<?= $pageTitle ?>
Logo
ಮುಖಪುಟ ಓದುವುದು ಕೇಳು
Health

ಮಗುವಿಗೆ ಹಸಿವಾಗಿದೆಯೇ? ಈ ಸಂಕೇತಗಳನ್ನು ಪೋಷಕರು ತಪ್ಪದೇ ತಿಳಿದುಕೊಳ್ಳಿ

ಮಗುವಿಗೆ ಹಸಿವಾಗಿದೆಯೇ? ಈ ಸಂಕೇತಗಳನ್ನು ಪೋಷಕರು ತಪ್ಪದೇ ತಿಳಿದುಕೊಳ್ಳಿ
Summary: Recognizing that your baby is hungry can be a big challenge for new parents. Many signs, including crying, flapping hands, and opening and searching the mouth, can be signs of hunger. Understanding your baby's hunger signals properly will make it easier to care for them. Here are the key signs and useful tips that parents should look out for.

Belagavi news:

ಚಿಕ್ಕ ಮಕ್ಕಳು ತಮ್ಮ ಹಸಿವನ್ನು ಸ್ವಲ್ಪ ಪದಗಳಲ್ಲಿ ಹೇಳಲು ಯಾವಾಗಲೂ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಪೋಷಕರು ಅವರ ನಡವಳಿಕೆ ಮತ್ತು ಸೂಚನೆಗಳನ್ನು ಗಮನಿಸುವುದು ಅತ್ಯಂತ ಮುಖ್ಯ. ವಿಶೇಷವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಳುವುದು, ಕೋಪಗೊಳ್ಳುವುದು ಅಥವಾ ವರ್ತನೆಯಲ್ಲಿ ಬದಲಾವಣೆ ತೋರಿಸುವುದು ಮೂಲಕ ತಮ್ಮ ಅಗತ್ಯಗಳನ್ನು ವ್ಯಕ್ತಪಡಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಆಹಾರ ನೀಡುವುದು ಏಕೆ ಮುಖ್ಯ ಎಂಬುದನ್ನು ಒಂದು ಸಣ್ಣ ಕಥೆಯ ಮೂಲಕ ತಿಳಿದುಕೊಳ್ಳಬಹುದು.

ಸಣ್ಣ ಮಕ್ಕಳು ತಮ್ಮ ಹಸಿವು ಅಥವಾ ಅಸಹಜತೆಯನ್ನು ಯಾವಾಗಲೂ ಸ್ಪಷ್ಟವಾಗಿ ಹೇಳಲು ಸಾಧ್ಯವಾಗುವುದಿಲ್ಲ. ವಿಶೇಷವಾಗಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಅಳುವುದು, ಕೋಪಗೊಳ್ಳುವುದು ಅಥವಾ ವರ್ಧನೆಯಲ್ಲಿ ಬದಲಾವಣೆ ತೋರಿಸುವ ಮೂಲಕ ತಮ್ಮ ಅಗತ್ಯಗಳನ್ನು ವ್ಯಕ್ತಪಡಿಸುತ್ತಾರೆ. ಈ ಕಾರಣದಿಂದ ಪೋಷಕರು ಮಕ್ಕಳ ದಿನನಿತ್ಯದ ವರ್ತನೆ ಮತ್ತು ಸೂಚನೆಗಳ ಮೇಲೆ ಗಮನಹರಿಸುವುದು ಬಹಳ ಮುಖ್ಯ ಎಂದು ತಜ್ಞರು ತಿಳಿಸಿದ್ದಾರೆ. ವೈದ್ಯರ ಪ್ರಕಾರ, ಹಸಿವಾದಾಗ ಮಕ್ಕಳು ಸಾಮಾನ್ಯಕಿಂತ ಹೆಚ್ಚು ಚಿಡಿಚಿಡಿಯಾಗಿ ವರ್ತಿಸುವುದು ಅಥವಾ ಪದೇಪದೇ ಅಳುವುದು ಸಾಮಾನ್ಯ.

ಕೆಲ ಮಕ್ಕಳು ಅಡುಗೆ ಮನೆಯ ಕಡೆ ಹೋಗುವುದು, ಆಹಾರದ ಡಬ್ಬಿ ಅಥವಾ ಚಮಚವನ್ನು ನೋಡಿದಾಗ ಉತ್ಸಾಹ ತೋರಿಸುವುದು ಕೂಡ ಹಸುವಿನ ಪ್ರಮುಖ ಸೂಚನೆಗಳಾಗಿವೆ. ಜೊತೆಗೆ ಆಟದಲ್ಲಿ ಆಸಕ್ತಿ ಕಡಿಮೆಯಾಗುವುದು, ದಣಿವು ಕಾಣಿಸಿಕೊಳ್ಳುವುದು ಅಥವಾ ಗಮನ ಕೇಂದ್ರೀಕರಿಸಲು ಕಷ್ಟಪಡುವುದು ಕೂಡ ಹಸಿವಿನ ಲಕ್ಷಣಗಳಾಗಿರಬಹುದು.

ಮಕ್ಕಳಿಗೆ ಸಮಯಕ್ಕೆ ಆಹಾರ ನೀಡುವುದು ಏಕೆ ಮುಖ್ಯ?

ತಜ್ಞರ ಪ್ರಕಾರ, ಮಕ್ಕಳಿಗೆ ಸರಿಯಾದ ಸಮಯಕ್ಕೆ ಆಹಾರ ನೀಡುವುದರಿಂದ ದೇಹಕ್ಕೆ ಅಗತ್ಯವಾದ ಪ್ರೋಟೀನ್, ವಿಟಮಿನ್ ಮತ್ತು ಇತರ ಪೋಷಕಾಂಶಗಳು ಸರಿಯಾದ ದೊರೆಯುತ್ತವೆ. ಇದು ಅವರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಹಕಾರಿ ಯಾಗುತ್ತದೆ.

ಸಮಯಕ್ಕೆ ಸರಿಯಾಗಿ ಊಟ ಮಾಡುವ ಅಭ್ಯಾಸದಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗಿ, ಅವರ ದಿನಪೂರ್ತಿ ಚುರುಕಾಗಿ ಮತ್ತು ಸಕ್ರಿಯವಾಗಿರುತ್ತಾರೆ. ನಿಯಮಿತ ಆಹಾರ ಸೇವನೆಯಿಂದ ತೂಕ ಮತ್ತು ಎತ್ತರ ಸಮತೋಲನವಾಗಿ ಬೆಳೆಯಲು ಸಹಾಯವಾಗುತ್ತದೆ. ಜೊತೆಗೆ ಪೌಷ್ಟಿಕಾಂಶ ಕೊರತೆಯ ಅಪಾಯವು ಕಡಿಮೆಯಾಗುತ್ತದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ಯಾವಾಗ ವೈದ್ಯರನ್ನು ಸಂಪರ್ಕಿಸಬೇಕು?

ಮಗು ದೀರ್ಘಕಾಳ ಆಹಾರ ಸೇವಿಸಲು ನಿರಾಕರಿಸಿದರೆ, ತೂಕ ಸರಿಯಾಗಿ ಹೆಚ್ಚಾಗದಿದ್ದರೆ ಅಥವಾ ವಯಸ್ಸಿಗೆ ತಕ್ಕ ಬೆಳವಣಿಗೆ ಕಾಣಿಸದಿದ್ದರೆ ವೈದ್ಯರ ಸಲಹೆ ಪಡೆಯುವುದು ಅಗತ್ಯ ಎಂದು ತಜ್ಞರು ತಿಳಿಸಿದ್ದಾರೆ.

ಪದೇ ಪದೇ ವಾಂತಿ, ಊಟದ ನಂತರ ಹೊಟ್ಟೆ ನೋವು ಅಥವಾ ನಿರಂತರ ದೌರ್ಬಲ್ಯ ಕಾಣಿಸಿಕೊಂಡರು ವೈದ್ಯಕೀಯ ಪರೀಕ್ಷೆ ಮಾಡಿಸಬೇಕು. ಮಕ್ಕಳ ಆಹಾರ ಪದ್ಧತಿ ಮತ್ತು ಆರೋಗ್ಯದಲ್ಲಿ ಆಗುವ ಬದಲಾವಣೆಗಳನ್ನು ಪೋಷಕರು ಸಮಯಕ್ಕೆ ಗಮನಿಸಿದರೆ. ಪೌಷ್ಟಿಕಾಂಶ ಸಂಬಂಧಿತ ಸಮಸ್ಯೆಗಳನ್ನು ಆರಂಭದಲ್ಲೇ ಗುರುತಿಸಿ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

Also Read:

ರಾಜ್ಯದ ಈ ಭಾಗಗಳಲ್ಲಿ 4 ದಿನ ಬಾರಿ ಮಳೆ ಸಾಧ್ಯತೆ : ಜನರಿಗೆ ಹವಾಮಾನ ಇಲಾಖೆ ಎಚ್ಚರಿಕೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online