<?= $pageTitle ?>
Logo
ಮುಖಪುಟ ಓದುವುದು ಕೇಳು
Trending

'ಕರ್ನಾಟಕಕ್ಕೆ ಮತ್ತೆ ಅನ್ಯಾಯ': ಕೇಂದ್ರ ಬಜೆಟ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ

'ಕರ್ನಾಟಕಕ್ಕೆ ಮತ್ತೆ ಅನ್ಯಾಯ': ಕೇಂದ್ರ ಬಜೆಟ್ ವಿರುದ್ಧ ಕಾಂಗ್ರೆಸ್ ನಾಯಕರ ವಾಗ್ದಾಳಿ
Summary: ಇದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ನಲ್ಲಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
belagavi news :
ಕೇಂದ್ರ ಬಜೆಟ್ಗೆ ರಾಜ್ಯ ಕಾಂಗ್ರೆಸ್ ನಾಯಕರ ಆಕ್ರೋಶ : ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಗೆ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದ್ದು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಎಂ.ಬಿ.ಪಾಟೀಲ್ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿದ ಬಜೆಟ್ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

“ಈ ಬಜೆಟ್ನಲ್ಲಿ ಜನಸಾಮಾನ್ಯರು, ಮಹಿಳೆಯರು ಹಾಗೂ ಮಧ್ಯಮ ವರ್ಗದವರು ನಿರೀಕ್ಷಿಸಿದ ಯಾವುದೇ ಸೌಲಭ್ಯಗಳಿಲ್ಲ, ತೆರಿಗೆ ಸ್ಲಾಬ್, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಇಳಿಕೆ, ಬಗ್ಗೆ ಜನರಲ್ಲಿ ಇದ್ದ ನಿರೀಕ್ಷೆ ಸಂಪೂರ್ಣವಾಗಿ ಹುಸಿಯಾಗಿದೆ" ಎಂದು ಹೇಳಿದರು.ರೂಪಾಯಿ ಮೌಲ್ಯ ಕುಸಿತದ ಕುರಿತು ಮಾತನಾಡಿದ ಅವರು,"ಡಾಲರ್ ಮುಂದೆ 92 ರೂಪಾಯಿಗೆ ಮೌಲ್ಯ ತಲುಪಿದೆ. ಡಾ.ಮನಮೋಹನ ಸಿಂಗ್ ಪ್ರಧಾನಿಯಾಗಿದ್ದ ಕಾಲದಲ್ಲಿ 48 ರಿಂದ 52 ಇದ್ದಾಗ ಬಿಜೆಪಿ ಪ್ರಶ್ನೆ ಮಾಡುತ್ತಿತ್ತು. ಈಗ ಆ ಪ್ರಶ್ನೆಗಳು ಎಲ್ಲಿಗೆ ಹೋದವು" ?ಎಂದು ಕಿಡಿ ಕಾಡಿದರು. ಕರ್ನಾಟಕಕ್ಕೆ ಸಂಬಂಧಿಸಿದಂತೆ ರೈಲ್ವೆ ಕಾರಿಡಾರ್ ಯೋಜನೆಗಳಲ್ಲಿ ದೊಡ್ಡ ಅನ್ಯಾಯವಾಗಿದೆ ಎಂದು ಆರೋಪಿಸಿದ ಎಂ.ಬಿ.ಪಾಟೀಲ್,

"ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಮತ್ತು ವಿ.ಸೋಮಣ್ಣ ಯಾವ ಮುಖವಿಟ್ಟು ರಾಜ್ಯಕ್ಕೆ ಬರಲಿದ್ದಾರೆ "?ಎಂದು ಪ್ರಶಿಸಿದರು. ಇನ್ನು ದೇಶದ ಆರ್ಥಿಕ ಸ್ಥಿತಿಗತಿಗಳ ಮೇಲು ಅವರ ಆತಂಕ ವ್ಯಕ್ತಪಡಿಸಿದರು. ಭಾರತದ ಜಿಡಿಪಿ ಶ್ರೇಯಾಂಕ 146ನೇ ಸ್ಥಾನಕ್ಕೆ ತಲುಪಿರುವುದು ದೇಶದ ಆರ್ಥಿಕ ದೌರ್ಬಲ್ಯವನ್ನು ತೋರುತ್ತದೆ ಎಂದು ಟಿಕಿಸಿದರು. ಇದಲ್ಲದೆ ಸೆಮಿ ಕಂಡಕ್ಟರ್ ಯೋಜನೆಗಳ ಹಂಚಿಕೆಯಲ್ಲಿ ಬಿಜೆಪಿ ಆಡಳಿತದ ರಾಜ್ಯಗಳು ಮತ್ತು ಕಾಂಗ್ರೆಸ್ ಆಡಳಿತದ ರಾಜ್ಯಗಳ ನಡುವೆ ಪಕ್ಷಪಾತ ಮಾಡಲಾಗಿದೆ ಎಂದು ಆರೋಪಿಸಿದರು. ಇದು ಸ್ಪಷ್ಟವಾದ ರಾಜಕೀಯ ವಿಂಗಡನೆ ಎಂದು ಕೇಂದ್ರ ಸರ್ಕಾರದ ತೀವ್ರ ವಾಗ್ದಾನ ನಡೆಸಿದರು.

ಕೇಂದ್ರ ಬಜೆಟ್ 2026: ಕರ್ನಾಟಕಕ್ಕೆ ‘ದೊಡ್ಡ ಅನ್ಯಾಯ’ : ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಬಜೆಟ್ ಗೆ ಕರ್ನಾಟಕ ರಾಜಕೀಯ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ಯಾನ್ಸರ್ ಸೇರಿದಂತೆ ಹದಿನೇಳು ಔಷಧಿಗಳ ಬೆಲೆ ಇಳಿಕೆಯನ್ನು ಸ್ವಾಗತಿಸುತ್ತೇವೆ ಎಂದು ಅವರು ಹೇಳಿದರು. ಕ್ವೀನ್ ಸಿಟಿ ಮಾಡೆಲ್ ನೀಡಿದ್ದು ನಮಗೆ ಆದರೆ ನಮ್ಮ ಕ್ವೀನ್ ಸಿಟಿಗೆ ಸೂಕ್ತ ಹಣಕಾಸು ಸೌಲಭ್ಯ ಸಹಕಾರ ನೀಡಬೇಕು ಎಂಬ ಆಸೆಯನ್ನು ವ್ಯಕ್ತಪಡಿಸಿದರು. ವಿಶೇಷವಾಗಿ ರೈತರ ಕುರಿತು ಮಾತನಾಡಿ,

" ಇದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ, ರೈತರಿಗೆ ಲಾಭ ತರಬೇಕು" ಎಂದು ಟೀಕಿಸಿದರು. ರೇರ್ ಅರ್ಥ್ ಮಟಿರಿಯಲ್ ಯೋಜನೆಗಳಲ್ಲಿ ಕರ್ನಾಟಕವನ್ನು ಪರಿಗಣಿಸಿಲ್ಲ ಎಂದು ಅವರು ಹೇಳಿದ್ದಾರೆ. ಮಧ್ಯಮ ವರ್ಗದ ಪರಿಗಣನೆ ಮಾಡುವ ಮೂಲಕ ಈ ಬಜೆಟ್ ಎಲ್ಲರಿಗೂ ನಿರಾಸೆ ತಂದಿದೆ ಎಂದರು. ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ನಿರೀಕ್ಷೆ ಇತ್ತು, ಆದರೆ ಈ ನಿರೀಕ್ಷೆ ಹುಸಿಯಾಗಿದೆ ಎಂದು ಕಿಡಿ ಕಾರಿದ್ದಾರೆ.

"ಇಂತಹ ಅನ್ಯಾಯ ಮುಂದುವರೆದರೆ,ಪ್ರಲ್ಹಾದ್ ಜೋಶಿ ರಾಜೀನಾಮೆ ನೀಡಬೇಕು” ಎಂದು ಮನೋಭಾವ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ರಾಜ್ಯಗಳ ತೆರಿಗೆ ಪಾಲಿನ ಸ್ಪಷ್ಟತೆ ನೀಡಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ. ಮುಖ್ಯಮಂತ್ರಿಗಳು ಕೇಂದ್ರಕ್ಕೆ ಪತ್ರ ಬರೆದರು ಸ್ಪಷ್ಟ ಉತ್ತರ ಸಿಕ್ಕಿಲ್ಲ. ಕೈಗಾರಿಕಾ ವಲಯದ ಅಭಿವೃದ್ಧಿಗೆ ಅನುಕೂಲವಾಗುವಂತೆ ಡಿಫೆನ್ಸ್ ಕಾರಿಡಾರ್ ಬೇಡಿಕೆ ಈ ಬಜೆಟ್ ನಲ್ಲಿ ಪೂರೈಸಲಾಗಿಲ್ಲ. ಪುಣೆ - ಬೆಂಗಳೂರು ರೈಲು ಕಾರಿಡಾರ್ ಕೂಡ ಕಡೆಗಣಿಸಲಾಗಿದೆ ಎಂದು ಟೀಕೆ ಮಾಡಿದರು.

ರಾಜ್ಯ ಸರ್ಕಾರ ಕಡಲಾಮೆಗಳ ಸಂರಕ್ಷಣೆ ಮತ್ತು ಉದ್ಯೋಗ ನಿರ್ಮಾಣದ ಕಡೆ ಚುರುಕಾಗಿ – ಈಶ್ವರ್ ಖಂಡ್ರೆ ಟೀಕೆ : ರಾಜ್ಯ ಸರ್ಕಾರ ಈಗಾಗಲೇ ನೂತನ ಶ್ರೀಗಂಧ ನೀತಿ ರಚಿಸಿದೆ. ಈ ನೀತಿ ಅಡಿ ಕಡಲಾಮೆಗಳ ಸಂರಕ್ಷಣೆಯನ್ನು ಪ್ರವಾಸೋದ್ಯಮದಲ್ಲಿ ಸೇರಿಸಲಾಗಿದೆ.ಕರ್ನಾಟಕದ ಮಂಗಳೂರು ಮತ್ತು ಕಾರವಾರ ತೀರಗಳಲ್ಲಿ ಕಡಲಾಮೆಗಳ ಮೊಟ್ಟೆಗಳ ಸಂರಕ್ಷಣೆ ಮತ್ತು ಮರಿಗಳ ರಕ್ಷಣೆಗೆ ಕ್ರಮ ಕೈಗೊಂಡಿದ್ದು, ರಾಜ್ಯ ಸರಕಾರ ಈ ಯೋಜನೆಗೆ ಮಾದರಿಯಾಗಿದ್ದು, ಪರಿಸರ ಸಂರಕ್ಷಣೆಯಲ್ಲಿ ಮುಂದಾಳತ್ವ ತೋರಿಸಿದೆ ಎಂದು ಮಾಹಿತಿ ನೀಡಿದ್ದಾರೆ.

"ಯುವಕರಿಗೆ ಉದ್ಯೋಗ ಸೃಷ್ಟಿಸುವಂತೆ ಯಾವುದೇ ಯೋಜನೆ ಕಾಣುತ್ತಿಲ್ಲ" ಎಂದು ಸಚಿವ ಈಶ್ವರ ಕಂಡ್ರೆ ವ್ಯಂಗ್ಯವಾಡಿ ಹೇಳಿದ್ದಾರೆ. "ಹಳೆಯ ಬಾಟಲಿಯಲ್ಲಿ ಹೊಸ ದ್ರಾಕ್ಷಾರಸ ತುಂಬಿದಂತಿದೆ ಎಂದು ಸಚಿವರು ರಾಜಕೀಯ ಹಾಸ್ಯಮಯ ಟೀಕೆ ಮಾಡಿದರು. ಆದರೆ ಉದ್ಯೋಗ ಕ್ಷೇತ್ರದ ಹಿನ್ನೆಲೆ ಬಗ್ಗೆ ಸಚಿವ ಈಶ್ವರ ಕಂಡ್ರೆ ವ್ಯಂಗ್ಯವಾಡಿದರು. ಕಳೆದ 12 ವರ್ಷಗಳಲ್ಲಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ, ಕೇಂದ್ರ ಸರ್ಕಾರವು ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳ ಭರವಸೆ ನೀಡಿದ್ದು, ನುಡಿದಂತೆ ನಡೆಯುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದವರು ಟೀಕಿಸಿದರು.

ರಾಜ್ಯಕ್ಕೆ ಮತ್ತೆ ಅನ್ಯಾಯ - ಈಶ್ವರ ಖಂಡ್ರೆ ಟೀಕೆ : ಕರ್ನಾಟಕದ ಸಚಿವ ಈಶ್ವರ್ ಕಂಡ್ರೆ ಕೇಂದ್ರ ಬಜೆಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಭಾನುವಾರ ಮಂಡಿಸಲಾದ ಕೇಂದ್ರ ಬಜೆಟ್ ದೇಶದ ಆರ್ಥಿಕತೆಗೆ ರಜೆ ನೀಡುವಂತಿದೆ. ಸಂಪೂರ್ಣ ನಿರಾಸೆಗೊಂಡಿದ್ದು, ಯಾವುದೇ ಗಣನೀಯ ಸುಧಾರಣೆ ಕಾಣಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು, ನಿರ್ಮಲ ಸೀತಾರಾಮನ್ ಅವರು ಮಂಡಿಸಿದ 9ನೇ ಬಜೆಟ್ ನಲ್ಲಿ ಸರ್ಕಾರದ ವೆಚ್ಚಗಳ ಮೇಲೆ ಯಾವುದೇ ನಿಯಂತ್ರಣವಿಲ್ಲದೆ ಕರ್ನಾಟಕ ರಾಜ್ಯಕ್ಕೆ ಹೇಳಿಕೊಳ್ಳುವಂತಹ ಪ್ರಯೋಜನಗಳು ಇಲ್ಲ" ಎಂದು ಸಚಿವರು ಟೀಕಿಸಿದ್ದಾರೆ.

ಹೈದರಾಬಾದ್ ಬೆಂಗಳೂರು ಹೈಸ್ಪೀಡ್ ರೈಲು ಯೋಜನೆ ಸಮಾಧಾನಕರ ಬಹುಮಾನದಂತಿದೆ ಎಂದು ಅವರು ಹೇಳಿದರು. ರೈತರಿಗೆ ಸಂಬಂಧಿಸಿದಂತೆ, "ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಲ್ಲಿ ಕೇಂದ್ರ ಸರ್ಕಾರ ಈ ಬಾರಿ ವಿಫಲವಾಗಿದೆ" ಎಂದು ಅವರು ಖಂಡಿಸಿದರು. ಈ ಬಜೆಟ್ ಯುವಜನರು ರೈತರು ಮತ್ತು ಮಧ್ಯಮ ವರ್ಗದವರಿಗೆ ನಿರೀಕ್ಷೆ ತೀರಿಸದೇ ರಾಜ್ಯಕ್ಕೆ ಮತ್ತು ದೇಶಕ್ಕೆ ಅನ್ಯಾಯ ಮಾಡುವಂತಿದೆ ಎಂದು ಆಕ್ರೋಶವನ್ನುಈಶ್ವರ ಖಂಡ್ರೆ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು ಓದಿರಿ:
ರೀಲ್ಸ್ ನೋಡಿ ಹೆಚ್ಚು ಸಮಯ ಕಳೆಯುತ್ತೀರಾ ? ಇದು ನಿಮ್ಮ ಮೆದುಳಿಗೆ ಹಾನಿ? ಬ್ರೈನ್ ರಾಟ್ ಬಗ್ಗೆ ತಿಳಿದುಕೊಳ್ಳಿ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online