Belagavi news:
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ಬೇಲ್. 'ಗೋವಿಂದಾಯ ನಮಃ', 'ಗೂಗ್ಲಿ',' ರಣವಿಕ್ರಮ',' ನಟಸಾರ್ವಭೌಮ' ಸೇರಿದಂತೆ ಹಲವು ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿರುವ ಪವನ್ ಒಡೆಯರ ಈ ಸಿನಿಮಾ ಕೇಕ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಮೂಲಕ ಶಿವಣ್ಣ ಜೊತೆ ಸಿನಿಮಾ ಮಾಡುವ ಬಹುಕಾಲದ ಕನಸು ನನಸಾಗಿದೆ.
ಡಾ. ರಾಜಕುಮಾರ್ ಜನ್ಮದಿನದ ಅಂಗವಾಗಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿತ್ತು. ಇದೀಗ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಶಿವರಾಜ್ ಕುಮಾರ್ ಅವರ ಮಾಸ್ ಹಾಗೂ ಡೇರ್ ಡೇವಿಲ್ ಅವತಾರ ಅಭಿಮಾನಿಗಳಿಗೆ ಗಮನ ಸೆಳೆದಿದೆ.
ಕತ್ತಲಿನಿಂದ ಕೂಡಿರುವ ಬೆಂಗಳೂರಿನಲ್ಲಿ ಪವರ್ ಕಟ್ ನಡುವಿನ ಸನ್ನಿವೇಶದಲ್ಲಿ ಸಾಗುವ ಟೀಸರ್ ನಲ್ಲಿ, ಶ್ವಾನಕ್ಕೆ ಬಿಸ್ಕತ್ ಹಾಕುವ ರಾಬರ್ಟ್ ಎಂಬ ಪಾತ್ರ ವಿಜಿ ಅಲಿಯಾಸ್ ಶಿವರಾಜ್ ಕುಮಾರ್ ಅವರ ಕೆಲಸದ ಬಗ್ಗೆ ಮಾತನಾಡುವ ದೃಶ್ಯ ಕುತೂಹಲ ಮೂಡಿಸಿದೆ. ಟೀಸರ್ ಅಂತ್ಯದಲ್ಲಿ ಕರುನಾಡ ಚಕ್ರವರ್ತಿಯ ಸ್ಟೈಲಿಶ್ ಮತ್ತು ಆಕ್ಷನ್ ಲುಕ್ ರಿವೀಲ್ ಆಗಿದ್ದು ಅಭಿಮಾನಿಗಳು ಫಿದಾ ಆಗಿದ್ದಾರೆ.
ಬೇಲ್ ಚಿತ್ರವು ನೈಜ ಘಟನೆ ಆಧಾರಿತ ಕಥೆಯನ್ನು ಒಳಗೊಂಡಿದ್ದು , ಟೀಸರ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿದೆ. ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ಅಜಿನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತಿದೆ.
ಈ ಕುರಿತು ಈ ಹಿಂದೆ ಮಾತನಾಡಿದ ನಿರ್ದೇಶಕ ಪವನ್ ಒಡೆಯರ್, "ಶಿವರಾಜ್ ಕುಮಾರ್ ಅವರೊಂದಿಗೆ ಕೆಲಸ ಮಾಡುವ ಕನಸು ನನಸಾಗಿದೆ. ಅವರು ದಶಕಗಳಿಂದ ಕನ್ನಡ ಚಿತ್ರ ರಂಗದ ಐಕಾನ್ ಆಗಿದ್ದಾರೆ. ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ಪ್ರೇಕ್ಷಕರ ಮುಂದೆ ತರುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ" ಎಂದು ಹೇಳಿದ್ದರು.
ಬೇಲ್ ಚಿತ್ರದ ಈ ಮಹತ್ವಾಕಾಂಕ್ಷಿ ಪ್ರಾಜೆಕ್ಟ್ ನ್ನೂ KVN Productions ಬ್ಯಾನರ್ ಅಡಿಯಲ್ಲಿ ವೆಂಕಟ್ ಕೆ. ನಾರಾಯಣ್ ನಿರ್ಮಿಸುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ನಿರ್ಮಾಪಕ ವೆಂಕಟ್ ಕೆ. ನಾರಾಯಣ್, " ಬೇಲ್ ' ನಮ್ಮಿಗೆ ಬಹಳ ವಿಶೇಷವಾದ ಸಿನಿಮಾ ಬಲವಾದ ಕಥೆ ಹೇಳುವಿಕೆ ಹಾಗೂ ವಿಭಿನ್ನ ಸಿನಿಮೀಯ ದೃಷ್ಟಿಕೋನ ಈ ಚಿತ್ರದ ಪ್ರಮುಖ ಶಕ್ತಿಯಾಗಿದೆ. ಪವನ್ ಒಡೆಯರ್ ಅವರಂತಹ ಪ್ರತಿಭಾವಂತ ಕಥೆಗಾರರೊಂದಿಗೆ ಕೈಜೋಡಿಸುವುದು ಹಾಗೂ ಶಿವರಾಜಕುಮಾರ್ ಅವರಂತಹ ಐಕಾನ್ ಜೊತೆ ಕೆಲಸ ಮಾಡುವುದು ನಮ್ಮಿಗೆ ಗೌರವದ ಸಂಗತಿ" ಎಂದು ಹೇಳಿದ್ದಾರೆ.
"ಪ್ರೇಕ್ಷಕರು ಇದುವರೆಗೆ ನೋಡಿರದ ಹೊಸ ಶೈಲಿ ನದಿ ಶಿವನ ಅವರನ್ನು ತೆರೆ ಮೇಲೆ ತರುವ ಉದ್ದೇಶ ನಮ್ಮದು. ಅರ್ಥಪೂರ್ಣ ಮತ್ತು ವಿಭಿನ್ನ ಅನುಭವ ನೀಡುವ ಸಿನಿಮಾವಾಗಿ ' ಬೇಲ್' ಮೂಡಿಬರಲಿದೆ" ಎಂದು ಅವರು ತಿಳಿಸಿದ್ದಾರೆ.
ಶಿವಣ್ಣ ಕೆಲ ದಿನಗಳ ಹಿಂದೆ ರಾಮ ಚರಣ್ ತೇಜ್ ಅಭಿನಯದ ' ಪೆದ್ದಿ' ಸಿನಿಮಾಲ್ಲಿ ಕುಸ್ತಿ ಕೇಳಿ ಕೊಡುವ ಗೌರವನಾಯ್ಡು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ' ಬೇಲ್ ' ಟೀಸರ್ ನಲ್ಲಿ ಕರುನಾಡ ಚಕ್ರವರ್ತಿ ನಯಾ ಅವತಾರಕ್ಕೆ ಅಭಿಮಾನಿಗಳು ಮನ ಸೋತಿದ್ದು, ಚಿತ್ರ ಈ ವರ್ಷ ತೆರೆಗೆ ಬರಲಿದೆ.
Also Read:
ಸ್ವಪಕ್ಷ ಶಾಸಕರಿಲ್ಲದೆ ಜೆಡಿಎಸ್ ಸಮಾವೇಶ : ಜಿ ಟಿ ದೇವೇಗೌಡ ಅಸಮಾಧಾನ