿದ್ದು, ಇದು ಮೈತ್ರಿ ಧರ್ಮಕ್ಕೆ ವಿರುದ್ಧವಾಗಿದೆ ಎಂದು ಡಿಎಂಕೆ ಆರೋಪಿಸಿದೆ.
ಡಿಎಂಕೆಯ ಅಧಿಕೃತ ಮುಖವಾಣಿ ' ಮುರಸೊಲಿ' ಎಲ್ಲಿ ಈ ಕುರಿತು ತೀವ್ರ ವಾಗ್ದಾಳಿ ನಡೆಸಿದ್ದು, ರಾಜ್ಯ ಮಟ್ಟದಲ್ಲಿ ಮೈತ್ರಿ ಒಗ್ಗಟ್ಟನ್ನು ಹಾಳು ಮಾಡಿದವರು ಈಗ ರಾಷ್ಟ್ರ ಮಟ್ಟದಲ್ಲಿ ಒಗ್ಗಟ್ಟಿನ ಪಾಠ ಹೇಳುತ್ತಿರುವುದು ವ್ಯಂಗ್ಯಕರ ಎಂದು ಹೇಳಿದೆ. ರಾಹುಲ್ ಗಾಂಧಿ ಅವರ ಪಾತ್ರದ ಕುರಿತು ಕೂಡ ಪರೋಕ್ಷ ಟೀಕೆ ವ್ಯಕ್ತಪಡಿಸಲಾಗಿದೆ.
ಜೂನ್ 11ರಂದು ನಡೆದ ಇಂಡಿಯಾ ಒಕ್ಕೂಟದ ಸಭೆಯಲ್ಲಿ ಎಡಪಕ್ಷಗಳು, Samajwadi party ಮತ್ತು Rashtriya Janata Dal ನಾಯಕರು ಕೂಡ ರಾಹುಲ್ ಗಾಂಧಿಯ ಕಾರ್ಯ ವೈಖರಿಯನ್ನು ಪ್ರಶ್ನಿಸುವುದು, ವಿರೋಧ ಪಕ್ಷದ ಒಗ್ಗಟ್ಟಿನಲ್ಲಿ ಭಿನ್ನಾಭಿಪ್ರಾಯ ಹೆಚ್ಚುತ್ತಿರುವುದನ್ನು ತೋರಿಸುತ್ತದೆ ಎಂದು ಡಿಎಂಕೆ ಹೇಳಿದೆ.
ಮೈತ್ರಿಯೊಳಗಿನ ಈ ತಕರಾರುಗಳು ಮುಂದಿನ ರಾಜಕೀಯ ಸಮೀಕರಣಗಳ ಮೇಲೆ ಪರಿಣಾಮ ಬೀರುವ ಸಾದ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಕೇರಳ ವಿಧಾನಸಭಾ ಚುನಾವಣೆಯ ವೇಳೆ ನಡೆದ ಪ್ರಚಾರದಲ್ಲಿ ರಾಹುಲ್ ಗಾಂಧಿ ಅವರು ಪಿಣರಾಯಿ ವಿಜಯನ್ ಅವರನ್ನು ಇನ್ನು ಪ್ರಧಾನಿ ಮೋದಿ ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿ. ಇಬ್ಬರ ನಡುವೆ ರಹಸ್ಯ ಒಪ್ಪಂದ ಇದೆ ಎಂಬ ಗಂಭೀರ ಆರೋಪ ಮಾಡಿದ್ದರು. ಈ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದೆ.
ಇಂಡಿಯಾ ಒಕ್ಕೂಟದ ಇತ್ತೀಚಿನ ಸಭೆಯಲ್ಲಿಯೂ ಈ ವಿಚಾರ ಪ್ರಸ್ತಾಪವಾಗಿದ್ದು, ಮೈತ್ರಿ ಒಳಗಿನ ಭಿನ್ನಾಭಿಪ್ರಾಯಗಳು ಹಾಗೂ ಪರಸ್ಪರ ಟೀಕೆಗಳು ಮತ್ತೆ ಬೆಳಕಿಗೆ ಬಂದಿವೆ. ಈ ಬೆಳವಣಿಗೆಗಳು ಒಕ್ಕೂಟದ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುತ್ತಿರುವುದಾಗಿ ರಾಜಕೀಯ ವಲಯದಲ್ಲಿ ವಿಶ್ಲೇಷಣೆ ನಡೆಯುತ್ತಿದೆ.
Also Read:
ಕಳ್ಳತನದ ಅನುಮಾನಕ್ಕೆ ಬಲಿಯಾದ ಯುವಕ: ಗುಂಪು ಹಲ್ಲೆಯಲ್ಲಿ ಸಾವಿಗೆ 5 ಮಂದಿ ಅರೆಸ್ಟ್