Balagavi News:
ಎರ್ನಾಕುಲಂ (ಕೇರಳ): ಭಾರತೀಯ ನೌಕಾಪಡೆ ತನ್ನ ತಾಂತ್ರಿಕ ಪರಿಣತಿ ಮತ್ತು ಕ್ಷಿಪು ಕಾರ್ಯಾಚರಣೆಯ ಮೂಲಕ ಭಾರೀ ದುರಂತವೊಂದನ್ನು ತಪ್ಪಿಸಿದೆ. ಕೊಚ್ಚಿ ಕರಾವಳಿಯ ಸಮೀಪ ವಾಣಿಜ್ಯ ಕಚ್ಚಾ ತೈಲ ಟ್ಯಾಂಕರ್ ನ ಇಂಧನ ಟ್ಯಾಂಕರ್ ನಲ್ಲಿ ಸಿಲುಕಿಕೊಂಡಿದ್ದ ಸ್ಪೋಟಗೊಳ್ಳದ ಕ್ಷಿಪಣಿ ಸಿಡಿ ತಲೆಯನ್ನು ನೌಕಾಪಡೆಯ ವಿಶೇಷ ತಂಡ ಯಶಸ್ವಿಯಾಗಿ ಹೊರತೆಗೆದು ನಿಷ್ಕ್ರಿಯಗೊಳಿಸಿದೆ.
ಮಾರ್ಷಲ್ ದ್ವೀಪಗಳ ಧ್ವಜ ಹೊಂದಿರುವ ಎಂಟಿ ಒಲಂಪಿಕ್ ಲೈಫ್ ಎಂಬ ಕಚ್ಚಾ ತೈಲ ಸಾಗಣೆ ಟ್ಯಾಂಕರ್ ನಲ್ಲಿ ಈ ಅಪಾಯಕಾರಿ ವಸ್ತು ಪತ್ತೆಯಾಗಿದೆ. ಮೇ 26ರಂದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ಪುಜೈರಾದಿಂದ ಒಮಾನ್ ಕರಾವಳಿಯ ಮೂಲಕ ಸಾಗುತ್ತಿದ್ದ ವೇಳೆ ಟ್ಯಾಂಕರ್ ನಲ್ಲಿ ಸ್ಪೋಟ ಸಂಭವಿಸಿತ್ತು. ಆದರೆ ಸಿಬ್ಬಂದಿಗೆ ಯಾವುದೇ ಗಾಯಗಳಾಗಿಲ್ಲ ಹಾಗೂ ಹಡಗಿಗೆ ಗಂಭೀರ ಹಾನಿಯೂ ಉಂಟಾಗಿರಲಿಲ್ಲ.
ಸಾಗರಯಾನದ ವೇಳೆ ಸಿಬ್ಬಂದಿ ನಡೆಸಿದ ಪರಿಶೀಲನೆಯಲ್ಲಿ ಇಂಧನ ಟ್ಯಾಂಕ್ ಒಳಗೆ ಸ್ಪೋಟಗೊಳ್ಳದ ಮಿಲಿಟರಿ ಶಸ್ತ್ರಾಸ್ತ್ರ ಸಿಲುಕಿರುವುದು ಪತ್ತೆಯಾಯಿತು. ತಕ್ಷಣವೇ ವಿಪತ್ತು ಕರೆ ನೀಡಲಾಗಿದ್ದು. ಮಾಹಿತಿ ಹಿಂದೂ ಮಹಾಸಾಗರ ಪ್ರದೇಶದ ಮಾಹಿತಿ ಕೇಂದ್ರದ ಮೂಲಕ ಭಾರತೀಯ ನೌಕಾಪಡೆಗೆ ತಲುಪಿತು.
ಇದರ ಬೆನ್ನಲ್ಲೇ ಭಾರತೀ ಯ ನೌಕಾಪಡೆಯ ವಿಶೇಷ ಸ್ಪೋಟಕ ಶಸ್ತ್ರಾಸ್ತ್ರ, ವಿಲೇವಾರಿ (E0D) ತಂಡ ಹಾಗೂ ನೌಕಾ ಕಮಾಂಡಗಳನ್ನು ನಿಯೋಜಿಸಲಾಯಿತು. ಸ್ಥಳ ಪರಿಶೀಲನೆಯ ಬಳಿಕ ಕ್ಷಿಪಣಿಯ ಸಿಡಿ ತಲೆ ಇಂಧನ ಟ್ಯಾಂಕ್ ಒಳಗೆ ಸಿಲುಕಿರುವುದು ದೃಢಪಟ್ಟಿತ್ತು. ಯಾವುದೇ ಕಿಡಿ ಅಥವಾ ಘರ್ಷಣೆ ಉಂಟಾದರೆ ಟ್ಯಾಂಕರ್, ಸಿಬ್ಬಂದಿ ಹಾಗೂ ಸಮೀಪದ ಬಂದರು ಮೂಲ ಸೌಕರ್ಯಗಳಿಗೆ ಭಾರಿ ಹಾನಿಯಾಗುವ ಸಾಧ್ಯತೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟುನಿಟ್ಟಾದ ಅಂತಾರಾಷ್ಟ್ರೀಯ ಸುರಕ್ಷತಾ ಮಾನದಂಡಗಳನ್ನು ಅನುಸರಿಸಿದ ನೌಕಾಪಡೆಯ ತಜ್ಞರು ಮೊದಲು ಕ್ಷಿಪಣಿಯ ಸ್ಪೋಟ ಕಾರ್ಯ ವಿಧಾನವನ್ನು ಪ್ರತ್ಯೇಕಿಸಿ ನಿಷ್ಕ್ರಿಯಗೊಳಿಸಿದರು. ಬಳಿಕ ಅತ್ಯಂತ ಎಚ್ಚರಿಕೆಯಿಂದ ಸುರಕ್ಷಿತವಾಗಿ ವಿಲೇವಾರಿ ಮಾಡಲಾಯಿತು.
ಈ ಯಶಸ್ವಿ ಕಾರ್ಯಾಚರಣೆಯ ಭಾರತೀಯ ನೌಕಾಪಡೆಯ ಸಮುದ್ರ ಭದ್ರತೆ, ತುರ್ತು ಪರಿಸ್ಥಿತಿ ನಿರ್ವಹಣೆ ಹಾಗೂ ಸ್ಪೋಟಕ ವಸ್ತುಗಳ ನಿಷ್ಕ್ರಿಯಗೊಳಿಸುವ ಸಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ನೌಕಾಪಡೆಯ ಸಮಯೋಚಿತ ಕ್ರಮದಿಂದ ಸಂಭವಿಸಬಹುದಾದ ದೊಡ್ಡ ಅನಾಹುತ ತಪ್ಪಿದ್ದು. ಅಂತರರಾಷ್ಟ್ರೀಯ ಸಾಗರ ಭದ್ರತೆಯಲ್ಲಿಯೂ ಭಾರತದ ಪಾತ್ರ ಮತ್ತಷ್ಟು ಬಲಗೊಂಡಿದೆ.
ಕೊಚ್ಚಿ/ನವದೆಹಲಿ: ಕೊಚ್ಚಿ ಕರಾವಳಿಯ ಸಮೀಪ ಕಚ್ಚಾ ತೈಲ ಟ್ಯಾಂಕರ್ ನಲ್ಲಿ ಸಿಲುಕಿದ್ದ ಸ್ಪೋಟಗೋಳ್ಳದ ಕ್ಷಿಪಣಿ ಸಿಡಿತಲೆಯನ್ನು ಭಾರತೀಯನೌಕಾಪಡೆ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದ ಬೆನ್ನಲ್ಲೇ, ಅದರ ಮೂಲವನ್ನು ಪತ್ತೆಹಚ್ಚುವ ತನಿಖೆ ಆರಂಭಿಸಲಾಗಿದೆ. ಕ್ಷಿಪಣಿಯ ವಿವಿಧ ಘಟಕಗಳನ್ನು ವಿಶ್ಲೇಷಣೆಗಾಗಿ ಕೊಚ್ಚಿಯಲ್ಲಿರುವ ಸುರಕ್ಷಿತ ಸೌಲಭ್ಯಕ್ಕೆ ಸಾಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾರ್ಷಲ್ ದ್ವೀಪಗಳ ಧ್ವಜ ಹೊಂದಿರುವ ಎಂಟಿ ಒಲಂಪಿಕ್ ಲೈಫ್ ಟ್ಯಾಂಕರ್ ನ ಇಂಧನ ಟ್ಯಾಂಕ್ ಒಳಗೆ ಸಿಲುಕಿದ್ದ ಈ ಸಿಡಿತಲೆ ಭಾರೀ ಅಪಾಯವನ್ನುಂಟು ಮಾಡುವ ಸಾಧ್ಯತೆ ಇತ್ತು. ಭಾರತೀಯ ನೌಕಾಪಡೆಯ ವಿಶೇಷ ಸ್ಪೋಟಕ ಶಸ್ತ್ರಾಸ್ತ್ರ, ವಿಲೇವಾರಿ (EOD) ತಂಡ ಮತ್ತು ನೌಕ ಕಮಾಂಡೋಗಳು ಯಶಸ್ವಿ ಕಾರ್ಯಾಚರಣೆ ನಡೆಸಿ ಅದನ್ನು ಸುರಕ್ಷಿತವಾಗಿ ತೆರವುಗೊಳಿಸಿದ್ದಾರೆ.
ಈ ಕಾರ್ಯಾಚರಣೆಯು ಹಿಂದೂ ಮಹಾಸಾಗರ ಪ್ರದೇಶದಲ್ಲಿ ವಿಶ್ವಾಸಾರ್ಹ ಕಡಲ ಭದ್ರತಾ ಪಾಲುದಾರನಾಗಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಸಮುದ್ರ ಭದ್ರತೆ ಮತ್ತು ಅಂತರರಾಷ್ಟ್ರೀಯ ಸಾಗರ ಮಾರ್ಗಗಳ ಸುರಕ್ಷತೆಯಲ್ಲಿ ಭಾರತೀಯ ನೌಕಾಪಡೆಯ ಪಾತ್ರ ಮತ್ತೊಮ್ಮೆ ಗಮನ ಸೆಳೆದಿದೆ.
ಓಮನ್ ಕರಾವಳಿಯ ದುರಂತ: ಮೂವರು ಭಾರತೀಯ ನಾವಿಕರ ಸಾವು:
ಇದಕ್ಕೆ ಸಂಬಂಧಿಸಿದಂತೆ, ಇತ್ತೀಚೆಗೆ ಓಮನ್ ಕರಾವಳಿಯಲ್ಲಿ ನಡೆದ ದುರಂತ ಘಟನೆಯಲ್ಲಿ ಕಾಣೆಯಾಗಿದ್ದ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವುದನ್ನು ಕೇಂದ್ರ ಬಂದರು, ಹಡಗು ಮತ್ತು ಜಲಮಾರ್ಗ ಖಾತೆ ಸಚಿವ ಸರ್ವಾದಂದ ಸೋನಾವಾಲ್ ದೃಢಪಡಿಸಿದ್ದಾರೆ.
ಪಲಾವ್ ಧ್ವಜ ಹೊಂದಿದ್ದ ಎಂಟಿ ಸೆಟ್ ಬೆಲ್ಲೋ ವಾಣಿಜ್ಯ ಹಡಗಿನಲ್ಲಿ ನಡೆದ ಘಟನೆಯ ನಂತರ ನಾವಿಕರು ಕಾಣೆಯಾಗಿದ್ದರು. ಮೃತ ದೇಹಗಳನ್ನು ಪತ್ತೆಹಚ್ಚಿ ಗುರುತಿಸಿದ ಬಳಿಕ ಅವರ ಸಾವನ್ನು ಅಧಿಕೃತವಾಗಿ ದೃಢಪಡಿಸಲಾಗಿದೆ. ಮೃತ ನಾವಿಕರ ಪಾರ್ಥಿವ ಶರೀರಗಳನ್ನು ಅಂತಿಮ ಸಂಸ್ಕಾರಕ್ಕಾಗಿ ಭಾರತಕ್ಕೆ ಕಳುಹಿಸುವ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ಸೋನವಾಲ್, "ಎಂಟಿ ಸೆಟ್ ಬೆಲ್ಲೊ ಹಡಗಿನಲ್ಲಿ ನಡೆದ ದುರಂತದ ಸುದ್ದಿ ಆಫಾತಕಾರಿ. ಕಾಣೆಯಾಗಿದ್ದ ಮೂವರು ಭಾರತೀಯ ನಾವಿಕರ ಮೃತದೇಹಗಳನ್ನು ಪತ್ತೆ ಹಚ್ಚಿ ಗುರುತಿಸಿದ ನಂತರ ಅವರ ಸಾವನ್ನು ದೃಢಪಡಿಸಲಾಗಿದೆ. ಅವರ ಕುಟುಂಬಗಳಿಗೆ ನನ್ನ ಸಂತಾಪಗಳು" ಎಂದು ಬರೆದುಕೊಂಡಿದ್ದಾರೆ.
ಈ ಎರಡು ಘಟನೆಗಳು ಜಾಗತಿಕ ಸಾಗರ ಮಾರ್ಗಗಳಲ್ಲಿ ಭದ್ರತೆ ಮತ್ತು ನಾವಿಕಾರ ಸುರಕ್ಷತೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿ ತೋರಿಸಿದ್ದು. ಭಾರತೀಯ ನೌಕಾಪಡೆ ಮತ್ತು ಸರ್ಕಾರದ ತ್ವರಿತ ಪ್ರತಿಕ್ರಿಯೆ ಗಮನಾರ್ಹವಾಗಿದೆ.
Also Read:
ತಮಿಳುನಾಡು ಸಿಎಂ ವಿಜಯ್ ಕೊಲ್ಲೂರು ಮೂಕಾಂಬಿಕಾ ದರ್ಶನ: ಬೆಳ್ಳಿಯ ಖಡ್ಗ ಅರ್ಪಣೆ