<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಟ್ರಂಪ್ ಮನಸ್ಥಿತಿ ಅರ್ಥೈಸಲು ಇರಾನ್ ನಿಂದ ಹೊಸ ಪ್ರಯೋಗ

ಟ್ರಂಪ್ ಮನಸ್ಥಿತಿ ಅರ್ಥೈಸಲು ಇರಾನ್ ನಿಂದ ಹೊಸ ಪ್ರಯೋಗ
Summary: Iran has deployed a team of psychologists to understand former US President Donald Trump's decisions and interactions, with the aim of predicting his next moves and formulating diplomatic and security strategies.

Belagavi News:

ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಕಾಲದ ಸಂಘರ್ಷವನ್ನು ಕೊನೆಗೊಳಿಸಲು ಇರಾನ್ ಸರ್ಕಾರವು ವಿಶಿಷ್ಟ ರಾಜ ತಾಂತ್ರಿಕ ತಂತ್ರವನ್ನು ಅನುಸರಿಸುವುದು ಬೆಳಕಿಗೆ ಬಂದಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಧಾರಗಳು ಮತ್ತು ವರ್ತನೆಗಳನ್ನು ಆಳವಾಗಿ ಅಧ್ಯಯನ ಮಾಡಲು ಇರಾನ್ ತನ್ನ ರಾಜ್ಯ ತಾಂತ್ರಿಕ ತಂಡಕ್ಕೆ ಇಬ್ಬರು ಹಿರಿಯ ಮನಶಾಸ್ತ್ರಜ್ಞರನ್ನು ಸೇರಿಸಿಕೊಂಡಿದೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ವರದಿಗಳ ಪ್ರಕಾರ, ಟ್ರಂಪ್ ಅವರ ರಾಜಕೀಯ ನಡೆ, ಮಾತುಕತೆ ಶೈಲಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ವಿಧಾನವನ್ನು ವಿಶ್ಲೇಷಿಸಿ, ಅದಕ್ಕೆ ಅನುಗುಣವಾದ ತಂತ್ರವನ್ನು ರೂಪಿಸುವುದು ಈ ತಂಡದ ಮುಖ್ಯ ಉದ್ದೇಶವಾಗಿದೆ. ಈ ವಿನೂತನ ತಂತ್ರದಿಂದ ಟ್ರಂಪ್ ಗೆ ಕಳುಹಿಸಲಾದ ಸಂದೇಶಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದ್ದು, ಉಭಯ ದೇಶಗಳ ನಡುವೆ ಶಾಂತಿ ಒಪ್ಪಂದದತ್ತ ಮುಂದುವರೆಯುವ ಸಾಧ್ಯತೆಗಳು ಹೆಚ್ಚಿವೆ ಎಂದು ಹೇಳಲಾಗಿದೆ.

ಅಂತರಾಷ್ಟ್ರೀಯ ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ಹೊಸ ಕುತುಹಲಕ್ಕೆ ಕಾರಣವಾಗಿದ್ದು, ಇರಾನ್ ನ "ಸೈಕಾಲಾಜಿಕಲ್ ಡಿಪ್ಲೋಮಸಿ" ತಂತ್ರವನ್ನು ಅನೇಕ ತಜ್ಞರು ಗಮನಿಸುತ್ತಿದ್ದಾರೆ. ಅಮೆರಿಕ - ಇರಾನ್ ಸಂಬಂಧಗಳಲ್ಲಿ ಇದು ಮಹತ್ವದ ತಿರುವು ತರಬಹುದೆಂದು ವಿಶ್ಲೇಷಕರು ಅಭಿಪ್ರಾಯಪಡುತ್ತಿದ್ದಾರೆ.

Sponsored

ಈ ಕ್ರಮದಿಂದ ದೀರ್ಘಕಾಲದ ವೈಮನಸ್ಯ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದ್ದು, ಭವಿಷ್ಯದಲ್ಲಿ ಶಾಂತಿ ಒಪ್ಪಂದಕ್ಕೆ ಕಹಿ ಹಾಕುವ ಸಾಧ್ಯತೆಗಳ ಬಗ್ಗೆ ಚರ್ಚೆಗಳು ಆರಂಭವಾಗಿವೆ.

ಟ್ರಂಪ್ - ಇರಾನ್ ಮಾತುಕತೆ ದಾಖಲೆಗಳಿಗೆ ವಿಶೇಷ ತಂತ್ರ - ಭವಿಷ್ಯದ ಐತಿಹಾಸಿಕ ದಾಖಲೆಗಳನ್ನೂ ಗಮನದಲ್ಲಿಟ್ಟುಕೊಂಡ ಇರಾನ್ :

ಅಮೆರಿಕ ಮತ್ತು ಇರಾನ್ ನಡುವಿನ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗಳಲ್ಲಿ ವಿನಿಮಯವಾಗುವ ಪ್ರತಿಯೊಂದು ಸಂದೇಶ, ಪತ್ರ ಮತ್ತು ಅಧಿಕೃತ ಪದ್ಯಗಳು ಭವಿಷ್ಯದಲ್ಲಿ ಐತಿಹಾಸಿಕ ದಾಖಲೆಗಳಾಗಿ ಉಳಿಯಬಹುದು ಎಂಬುದು ಇರಾನ್ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ.

ಇರಾನಿನ ಅಧಿಕಾರಿಯೊಬ್ಬರ ಪ್ರಕಾರ, ಈ ದಾಖಲೆಗಳು ಮುಂದಿನ ದಿನಗಳಲ್ಲಿ ಸಾರ್ವಜನಿಕವಾಗಿ ಬಹಿರಂಗವಾದಾಗ, ಇರಾನ್ ತನ್ನ ರಾಜ ತಾಂತ್ರಿಕ ಚಾತುರ್ಯ ಮತ್ತು ಅತ್ಯಾಧುನಿಕ ಮಾತುಕತೆ ತಂತ್ರಗಳನ್ನು ಹೇಗೆ ಬಳಸುತ್ತಿತ್ತು ಎಂಬುದು ಜಗತ್ತಿಗೆ ಸ್ಪಷ್ಟವಾಗಲಿ ಎಂಬ ಉದ್ದೇಶದಿಂದಲೇ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ.

Sponsored

ಈ ಹಿನ್ನೆಲೆಯಲ್ಲಿ, ಪ್ರತಿಯೊಂದು ಲಿಖಿತ ಸಂದೇಶ ಮತ್ತು ಅಧಿಕೃತ ಪತ್ರದ ಭಾಷಾ ಶೈಲಿ ಪದಗಳ ಆಯ್ಕೆ ಹಾಗೂ ಸಂವಹನ ತಂತ್ರವನ್ನು ಸೂಕ್ಷ್ಮವಾಗಿ ರೂಪಿಸಲಾಗುತ್ತಿದೆ. ಮಾತುಕತೆಗಳ ದೀರ್ಘಕಾಲಿನ ಪರಿಣಾಮ ಹಾಗೂ ಐತಿಹಾಸಿಕ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಈ ತಂತ್ರವನ್ನು ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಅಂತರಾಷ್ಟ್ರೀಯ ವಿಶ್ಲೇಷಕರ ಪ್ರಕಾರ, ಇದು ಕೇವಲ ತಕ್ಷಣದ ರಾಜತಾಂತ್ರಿಕ ತಂತ್ರವಲ್ಲದೆ ಭವಿಷ್ಯದ ಇತಿಹಾಸ ಬರವಣಿಗೆಯನ್ನೂ ಗಮನದಲ್ಲಿಟ್ಟುಕೊಂಡ "ದಾಖಲೆ - ಕೇಂದ್ರಿತ ರಾಜತಾಂತ್ರಿಕತೆ" (Document - Centric Diplomacy) ಎಂಬ ಹೊಸ ವಿಧಾನಕ್ಕೆ ಉದಾಹರಣೆಯಾಗಿದೆ.

ಅಮೆರಿಕ - ಇರಾನ್ ಶಾಂತಿ ಒಪ್ಪಂದಕ್ಕೆ ಜೂನ್ 19 ರಂದು ಸಹಿ ಸಾಧ್ಯತೆ - ಜಿನೀವಾದಲ್ಲಿ ಐತಿಹಾಸಿಕ ಬೆಳವಣಿಗೆ ನಿರೀಕ್ಷೆ:

ಅಮೆರಿಕ ಮತ್ತು ಇರಾನ್ ನಡುವಿನ ದೀರ್ಘಕಾಲದ ಉದ್ವಿಗ್ನತೆಯನ್ನು ಕಡಿಮೆ ಮಾಡಿ ಸಂಘರ್ಷವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ನಡೆದ ರಾಜತಾಂತ್ರಿಕ ಪ್ರಯತ್ನಗಳು ಇದೀಗ ಮಹತ್ವದ ಹಂತ ತಲುಪಿದೆ ಎಂದು ವರದಿಗಳು ತಿಳಿಸಿವೆ. ಭಯ ದೇಶಗಳ ನಡುವಿನ ಪ್ರಾಥಮಿಕ ತಿಳುವಳಿಕೆ ಒಪ್ಪಂದಕ್ಕೆ ಈಗಾಗಲೇ ಒಪ್ಪಿಗೆ ದೊರೆತಿದ್ದು, ಜೂನ್ 19ರಂದು ಸ್ವಿಜರ್ಲ್ಯಾಂಡ್ ನ ಜಿನೀವಾದಲ್ಲಿ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಅಧಿಕೃತ ಸಂಕಿ ಹಾಕುವ ಸಾಧ್ಯತೆ ಇದೆ.

Sponsored

ಮೂಲಗಳ ಪ್ರಕಾರ, ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ಅಧಿಕಾರಿಗಳ ನಡುವೆ ನಡೆದ ನಿರಂತರ ಮಾತುಕತೆಗಳು ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿದ್ದು, ಇದು ಶಾಂತಿ ಪ್ರಕ್ರಿಯೆಗೆ ವೇಗ ನೀಡಿವೆ. ಅಂತ್ಯ ಹಾಡುವ ಪ್ರಮುಖ ಹಂತವಾಗಬಹುದು ಎಂದು ರಾಜ್ಯ ತಾಂತ್ರಿಕ ವಲಯದಲ್ಲಿ ನಿರೀಕ್ಷೆ ವ್ಯಕ್ತವಾಗಿದೆ.

ಇದಕ್ಕೂ ಸಮಕಾಲೀನವಾಗಿ, ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಗ್ಯ ಕುರಿತಾಗಿ ಹೊಸ ವರದಿ ಬೆಳಕಿಗೆ ಬಂದಿದೆ. ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ ಅವರ ಇತ್ತೀಚಿನ ವೈದ್ಯಕೀಯ ತಪಾಸಣೆಯಲ್ಲಿ ಸುಮಾರು 22 ವೈದ್ಯಕೀಯ ತಜ್ಞರು ಭಾಗವಹಿಸಿದ್ದು, ಇದು ಹಿಂದಿನ ತಪಾಸನೆಗಳಿಗಿಂತ ಹೆಚ್ಚು ಸಂಖ್ಯೆಯಾಗಿದೆ ಎಂದು ತಿಳಿಸಲಾಗಿದೆ.

ಈ ಬೆಳವಣಿಗೆಗಳು ಅಮೆರಿಕಾದ ರಾಜಕೀಯ ಹಾಗೂ ಅಂತರಾಷ್ಟ್ರೀಯ ನೀತಿಗಳ ಮೇಲೆ ಗಮನ ಸೆಳೆದಿದ್ದು, ಟ್ರಂಪ್ ಅವರ ಆರೋಗ್ಯ ಮತ್ತು ನಿರ್ಧಾರಕ ಸಾಮರ್ಥ್ಯದ ಮೇಲಿನ ಅಭಿಪ್ರಾಯಪಡುತ್ತಿದ್ದಾರೆ.

Also Read:

Sponsored

66 ರೌಡಿಶೀಟರ್ ಗಳಿಗೆ ಸದ್ಯಕ್ಕಿಲ್ಲ ಮುಕ್ತಿ : ಗೃಹ ಸಚಿವ ಖರ್ಗೆ ಮಹತ್ವದ ಹೇಳಿಕೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online