Belagavi News:
ಮಲಯಾಳಂ ನಲ್ಲಿ ಯಶಸ್ವಿಯಾದ "ದೃಶ್ಯಂ" ಸರಣಿ ಇದೀಗ ಹಿಂದಿಗೂ ರಿಮೇಕ್ ಆಗಿದ್ದು, ಮೂರನೇ ಭಾಗ "ದೃಶ್ಯಂ 3" ಗೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಈ ಸುದ್ದಿ ಕನ್ನಡ ಚಿತ್ರರಂಗಕ್ಕೂ ಹೆಮ್ಮೆಯ ವಿಷಯವಾಗಿದ್ದು, ಅವರ ವೃತ್ತಿ ಜೀವನದಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಾಗಿ ಪರಿಗಣಿಸಲಾಗಿದೆ.
ಈಗಾಗಲೇ "ದೃಶ್ಯಂ" ಸರಣಿಯ ಎರಡು ಭಾಗಗಳು ಹಿಂದಿಯಲ್ಲಿ ಯಶಸ್ವಿಯಾಗಿ ಬಿಡುಗಡೆಯಾಗಿದ್ದು, ಮೂರನೇ ಭಾಗದ ಶೂಟಿಂಗ್ ಪೂರ್ಣಗೊಂಡಿದೆ. ಈ ಚಿತ್ರವು ಅಕ್ಟೋಬರ್ 2ರಂದು ತೆರೆಗೆ ಬರಲು ಸಜ್ಜಾಗಿದೆ. ಮೂಲ ಮಲಯಾಳಂ ಆವೃತ್ತಿ ಗಿಂತ ವಿಭಿನ್ನವಾಗಿ ಈ ಬಾರಿ ಚಿತ್ರವನ್ನು ಫ್ಯಾಮಿಲಿ ಥ್ರಿಲ್ಲರ್ ಶೈಲಿಯಲ್ಲಿ ಪ್ರಸ್ತುತಪಡಿಸಲಾಗುತ್ತಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಕೆಜಿಎಫ್ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ರವಿ ಬಸ್ರೂರು ಇದೀಗ ಬಾಲಿವುಡ್ ನ ಮತ್ತೊಂದು ದೊಡ್ಡ ಪ್ರಾಜೆಕ್ಟ್ ಗೆ ಸಂಗೀತ ನೀಡುತ್ತಿರುವುದು ಚಿತ್ರರಂಗದಲ್ಲಿ ಹೆಚ್ಚಿನ ಕುತೂಹಲ ಹುಟ್ಟಿಸಿದೆ.
ದೃಶ್ಯಂ ಸರಣಿಯ ಹಿಂದಿನ ಎರಡು ಭಾಗಗಳಿಗೆ ವಿಭಿನ್ನ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ, ಈಗ ಮೂರನೇ ಭಾಗ "ದೃಶ್ಯಂ 3"ಗೆ ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಮೊದಲ ಭಾಗಕ್ಕೆ ವಿಶಾಲ್ ಭಾರದ್ವಾಜ್ ಮತ್ತು ಎರಡನೇ ಭಾಗಕ್ಕೆ ದೇವಿ ಶ್ರೀಪ್ರಸಾದ್ ಸಂಗೀತ ನೀಡಿದ್ದರೆ, ಈ ಬಾರಿ ನಿರ್ಮಾಪಕರು ರವಿ ಬಸ್ರೂರು ಅವರಿಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ.
ಅಜಯ್ ದೇವಗನ್ ಅವರೊಂದಿಗೆ ಈಗಾಗಲೇ "ಬೋಲಾ" ಮತ್ತು "ಸಿಂಗಂ ಅಗೇನ್" ಚಿತ್ರಗಳಲ್ಲಿ ಕೆಲಸ ಮಾಡಿರುವ ರವಿ ಬಸ್ರೂರು ಇದೀಗ 'ದೃಶ್ಯಂ 3' ಗೆ ಟ್ಯೂನ್ ಹಾಕುತ್ತಿರುವುದು ಅವರ ವೃತ್ತಿ ಜೀವನದ ಮತ್ತೊಂದು ಪ್ರಮುಖ ಮೈಲಿಗಲ್ಲಾಗಿದೆ. ಅಕ್ಟೋಬರ್ ಎರಡರಂದು ಬಿಡುಗಡೆಗೆ ಸಜ್ಜಾಗಿರುವ ಈ ಚಿತ್ರಕ್ಕೆ ಫ್ಯಾಮಿಲಿ ಥ್ರಿಲ್ಲರ್ ಶೈಲಿಯಲ್ಲಿ ವಿಭಿನ್ನ ಪ್ರಸ್ತುತಿ ನೀಡಲಾಗಿದೆ.
ಕರಾವಳಿಯ ಸಣ್ಣ ಹಳ್ಳಿಯಿಂದ ಆರಂಭವಾದ ರವಿ ಬಸ್ರೂರು ಅವರ ಪಯಣ ಇಂದು ಭಾರತೀಯ ಚಿತ್ರರಂಗವನ್ನು ತಲುಪಿದೆ. 'ಉಗ್ರಂ' ಚಿತ್ರದ ಮೂಲಕ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡವರು, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಪ್ರಾಂಚೈಸಿ ಮೂಲಕ ದೇಶಾದ್ಯಂತ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬಾರಿ ಸಂಚಲನ ಸೃಷ್ಟಿಸಿದರು. ಅವರ ಬಿಜಿಎಂ ಈಗ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿದೆ.
ಇದೀಗ ರವಿ ಬಸ್ರೂರು ಭಾರತೀಯ ಚಿತ್ರರಂಗದ ಮೋಸ್ಟ ವಾಂಟೆಡ್ ಸಂಗೀತ ನಿರ್ದೇಶಕರಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ಹಿಂದಿ "ದೃಶ್ಯಂ 3" ನಲ್ಲಿ ದೊಡ್ಡ ಬದಲಾವಣೆ : ಮಲಯಾಳಂ ಕಥೆಗಿಂತ ವಿಭಿನ್ನ ಟ್ವಿಸ್ಟ್ ಗಳೊಂದಿಗೆ ಅಜಯ್ ದೇವಗನ್ ಸಿನಿಮಾ:
'ದೃಶ್ಯಂ3' ಹಿಂದಿ ಆವೃತ್ತಿಯ ಮೂಲಕ ಮಲಯಾಳಂ ಸಿನಿಮಾ ಗಿಂತ ಭಿನ್ನವಾಗಿರಲಿದೆ. ಅಜಯ್ ದೇವಗನ್ ನಟನೆಯ ಚಿತ್ರದಲ್ಲಿ ಹೊಸ ಟ್ವಿಸ್ಟ್ ಗಳು ಮತ್ತು ಫ್ಯಾಮಿಲಿ ತ್ರಿಲ್ಲರ್ ಅಂಶಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.
ಬಹುನಿರೀಕ್ಷಿತ ದೃಶ್ಯಂ3 ಚಿತ್ರದ ಹಿಂದಿ ಆವೃತ್ತಿ ಈ ಬಾರಿ ಮೂಲ ಮಲಯಾಳಂ ಸಿನಿಮಾದಿಂದ ಸಾಕಷ್ಟು ಭಿನ್ನವಾಗಿರಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮೊದಲ ಎರಡು ಭಾಗಗಳಲ್ಲಿ ಮೂಲಕತೆಯನ್ನು ಬಹುತೇಕ ಹಾಗೆಯೇ ಅನುಸರಿಸಲಾಗಿದ್ದರು, ಮೂರನೇ ಭಾಗದಲ್ಲಿ ಹಿಂದಿ ಪ್ರೇಕ್ಷಕರ ಅಭಿರುಚಿಗೆ ಅನುಗುಣವಾಗಿ ಕಥೆ ಹಾಗೂ ಪ್ರಮುಖ ಟ್ವಿಸ್ಟ್ಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ ಎನ್ನಲಾಗಿದೆ.
ಮೂಲ ಮಲಯಾಳಂ ದೃಶ್ಯಂ ಸರಣಿಯಲ್ಲಿ ಕುಟುಂಬದ ಭಾವನಾತ್ಮಕ ಸಂಘರ್ಷಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಆದರೆ ಹಿಂದಿ ಆವೃತ್ತಿಯ ಈ ದೃಶ್ಯಂ3 ಕೇವಲ ರಿಮೇಕ್ ಆಗಿರದೆ, ಸ್ವತಂತ್ರ ಅನುಭವ ನೀಡುವಂತಿರಲಿದೆ. ಕುಟುಂಬದ ಕಥೆಯ ಜೊತೆಗೆ ಸಸ್ಪೆನ್ಸ್ ಮಿಸ್ಟರಿ ಮತ್ತು ಅನಿರೀಕ್ಷಿತ ತಿರುವುಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಅಜಯ್ ದೇವಗನ್ ಮತ್ತೊಂದು ವಿಜಯ್ ಸಾಲ್ಗಾಂಕರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರದ ಕಥೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬ ಕುತೂಹಲ ಈಗಾಗಲೇ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಮೊದಲ ಎರಡು ಭಾಗಗಳು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದರಿಂದ, ದೃಶ್ಯಂ3 ಮೇಲಿನ ನಿರೀಕ್ಷೆಯು ಹೆಚ್ಚಾಗಿದೆ.
ಮಲಯಾಳಂ ಆವೃತ್ತಿಯ ಭಾವನಾತ್ಮಕ ಶೈಲಿಗೆ ಬದಲಾಗಿ, ಹಿಂದಿ ದೃಶ್ಯಂ 3 ಪಕ್ಕ ಫ್ಯಾಮಿಲಿ ಥ್ರಿಲ್ಲರ್ ಆಗಿ ಹೊರಬರಲಿದೆ. ಹೊಸ ಕಥ ತಿರುಗುಗಳು ಪ್ರೇಕ್ಷಕರಿಗೆ ವಿಭಿನ್ನ ಅನುಭವ ನೀಡಲಿವೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.
Also Read:
"ರಷ್ಯಾ-ಉಕ್ರೇನ್ ಸಂಘರ್ಷ ಅಂತ್ಯಕ್ಕೆ ಹೊಸ ಪ್ರಯತ್ನ: ಪುಟಿನ್ ಗೆ ನೇರ ಮಾತುಕತೆ ಪ್ರಸ್ತಾಪಿಸಿದ ಝೆಲೆನ್ಸ್ಕಿ !"