<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Business

ಐತಿಹಾಸಿಕ ಒಪ್ಪಂದದತ್ತ ಭಾರತ-ಅಮೆರಿಕ ಹೆಜ್ಜೆ: ಅಮೆರಿಕ ಅಧಿಕಾರಿ ಸ್ಪಷ್ಟನೆ

ಐತಿಹಾಸಿಕ ಒಪ್ಪಂದದತ್ತ ಭಾರತ-ಅಮೆರಿಕ ಹೆಜ್ಜೆ: ಅಮೆರಿಕ ಅಧಿಕಾರಿ ಸ್ಪಷ್ಟನೆ
Summary: We are very close to a significant and historic agreement with India, a senior US official said. The agreement is expected to further strengthen trade, investment and strategic cooperation between the two countries.

BELAGAVI NEWS :

ವಾಷಿಂಗ್ಟನ್, ಅಮೆರಿಕ: ಭಾರತದ ಜೊತೆಗಿನ ಐತಿಹಾಸಿಕ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲು ವಾಷಿಂಗ್ಟನ್ ಬಹಳ ಸನಿಹದಲ್ಲಿದೆ ಎಂದು ಅಮೆರಿಕದ ಉಪ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಬೆಥನಿ ಪೌಲೋಸ್ ಮಾರಿಸನ್ ತಿಳಿಸಿದ್ದಾರೆ.

ಫೌಂಡೇಶನ್ ಫಾರ್ ಇಂಡಿಯಾ ಮತ್ತು ಇಂಡಿಯನ್ ಡಯಾಸ್ಪೊರಾ ಸ್ಟಡೀಸ್ (FIIDS) ಕ್ಯಾಪಿಟಲ್ ಹಿಲ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫಲಿತಾಂಶ- ಆಧಾರಿತ ಸಂಬಂಧವನ್ನು ಮುಂದುವರಿಸುತ್ತಿದ್ದಾರೆ ಎಂದು ಹೇಳಿದರು. ವ್ಯಾಪಾರ ಮಾತುಕತೆಗಳನ್ನು ಗಮನಿಸಿದರೆ, 2026 ರ ಫೆಬ್ರವರಿಯಲ್ಲಿ ಐತಿಹಾಸಿಕ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿ ಸಹಿ ಹಾಕುವ ಗುರಿಯನ್ನು ಘೋಷಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಈ ಒಪ್ಪಂದದಿಂದ ಭಾರತದ 1.4 ಶತಕೋಟಿ ಜನರ ಬಲವಾಗಿ ಮಾರುಕಟ್ಟೆ, ಅಮೆರಿಕನ್ ಸರಕುಗಳಿಗೆ ಹೆಚ್ಚು ತೆರೆಯಲಿದೆ ಎಂದು ಅವರು ಹೇಳಿದರು. 2030 ರ ವೇಳೆಗೆ 500 ಬಿಲಿಯನ್ ಡಾಲರ್ ವ್ಯಾಪಾರ ಸಾಧಿಸುವ "ಮಿಷನ್ 500" ಗುರಿಯತ್ತ ಎರಡು ದೇಶಗಳು ಸಾಗುತ್ತಿವೆ ಎಂದು ಅವರು ವಿವರಿಸಿದರು.

Sponsored

ಈ ವರ್ಷದ ಆರಂಭದಲ್ಲಿ ನಡೆದ ಮೋದಿ- ಟ್ರಂಪ್ ಮಾತುಕತೆಗಳನ್ನು ಉಲ್ಲೇಖಿಸಿದ ಮಾರಿಸನ್, " ನಾವು ಸಂಬಂಧವನ್ನು ಸಭೆಗಳ ಮೂಲಕ ಅಳೆಯುತ್ತಿಲ್ಲ, ಫಲಿತಾಂಶಗಳ ಮೂಲಕ ಅಳೆಯುತ್ತಿದ್ದೇವೆ" ಎಂದು ಹೇಳಿದರು. ಭಾರತ-ಅಮೆರಿಕ ದ್ವಿಪಕ್ಷೀಯ ವ್ಯಾಪಾರ ಈಗ 149 ಬಿಲಿಯನ್ ಡಾಲರ್ ಗೆ ತಲುಪಿದ್ದು, ಅಮೆರಿಕದ ಭಾರತಕ್ಕೆ ರಫ್ತು ಶೇ.9.8 ರಷ್ಟು ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

ಭಾರತ -ಅಮೆರಿಕ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳಲ್ಲಿ ಹೆಚ್ಚುತ್ತಿರುವ ಆವೇಗವನ್ನು ಒತ್ತಿ ಹೇಳಿದ ಅಮೆರಿಕದ ಉಪ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಬೆಥನಿ ಪೌಲೋಸ್ ಮಾರಿಸನ್, ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವತ್ತ ಎರಡು ದೇಶಗಳು ತುರ್ತಾಗಿ ಮುಂದುವರಿಯುತ್ತಿವೆ ಎಂದು ತಿಳಿಸಿದ್ದಾರೆ.

ಈ ನಡುವೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ನರೇಂದ್ರ ಮೋದಿ ಪ್ರಾರಂಭಿಸಿದ ಮಧ್ಯಂತರ ವ್ಯಾಪಾರ ಒಪ್ಪಂದದ ಕುರಿತು ಮಾತುಕತೆಗಳನ್ನು ಮುಂದುವರೆಸುವ ನಿಟ್ಟಿನಲ್ಲಿ ಅಮೆರಿಕದ ವ್ಯಾಪಾರ ಪ್ರತಿನಿಧಿ ಜೇಮೀಸನ್ ಗ್ರೀರ್ ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮಂಗಳವಾರ ನವದೆಹಲಿಯಲ್ಲಿ ಮಹತ್ವದ ಸಭೆ ನಡೆಸಿದ್ದಾರೆ.

ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಅಮೆರಿಕದ ರಫ್ತುದಾರರಿಗೆ ಮಾರುಕಟ್ಟೆಗಳನ್ನು ತೆರೆಯುವ ಹಾಗೂ ಎರಡು ದೇಶಗಳಿಗೆ ಪರಸ್ಪರ ಪ್ರಯೋಜನ ನೀಡುವ ನ್ಯಾಯಸಮ್ಮತ ವ್ಯಾಪಾರ ಒಪ್ಪಂದವನ್ನು ಸಾಧಿಸುವತ್ತ ಗಮನಹರಿಸಲಾಗಿದೆ ಎಂದು ತಿಳಿಸಿದೆ.

Sponsored

ಈ ಬೆಳವಣಿಗೆಗಳು ಭಾರತ -ಅಮೆರಿಕ ಆರ್ಥಿಕ ಸಂಬಂಧಗಳು ಮುಂದಿನ ಹಂತಕ್ಕೆ ಸಾಗುತ್ತಿರುವ ಸೂಚನೆ ನೀಡುತ್ತಿವೆ.

Also Read:

ಬಾಡಿಗೆಗೆ ತಂದ ಗರಿ ಮಾತ್ರ,ಯಾವುದೇ ಜೀವಿಗೆ ಹಾನಿಯಾಗಿಲ್ಲ;'ಕಿಶನ್ ಹೇಳಿಕೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online