Belagavi News:
ಅಡುಗೆ ಮನೆಯ ಪ್ರಮುಖ ಸಾಧನವಾದ ಮಿಕ್ಸರ್ ಗ್ರೈಂಡರ್ ದೀರ್ಘಕಾಲ ಬಾಳಿಕೆ ಬರಬೇಕಾದರೆ ಕೆಲವು ಪದಾರ್ಥಗಳನ್ನು ಇದರಲ್ಲಿ ರುಬ್ಬುವುದನ್ನು ತಪ್ಪಿಸುವುದು ಉತ್ತಮ. ಮಿಕ್ಸರ್ ಗ್ರೈಂಡರ್ ಅಡುಗೆ ಮನೆಯಲ್ಲಿ ಅತ್ಯಂತ ಅಗತ್ಯವಾದ ಉಪಕರಣಗಳಲ್ಲಿ ಒಂದಾಗಿದೆ. ಚಟ್ನಿ ತಯಾರಿಸುವುದು, ಮಸಾಲೆ ರುಬ್ಬುವುದು, ಜ್ಯೂಸ್ ಮಾಡುವುದು ಸೇರಿದಂತೆ ಹಲವು ಕೆಲಸಗಳನ್ನು ಕ್ಷಣಾರ್ಧದಲ್ಲಿ ಪೂರ್ಣಗೊಳಿಸಲು ಇದು ಸಹಕಾರಿಯಾಗಿದೆ. ಆದರೆ ಎಲ್ಲ ರೀತಿಯ ಪದಾರ್ಥಗಳನ್ನು ಮಿಕ್ಸಿಯಲ್ಲಿ ರುಬ್ಬುವುದು ಅದರ ಕಾರ್ಯ ಕ್ಷಮತೆ ಮತ್ತು ಬಾಳಿಕೆಗೆ ಹಾನಿ ಉಂಟು ಮಾಡಬಹುದು.
ಹೆಚ್ಚಿನವರು ಗಟ್ಟಿ ಮಸಾಲೆಗಳು, ಐಸ್ , ಬಿಸಿ ಬಿಸಿ ಹುರಿದ ಮಸಾಲೆಗಳು ಸೇರಿದಂತೆ ವಿವಿಧ ವಸ್ತುಗಳನ್ನು ನೇರವಾಗಿ ಮಿಕ್ಸಿಯಲ್ಲಿ ರುಬ್ಬುತ್ತಾರೆ. ಆದರೆ ಇಂತಹ ಅಭ್ಯಾಸದಿಂದ ಮಿಕ್ಸಿಯ ಮೋಟಾರ್ ಮೇಲೆ ಹೆಚ್ಚುವರಿ ಒತ್ತಡ ಉಂಟಾಗಬಹುದು. ಜೊತೆಗೆ ಜಾರ್ ಬ್ಲೇಡ್ ಗಳು ಬೇಗ ಸವೆದು ಕಾರ್ಯ ಕ್ಷಮತೆ ಕಡಿಮೆಯಾಗುವ ಸಾಧ್ಯತೆಯೂ ಇರುತ್ತದೆ.
ವಿಶೇಷವಾಗಿ ಅತಿಯಾದ ಗಟ್ಟಿಯಾದ ಅಥವಾ ತುಂಬಾ ಬಿಸಿಯಾದ ಪದಾರ್ಥಗಳನ್ನು ಮಿಕ್ಸರ್ ಗ್ರೈಂಡರ್ ನಲ್ಲಿ ರುಬ್ಬುವುದನ್ನು ತಪ್ಪಿಸುವುದು ಉತ್ತಮ. ಪದಾರ್ಥ ತಣ್ಣಗಾದ ನಂತರ ಅಥವಾ ಅಗತ್ಯವಿದ್ದರೆ ಸಣ್ಣ ತುಂಡುಗಳಾಗಿ ಕತ್ತರಿಸಿ ರುಬ್ಬುವುದರಿಂದ ಮಿಕ್ಸಿಯ ಆಯುಷ್ಯವನ್ನು ಹೆಚ್ಚಿಸಬಹುದು.
ಸರಿಯಾದ ರೀತಿಯಲ್ಲಿ ಮಿಕ್ಸಿಯನ್ನು ಬಳಸಿದರೆ ಅದರ ಕಾರ್ಯ ಕ್ಷಮತೆ ಉತ್ತಮವಾಗಿರುವುದರ ಜೊತೆಗೆ ದುಬಾರಿ ರಿಪೇರಿ ವೆಚ್ಚವನ್ನು ತಪ್ಪಿಸಬಹುದು. ಆದ್ದರಿಂದ ಯಾವ ಪದಾರ್ಥಗಳನ್ನು ಮಿಕ್ಸಿಯಲ್ಲಿ ರುಬ್ಬಬೇಕು ಮತ್ತು ಯಾವುದನ್ನು ರೂಪಬಾರದು ಎಂಬ ಮಾಹಿತಿ ತಿಳಿದುಕೊಂಡು ಬಳಸುವುದು ಉತ್ತಮ.
Mixer grinder Tips - ಈ 5 ವಸ್ತುಗಳನ್ನು ಮಿಕ್ಸಿಯಲ್ಲಿ ರುಬ್ಬಬೇಡಿ ; ಮೋಟಾರ್, ಬ್ಲೇಡ್ ಬೇಗ ಹಾಳಾಗಬಹುದು ! :
ಅಡುಗೆ ಮನೆಯಲ್ಲಿ ಮಿಕ್ಸರ್ ಗ್ರೈಂಡರ್ ಅತ್ಯಗತ್ಯ ಉಪಕರಣಗಳಾಗಿವೆ. ಮಸಾಲೆ ರುಬ್ಬುವುದು, ಚಟ್ನಿ ತಯಾರಿಸುವುದು, ಜ್ಯೂಸ್ ಮಾಡುವುದು ಕೆಲಸಗಳಿಗೆ ಮಿಕ್ಸಿಯನ್ನು ಬಳಸಲಾಗುತ್ತದೆ. ಆದರೆ ಕೆಲವು ಪದಾರ್ಥಗಳನ್ನು ತಪ್ಪಾದ ರೀತಿಯಲ್ಲಿ ಮಿಕ್ಸಿಯಲ್ಲಿ ರುಬ್ಬುವುದರಿಂದ ಜಾರ್ ನ ಬ್ಲೇಡ್, ಮೋಟಾರ್ ಹಾಗೂ ಯಂತ್ರದ ಕಾರ್ಯಕ್ರಮತೆ ಮೇಲೆ ಕೆಟ್ಟ ಪರಿಣಾಮ ಬೀಳಬಹುದು.
1. ಬಿಸಿ ಆಹಾರ ಪದಾರ್ಥಗಳು : ಹುರಿದ ಬಿಸಿ ಮಸಾಲೆಗಳು, ಬೇಯಿಸಿದ ತರಕಾರಿಗಳು ಅಥವಾ ಸೂಪ್ ಗಾಗಿ ಸಿದ್ಧಪಡಿಸಿದ ಬಿಸಿ ಪದಾರ್ಥಗಳನ್ನು ತಕ್ಷಣವೇ ಮಿಕ್ಸಿಯಲ್ಲಿ ರುಬ್ಬಬೇಡಿ. ಬಿಸಿ ಆಹಾರದಿಂದ ಜಾರ್ ಒಳಗೆ ಒತ್ತಡ ಹೆಚ್ಚಾಗಿ ಮುಚ್ಚಳ ಏಕಾಏಕಿ ತೆರೆಯುವ ಸಾಧ್ಯತೆ ಇರುತ್ತದೆ. ಜೊತೆಗೆ ಜಾರ್ ಹಾಗೂ ಮೋಟಾರ್ ಗೂ ಹಾನಿ ಆಗಬಹುದು. ಆದ್ದರಿಂದ ಪದಾರ್ಥಗಳು ಸಂಪೂರ್ಣ ತಣ್ಣಗಾದ ಬಳಿಕವೇ ರುಬ್ಬುವುದು ಉತ್ತಮ.
2. ಐಸ್ ಕ್ಯೂಬ್ ಗಳು : ಜ್ಯೂಸ್ ಅಥವಾ ಶೇಕ್ ತಯಾರಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ಐಸ್ ಕ್ಯೂಬ್ ಗಳನ್ನು ಸೇರಿಸಿ ರುಬ್ಬುವುದರಿಂದ ಬ್ಲೇಡ್ ಗಳ ಮೇಲೆ ಹಠಾತ್ ಒತ್ತಡ ಬೀಳಬಹುದು.
3. ಗಟ್ಟಿ ಮಸಾಲೆಗಳು : ಅರಿಶಿಣ ಕೊಂಬು, ಜಾಜಿ ಕಾಯಿ, ಡಾಲ್ಚಿನ್ನಿ, ಮುಂತಾದ ಗಟ್ಟಿ ಮಸಾಲೆಗಳನ್ನು ಒಂದೇ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಮಿಕ್ಸಿಯಲ್ಲಿ ರುಬ್ಬುವುದನ್ನು ತಪ್ಪಿಸಿ. ಇವುಗಳಿಂದ ಬ್ಲೇಡ್ಗಳು ಹಾನಿಗೊಳಗಾಗುವ ಜೊತೆಗೆ ಮೋಟಾರ್ಗು ಒತ್ತಡ ಉಂಟಾಗಬಹುದು.
4. ಚಪಾತಿ ಹಿಟ್ಟು : ಚಪಾತಿ ಹಿಟ್ಟನ್ನು ಮಿಕ್ಸಿಯಲ್ಲಿ ಕಲಸುವ ಅಭ್ಯಾಸ ಕೆಲವರಲ್ಲಿ ಇದೆ. ಆದರೆ ದಪ್ಪ ಇಟ್ಟು ಬ್ಲೇಡ್ ಗೆ ಅಂಟಿಕೊಂಡು ಯಂತ್ರದ ಕಾರ್ಯ ಕ್ಷಮತೆಯನ್ನು ಕುಗ್ಗಿಸಬಹುದು ಹಾಗೂ ಬ್ಲೇಡ್ ಗೆ ಹಾನಿ ಉಂಟಾಗಬಹುದು.
5.ಗಣಪಧಾರ್ಥಗಳು ಮತ್ತು ಧಾನ್ಯಗಳು : ಬಾದಾಮಿ, ಗೋಡಂಬಿ ಸೇರಿದಂತೆ ಒಣ ಹಣ್ಣುಗಳನ್ನು ನೀರಿಲ್ಲದೆ ದೊಡ್ಡ ಪ್ರಮಾಣದಲ್ಲಿ ರುಬ್ಬುವುದು, ಅಥವಾ ಅಕ್ಕಿ, ಗೋಧಿ, ರಾಗಿ ಮುಂತಾದ ಧಾನ್ಯಗಳನ್ನು ಒಂದೇ ಬಾರಿಗೆ ಹೆಚ್ಚು ಪ್ರಮಾಣದಲ್ಲಿ ಹಾಕುವುದು ಮೋಟಾರ್ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ. ಇದರಿಂದ ಮಿಕ್ಸರ್ ಗ್ರೈಂಡರ್ ಬೇಗನೇ ಹಾಳಾಗುವ ಸಾಧ್ಯತೆ ಇದೆ.
ಮಿಕ್ಸಿ ಬಳಸುವಾಗ ಈ ತಪ್ಪು ಮಾಡಬೇಡಿ :
ಮಿಕ್ಸರ್ ಜಾರ್ ಅನ್ನು ಅಗತ್ಯಕ್ಕಿಂತ ಹೆಚ್ಚು ತುಂಬಬೇಡಿ, ಜಾರ್ ಪವರ್ ಲೋಡ್ ಮಾಡಿದರೆ ಮಿಕ್ಸಿ ಯ ಕಾರ್ಯ ಕ್ಷಮತೆ ಕುಗ್ಗುವುದರ ಜೊತೆಗೆ ಮೋಟಾರ್ ಮತ್ತು ಬ್ಲೇಡ್ ಎರಡಕ್ಕೂ ಹಾನಿ ಆಗುವ ಸಾಧ್ಯತೆ ಹೆಚ್ಚಿರುತ್ತದೆ.