<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ರಷ್ಯಾ ತೈಲ ಖರೀದಿ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಮಾಹಿತಿ : ಗೋಯೆಲ್

ರಷ್ಯಾ ತೈಲ ಖರೀದಿ ಬಗ್ಗೆ ವಿದೇಶಾಂಗ ಸಚಿವಾಲಯದಿಂದ ಮಾಹಿತಿ : ಗೋಯೆಲ್
Summary: ಭಾರತವು ರಷ್ಯಾದಿಂದ ಖರೀದಿಸುತ್ತಿದ್ದ ತೈಲದ ಬಗ್ಗೆ ವಿದೇಶಾಂಗ ಸಚಿವಾಲಯ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಪಿಯೂಷ್ ಗೋಯಲ್ ಅವರು ತಿಳಿಸಿದ್ದಾರೆ.

BELAGAVI NEWS :

ರಷ್ಯಾದಿಂದ ಭಾರತವು ತೈಲ ಖರೀದಿಸುತ್ತಿರುವ ವಿಚಾರವಾಗಿ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೊಯೆಲ್ ಅವರು ವಿದೇಶಾಂಗ ಸಚಿವಾಲಯವು ಇದರ ಬಗ್ಗೆ ಮಾಹಿತಿ ನೀಡಲಿದೆ ಎಂದು ತಿಳಿಸಿದರು. ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದ ರಷ್ಯಾದ ತೈಲ ಖರೀದಿಯನ್ನು ನಿಲ್ಲಿಸಲಿದೆ ಎಂದು ಟ್ರಂಪ್ ಅವರು ಹೇಳಿದ್ದರು. ಅವರ ಹೇಳಿಕೆಗೆ ಪಿಯೂಷ್ ಗೊಯೆಲ್ ಅವರು ಪ್ರತಿಕ್ರಿಯಿಸಿದ್ದಾರೆ. ಇದರ ಬಗ್ಗೆ ನಿರ್ಧಾರವನ್ನು ವಿದೇಶಾಂಗ ಸಚಿವಾಲಯ ತೆಗೆದುಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

ರಷ್ಯಾದ ಒಕ್ಕೂಟದ ತೈಲವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಆಮದು ಮಾಡಿಕೊಳ್ಳುವುದನ್ನು ಭಾರತವು ನಿಲ್ಲಿಸಲು ಬದ್ಧವಾಗಿದೆ. ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಮಧ್ಯಂತರ ಚೌಕಟ್ಟಿನ ಘೋಷಣೆ ಮಾಡಿದೆ. ಯುಎಸ ಇಂಧನ ಉತ್ಪನ್ನಗಳನ್ನು ಖರೀದಿಸುವುದಾಗಿ ಪ್ರತಿನಿಧಿಸಿದೆ. ಒಪ್ಪಂದದ ಚೌಕಟ್ಟಿನಲ್ಲಿ ರೈತರಿಗೆ ಸಂಪೂರ್ಣ ರಕ್ಷಣೆ ನೀಡಲಿದೆ, ಮುಂದಿನ 10 ವರ್ಷಗಳಲ್ಲಿ ರಕ್ಷಣಾ ಸಹಕಾರವನ್ನು ಹೆಚ್ಚಿಸಲು ಇತ್ತೀಚಿಗೆ ಯುಎಸ್ ಎ ಒಪ್ಪಂದದ ನಿಲುವಿಗೆ ನಾವು ಬದ್ಧವಾಗಿದೆ ಎಂದು ಶ್ವೇತ ಭವನ ತಿಳಿಸಿದೆ.

ಭಾರತೀಯ ಎಂಎಸ್ಎಂಇ ಗಳಿಗೆ ಹೊಸ ಪ್ರಯೋಜನಗಳನ್ನು ಈ ಒಪ್ಪಂದ ತರುತ್ತದೆ ಎಂದು ಸಚಿವರು ತಿಳಿಸಿದರು. ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಲು ಅಮೆರಿಕದ ಕೃಷಿಕರಿಗೆ ಯಾವುದೇ ಸುಂಕದ ರಿಯಾಯಿತಿ ಇರುವುದಿಲ್ಲ. ನಾವು ಡಿಸ್ಟಿಲ್ಲರ್ಸ್ ಡ್ರೈಡ್ ಗ್ರೇನ್ಸ್ ವಿತ್ ಸೊಲ್ಯೂಬಲ್ಸ್, ವೈನ್ ಗಳು ಮತ್ತು ಸ್ಪಿರಿಟ್ ಗಳಂತಹ ಕೆಲವು ಉತ್ಪನ್ನಗಳ ಮೇಲೆ ಅಮೆರಿಕ ಮಾರುಕಟ್ಟೆಗೆ ಮುಕ್ತವಾಗಿರಿಸಿದ್ದೇವೆ. ಯುಎಸ್ ಎ ಗೆ ಭಾರತದ ರೈತರು ಶೂನ್ಯ ಸುಂಕದೊಂದಿಗೆ ಕೃಷಿ ಉತ್ಪನ್ನಗಳನ್ನು ರಫ್ತು ಮಾಡಲಿದ್ದಾರೆ. ಇವುಗಳಲ್ಲಿ ನಾವು ಕನಿಷ್ಠ ಆಮದು ಬೆಲೆಗಳನ್ನು ಸಹ ಇಟ್ಟುಕೊಂಡಿದ್ದೇವೆ ಎಂದು ಪಿಯೂಷ್ ಗೊಯೆಲ್ ಅವರು ತಿಳಿಸಿದರು. ಈ ಒಪ್ಪಂದವು ಅಮೆರಿಕದ ಮಾರುಕಟ್ಟೆಗಳು ಭಾರತೀಯರ ರಫ್ತಿಗೆ ತೆರೆಯುತ್ತವೆ ಎಂದು ಕೇಂದ್ರ ಸಂಪುಟ ಸಚಿವರು ತಿಳಿಸಿದ್ದಾರೆ. ಇದರ ಬಗ್ಗೆ ಮಾತನಾಡಿದ ಕೃಷಿ ಸಚಿವ ಶಿವರಾಜ್ ಸಿಂಗ್ ಕೇಂದ್ರವು ನಮ್ಮ ಪ್ರಮುಖ ಬೆಳೆ ಮತ್ತು ಡೈರಿ ಉತ್ಪನ್ನಗಳನ್ನು ಒಪ್ಪಂದದ ಅಡಿಯಲ್ಲಿ ರಕ್ಷಿಸಿದ್ದು ಒಪ್ಪಂದದ ಮಧ್ಯಂತರ ಚೌಕಟ್ಟು ಕೃಷಿಕರಿಗೆ ಪ್ರಯೋಜನ ನೀಡಲಿದೆ ಎಂದು ಅವರು ತಿಳಿಸಿದ್ದಾರೆ.

Sponsored

ಅಮೇರಿಕಾದಿಂದ ಭಾರತಕ್ಕೆ ಬರಲಿರುವ ಸೇಬುಗಳ ಮೇಲೆ ಕೋಟಾ ಆಧಾರಿತ ಸುಂಕ ವಿಲ್ಲದ ಮತ್ತು ಪ್ರತಿ ಕೆಜಿಗೆ ಕನಿಷ್ಠ ಆಮದು ಬೆಲೆಯನ್ನು 80 ರೂಪಾಯಿಗೆ ನೀಡುತ್ತಿದೆ. ಸೋಯಾಬೀನ್ ಎಣ್ಣೆಯಲ್ಲಿ ಅಮೆರಿಕಕ್ಕೆ ಕೋಟಾ ಆಧಾರಿತ ಸುಂಕ ರಿಯಾಯಿತಿಗಳನ್ನು ನೀಡಲಾಗಿದೆ ಎಂದವರು ಸ್ಪಷ್ಟವಾಗಿ ಹೇಳಿದರು. ಇದರ ಬಗ್ಗೆ ಮಾತನಾಡುತ್ತಾ ರೈತರಿಗೆ ನಷ್ಟವನ್ನುಂಟು ಮಾಡುವ ಯಾವುದೇ ಕೆಲಸವನ್ನು ನಾವು ಮಾಡುವುದಿಲ್ಲ ಎಂದು ವಿಪಕ್ಷಗಳನ್ನು ಪರೋಕ್ಷವಾಗಿ ಗೊಯೆಲ್ ಅವರು ಟೀಕಿಸಿದರು. ಆದ್ದರಿಂದ ರಷ್ಯಾ ತೈಲ ಖರೀದಿ ವಿಚಾರವಾಗಿ ಯಾರೂ ಕೂಡ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ, ಅದು ವಿದೇಶಾಂಗ ಸಚಿವಾಲಯ ಮಾತ್ರ ಮಾಹಿತಿ ನೀಡಲಿದೆ ಎಂದು ಪಿಯೂಷ್ ಗೊಯೆಲ್ ಅವರು ತಿಳಿಸಿದರು.

ಇನ್ನಷ್ಟು ಓದಿರಿ:

ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online