<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಜಮ್ಮು- ಕಾಶ್ಮೀರ : ಅಮರನಾಥ ಯಾತ್ರಿಕರ ಬಸ್ ಅಪಘಾತ, 39 ಮಂದಿಗೆ ಗಾಯ

ಜಮ್ಮು- ಕಾಶ್ಮೀರ : ಅಮರನಾಥ ಯಾತ್ರಿಕರ ಬಸ್ ಅಪಘಾತ, 39 ಮಂದಿಗೆ ಗಾಯ
Summary: At least 39 people were injured after a bus carrying Amarnath pilgrims lost control and fell into a ditch and hit a house in Kangan area of ​​Ganderbal district of Jammu and Kashmir.

belagavi news :

ಗುಂಡ್ ಪ್ರದೇಶದ ಹರಿಗನಿವಾಗ್ ಎಸ್ ಆಕಾರದ ತಿರುವಿನಲ್ಲಿ ಸಂಚರಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಬಸ್ ರಸ್ತೆಯಿಂದ ಸ್ಕಿಡ್ ಆಗಿ ಕಂದಕಕ್ಕೆ ಜಾರಿದೆ. ವೇಗದ ರಭಸಕ್ಕೆ ಬಸ್ ಕೆಳಭಾಗದಲ್ಲಿದ್ದ ಮನೆಯ ಮೇಲ್ಚಾವಣಿಗೆ ಅಪ್ಪಳಿಸಿ ಬಿದ್ದಿದ್ದು, ಮನೆ ಸಂಪೂರ್ಣ ಜಖಂಗೊಂಡಿದೆ.

ಅಪಘಾತದ ಬಳಿಕ ಸ್ಥಳೀಯರು, ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಹೊರತೆಗೆದು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಸ್ ಮನೆಯ ಮೇಲೆ ಬಿದ್ದಿದ್ದರಿಂದ ಅದು ಮತ್ತಷ್ಟು ಉರುಳಿ ಪಕ್ಕದಲ್ಲಿ ಹರಿಯುತ್ತಿರುವ ಸಿಂಧ್ ನದಿಗೆ ಬೀಳುವುದನ್ನು ತಪ್ಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆಗತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿಸಿದ್ದಾರೆ.

ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆಯೇ ಭದ್ರತಾ ಪಡೆಗಳು, ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬಸ್ ನ ಮುಂಭಾಗ ಸಂಪೂರ್ಣ ಹಾನಿಗೊಂಡಿದ್ದು, ಮನೆಯ ಮೇಲ್ವಿಚಾರಣೆಯ ಮೇಲೆ ಬಿದ್ದಿರುವ ದೃಶ್ಯಗಳು ಅಪಘಾತದ ತೀವ್ರತೆಯನ್ನು ಬಿಂಬಿಸಿವೆ.

ಖಾಸಗಿ ಮಾಧ್ಯಮವೊಂದರಲ್ಲಿ ಮಾತನಾಡಿದ ಕಂಗನ್ ಪ್ರದೇಶದ ಸ್ಥಳೀಯ ನಿವಾಸಿಯೊಬ್ಬರು, "ಬೆಳಗಿನ ಪಾರ್ಥನೆ ಮುಗಿಸಿ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಏಕಾಏಕಿ ಭಾರಿ ಶಬ್ದ ಕೇಳಿಸಿತು. ಕೂಡಲೇ ಸ್ಥಳಕ್ಕೆ ಧಾವಿಸಿದಾಗ ಅಮರನಾಥ ಯಾತ್ರಿಕರಿಂದ ಬಸ್ ಅಪಘಾತಕ್ಕೀಡಾಗಿರುವುದು ಕಂಡುಬಂತು. ನಾವು ಕೆಲವು ಯಾತ್ರಿಕರನ್ನು ಸುರಕ್ಷಿತವಾಗಿ ಹೊರತೆಗೆದು ಆಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗೆ ಕಳುಹಿಸಿದೆವು. ಬಳಿಕ ಭದ್ರತಾ ಪಡೆಗಳು ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದರು" ಎಂದು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ಬಸ್ ಕಂದಕದಿಂದ ನೇರವಾಗಿ ಮನೆಯ ಮೇಲೆ ಬಿದ್ದಿದ್ದರಿಂದ ಅದು ಮತ್ತಷ್ಟು ಹುರುಳಿ ಪಕ್ಕದಲ್ಲಿ ಹರಿಯುತ್ತಿರುವ ಸಿಂಧ್ ನದಿಗೆ ಬೀಳುವುದನ್ನು ತಪ್ಪಿಸಿದೆ. ಇದರಿಂದ ಸಂಭವಿಸಬಹುದಾಗಿದ್ದ ಬಾರಿ ಅನಾಹುತ ತಪ್ಪಿದೆ.

ಘಟನೆ ನಡೆದ ವೇಳೆ ಮನೆಯ ಮಾಲೀಕ ದಿನ್ ಮೊಹಮ್ಮದ್ ಗಳನ್ನು ಮೇಯಿಸಲು ಹೊರಗೆ ತೆರಳಿದ್ದ ಕಾರಣ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಮನೆಗೆ ಭಾರೀ ಹಾನಿಯಾಗಿದ್ದು, ಘಟನೆಯ ಕುರಿತು ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಅಪಘಾತ ನಡೆದ ಸ್ಥಳ ಅಪಘಾತಕಾರಿ ತಿರುವಾಗಿದ್ದು, ಈ ಹಿಂದೆ ಕೂಡ ಅದೇ ಪ್ರದೇಶದಲ್ಲಿ ಹಲವು ರಸ್ತೆ ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಪ್ರತಿಯೊಬ್ಬ ನಿವಾಸಿ ಮಾತನಾಡಿ, "ಇದು ತೀವ್ರ ತಿರುವು ಹೊಂದಿರುವ ರಸ್ತೆ ವಾಹನಗಳು ವೇಗವಾಗಿ ಬಂದಾಗ ನಿಯಂತ್ರಣ ತಪ್ಪುವ ಸಾಧ್ಯತೆ ಹೆಚ್ಚಿದ್ದು, ಈ ಭಾಗದಲ್ಲಿ ಈ ಹಿಂದೆಯೂ ಅನೇಕ ಅಪಘಾತಗಳು ನಡೆದಿವೆ" ಎಂದು ಹೇಳಿದರು.

ಅಪಘಾತದ ಮಾಹಿತಿ ದೊರೆಯುತ್ತಿದ್ದಂತೆ ಗುಂಡ್ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಎಸ್‌ಎಚ್‌ಒ ರಯೀಸ್‌ ಅಹ್ಮದ್ ನೇತೃತ್ವದ ಪೊಲೀಸ್ ತಂಡದೊಂದಿಗೆ ಇಂಡೋ ಟೆಬಿಟನ್ ಬಾರ್ಡರ್ ಪೊಲೀಸ್, ಸಿಆರ್‌ಪಿಎಫ್‌ನ 118ನೇ ಬೆಟಾಲಿಯನ್, ಎರಡು ಅಸ್ಸಾಂ ರೈಫಲ್ಸ್, 21 ರಾಷ್ಟ್ರೀಯ ರೈಫಲ್ಸ್ ಯಾತ್ರಾ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯರು ಜಂಟಿಯಾಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

ರಕ್ಷಣಾ ಸಿಬ್ಬಂದಿ ಬಸ್ ನಲ್ಲಿ ಸಿಲುಕಿದ್ದ ಎಲ್ಲಾ ಯಾತ್ರಾರ್ಥಿಗಳನ್ನು ಸುರಕ್ಷಿತವಾಗಿ ಹೊರತೆಗೆದು ಆಂಬುಲೆನ್ಸ್ ಗಳ ಮೂಲಕ ಸಮೀಪದ ಆಸ್ಪತ್ರೆಗೆ ರವಾನಿಸಿದರು. ಗಾಯಗೊಂಡವರಲ್ಲಿ ಹೆಚ್ಚಿನವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಗತ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಗಳ ತ್ವರಿತ ಸ್ಪಂದನೆ ಮತ್ತು ಸ್ಥಳೀಯರ ಸಹಾಯ ಸಹಾಯದಿಂದ ರಕ್ಷಣಾ ಕಾರ್ಯಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ.

Also Read:

ಬೆಳಗಾವಿ ಕಾಂಗ್ರೆಸ್ ನಲ್ಲಿ ಭಿನ್ನಮತ ಸ್ಫೋಟ ? ಅಧ್ಯಕ್ಷರ ಆಯ್ಕೆ ವೇಳೆ ಕಾರ್ಯಕರ್ತರ ನಡುವೆ ಗಲಾಟೆ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online