BELAGAVI NEWS:
ಕನ್ನಡ ಚಿತ್ರರಂಗದ ಜನಪ್ರಿಯ ನಟ ಕೋಮಲ್ ಕುಮಾರ್ ತಮ್ಮ ವಿಶಿಷ್ಟ ಹಾಸ್ಯ ಶೈಲಿ ಮತ್ತು ವಿಭಿನ್ನ ಮ್ಯಾನರಿಸಂ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು ಅಭಿನಯಿಸುತ್ತಿರುವ ಬಹುನಿರೀಕ್ಷಿತ ಚಿತ್ರಗಳಲ್ಲಿ 'ರೋಲೆಕ್ಸ್' ಕೂಡ ಪ್ರಮುಖವಾಗಿದೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಈಗ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿ ಕೆಲಸಗಳು ಬರದಿಂದ ಸಾಗುತ್ತಿವೆ.
ಕೋಮಲ್ ಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರತಂಡ 'ರೋಲೆಕ್ಸ್' ಚಿತ್ರದ ವಿಶೇಷ ಗ್ಲಿಂಪ್ಸ್ ಹಾಗೂ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಬಿಡುಗಡೆಯಾದ ಪೋಸ್ಟರ್ ನಲ್ಲಿ ಲಕ್ಷಾಂತರ ಹಣದ ನಡುವೆ ಸಿಗಾರ ಹಿಡಿದು ಸ್ಟೈಲಿಶ್ ಹಾಗೂ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಕೋಮಲ್ ಅವರ ಹೊಸ ಅವತಾರ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಗ್ಲಿಂಪ್ಸ್ ಮತ್ತು ಪೋಸ್ಟರ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಚಿತ್ರದಲ್ಲಿ ಕೋಮಲ್ ಅವರಿಗೆ ನಾಯಕಿಯಾಗಿ ಸೋನಾಲ್ ಮೊಂತೆರೋ ಅಭಿನಯಿಸಿದ್ದು, ಈ ಜೋಡಿಯ ಮೇಲು ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಾಗಿದೆ. ಈ ಹಿಂದೆ 'ಬಿಲ್ ಗೇಟ್ಸ್' ಚಿತ್ರವನ್ನು ನಿರ್ದೇಶಿಸಿದ್ದ ಶ್ರೀನಿವಾಸ್ ಮಂಡ್ಯ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಿದ್ದು, ಹಾಸ್ಯ, ಮನರಂಜನೆ ಮತ್ತು ಕೌಟುಂಬಿಕ ಕಥಾಂದರವನ್ನು ಒಳಗೊಂಡ ಚಿತ್ರವಾಗಿ 'ರೋಲೆಕ್ಸ್' ಮೂಡಿ ಬರುತಿದೆ. ಚಿತ್ರದ ಕುರಿತು ಇನ್ನಷ್ಟು ಅಪ್ಡೇಟ್ಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ನಟ ಕೋಮಲ್ ಕುಮಾರ್ ಈ ಬಾರಿ ತಮ್ಮ ಹಿಂದಿನ ಚಿತ್ರಗಳಿಂದ ವಿಭಿನ್ನ ಗೆಟಪ್ ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಬಹುನಿರೀಕ್ಷಿತ 'ರೋಲೆಕ್ಸ್' ಚಿತ್ರದಲ್ಲಿ ಅವರು ಹೊಸ ಲುಕ್ ಹಾಗೂ ಹೊಸ ಶೈಲಿಯಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.
ಚಿತ್ರದಲ್ಲಿ ವಿನೋದ್ ಪ್ರಭಾಕರ್, ಸೋನಾಲ್ ಮೊಂತೆರೋ, ಅಚ್ಯುತ್ ಕುಮಾರ್, ನವೀನ್ ಪಡೀಲ್ ಹಾಗೂ ಅರುಣ್ ಬಾಲ್ರಾಜ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಈ ತರ ಬಳಗದಿಂದಲೇ ಚಿತ್ರಕ್ಕೆ ಹೆಚ್ಚುವರಿ ಆಕರ್ಷಣೆ ದೊರೆಯುತ್ತಿದೆ.
ಚಿತ್ರಕ್ಕೆ ಸಂಗೀತ ನಿರ್ದೇಶನವನ್ನು ಜೆಸ್ಸಿ ಗಿಫ್ಟ್ ನೀಡಿದ್ದಾರೆ. ಒಟ್ಟು ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ಡಾ.ವಿ.ನಾಗೇಂದ್ರ ಪ್ರಸಾದ್, ಕವಿರಾಜ್, ರಾಜೇಶ್ ವರ್ಮ ಹಾಗೂ ಕಿನ್ನಾಳ್ ರಾಜ್ ಸಾಹಿತ್ಯ ರಚಿಸಿದ್ದಾರೆ. ರಾಕೇಶ್ ಸಿ ತಿಲಕ್ ಛಾಯಾಗ್ರಹಣ, ಅರವಿಂದ್ ರಾಜ್ ಸಂಕಲನ ಹಾಗೂ ಯೋಗಾನಂದ ಅವರ ಸಾಹಸ ನಿರ್ದೇಶನದ ಚಿತ್ರಕ್ಕೆ ತಾಂತ್ರಿಕವಾಗಿ ಬಲ ನೀಡಿದೆ. ಜೊತೆಗೆ ಕಲೈ ಮತ್ತು ಮುರಳಿ ಅವರ ನೃತ್ಯ ನಿರ್ದೇಶನವು ಚಿತ್ರಕ್ಕೆ ವಿಶೇಷ ಮೆರಗೂ ತಂದಿದೆ.
ಮುರಳಿ ಕೃಷ್ಣ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜೇಶ್ ವರ್ಮಾ ಕ್ರಿಯೇಟಿವ್ ಹೆಡ್ ಆಗಿ ಚಿತ್ರತಂಡದ ಪ್ರಮುಖ ಭಾಗಿಯಾಗಿದ್ದಾರೆ. ಒಟ್ಟಿನಲ್ಲಿ ವಿಭಿನ್ನ ಕಥಾಂದರದ ಹಾಗೂ ತಂಡದ ಸಹಕಾರದಿಂದ 'ರೋಲೆಕ್ಸ್' ಚಿತ್ರ ಮತ್ತಷ್ಟು ನಿರೀಕ್ಷೆಯನ್ನು ಹುಟ್ಟಿಸಿದೆ.
ಬಹುನಿರೀಕ್ಷಿತ 'ರೋಲಕ್ಸ್' ಚಿತ್ರವು ಸಂಪೂರ್ಣ ಕೌಟುಂಬಿಕ ಕಾಮಿಡಿ ಕಥಾಂದರದ ವನ್ನು ಹೊಂದಿದ್ದು, ಪ್ರೇಕ್ಷಕರಿಗೆ ನಗುವಿನ ಹಬ್ಬವನ್ನು ನೀಡಲಿದೆ ಎಂದು ಚಿತ್ರತಂಡ ತಿಳಿಸಿದೆ. ಹಾಸ್ಯ ಮತ್ತು ಮನರಂಜನೆಯೊಂದಿಗೆ ಕುಟುಂಬ ಪ್ರೇಕ್ಷಕರನ್ನು ತಡೆಯುವ ಉದ್ದೇಶದಿಂದ ಚಿತ್ರವನ್ನು ರೂಪಿಸಲಾಗಿದೆ.
ಈ ಚಿತ್ರವನ್ನು ಆಂಧ್ರಪ್ರದೇಶದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿರುವ ಅಂಬಟಿ ಮಧು ಮೋಹನ್ ಕೃಷ್ಣ ಅವರು ಮಧು ಫಿಲಂ ಸರ್ಕ್ಯೂಟ್ಸ್ ಸಂಸ್ಥೆ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ. ಇದು ಈ ಸಂಸ್ಥೆಯ ಮೊದಲ ನಿರ್ಮಾಣವಾಗಿರುವುದು ವಿಶೇಷವಾಗಿದೆ.
ಚಿತ್ರದ ಚಿತ್ರೀಕರಣ ಈಗಾಗಲೇ ಪೂರ್ಣಗೊಂಡಿದ್ದು, ಪ್ರಸ್ತುತ ಪೋಸ್ಟ್-ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರತಂಡ ಶೀಘ್ರದಲ್ಲಿ ಟ್ರೈಲರ್ ಬಿಡುಗಡೆ ಮಾಡುವ ಯೋಜನೆಯಲ್ಲಿ ಇದೆ ಎಂದು ತಿಳಿಸಿದೆ. ಟ್ರೇಲರ್ ಮೂಲಕ ಚಿತ್ರದ ಕಥಾಹಂದರ ಮತ್ತು ಪಾತ್ರಗಳ ಕುರಿತು ಇನ್ನಷ್ಟು ಮಾಹಿತಿ ಹೊರ ಬರುವ ನಿರೀಕ್ಷೆ ಇದೆ.
ಒಟ್ಟಿನಲ್ಲಿ, ಹಾಸ್ಯ ಭರಿತ ಕೌಟುಂಬಿಕ ಮನರಂಜನೆಯೊಂದಿಗೆ 'ರೋಲೆಕ್ಸ್' ಚಿತ್ರ ಪ್ರೇಕ್ಷಕರಲ್ಲಿ ಉತ್ತಮ ನಿರೀಕ್ಷೆಯನ್ನು ಹುಟ್ಟಿಸಿದೆ.