BELAGAVI NEWS :
ಅಮೇರಿಕಾದ ಪ್ರತಿಷ್ಠಿತ ನ್ಯೂಯಾರ್ ಟೈಮ್ಸ್ ಪತ್ರಿಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು 'ಪಾಕಿಸ್ತಾನಿ ಕಾಶ್ಮೀರ' ಎಂದು ಉಲ್ಲೇಖಿಸಿ ವರದಿ ಪ್ರಕಟಿಸಿದ್ದಕ್ಕೆ ಭಾರತ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಪದ ಪ್ರಯೋಗವು ಸಂಪೂರ್ಣ ತಪ್ಪು ಹಾಗೂ ಜನರನ್ನು ದಾರಿ ತಪ್ಪಿಸುವಂಥದ್ದು ಎಂದು ಭಾರತ ಸ್ಪಷ್ಟಪಡಿಸಿದ್ದು, ಪಾಕ್ ಆಕ್ರಮಿತ ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವೇ ಹೊರತು, 'ಪಾಕಿಸ್ತಾನಿ ಕಾಶ್ಮೀರ' ಎಂಬ ಪ್ರತ್ಯೇಕ ಪ್ರದೇಶವೇ ಇಲ್ಲ ಎಂದು ಒತ್ತಿ ಹೇಳಿದೆ.
ಅಮೆರಿಕದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಜಮ್ಮು-ಕಾಶ್ಮೀರ ಮತ್ತು ಲಡಾಕ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಸಂಪೂರ್ಣ ಹಾಗೂ ಬೇರ್ಪಡಿಸಲಾಗದ ಭಾಗಗಳಾಗಿವೆ ಎಂದು ಪುನರುಚ್ಚರಿಸಿದೆ. ಈ ಪ್ರದೇಶಗಳ ಕೆಲವು ಭಾಗಗಳನ್ನು ಪಾಕಿಸ್ತಾನ ಅಕ್ರಮವಾಗಿ ಆಕ್ರಮಿಸಿಕೊಂಡಿದ್ದು, ಅಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸರಿಯಾದ ಐತಿಹಾಸಿಕ ಮತ್ತು ಕಾನೂನು ಬದ್ಧ ಹಿನ್ನೆಲೆಯೊಂದಿಗೆ ಪ್ರಸ್ತುತಪಡಿಸಬೇಕು ಎಂದು ತಿಳಿಸಿದೆ.
ಭಾರತದ ಪ್ರಕಾರ, ಪಾಕ್ ಅಕ್ರಮಿತ ಕಾಶ್ಮೀರದಲ್ಲಿ ಸ್ಥಳೀಯ ನಾಗರಿಕರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ದೌರ್ಜನ್ಯ ನಡೆಸುತ್ತಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದೆ. ಅಲ್ಲದೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಹೆಸರಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳು ಪ್ರಜಾಪ್ರಭುತ್ವದ ಪ್ರತಿಬಿಂಬವಲ್ಲ; ಅವು ಅಕ್ರಮ ಆಕ್ರಮಣವನ್ನು ಮರೆಮಾಚುವ ಪ್ರಯತ್ನಗಳಾಗಿವೆ ಎಂದು ಭಾರತ ಆರೋಪಿಸಿದೆ.
ಇತ್ತೀಚಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬೆಲೆ ಏರಿಕೆ ಮತ್ತು ಸ್ಥಳೀಯ ಆಡಳಿತದ ವಿರುದ್ಧ ಜಂಟಿ ಅವಾಮಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ತಿರುವು ಪಡೆದಿದ್ದವು. ರಾವಲಕೋಟೆಯಿಂದ ಮುಜಫರಾಬಾದ್ ನಡೆದ 'ಲಾಂಗ್ ಮಾರ್ಚ್' ವೇಳೆ ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು ಹೆಚ್ಚಿನ ದಾಳಿ ನಡೆಸಿದ್ದು, 30ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹಲವರು ಗಾಯಗೊಂಡಿದ್ದಾರೆ ಎಂಬ ವರದಿಗಳು ಹೊರ ಬಿದ್ದಿವೆ.
ಭಾರತ, ಈ ಘಟನೆಗಳನ್ನು ಉಲ್ಲೇಖಿಸಿ, ಪಾರ್ಕ್ ಅಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿ ಗಂಭೀರವಾಗಿರುವುದನ್ನು ಅಂತರಾಷ್ಟ್ರೀಯ ಸಮುದಾಯ ಗಮನಿಸಬೇಕು ಎಂದು ಹೇಳಿದೆ. ಅಲ್ಲಿನ ಚುನಾವಣೆಗಳು ಮತ್ತು ಆಡಳಿತ ವ್ಯವಸ್ಥೆ ಜನರ ಪ್ರಜಾಸತಾತ್ಮಕ ಹಕ್ಕುಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ನವದೆಹಲಿ ಅಭಿಪ್ರಾಯ ಪಟ್ಟಿದೆ.
1994ರಲ್ಲಿ ಭಾರತದ ಸಂಪತ್ತು ಸರ್ವಾನುಮತದಿಂದ ಅಂಗೀಕರಿಸಿದ ನಿರ್ಣಯದ ಪ್ರಕಾರ, ಇಡೀ ಜಮ್ಮು-ಕಾಶ್ಮೀರ, ಅದರಲ್ಲೂ ಪಾಕ್ ಅಕ್ರಮಿತ ಕಾಶ್ಮೀರ ಸೇರಿದಂತೆ, ಭಾರತದ ಅವಿಭಾಜ್ಯ ಭೂಭಾಗ ಎಂದು ಭಾರತ ಪುನರುತ್ಚರಿಸಿದೆ. ಇದೇ ಕಾರಣಕ್ಕಾಗಿ, ಅಂತರಾಷ್ಟ್ರೀಯ ಮಾಧ್ಯಮಗಳು ಬಳಸುವ ಪದ ಪ್ರಯೋಗವು ಭಾರತದ ಸಾರ್ವಭೌಮತ್ವ ಮತ್ತು ಭೌಗೋಳಿಕ ಸಮಗ್ರತೆಯನ್ನು ಗೌರವಿಸುವಂತಿರಬೇಕು ಎಂದು ಸರ್ಕಾರ ಒತ್ತಾಯಿಸಿದೆ.
ಭಾರತೀಯ ರಾಜತಾಂತ್ರಿಕರು, ಪಾಕ್ ಆಕ್ರಮಿತ ಕಾಶ್ಮೀರವನ್ನು ತಪ್ಪಾಗಿ ಚಿತ್ರಿಸುವ ವರದಿಗಳು ಮತ್ತು ಪದ ಪ್ರಯೋಗಗಳನ್ನು ಜಾಗತಿಕ ವೇದಿಕೆಗಳಲ್ಲಿ ನಿರಂತರವಾಗಿ ಪ್ರಶ್ನಿಸುತ್ತಿದ್ದು, ವಾಸ್ತವಿಕ ಹಾಗೂ ಕಾನೂನು ಬದ್ಧ ಪರಿಸ್ಥಿತಿಯನ್ನು ಪ್ರತಿಬಿಂಬಿಸುವ ವರದಿಗಳನ್ನು ಪ್ರಕಟಿಸುವಂತೆ ಅಂತರಾಷ್ಟ್ರೀಯ ಮಾಧ್ಯಮಗಳಿಗೆ ಕರೆ ನೀಡಿದ್ದಾರೆ.