<?= $pageTitle ?>
Logo
ಮುಖಪುಟ ಓದುವುದು ಕೇಳು
Trending

UNನಲ್ಲಿ ಪ್ಯಾಲೆಸ್ಟೈನ್ ಪರ ಭಾರತ: ಹಾರ್ಮುಜ್ ಜಲಸಂಧಿಯ ಹಡಗು ದಾಳಿಗೆ ತೀವ್ರ ಆಕ್ಷೇಪ

UNನಲ್ಲಿ ಪ್ಯಾಲೆಸ್ಟೈನ್ ಪರ ಭಾರತ: ಹಾರ್ಮುಜ್ ಜಲಸಂಧಿಯ ಹಡಗು ದಾಳಿಗೆ ತೀವ್ರ ಆಕ್ಷೇಪ
Summary: India has reiterated its support for Palestine at the UN forum and strongly condemned the attack on commercial ships in the Strait of Hormuz. Read the full details of India's official stance on Middle East tensions, security of sea routes and major developments at the UN here.

BELAGAVI NEWS :

ನವದೆಹಲಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವು ಪ್ಯಾಲೆಸ್ಟೈನ್ ಗೆ ತನ್ನ ದೃಢ ಬೆಂಬಲವನ್ನು ಮತ್ತೊಮ್ಮೆ ಪುನರುಚ್ಚರಿಸಿದ್ದು, ಇಸ್ರೇಲ್ - ಪ್ಯಾಲೆಸ್ಟೈನ್ ಸಂಘರ್ಷಕ್ಕೆ "ದ್ವಿರಾಷ್ಟ್ರ ಪರಿಹಾರ(Two-State Solution)ವೇ ಶಾಶ್ವತ ಮಾರ್ಗ ಎಂದು ಒತ್ತಿ ಹೇಳಿದೆ. ಇದೆ ವೇಳೆ ಗಾಜಾದಲ್ಲಿನ ಮಾನವೀಯ ಬಿಕ್ಕಟ್ಟಿನ ನಿವಾರಣೆಗೆ ಜಾಗತಿಕ ಸಮುದಾಯ ತುರ್ತು ಕ್ರಮ ಕೈಗೊಳ್ಳುವಂತೆ ಭಾರತ ಕರೆ ನೀಡಿದೆ.

ಪಶ್ಚಿಮ ಏಷ್ಯಾದ ಪರಿಸ್ಥಿತಿ ಕುರಿತು ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿ "ಪರ್ವತನೇನಿ ಹರೀಶ್" ಮಾತನಾಡಿ, ಪ್ಯಾಲೆಸ್ಟೈನ್ ಗೆ ಸಾರ್ವಭೌಮ, ಸ್ವತಂತ್ರ ಮತ್ತು ಕಾರ್ಯಸಾಧ್ಯ ದೊರೆಯುವ ದ್ವಿ ರಾಷ್ಟ್ರ ಪರಿಹಾರಕ್ಕೆ ಭಾರತ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು.

ಪ್ರದೇಶದಲ್ಲಿ ಅಲ್ಪಾವಧಿಯ ಶಾಂತಿಯ ಬಳಿಕ ಮತ್ತೆ ದಾಳಿಗಳು ಆರಂಭವಾಗಿರುವುದು ಹಾಗೂ ಉದ್ವಿಗ್ನತೆ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಹೇಳಿದ್ದು, ಹಿಂಸಾಚಾರ ತಕ್ಷಣ ನಿಲ್ಲಿಸಿ ಉದ್ವಿಗ್ನತೆ ತಗ್ಗಿಸಲು ಎಲ್ಲಾ ಪಕ್ಷಗಳು ಮುಂದಾಗಬೇಕು ಎಂದು ಮನವಿ ಮಾಡಿದರು.

ಹಾರ್ಮುಜ್ ಜಲಸಂಧಿಯ ಹಡಗು ದಾಳಿಗೆ ಖಂಡನೆ

ಹಾರ್ಮುಜ್ ಜಲಸಂಧಿಯಂತಹ ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆಯುತ್ತಿರುವ ದಾಳಿಗಳನ್ನು ಭಾರತ ತೀವ್ರವಾಗಿ ಖಂಡಿಸಿದೆ. ನಾವಿಕರನ್ನು ಗುರಿಯಾಗಿಸಿಕೊಂಡು ನಡೆಸುವ ಹಿಂಸಾಚಾರ ಹಾಗೂ ಮುಕ್ತ ಸಮುದ್ರ ಸಂಚಾರಕ್ಕೆ ಅಡ್ಡಿಪಡಿಸುವ ಯಾವುದೇ ಕ್ರಮಗಳು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿದೆ ಎಂದು ಭಾರತ ಅಭಿಪ್ರಾಯಪಟ್ಟಿದೆ.

ಈ ತಿಂಗಳು GFS Galaxy, MT AI Bahia ಹಾಗೂ MT Mombasa ಸೇರಿದಂತೆ ಹಲವು ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಗಳನ್ನು ಉಲ್ಲೇಖಿಸಿದ ಹರೀಶ್, ಈ ಘಟನೆಗಳಲ್ಲಿ ಹಲವಾರು ಭಾರತೀಯರು ಗಾಯಗೊಂಡಿದ್ದು, ಒಬ್ಬ ಭಾರತೀಯ ಮೃತಪಟ್ಟಿದ್ದರೆ, ಮತ್ತೊಬ್ಬರು ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದರು.

ಅಂತಾರಾಷ್ಟ್ರೀಯ ಜಲಮಾರ್ಗಗಳಲ್ಲಿ ಮುಕ್ತ, ಸುರಕ್ಷಿತ ಹಾಗೂ ಅಡತಡೆಯಿಲ್ಲದ ವಾಣಿಜ್ಯ ಸಂಚಾರವನ್ನು ಶೀಘ್ರ ಪುನಃ ಸ್ಥಾಪಿಸುವಂತೆ ಭಾರತ ಒತ್ತಾಯಿಸಿದೆ.

ಗಾಜಾದ ಮಾನವೀಯ ಬಿಕ್ಕಟ್ಟಿನತ್ತ ಗಮನ ಹರಿಸಲು ಕರೆ

ಇಂಗ್ಲಿಷ್ ನಲ್ಲಿ ಭಾಷಣ ಮುಂದುವರಿಸಿದ ಪರ್ವತನೇನಿ ಹರೀಶ್, ಹಾರ್ಮುಜ್ ಜಲಸಂಧಿಯ ಬೆಳವಣಿಗೆಗಳತ್ತ ಜಗತ್ತಿನ ಗಮನ ನೆಟ್ಟಿದ್ದರು. ಗಾಜಾ ಪಟ್ಟಿಯಲ್ಲಿರುವ ತೀವ್ರ ಮಾನವೀಯ ಬಿಕ್ಕಟ್ಟನ್ನು ನಿರ್ಲಕ್ಷಿಸಬಾರದು ಎಂದು ಹೇಳಿದ್ದಾರೆ. ಅಲ್ಲಿನ ನಾಗರಿಕರಿಗೆ ಅಗತ್ಯ ಮಾನವೀಯ ನೆರವು ತಲುಪುವಂತೆ ಜಾಗತಿಕ ಸಮುದಾಯ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಅರೇಬಿಕ್ ನಲ್ಲಿ ಭಾಷಣ

ಭಾರತೀಯರ ರಾಜತಾಂತ್ರಿಕರೊಬ್ಬರು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮೊದಲ ಬಾರಿಗೆ ಅರೇಬಿಕ್ ಭಾಷೆಯಲ್ಲಿ ಭಾಷಣ ಮಾಡಿ ಗಮನ ಸೆಳೆದಿದ್ದಾರೆ. ಕೈರೋದ ಅಮೆರಿಕನ್ ವಿಶ್ವವಿದ್ಯಾಲಯದಲ್ಲಿ ಅರೇಬಿಕ್ ಭಾಷೆ ಕಲಿತಿರುವ ಪರ್ವತನೇನಿ ಹರೀಶ್, ತಮ್ಮ ಭಾಷಣದ ಒಂದು ಭಾಗವನ್ನು ಅರೇಬಿಕ್ ನಲ್ಲಿ ನಿರರ್ಗಳವಾಗಿ ಮಂಡಿಸಿದರು. ಬಳಿಕ ವಿಶ್ವಸಂಸ್ಥೆಯ ಭಾಷಾಂತರಕಾರರು ಅದನ್ನು ಇಂಗ್ಲಿಷ್, ಫ್ರೆಂಚ್, ಸ್ಪ್ಯಾನಿಷ್, ರಷ್ಯನ್ ಹಾಗೂ ಚೈನೀಸ್ ಸೇರಿದಂತೆ ಇತರೆ ಅಧಿಕೃತ ಭಾಷೆಗಳಿಗೆ ತಕ್ಷಣವೇ ಅನುವಾದಿಸಿದರು.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online