blagavi news :
ಮಧ್ಯ ಪ್ರಾಚ್ಯದಲ್ಲಿ ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತಷ್ಟು ತೀವ್ರಗೊಂಡಿರುವ ಬೆನ್ನಲ್ಲೇ, ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಜೀವನಾಡಿಯಾದ ಹಾರ್ಮೋನ್ ಜಲಸಂದಿ ಸಂಪೂರ್ಣವಾಗಿ ತನ್ನ ನಿಯಂತ್ರಣದಲ್ಲಿದೆ ಎಂದು ಇರಾನ್ನ ಇಸ್ಲಾಮಿಕ್ ರೇವಲೇಷನರಿ ಗಾರ್ಡ್ ಕಾರ್ಪ್ಸ್ ಘೋಷಿಸಿದೆ.
ಜಾಗತಿಕ ಕಚ್ಚಾ ತೈಲ ಸಾಗಾಣಿಯ ಅತ್ಯಂತ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿ ಕುರಿತು ಮಾತನಾಡಿರುವ ಐ ಆರ್ ಜಿ ಸಿ, ಅಮೆರಿಕಾದ ಮಿಲಿಟರಿ ಹಸ್ತಕ್ಷೇಪ ಮುಂದುವರೆದರೆ ಈ ಜಲಮಾರ್ಗವನ್ನು ತೆರೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದೆ. ಜೊತೆಗೆ, ಅಮೆರಿಕಕ್ಕೆ ಬೆಂಬಲ ನೀಡುತ್ತಿರುವ ರಾಷ್ಟ್ರಗಳಿಗೂ ಕಠಿಣ ಸಂದೇಶ ರವಾನಿಸಿದ್ದು, ಯಾವುದೇ ಪ್ರಚೋದನೆಗೆ ತಕ್ಕ ಉತ್ತರ ನೀಡುವುದಾಗಿ ಹೇಳಿದೆ.
ಇನ್ನೊಂದೆಡೆ, ಅಂತರಾಷ್ಟ್ರೀಯ ಹಡಗು ಸಂಚಾರಕ್ಕೆ ಉದ್ದೇಶಪೂರ್ವಕ ಅಡ್ಡಿ ಉಂಟು ಮಾಡುವ ಮೂಲಕ ಜಾಗತಿಕ ವ್ಯಾಪಾರಕ್ಕೆ ತೊಂದರೆ ಸೃಷ್ಟಿಸುತ್ತಿದೆ ಎಂದು ಅಮೆರಿಕ ಇರಾನ್ ವಿರುದ್ಧ ಆರೋಪಿಸಿದೆ. ಈ ಬೆಳವಣಿಗೆಗಳು ಮಧ್ಯಪ್ರಾಚ್ಯದಲ್ಲಿ ಈಗಾಗಲೇ ಉದ್ವಿಗ್ನ ವಾಗಿರುವ ಭದ್ರತಾ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿವೆ.
ವಿಶ್ವದ ಸಮುದ್ರ ಮಾರ್ಗದ ಕಚ್ಚಾ ತೈಲ ಸಾಗಾಣಿಯ ಗದನೀಯ ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ನಡೆಯುತ್ತಿದೆ.ಹೀಗಾಗಿ ಈ ಮಾರ್ಗದಲ್ಲಿ ಯಾವುದೇ ಅಡಚಣೆ ಉಂಟಾದರೆ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ, ಪುರೈಕೆ ಗೆತೆಯ ಹಾಗೂ ಸಾಗಾಣೆ ವೆಚ್ಚ ಹೆಚ್ಚಳ ಸಂಭವಿಸುವ ಸಾಧ್ಯತೆ ಇದೆ.
ಇದರ ನೇರ ಪರಿಣಾಮ ಭಾರತ ಸೇರಿದಂತೆ ತೈಲ ಆಮದು ಮೇಲೆ ಅವಲಂಬಿತವಾಗಿರುವ ಹಲವು ರಾಷ್ಟ್ರಗಳ ಮೇಲೆ ಬೀಳುವ ಸಾಧ್ಯತೆ ಇದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ, ಹಣದುಬ್ಬರ ಹಾಗೂ ಜಾಗತಿಕ ಪೂರೈಕೆ ಸರಪಳಿಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ವ್ಯಕ್ತವಾಗಿದೆ. ಪರಿಸ್ಥಿತಿಯನ್ನು ವಿಶ್ವದ ಪ್ರಮುಖ ರಾಷ್ಟ್ರಗಳು ನಿಕಟವಾಗಿ ಗಮನಿಸುತ್ತಿದ್ದು, ತಗ್ಗಿಸಲು ರಾಜ ತಾಂತ್ರಿಕ ಮಟ್ಟದಲ್ಲಿ ಪ್ರಯತ್ನಗಳು ಮುಂದುವರೆದಿವೆ.
ಹಾರ್ಮುಜ್ ಜಲಸಂಧಿ ಕುರಿತು ಇರಾನ್ ನ ಕಠಿಣ ಎಚ್ಚರಿಕೆ : ಅಮೆರಿಕಕ್ಕೆ ನೇರ ಸಂದೇಶ
ಅಮೆರಿಕಾದ ಮಿಲಿಟರಿ ಬೆದರಿಕೆಗಳು ಮತ್ತು ಹಸ್ತಕ್ಷೇಪ ಮುಂದುವರೆಯುವವರೆಗೆ, ಜಾಗತಿಕ ಇಂಧನ ಸಾಗಾಣಿಯ ಪ್ರಮುಖ ಮಾರ್ಗವಾದ ಹಾರ್ಮೋನ್ ಜಲಸಂಧಿಯನ್ನು ತೆರೆಯಲು ಸಾಧ್ಯವಿಲ್ಲ ಎಂದು ಟ್ರೆಹಾನ್ ಸ್ಪಷ್ಟಪಡಿಸಿದೆ. ಈ ವಿಚಾರದಲ್ಲಿ ಅಮೆರಿಕಕ್ಕೆ ಬೆಂಬಲ ನೀಡುವ ಯಾವುದೇ ಪ್ರಾದೇಶಿಕ ರಾಷ್ಟ್ರಗಳಿಗೂ ಕಠಿಣ ಪ್ರಕ್ರಿಯೆ ನೀಡಲಾಗುವುದು ಎಂದು ಇರಾನ್ ನ ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್ಸ್ ಎಚ್ಚರಿಕೆ ನೀಡಿದೆ.
ಇರಾನ್ ಸೇನೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಹಾರ್ಮುಜ್ ಜಲಸಂಧಿ ತಮ್ಮ ಪ್ರಭಾವ ಒದೆಯದಲ್ಲಿದೆ ಎಂದು ಉಲ್ಲೇಖಿಸಿದ್ದು, ವಿದೇಶಿ ಶಕ್ತಿಗಳ ಹಸ್ತಕ್ಷೇಪವನ್ನು ಸಹಿಸುವುದಿಲ್ಲ ಎಂದು ತಿಳಿಸಿದೆ." ಸಾವಿರಾರು ಕಿಲೋಮೀಟರ್ ದೂರದಿಂದ ಬಂದಿರುವ ಶಕ್ತಿಗಳಿಗೆ ಇಲ್ಲಿ ನಿಯಂತ್ರಣ ಸಾಧಿಸಲು ಅವಕಾಶ ನೀಡುವುದಿಲ್ಲ" ಎಂದು ಸಂದೇಶವನ್ನು ನೀಡಿದ್ದು, ಯಾವುದೇ ಅಕ್ರಮಕ್ಕೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಎಚ್ಚರಿಸಿದೆ.
ಮತ್ತೊಂದೆಡೆ, ಅಮೆರಿಕಾದ ಮಿಲಿಟರಿ ನೆಲೆಗಳು ಇರುವ ಕೆಲವು ಗಲ್ಫ್ ರಾಷ್ಟ್ರಗಳ ವಿಚಾರದಲ್ಲಿಯೂ ಇರಾನ್ ಕಠಿಣ ನಿಲುವು ತಳೆದಿದೆ. ಅಮೆರಿಕದ ಕಾರ್ಯಚರಣೆಗಳಿಗೆ ಬೆಂಬಲ ನೀಡದಂತೆ ನೆರೆಹೊರೆಯ ಅರಬ್ ರಾಷ್ಟ್ರಗಳಿಗೆ ಎಚ್ಚರಿಕೆ ನೀಡುವುದಾಗಿ ವರದಿಯಾಗಿದೆ.
ಈ ಬೆಳವಣಿಗೆಗಳು ಮಧ್ಯ ಪ್ರಾಂತ್ಯದ ಭದ್ರತಾ ಪರಿಸ್ಥಿತಿಯ ಮೇಲೆ ಆತಂಕ ಹೆಚ್ಚಿಸಿದ್ದು, ಹಾರ್ಮುಜ ಜಲಸಂಧಿಯ ಸ್ಥಿರತೆ ಜಾಗತಿಕ ಇಂಧನ ಮಾರುಕಟ್ಟೆಗೆ ಅತ್ಯಂತ ಪ್ರಮುಖವಾಗಿರುವುದರಿಂದ ವಿಶ್ವದ ರಾಷ್ಟ್ರಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ.
ಹಾರ್ಮುಜ್ ಜಲಸಂಧಿ ವಿವಾದ: ಇರಾನ್ ವಿರುದ್ಧದ ಅಮೆರಿಕದ ಗಂಭೀರ ಆರೋಪ
ಇರಾನ್ ನ ಕಠಿಣ ನಿಲುವಿಗೆ ಪ್ರತಿಕ್ರಿಯಿಸಿರುವ ಅಮೆರಿಕ, ಹಾರ್ಮುಜ್ ಜಲಸಂಧಿಯಲ್ಲಿನ ಚಟುವಟಿಕೆಗಳ ಬಗ್ಗೆ ತೀವ್ರ ಅಕ್ಷೆಪ ವ್ಯಕ್ತಪಡಿಸಿದೆ. ಇರಾನ್ ತನ್ನ ಸಂಬಂಧಿತ ಸಂಸ್ಥೆಗಳ ಮೂಲಕ ಅಂತರಾಷ್ಟ್ರೀಯ ಸರಕು ಹಡಗುಗಳಿಗೆ ಕೃತಕ ಅಪಾಯದ ಭೀತಿ ಸೃಷ್ಟಿಸಿ, ವಿನಿ ಮತ್ತು ಭದ್ರತೆ ಹೆಸರಿನಲ್ಲಿ ಆರ್ಥಿಕ ಒತ್ತಡ ಹೇರುತ್ತಿದೆ ಎಂದು ಅಮೆರಿಕ ಆರೋಪಿಸಿದೆ.
ಅಂತರಾಷ್ಟ್ರೀಯ ಜಲಮಾರ್ಗವನ್ನು ಯಾವುದೇ ದೇಶವು ತನ್ನ ರಾಷ್ಟ್ರೀಯ ಅಥವಾ ಸೈನಿಕ ಸಾಧನವಾಗಿ ಬಳಸಲು ಅವಕಾಶ ನೀಡುವುದಿಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಜಾಗತಿಕ ವಾಣಿಜ್ಯ ಚಟುವಟಿಕೆಗಳು ಹಾಗೂ ಹಡಗುಗಳ ಮುಕ್ತ ಸಂಚಾರದ ಹಕ್ಕುಗಳನ್ನು ರಕ್ಷಿಸಲು ಮಿತ್ರ ರಾಷ್ಟ್ರಗಳೊಂದಿಗೆ ಸಮನ್ವಯದಲ್ಲಿ ಕಾರ್ಯಾಚರಣೆ ನಡೆಸುವುದಾಗಿ ವಾಷಿಂಗ್ಟನ್ ತಿಳಿಸಿದೆ.
ವಿಶ್ವ ಇಂಧನ ಪುರೈಕೆಯಲ್ಲಿ ಹಾರ್ಮುಜ್ ಜಲಸಂಧಿಗೆ ಅತ್ಯಂತ ಮಹತ್ವದ ಸ್ಥಾನವಾಗಿದೆ. ಜಗತ್ತಿನ ವಟ್ಟು ಕಚ್ಚಾ ತೈಲ ರಫ್ತಿನ ಸುಮಾರು ಶೇಕಡ 20ರಷ್ಟು ತೈಲ ಮತ್ತು ಹೆಚ್ಚಿನ ಪ್ರಮಾಣದ ದ್ರವಿಕೃತ ನೈಸರ್ಗಿಕ ಅನಿಲ ಇದೆ ಕಿರಿದಾದ ಜಲಮಾರ್ಗದ ಮೂಲಕ ವಿವಿಧ ರಾಷ್ಟ್ರಗಳಿಗೆ ಸಾಗಿಸಲಾಗುತ್ತದೆ.
ಹೀಗಾಗಿ ಇರಾನ್ ಈ ಮಾರ್ಗವನ್ನು ಸಂಪೂರ್ಣವಾಗಿ ನಿರ್ಬಂಧಿಸಿದರೆ, ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಬಾರಿ ಅಸ್ಥಿರತೆ ಉಂಟಾಗುವ ಸಾಧ್ಯತೆ ಇದೆ. ಭಾರತ ಸೇರಿದಂತೆ ತೈಲ ಆಮದು ಅವಲಂಬಿತ ರಾಷ್ಟ್ರಗಳಲ್ಲಿ ಇಂಧನ ಬೆಲೆ ಏರಿಕೆ, ಸಾಮಾನ್ಯವಾಗಿ ಹೆಚ್ಚಳ ಹಾಗೂ ಜಾಗತಿಕ ಸರಕು ಪೂರೈಕೆ ಸರಪಳಿಯಲ್ಲಿ ಗಂಭೀರ ವ್ಯತ್ಯಯ ಉಂಟಾಗುವ ಆತಂಕ ವ್ಯಕ್ತವಾಗಿದೆ.
ಹಾರ್ಮುಜ್ ಜಲಸಂಧಿಯ ಭದ್ರತೆ ಮತ್ತು ಮುಖ್ಯ ಸಂಚಾರವು ಈಗ ಜಾಗತಿಕ ರಾಜತಾಂತ್ರಿಕ ಚರ್ಚೆಯ ಪ್ರಮುಖ ವಿಷಯವಾಗಿ ಪರಿಣಮಿಸಿದೆ.