<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಕರ್ನಾಟಕದಲ್ಲಿ ಕೈಗಾರಿಕಾ ಕ್ರಾಂತಿಗೆ ವೇಗ : ಸೆಮಿಕಂಡಕ್ಟರ್ ಏಳು ಯೋಜನೆಗಳಿಗೆ ಅನುಮತಿ

ಕರ್ನಾಟಕದಲ್ಲಿ ಕೈಗಾರಿಕಾ ಕ್ರಾಂತಿಗೆ ವೇಗ : ಸೆಮಿಕಂಡಕ್ಟರ್ ಏಳು ಯೋಜನೆಗಳಿಗೆ ಅನುಮತಿ
Summary: The government has approved seven major industrial projects including semiconductors, infrastructure, and mobile phone manufacturing. These projects are expected to provide a new boost to investment and job creation.

Belagavi News :

ದೇಶದತ್ತ ಯಾರಿಕಾ ವಲಯ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಮತ್ತಷ್ಟು ತೇಜನ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಹಾಗೂ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಒಟ್ಟು ₹ 2,19,353 ಕೋಟಿ ವೆಚ್ಚದ ಏಳು ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಈ ಯೋಜನೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸೆಮಿ ಕಂಡಕ್ಟರ್ ಮಿಷನ್, ರೈಲ್ವೆ ಯೋಜನೆಗಳು, ಕೃಷಿ ಹಾಗೂ ತಯಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಮಹತ್ವದ ಕಾರ್ಯಕ್ರಮಗಳು ಸೇರಿವೆ.

ಭಾರತದ ಮೊಬೈಲ್ ಫೋನ್ ಉತ್ಪಾದನೆಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಎರಡನೇ ಆವೃತ್ತಿಯ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ ಜಾರಿಗೆ ತರಲು ಅನುಮೋದನೆ ನೀಡಲಾಗಿದೆ. ಇದರಿಂದ ದೇಶಿಯ ಉತ್ಪಾದನೆ ಹೆಚ್ಚಳ, ಹೂಡಿಕೆ ಉತ್ತೇಜನ ಹಾಗೂ ಉದ್ಯೋಗ ಸೃಷ್ಟಿಗೆ ನೆರವಾಗುವ ನಿರೀಕ್ಷೆ ಇದೆ.

ಕೇಂದ್ರ ಸರ್ಕಾರದ ಈ ನಿರ್ಧಾರಗಳು ಭಾರತದವನ್ನು ಜಾಗತಿಕ ತಯಾರಿಕಾ ಕೇಂದ್ರವನ್ನಾಗಿ ರೂಪಿಸುವ ಗುರಿಗೆ ಪೂರಕವಾಗಲಿವೆ. ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಸ್ವಾವಲಂಬನೆ, ರೈಲ್ವೆ ಮೂಲಸೌಕರ್ಯ ವಿಸ್ತರಣೆ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ಈ ಯೋಜನೆಗಳು ಪ್ರಮುಖ ಪಾತ್ರ ವಹಿಸಲಿವೆ.

ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದ ಏಳು ಯೋಜನೆಗಳು ದೇಶದ ಆರ್ಥಿಕ ಬೆಳವಣಿಗೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಮೂಲಸೌಕರ್ಯ ಬಲವರ್ಧನೆಗೆ ಮಹತ್ವದ ಹೆಜ್ಜೆ ಎಂದು ಸರ್ಕಾರ ತಿಳಿಸಿದೆ.

ಕೇಂದ್ರದ ₹ 2.19 ಲಕ್ಷ ಕೋಟಿ ಮೆಗಾ ಪ್ಯಾಕೇಜ್ - ವಾರಣಾಸಿ ಕಾರಿಡಾರ್ ನಿಂದ ಸೆಮಿಕಾನ್ 2.0 ವರೆಗೆ 7 ಮಹತ್ವದ ಯೋಜನೆಗಳಿಗೆ ಅನುಮೋದನೆ :

ದೆಹಲಿ ಮೂಲ ಸೌಕರ್ಯ, ತಂತ್ರಜ್ಞಾನ, ತಯಾರಿಕಾ ಹಾಗೂ ರೈಲ್ವೆ ಕ್ಷೇತ್ರಗಳಲ್ಲಿ ಹೊಸ ವೇಗ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ₹ 2.19 ಲಕ್ಷ ಕೋಟಿಗು ಹೆಚ್ಚು ಮೊತ್ತದ ಏಳು ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಮತ್ತು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

1. ವಾರಣಾಸಿಯಲ್ಲಿ ಎರಡು ಬೃಹತ್ ಮೂಲಸೌಕರ್ಯ ಯೋಜನೆ :

ಸಂಕ್ರಾಂತಿ ಉತ್ತರ ಪ್ರದೇಶದ ವಾರಣಾಸಿ ನಗರದ ಸಂಚಾರದಟ್ಟನೆ ಕಡಿಮೆ ಮಾಡಲು ಹಾಗೂ ಸಂಪರ್ಕ ವ್ಯವಸ್ಥೆ ಸುಧಾರಿಸಲು ಎರಡು ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

NH - 19 ರಿಂದ ವಾರಣಾಸಿ ರಿಂಗ್ ರೋಡ್ ಸಂಪರ್ಕಿಸುವ ಲಿಂಕ್ ಕಾರಿಡಾರ್ ನಿರ್ಮಾಣವಾಗಲಿದ್ದು, ಇದು 46.039 ಕಿಲೋಮೀಟರ್ ಉದ್ದ ಇರಲಿದೆ. ಸುಮಾರು ₹ 14,447.64 ಕೋಟಿ ವೆಚ್ಚದ ಈ ಯೋಜನೆಯಲ್ಲಿ 6 - ಲೇನ್ ಎಲಿವೇಟೆಡ್ ಕಾರಿಡಾರ್ ಅನುಮೋದನೆ ನೀಡಲಾಗಿದ್ದು, ಇದಕ್ಕೆ ಸುಮಾರು ₹ 10,998. 32 ಕೋಟಿ ವೆಚ್ಚವಾಗಲಿದೆ.

2. ಸೆಮಿಕಾನ್ 2.0 ಮಿಷನ್ ಗೆ ₹ 1.27 ಲಕ್ಷ ಕೋಟಿ :

ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ತಯಾರಿಕಾ ಕೇಂದ್ರವನ್ನಾಗಿ ರೂಪಿಸುವ ಗುರಿಯೊಂದಿಗೆ 'ಸೆಮಿಕಾನ್ 2.0 ಮಿಷನ್' ಯೋಜನೆಗೆ ಭಾರಿ ಮೊತ್ತದ ಅನುಮೋದನೆ ನೀಡಲಾಗಿದೆ.

ಈ ಯೋಜನೆಗೆ ಸುಮಾರು ₹ 1.27 ಲಕ್ಷ ಕೋಟಿ ಹೂಡಿಕೆ ಮಾಡಲಾಗುತ್ತಿದ್ದು, ಹೈಟೆಕ್ ತಂತ್ರಜ್ಞಾನ ಅಭಿವೃದ್ಧಿ, ಚಿಪ್ ಉತ್ಪಾದನೆ ಹಾಗೂ ಉದ್ಯೋಗ ಸೃಷ್ಟಿಗೆ ಇದು ನೆರವಾಗಲಿದೆ.

3. ಮೊಬೈಲ್ ಉತ್ಪಾದನೆಗೆ PLI 2.0 ಯೋಜನೆ :

ದೇಶಿಯ ಮೊಬೈಲ್ ಫೋನ್ ಉತ್ಪಾದನೆಗೆ ಉತ್ತೇಜನ ನೀಡಲು ಮೊಬೈಲ್ ಉತ್ಪಾದನಾ ಪ್ರೋತ್ಸಾಹಕ ಯೋಜನೆ ಎರಡನೇ ಆವೃತ್ತಿಗೆ ಅನುಮೋದನೆ ನೀಡಲಾಗಿದೆ.

ಈ ಯೋಜನೆಗೆ ₹ 62,500 ಕೋಟಿ ಅನುದಾನ ಮೀಸಲಿಡಲಾಗಿದ್ದು, ಭಾರತವನ್ನು ಜಾಗತಿಕ ಮೊಬೈಲ್ ಉತ್ಪಾದನಾ ಕೇಂದ್ರವನ್ನಾಗಿ ಬೆಳೆಸುವ ಗುರಿ ಹೊಂದಲಾಗಿದೆ.

4. ಯೂರಿಯಾ ಉತ್ಪಾದನೆಯಲ್ಲಿ ಸ್ವಾವಲಂಬನೆಗೆ ಹೊಸ ನೀತಿ :

ರಸ ಗೊಬ್ಬರ ಕ್ಷೇತ್ರದಲ್ಲಿ ಆತ್ಮ ನಿರ್ಭರತೆ ಸಾಧಿಸಲು ಯೂರಿಯಾ ರಾಷ್ಟ್ರೀಯ ಹೂಡಿಕೆ ನೀತಿ 2026 ಜಾರಿಗೆ ತರಲಾಗುತ್ತಿದೆ.

ಇದರಲ್ಲಿ ದೇಶದಲ್ಲಿ ಒಂಬತ್ತು ಹೊಸ ಯುರಿಯಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಾಗಿದ್ದು, ಹೆಚ್ಚುವರಿ ಯಾಗಿ ಸುಮಾರು ಒಂದು ಕೋಟಿ ಟನ್ ಯೂರಿಯಾ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ. ಇದರಿಂದ ಯೂರಿಯಾ ಆಮದು ಅವಲಂಬನೆ ಕಡಿಮೆಯಾಗಲಿದೆ.

5. ರೈಲ್ವೆ ಜಾಲ ವಿಸ್ತರಣೆ ಮತ್ತು ನಾಲ್ಕನೇ ರೈಲ್ವೆ ಹಳ್ಳಿ :

ದೇಶದ ರೈಲ್ವೆ ಸಂಪರ್ಕವನ್ನು ಬಲಪಡಿಸುವ ಹಳಿಗಳ ದ್ವಿಗುಣಗೊಳಿಸುವಿಕೆ, ಜಾಲನವೀಕರಣ ಹಾಗೂ ಪ್ರಮುಖ ಮಾರ್ಗಗಳಲ್ಲಿ ನಾಲ್ಕನೇ ರೈಲು ಹಳಿ ನಿರ್ಮಾಣ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಈ ಎಲ್ಲ ಯೋಜನೆಗಳು ದೇಶದ ಆರ್ಥಿಕ ಬೆಳವಣಿಗೆಗೆ ವೇಗ ನೀಡುವುದರ ಜೊತೆಗೆ ಲಕ್ಷಾಂತರ ನೀಲಾ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆ ಇದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online