<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಇರಾನ್-ಅಮೆರಿಕ ಉದ್ವಿಗ್ನತೆ ಮುಂದುವರಿಕೆ : ಮಾತುಕತೆ ಆಸಕ್ತಿ ಇಲ್ಲ ಎಂದ ಟ್ರಂಪ್

ಇರಾನ್-ಅಮೆರಿಕ ಉದ್ವಿಗ್ನತೆ ಮುಂದುವರಿಕೆ : ಮಾತುಕತೆ ಆಸಕ್ತಿ ಇಲ್ಲ ಎಂದ ಟ್ರಂಪ್
Summary: US President Donald Trump has made it clear that he has no interest in talks with Iran, rejecting the offer of behind-the-scenes talks. Trump's statement assumes significance amid the ongoing tension with Iran. This development has raised curiosity about the future stance of the US and the relations between the two countries.

BELAGAVI NEWS :

ಇರಾನ್ ಜೊತೆ ಮಾತುಕತೆಗೆ ಟ್ರಂಪ್ ನಕಾರ; ಅರ್ಥ ಪೂರ್ಣ ಚರ್ಚೆಗೆ ಸಿದ್ಧವಾಗಿರುವವರೆಗೆ ಸಂತಾನ ಇಲ್ಲ

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಉಭಯ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬೆಳವಣಿಗೆಗಳು ಕುತೂಹಲ ಮೂಡಿಸಿವೆ. ಇರಾನ್ ಅಧಿಕಾರಿಗಳು ಅಮೆರಿಕದೊಂದಿಗೆ ತೆರೆಮರೆಯ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದ್ದು, ಅರ್ಥಪೂರ್ಣ ಚರ್ಚೆಗೆ ಇರಾನ್ ಸಿದ್ದವಾಗಿರುವವರೆಗೆ ಮಾತುಕತೆ ನಡೆಸುವ ಆಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇರಾನ್ ನೊಂದಿಗೆ ನಡೆಯುತ್ತಿರುವ ಸಂಘರ್ಷದ ನಡುವೆ ಅಮೆರಿಕ ತನ್ನ ನಿರ್ವಹಣೆ ಮತ್ತಷ್ಟು ಕಠಿಣ ಗೊಳಿಸಿದೆ. ಇರಾನ್ ಮಿಲಿಟರಿ ನೆಲೆಗಳ ವಿರುದ್ಧ ಅಮೆರಿಕಾದ ಕ್ರಮಗಳು ಹಾಗೂ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಬೆಳವಣಿಗೆಗಳ ನಡುವೆ ಇರಾನ್ ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದು, ಸಂಘರ್ಷದಿಂದ ಅಮೆರಿಕಕ್ಕೂ ಬಾರಿ ಆರ್ಥಿಕ ಹೊರೆ ಉಂಟಾಗಿದೆ ಎಂದು ಹೇಳಿದೆ. ಸಂಘರ್ಷದ ಪರಿಣಾಮ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಜಾಗತಿಕ ಆರ್ಥಿಕ ಹಿಂಜರಿಕೆಯ ಆತಂಕವು ಹೆಚ್ಚಾಗಿದೆ.

ಅಮೇರಿಕಾ ಇರಾನ್ ನಡುವಿನ ಬಿಕ್ಕಟ್ಟು ಮುಂದುವರೆದಿದ್ದರೆ ಮಧ್ಯಪ್ರಾಚ್ಯದ ಭದ್ರತೆ, ಜಾಗತಿಕ ಇಂಧನ ಮಾರುಕಟ್ಟೆ ಹಾಗೂ ಅಂತರಾಷ್ಟ್ರೀಯ ರಾಜಕೀಯದ ಮೇಲೆ ಇದರ ಪರಿಣಾಮ ಬೀರುವ ಸಾಧ್ಯತೆ ಇದೆ.

ಟ್ರಂಪ್ ರಿಂದ ಇರಾನ್ ಮಾತುಕತೆಗೆ ನಕಾರ; ಹಾರ್ಮುಜ್ ಜಲಸಂದಿ ಭದ್ರತೆಗೆ ಅಮೆರಿಕಾದ ದಾಳಿ ತೀವ್ರ

ಶ್ವೇತ ಭವನದಲ್ಲಿ ಲೇಬನಾನ್ ಅಧ್ಯಕ್ಷ ಜೋಸೆಫ್ ಔನ್ಅವರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅಮೆರಿಕ ಅಧ್ಯಕ್ಷರು ಡೊನಾಲ್ಡ್ ಟ್ರಂಪ್, ಇರಾನ್ ಮಾತುಕತೆಗೆ ಆಸಕ್ತಿ ತೋರಿಸುತ್ತಿದೆ ಎಂದು ಹೇಳಿದರೂ, ಅಮೆರಿಕ ಯಾವುದೇ ತುರ್ತು ಬೇಟಿಗೆ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಅರ್ಥಪೂರ್ಣ ಮತ್ತು ಗಂಭೀರ ಚರ್ಚೆಗೆ ಇರಾನ್ ಸಿದ್ದವಾಗಿರುವವರೆಗೆ ರಾಜತಾಂತ್ರಿಕ ಮಾತುಕತೆ ಸಾಧ್ಯವಾಗುವ ಅಗತ್ಯವಿಲ್ಲ ಎಂಬ ನಿಲುವನ್ನು ಪುನರುಚ್ಚರಿಸಿದ್ದಾರೆ. ಇರಾನ್ ಜೊತೆ ಸಂದಾನದ ಸಾಧ್ಯತೆಗಳ ಚರ್ಚೆ ನಡೆಸುತ್ತಿರುವ ನಡುವೆಯೇ, ಮತ್ತೊಂದೆಡೆ ಅಮೆರಿಕ ಸೇನೆಯು ಇರಾನ್ ವಿರುದ್ಧದ ಸೈನಿಕ ಕಾರ್ಯಾಚರಣೆಯನ್ನು ಮುಂದುವರಿಸಿದೆ.

ಹಾರ್ಮುಜ್ ಜಲಸಂದಿ ಭದ್ರತೆಗೆ ಅಮೆರಿಕಾದ ಕಾರ್ಯಾಚರಣೆ

ಅಮೆರಿಕಾದ ಯುಎಸ್ ಸೆಂಟ್ರನ್ಸ್ ಕಮಾಂಡ್ ಮಾಹಿತಿ ಪ್ರಕಾರ, ಅಮೆರಿಕ ಪಡೆಗಳು ಸತತ 11ನೇ ರಾತ್ರಿ ಇರಾನ್ ನ ಮಿಲಿಟರಿ ಅಮೇರಿಕದ ಯುಎಸ್ ಸೆಂಟ್ರಲ್ ಕಮಾಂಡ್ ಮಾಹಿತಿ ಪ್ರಕಾರ, ಅಮೆರಿಕ ಪಡೆಗಳು ಸತತ 11ನೇ ರಾತ್ರಿ ಇರಾನ್ ನ ಮಿಲಿಟರಿ ನೆಲೆಗಳ ಮೇಲೆ ದಾಳಿ ನಡೆಸಿವೆ. ಜಾಗತಿಕ ಇಂಧನ ಪೂರೈಕೆ ಮತ್ತು ತೈಲ ಸಾಗಾಣಿಗೆ ಅತ್ಯಂತ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳಿಗೆ ಎದುರಾಗುತ್ತಿರುವ ಭದ್ರತಾ ಬೆದರಿಕೆಗಳನ್ನು ತಡೆಯುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಲಾಗಿದೆ.

ಇರಾನ್ ಅಮೆರಿಕ ನಡುವಿನ ಸಂಘರ್ಷದ ಪರಿಣಾಮವಾಗಿ ಮಧ್ಯ ಪ್ರಾಚ್ಯದ ಭದ್ರತಾ ಪರಿಸ್ಥಿತಿ, ಜಾಗತಿಕ ತೈಲ ಮಾರುಕಟ್ಟೆ ಹಾಗೂ ಅಂತರಾಷ್ಟ್ರೀಯ ರಾಜಕೀಯದ ಮೇಲೆ ಆತಂಕ ಹೆಚ್ಚಾಗಿದೆ. ರಾಜತಾಂತ್ರಿಕ ಮಾತುಕತೆ ಮತ್ತು ಸೈನಿಕ ಕ್ರಮಗಳನ್ನು ಏಕಕಾಲದಲ್ಲಿ ನಡೆಯುತ್ತಿರುವುದು ಈ ಬಿಕ್ಕಟ್ಟಿನ ಸಂಕೀರ್ಣತೆಯನ್ನು ತೋರಿಸುತ್ತಿದೆ.

ಅಮೆರಿಕಾದ ಒತ್ತಡದ ನಡುವೆಯೂ ಇರಾನ್ ಹೋರಾಟ ಮುಂದುವರಿಸುವುದಾಗಿ ಪೆಜೆಶ್ಕಿಯಾನ್ ಘೋಷಣೆ

ಅಮೆರಿಕಾದ ನಿರಂತರ ದಾಳಿ ಮತ್ತು ಬೆದರಿಕೆಗಳ ನಡುವೆಯೂ ಇರಾನ್ ಅಧ್ಯಕ್ಷ ಮಸಾದ್ ಪೆಜೆಶ್ಕಿಯಾನ್, ದೇಶದ ಏಕತೆ ಮತ್ತು ಜನರ ಶಕ್ತಿಯೇ ಸವಾಲುಗಳನ್ನು ಎದುರಿಸುವ ಪ್ರಮುಖ ಬಲವಾಗಿದೆ ಎಂದು ತಿಳಿಸಿದ್ದಾರೆ.

ಅಮೆರಿಕ ಇರಾನ್ ನಡುವಿನ ಸಂಘರ್ಷ ಮತ್ತಷ್ಟು ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪೆಜೆಶ್ಕಿಯಾನ್ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ. ರಾಜತಾಂತ್ರಿಕ ಮಾತುಕತೆಗಳ ಸಾಧ್ಯತೆಗಳ ನಡುವೆ ಉಭಯ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಮುಂದುವರೆದಿದೆ.

ಇರಾನ್ ಯುದ್ಧಕ್ಕೆ ಅಮೆರಿಕಾದ ಬಾರಿ ವೆಚ್ಚ;ಎರಡು ತಿಂಗಳುಗಳಲ್ಲಿ 37.5ಬಿಲಿಯನ್ ಡಾಲರ್ ಖರ್ಚು

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷವೂ ಕೇವಲ ಜೀವ ಹಾನಿ ಮಾತ್ರ ಸೀಮಿತವಾಗದೆ, ಆರ್ಥಿಕತೆಯ ಮೇಲೆಯೂ ದೊಡ್ಡ ಪರಿಣಾಮ ಬೀರುತ್ತಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಈ ಯುದ್ಧಕ್ಕಾಗಿ ಅಮೇರಿಕ ಸರ್ಕಾರಕ್ಕೆ ಸುಮಾರು 37.5 ಬಿಲಿಯನ್ ಅಮೆರಿಕನ್ ಡಾಲರ್ ವೆಚ್ಚವಾಗಿದೆ ಎಂದು ಅಮೆರಿಕಾದ ರಕ್ಷಣಾ ಕಾರ್ಯದರ್ಶಿ, ಪೀಟ್ ಹೆಗ್ಸೆತ್ ಅವರು ಕಾಂಗ್ರೆಸ್ ಗೆ ಮಾಹಿತಿ ನೀಡಿದ್ದಾರೆ.

ಮೇ ತಿಂಗಳ ಮಧ್ಯಭಾಗದಲ್ಲಿ ಮಾಡಲಾಗಿದ್ದ ಅಂದಾಜಿಗಿಂತ ಈ ವೆಚ್ಚವು ಗಣನೀಯವಾಗಿ ಹೆಚ್ಚಾಗಿದೆ ಎಂದು ತಿಳಿಸಲಾಗಿದೆ. ಮಿಲಿಟರಿ ಅಗತ್ಯತೆಗಳನ್ನು ಪೂರೈಸಲು ಪೆಂಟ್ ಗನ್ ಹೆಚ್ಚುವರಿ ಯಾಗಿ ೬೭ ಮಿಲಿಯನ್ ಡಾಲರ್ ತುರ್ತು ಅನುದಾನಕ್ಕೆ ಮನವಿ ಮಾಡಿದೆ.

ಇದೇ ವೇಳೆ, ಜಾಗತಿಕ ಇಂಧನ ಸಾಗಾಣಿಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವುದು ಅಂತರಾಷ್ಟ್ರೀಯ ಮಾರುಕಟ್ಟೆಗಳ ಮೇಲೆ ಪರಿಣಾಮ

ಬೀರುವ ಆತಂಕ ಮೂಡಿಸಿದೆ. ಸಂಘರ್ಷ ಮುಂದುವರೆದರೆ ಕಚ್ಚಾ ತೈಲ ಬೆಲೆ ಏರಿಕೆ ಹಾಗೂ ಜಾಗತಿಕ ಆರ್ಥಿಕ ಹಿಂಜರಿಕೆಯ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಅಮೇರಿಕ-ಇರಾನ್ ನಡುವಿನ ಯುದ್ಧ ಬೆಳವಣಿಗೆಗಳು ಜಾಗತಿಕ ಭದ್ರತೆ ಮಾತ್ರವಲ್ಲದೆ, ಇಂಧನ ಮಾರುಕಟ್ಟೆ ಮತ್ತು ವಿಶ್ವ ಆರ್ಥಿಕತೆಯ ಮೇಲು ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online