<?= $pageTitle ?>
Logo
ಮುಖಪುಟ ಓದುವುದು ಕೇಳು
Corporate

ಭಾರತೀಯ ವಾಯುಪಡೆಯಲ್ಲಿ ಉದ್ಯೋಗಾವಕಾಶ: Agniveervayu Recruitment 2026ಗೆ ಅರ್ಜಿ ಆಹ್ವಾನ

ಭಾರತೀಯ ವಾಯುಪಡೆಯಲ್ಲಿ ಉದ್ಯೋಗಾವಕಾಶ: Agniveervayu Recruitment 2026ಗೆ ಅರ್ಜಿ ಆಹ್ವಾನ
Summary: The Indian Air Force has released the Agniveervayu Recruitment 2026 notification, inviting applications from 12th pass candidates. Know the complete details of the recruitment including eligibility, age limit, selection process, salary and how to apply here.

belagavi news:

Agniveervayu Recruitment 2026: ಭಾರತೀಯ ವಾಯುಪಡೆಯಲ್ಲಿ ನೇಮಕಾತಿ, ಜುಲೈ 26ರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಭಾರತೀಯ ವಾಯುಪಡೆ (Indian Air force) Agniveervayu Recruitment 2026 ಅದೇ ಸೂಚನೆಯನ್ನು ಪ್ರಕಟಿಸಿದ್ದು, ದೇಶಸೇವೆ ಮಾಡಲು ಆಸಕ್ತಿ ಹೊಂದಿರುವ ಅವಿವಾಹಿತ ಯುವಕ- ಯುವತಿಯರಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಹ ಅಭ್ಯರ್ಥಿಗಳು ಜುಲೈ 6ರಿಂದ ಜುಲೈ 26, 2026ರ ವರೆಗೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ನೇಮಕಾತಿಗೆ ಸಂಬಂಧಿಸಿದ ಆನ್ಲೈನ್ ಪರೀಕ್ಷೆಯು ಸೆಪ್ಟೆಂಬರ್ 22 ಮತ್ತು 23, 2026 ರಂದು ನಡೆಯಲಿದೆ.

ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಶೈಕ್ಷಣಿಕ ಅರ್ಹತೆ, ವಯೋಮಿತಿ, ಆಯ್ಕೆ ಪ್ರಕ್ರಿಯೆ, ಅರ್ಜಿ ಶುಲ್ಕ, ವೈದ್ಯಕೀಯ ಮಾನದಂಡಗಳು ಹಾಗೂ ಇತರ ನಿಯಮಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸುವುದು ಅಗತ್ಯ. ಅರ್ಹತೆ ಪೂರೈಸುವ ಯುವಕರಿಗೆ ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಇದು ಉತ್ತಮ ಅವಕಾಶವಾಗಿದೆ.

ದೇಶಸೇವೆಯ ಕನಸು ಹೊಂದಿರುವ ಯುವಕ- ಯುವತಿಯರಿಗೆ ಭಾರತೀಯ ವಾಯುಪಡೆ ( Indian Air force) ಸಿಹಿಸುದ್ದಿ ನೀಡಿದೆ. ಅಗ್ನಿವೀರವಾಯು (Agniveervayu) ನೇಮಕಾತಿ 2026ಕ್ಕೆ ಸಂಬಂಧಿಸಿದ ಅಧಿಕೃತ ಅಧಿಸೂಚನೆ ಪ್ರಕಟವಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತಿ ಅಭ್ಯರ್ಥಿಗಳು ಜುಲೈ 6ರ ಬೆಳಿಗ್ಗೆ 11 ಗಂಟೆಯಿಂದ ಜುಲೈ 26ರ ರಾತ್ರಿ 11 ಗಂಟೆಯವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಅಧಿಕೃತ ನೇಮಕಾತಿ ವೆಬ್ ಸೈಟ್ ಗೆ ಭೇಟಿ ನೀಡಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಅಗ್ನಿವೀರವಾಯು ನೇಮಕಾತಿಯು ಆನ್ಲೈನ್ ಪರೀಕ್ಷೆಯು 2026ರ ಸೆಪ್ಟೆಂಬರ್ 22 ಮತ್ತು 23ರಂದು ನಡೆಯಲಿದೆ. ಅಧಿಸೂಚನೆಯ ಪ್ರಕಾರ, 2005ರ 1 ರಿಂದ 2010ರ ಜನವರಿ 1ರ ನಡುವೆ ಜನಿಸಿದ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ಶೈಕ್ಷಣಿಕ ಅರ್ಹತೆ, ವಯೋಮಿತಿ, ದೈಹಿಕ ಸಾಮರ್ಥ್ಯ, ವೈದ್ಯಕೀಯ ಮಾನದಂಡಗಳು ಹಾಗೂ

ಆಯ್ಕೆ ಪ್ರಕ್ರಿಯೆ ಕುರಿತ ಸಂಪೂರ್ಣ ಮಾಹಿತಿಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.

ಈ ನೇಮಕಾತಿಗೆ ಅರ್ಜಿ ಶುಲ್ಕವಾಗಿ ₹ 550 ಹಾಗೂ ಜಿ ಎಸ್ ಟಿ ನಿಗದಿಪಡಿಸಲಾಗಿದೆ. ಭಾರತೀಯ ವಾಯುಪಡೆಯಲಿ ಸೇವೆ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ.

ಪ್ರಮುಖ ದಿನಾಂಕಗಳು:

ಅರ್ಜಿ ಆರಂಭ: 06 ಜುಲೈ 2026 ( ಬೆಳಿಗ್ಗೆ 11:00)

ಅರ್ಜಿ ಸಲ್ಲಿಸಲು ಕೊನೆಯ ದಿನ: 26 ಜುಲೈ 2026 ( ರಾತ್ರಿ 11:00)

ಆನ್ಲೈನ್ ಪರೀಕ್ಷೆ: 22 ಮತ್ತು 23 ಸೆಪ್ಟೆಂಬರ್ 2026

ಅಧಿಕೃತ ವೆಬ್ ಸೈಟ್: iafrecruitment.edcil.co.in

ಭಾರತೀಯ ವಾಯುಪಡೆಯಲ್ಲಿ ಸೇವೆ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೆ, ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online