<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತೆ ವಾಗ್ದಾಳಿ

ಪಾಕಿಸ್ತಾನದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಭಾರತ ಮತ್ತೆ ವಾಗ್ದಾಳಿ
Summary: India has once again lashed out at Pakistan at the UN, raising issues of terrorism, border security and human rights. The Indian representative strongly criticized Pakistan's stance and sent a clear message on the international stage. Here is the full details of the UN debate and the India-Pakistan dispute.

BELAGAVI NEWS :

ವಿಶ್ವಸಂಸ್ಥೆ: ವಿಶ್ವಸಂಸ್ಥೆ ವೇದಿಕೆಯಲ್ಲಿ ಭಾರತ ಸೋಮವಾರ ಮತ್ತೊಮ್ಮೆ ಪಾಕಿಸ್ತಾನದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇಸ್ಲಾಮಾಬಾದ್ ತನ್ನ ದೇಶದೊಳಗಿನ ಕಾರ್ಯ ನಿರ್ವಹಿಸುತ್ತಿರುವ ಉಗ್ರಗಾಮಿ ಗುಂಪುಗಳಿಗೆ " ಫಿಟ್ನಾ ಅಲ್ - ಹಿಂದೂಸ್ತಾನ್" ಎಂದು ಲೇಬಲ್ ಹಾಕಲು ಪ್ರಯತ್ನಿಸುತ್ತಿದ್ದು, ಇದನ್ನು ಅಧಿಕೃತವಾಗಿ ಪ್ರಾಯೋಜಿತ ತಪ್ಪು ಮಾಹಿತಿ ಎಂದು ಭಾರತ ಟೀಕಿಸಿದೆ.

ಅಪ್ಘಾನಿಸ್ತಾನದ ಪರಿಸ್ಥಿತಿ ಕುರಿತಂತೆ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಹರೀಶ್ ಪರ್ವತನೇನಿ ಪಾಕಿಸ್ತಾನದ ನಿಲುವನ್ನು ತೀವ್ರವಾಗಿ ಖಂಡಿಸಿದರು.

ಪಾಕಿಸ್ತಾನ ತನ್ನ ಸರಕಾರಿ ಸಂಸ್ಥೆಗಳಿಗೆ ತನ್ನ ಗಡಿಯೊಳಗಿನ ಗುಂಪುಗಳನ್ನು "ಫಿಟ್ನಾ ಅಲ್ ಹಿಂದೂಸ್ತಾನ್ " ಎಂದು ಉಲ್ಲೇಖಿಸುವಂತೆ ಅಧಿಕೃತ ನಿರ್ದೇಶನ ನೀಡಿರುವುದು ತಪ್ಪು ಮಾಹಿತಿ ಹರಡುವ ಕ್ರಮವಾಗಿದೆ ಎಂದು ಅವರು ಆರೋಪಿಸಿದರು. ಈ ರೀತಿಯ ನಿರೂಪಣೆಗಳು ಅಂತರರಾಷ್ಟ್ರೀಯ ವೇದಿಕೆಯಲ್ಲಿ ವಾಸ್ತವವನ್ನು ತಿರುಗುಮರೆ ಮಾಡುವ ಪ್ರಯತ್ನವೆಂದು ಭಾರತ ಹೇಳಿದೆ.

Sponsored

ಪಾಕಿಸ್ತಾನ್ ಮಾಧ್ಯಮ ವರದಿಗಳ ಪ್ರಕಾರ, ಕಳೆದ ವರ್ಷ ಬಲೂಚಿಸ್ತಾನ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘಟನೆಗಳನ್ನು " ಫಿಟ್ನಾ ಅಲ್ ಹಿಂದೂಸ್ತಾನ್ "ಎಂದು ಅಧಿಕೃತವಾಗಿ ಹೆಸರಿಸಲಾಗಿದೆ ಎಂದು ಹೇಳಲಾಗಿದೆ. ಈ ಸಂಘಟನೆಗಳು ಭಾರತದ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪವನ್ನು ಪಾಕಿಸ್ತಾನ ಯಾವುದೇ ಸಾಕ್ಷ್ಯವಿಲ್ಲದೆ ಮುಂದಿಟ್ಟಿದೆ ಎಂದು ಭಾರತ ಪ್ರತಿಪಾದಿಸಿದೆ.

ಈ ಮೂಲಕ ವಿಶ್ವ ಸಂಸ್ಥೆ ವೇದಿಕೆಯಲ್ಲಿ ಭಾರತ ಪಾಕಿಸ್ತಾನ ನಡುವೆ ವಾಗ್ವಾದ ಮತ್ತೆ ತೀವ್ರಗೊಂಡಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ.

ವಿಶ್ವಸಂಸ್ಥೆಯ ವೇದಿಕೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಮತ್ತೊಮ್ಮೆ ತೀವ್ರ ವಾಗ್ವಾದ ನಡೆದಿದೆ. ಪಾಕಿಸ್ತಾನದ ಹೇಳಿಕೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಖಾಯಂ ಹರೀಶ್ ಪರ್ವತನೇನಿ ಭಾರತದ ವಿರುದ್ಧ ಕಟ್ಟು ಕಥೆಗಳನ್ನು ಹರಡುತ್ತಿದೆ ಎಂದು ಆರೋಪಿಸಿದ್ದಾರೆ.

ಪಾಕಿಸ್ತಾನ ಭಾರತದ ವಿರುದ್ಧ ಹೊರಿಸುತ್ತಿರುವ ಆರೋಪಗಳು ಸಾರ್ವಜನಿಕರನ್ನು ಮತ್ತು ಅಂತರಾಷ್ಟ್ರೀಯ ಸಮುದಾಯವನ್ನು ದಾರಿ ತಪ್ಪಿಸುವ ಸಂಘಟಿತ ಪ್ರಯತ್ನದ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ ಭಾರತದ ವಿರುದ್ಧದ ದ್ವೇಷವನ್ನು ಶಾಶ್ವತಗೊಳಿಸುವ ಮೂಲಕ ದೇಶಿಯ ರಾಜಕೀಯ ಲಾಭ ಪಡೆಯಲು ಮತ್ತು ಆತರಿಕ್ ಆಂತರಿಕ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು.

Sponsored

ಇದನ್ನು "ದ್ವೇಷದ ಸಂಘಟಿತ ಕಾರ್ಖಾನೆ" ಎಂದು ವಿವರಿಸಿದ ಅವರು, ಬಾಹ್ಯ ಶತ್ರುವಿನ ಕಲ್ಪನೆ ಸೃಷ್ಟಿಸುವ ಮೂಲಕ ಪಾಕಿಸ್ತಾನ ತನ್ನ ಆಂತರಿಕ ರಾಜಕೀಯ ಹಾಗೂ ಆರ್ಥಿಕ ಸಂಕಷ್ಟಗಳನ್ನು ಮುಚ್ಚಿಡಲು ಯತ್ನಿಸುತ್ತಿದೆ ಎಂದು ಹೇಳಿದರು. ಜೊತೆಗೆ ಪಾಕಿಸ್ತಾನದ ಆಡಳಿತ ವ್ಯವಸ್ಥೆ ಮತ್ತು ರಾಜಕೀಯ ರಚನೆಯಲ್ಲಿ ಸೇನೆಯ ಪ್ರಭಾವ ಹೆಚ್ಚುತ್ತಿರುವುದನ್ನು ಅವರು ಟೀಕಿಸಿದರು.

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ಮಿಲಿಟರಿ ವೈಮಾನಿಕ ದಾಳಿಗಳನ್ನು ಕೂಡ ಭಾರತ ಬಲವಾಗಿ ಖಂಡಿಸಿದ್ದು, ಪ್ರಾದೇಶಿಕ ಸ್ಥಿರತೆಗೆ ಇಂತಹ ಕ್ರಮಗಳು ಅಪಾಯಕಾರಿಯಾಗಿವೆ ಎಂದು ಎಚ್ಚರಿಕೆ ನೀಡಿದೆ.

ಈ ಮೂಲಕ ವಿಶ್ವ ಸಂಸ್ಥೆ ವೇದಿಕೆಯಲ್ಲಿ ಭಾರತ- ಪಾಕಿಸ್ತಾನ ನಡುವಿನ ರಾಜಕೀಯ ವಾಗ್ವಾದ ಮತ್ತೊಮ್ಮೆ ತೀವ್ರಗೊಂಡಿದೆ.

Also Read:

Sponsored

ವಿಶಾಖಪಟ್ಟಣಂ ಉಕ್ಕು ಸ್ಥಾವರದಲ್ಲಿ ಭೀಕರ ದುರಂತ : ಎಂಟು ಕಾರ್ಮಿಕರ ಸಾವು; ಪಿಎಂ ನಿಂದ ಪರಿಹಾರ ಘೋಷಣೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online