belagvi news :
ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಲಿಂಗ್ ತನ್ನ ವಾರ್ಷಿಕ ಏಕದಿನ ranking ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಟೀಮ್ ಇಂಡಿಯಾ ಮತ್ತೊಮ್ಮೆ ವಿಶ್ವ ಕ್ರಿಕೆಟ್ ನಲ್ಲಿ ತನ್ನ ಪಾರುಪತ್ಯವನ್ನು ಸಾಬೀತುಪಡಿಸಿದೆ. ಯಾವುದೇ ಅಂತರಾಷ್ಟ್ರೀಯ ಪಂದ್ಯಗಳನ್ನು ಆಡದಿದ್ದರೂ ಾರತ ತಂಡ 118 ಅಂಕಗಳೊಂದಿಗೆ ಏಕದಿನ ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ಇಂಡಿಯನ್ ನ್ಯಾಷನಲ್ ಕ್ರಿಕೆಟ್ ಟೀಮ್ ಕಳೆದ ಕೆಲವು ವರ್ಷಗಳಿಂದ ಏಕದಿನ ಕ್ರಿಕೆಟ್ ನಲ್ಲಿ ತೋರಿಸಿದ ಸ್ಥಿರ ಪ್ರದರ್ಶನದ ಫಲವಾಗಿ ಈ ಸ್ಥಾನವನ್ನು ಉಳಿಸಿಕೊಂಡಿದೆ. ಬ್ಯಾಟಿಂಗ್ ಬೌಲಿಂಗ್ ಮತ್ತು ಆಲ್ ರೌಂಡ್ ವಿಭಾಗಗಳಲ್ಲಿ ಸಮತೋಲನ ಹೊಂದಿರುವ ಭಾರತದ ವಿಶ್ವ ಕ್ರಿಕೆಟ್ ನಲ್ಲಿ ತನ್ನ ಬಲವನ್ನು ಮತ್ತೊಮ್ಮೆ ಪ್ರದರ್ಶಿಸಿದೆ. ಇದೀಗ ರ‍್ಯಾಂಕಿಂಗ್ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್ ನ್ಯಾಷನಲ್ ಕ್ರಿಕೆಟ್ ಟೀಮ್ ಎರಡನೇ ಸ್ಥಾನದಲ್ಲಿದೆ. ಇನ್ನು ಪಾಕಿಸ್ತಾನ್ ನ್ಯಾಷನಲ್ ಕ್ರಿಕೆಟ್ ಟೀಮ್ ಒಂದು ಸ್ಥಾನ ಕುಸಿದು ಐದನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಕ್ರಿಕೆಟ್ ಅಭಿಮಾನಿಗಳ ಅಭಿಪ್ರಾಯದಂತೆ, ಟೀಮ್ ಇಂಡಿಯಾ ನಿರಂತರ ಪ್ರದರ್ಶನ ಮತ್ತು ದೊಡ್ಡ ಟೂರ್ನಿಗಳಲ್ಲಿ ತೋರಿಸಿದ ಸಾಮರ್ಥವೇ ಈ ಸಾಧನೆಗೆ ಪ್ರಮುಖ ಕಾರಣವಾಗಿದೆ. ಮುಂದಿನ ಏಕದಿನ ಸರಣಿಯಲ್ಲಿಯೂ ಇದೆ ಲಯ ಮುಂದುವರೆಸಲು ಭಾರತ ತಂಡ ಸಜ್ಜಾಗಿದೆ. T20 ವಿಶ್ವ ಕಪ್ ಮುಗಿದ ಬಳಿಕ ಇಂಡಿಯನ್ ನ್ಯಾಷನಲ್ ಕ್ರಿಕೆಟ್ ಟೀಮ್ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ತಾತ್ಕಾಲಿಕವಾಗಿ ದೂರ ಉಳಿದಿದೆ. ಪ್ರಸ್ತುತ ದೇಶದಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2026 ಕಾರಣದಿಂದ ಭಾರತ ತಂಡ ಯಾವುದೇ ಅಂತಾರಾಷ್ಟ್ರೀಯ ಸರಣಿಯನ್ನು ಆಡಿಲ್ಲ.
ಲೀವ್ ಅಂತ ಮುಗಿಯುವ ಹಂತಕ್ಕೆ ಬಂದಿದ್ದು, ಅದರ ನಂತರ ಪ್ಲೇ ಆಫ್ ಪಂದ್ಯಗಳನ್ನು ನಡೆಯಲಿದೆ. ಆ ಬಳಿಕ ಐಪಿಎಲ್ ಗೆ ಈ ಸೀಸನ್ ತೆರೆ ಬೀಳಲಿದೆ ಮತ್ತು ನಂತರ ವೇ ಟೀಮ್ ಇಂಡಿಯಾ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಮರಳಲಿದೆ. ಇದ್ರ ನಡುವೆಯೂ, ಸುಮಾರು ಎರಡು ತಿಂಗಳುಗಳ ಕಾಲ ಪಂದ್ಯಗಳನ್ನು ಆಡದೆ ಇದ್ದರೂ ಭಾರತ ತಂಡ ತನ್ನ ಸ್ಥಾನವನ್ನು ಕಳೆದುಕೊಂಡಿಲ್ಲ. ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಪ್ರಕಟಿಸಿದ ವಾರ್ಷಿಕ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಮ್ ಇಂಡಿಯಾ ಮತ್ತೆ ಅಗ್ರಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಏಕದಿನ ರ್ಯಾಂಕಿಂಗ್ ವಿವರಗಳು: ಭಾರತ ತಂಡ 118 ಅಂಕಗಳೊಂದಿಗೆ ನಂಬರ್ ಒನ್ ಸ್ಥಾನದಲ್ಲಿದೆ. ನ್ಯೂಜಿಲ್ಯಾಂಡ್ ನ್ಯಾಷನಲ್ ಕ್ರಿಕೆಟ್ ಟೀಮ್ 113 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಪ್ರಸ್ತುತ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ನ್ಯಾಷನಲ್ ಕ್ರಿಕೆಟ್ ಟೀಮ್ 109 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಮೊದಲ ಮೂರು ಪಂದ್ಯಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂಬುವುದು ಈ ವರ್ಷದ ರಾಂಕಿಂಗ್ ನ ಪ್ರಮುಖ ವಿಶ್ಲೇಷಣೆ. ಇನ್ನು ಈ ಪಟ್ಟಿಯಲ್ಲಿ ಭಾರತ ತಂಡ ನಿರಂತರ ಪ್ರದರ್ಶನ ಮತ್ತು ದೊಡ್ಡ ಟೂರ್ನಿಗಳಲ್ಲಿನ ಸ್ಥಿರತೆ ಮತ್ತೆ ಅದರ ಕ್ರಿಕೆಟ್ ಪ್ರಬಲವನ್ನು ಸಾಬೀತುಪಡಿಸಿದೆ.
ಐಸಿಸಿ ವಾರ್ಷಿಕ ಏಕದಿನ ರಾಂಕಿಂಗ್ ನಲ್ಲಿ ಹಲವು ತಂಡಗಳ ಸ್ಥಾನಗಳಲ್ಲಿ ಮಹತ್ವದ ಬದಲಾವಣೆಗಳು ಕಂಡುಬಂದಿವೆ. ಈ ಬದಲಾವಣೆಗಳು ಅಂತರಾಷ್ಟ್ರೀಯ ಕ್ರಿಕೆಟ್ ಅಲ್ಲಿ ತಂಡಗಳ ಇತ್ತೀಚಿನ ಪ್ರದರ್ಶನವನ್ನು ಪ್ರತಿಬಿಂಬಿಸುತ್ತಿದೆ. ಸೌತ್ ಆಫ್ರಿಕಾ ನ್ಯಾಷನಲ್ ಕ್ರಿಕೆಟ್ ಟೀಮ್ ಒಂದು ಸ್ಥಾನ ಏರಿಕೆ ಕಂಡು ನಾಲ್ಕನೇ ಸ್ಥಾನವನ್ನು ಪಡೆದಿದ್ದು, ಸ್ಥಿರಪ್ರದರ್ಶನದ ಫಲವಾಗಿ ಮೇಲಕ್ಕೆ ಜಿಗಿದಿದೆ.
ಇತ್ತ ಪಾಕಿಸ್ತಾನ್ ನ್ಯಾಷನಲ್ ಕ್ರಿಕೆಟ್ ಟೀಮ್ ಗೆ ಹಿನ್ನಡೆ ಎದುರಾಗಿದೆ. ಕಳೆದ ವರ್ಷ ತವರಿನಲ್ಲಿ ನಡೆದ ಚಾಂಪಿಯನ್ ಟ್ರೋಪಿಯ ಮೊದಲ ಸುತ್ತಿನಲ್ಲೇ ಹೊರಬಿದ್ದ ಪರಿಣಾಮ, ಪಾಕಿಸ್ತಾನ ಐದನೇ ಸ್ಥಾನಕ್ಕೆ ಕುಸಿದಿದೆ. 11 ಸ್ಥಾನದಲ್ಲಿ ಐರ್ಲೆಂಡ್ ಮತ್ತು 12ನೇ ಸ್ಥಾನದಲ್ಲಿ ಜಿಂಬಾಂಬ್ವೆ ತಂಡಗಳಿವೆ. ಒಟ್ಟಾರೆ ಈ ವರ್ಷದ ರ್ಯಾಂಕಿಂಗ್ ಪಟ್ಟಿಯಲ್ಲಿ ಕೆಲವು ತಂಡಗಳ ಏರಿಕೆ ಕಂಡು ಬಂದರೆ, ಕೆಲವಕ್ಕೆ ನಿರಂತರ ಪ್ರದರ್ಶನದ ಕೊರತೆಯಿಂದ ಹಿನ್ನಡೆ ಎದುರಾಗಿದೆ.
Also Read: