belagavi news :
ಬೆಂಗಳೂರು, ಜೂನ್ 15: ಕೇಂದ್ರ ಸರ್ಕಾರದ ಬೃಹತ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ H.D. Kumaraswamy ಅವರು ಪವಿತ್ರ Sabarimala ಯಾತ್ರೆ ಕೈಗೊಂಡಿದ್ದಾರೆ. ಇಂದು ಮುಂಜಾನೆ Subramanya Swamy temple ನಲ್ಲಿ ವಿಶೇಷ ಪೂಜೆ ಸಲ್ಲಿಸಿದವರು ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿ ಭಕ್ತಿ ಭಾವದಿಂದ ಯಾತ್ರೆಗೆ ಚಾಲನೆ ನೀಡಿದರು.
ಪೂಜೆಯ ಬಳಿಕ ದೇವಾಲಯದಲ್ಲಿಯೇ ಸಾಂಪ್ರದಾಯದಂತೆ ಇರುಮುಡಿ ಹೊತ್ತು ಶಬರಿಮಲೆಯತ್ತ ಪ್ರಯಾಣ ಬೆಳೆಸಿದ ಸಚಿವ ಕುಮಾರಸ್ವಾಮಿ ಅವರ ಆಧ್ಯಾತ್ಮಿಕ ಪಯಣ ಗಮನ ಸೆಳೆದಿದೆ. ರಾಜಕೀಯ ಜವಾಬ್ದಾರಿಗಳ ನಡುವೆಯೂ ಧಾರ್ಮಿಕ ಆಚರಣೆಗಳಿಗೆ ಮಹತ್ವ ನೀಡುತ್ತಿರುವ ಅವರು, ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ವತ್ರಾಚರಣೆಯೊಂದಿಗೆ ಯಾತ್ರೆ ಕೈಗೊಂಡಿದ್ದಾರೆ.
ಸಚಿವರ ಈ ಭಕ್ತಿ ಪೂರ್ವ ಹೆಜ್ಜೆಗೆ ಬೆಂಬಲಿಗರು ಅಯ್ಯಪ್ಪ ಭಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಅವರು ಯಾತ್ರೆ ಯಶಸ್ವಿಯಾಗಲಿ ಎಂದು ಶುಭ ಹಾರೈಕೆಗಳು ವ್ಯಕ್ತವಾಗುತ್ತಿವೆ.
ಕೇಂದ್ರ ಸಚಿವ H.D. Kumaraswamy ಅವರ ಶಬರಿಮಲೆ ಯಾತ್ರೆ ಭಕ್ತಿಭಾವದಿಂದ ಸಾಗಿದ್ದು, ಮಧ್ಯಾಹ್ನದ ವೇಳೆಗೆ ತಂಡವು Pamp River ತೀರವನ್ನು ತಲುಪಲಿದೆ. ಅಲ್ಲಿ ಪುಣ್ಯ ಸ್ನಾನ ನೆರವರಿಸಿದ ಬಳಿಕ ಭಕ್ತಿರೊಂದಿಗೆ ಪವಿತ್ರ Sabarimala ಸನ್ನಿಧಿಯತ್ತ ಪಾದಯಾತ್ರೆ ಮುಂದುವರಿಯಲಿದೆ.
ಸಂಜೆಯ ವೇಳೆಗೆ ಅಯ್ಯಪ್ಪ ಸನ್ನಿಧಿಯಲ್ಲಿ ನಡೆಯುವ ಪಡಿ ಪೂಜೆಯಲ್ಲಿ ಸಚಿವರು ಭಾಗವಹಿಸಲಿದ್ದು, ಬಳಿಕ ಅಯ್ಯಪ್ಪ ಸ್ವಾಮಿಗೆ ನಡೆಯುವ ಪುಷ್ಪಾಭಿಷೇಕ ಸೇವೆಯನ್ನು ಪಾಲ್ಗೊಳ್ಳಲಿದ್ದಾರೆ. ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಕುಮಾರಸ್ವಾಮಿ ಕೈಗೊಂಡಿರುವ ಮೊದಲ ಶಬರಿಮಲೆ ಯಾತ್ರೆ ಇದಾಗಿದ್ದು, ಅವರ ಈ ಆಧ್ಯಾತ್ಮಿಕ ಪಯಣ ಭಕ್ತರು ಮತ್ತು ಬೆಂಬಲಿಗರ ಗಮನ ಸೆಳೆದಿದೆ. ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ಅವರು ಕೈಗೊಂಡಿರುವ ಈ ವಿಶೇಷ ಯಾತ್ರೆಗೆ ಶುಭಾಶಯ ಮಹಾಪೂರವೇ ಹರಿದು ಬರುತ್ತಿದೆ.
ಕೇಂದ್ರ ಸಚಿವ H. D. Kumaraswamy ಅವರ ಶಬರಿಮಲೆ ಯಾತ್ರೆಗೆ ರಾಜಕೀಯ ಸಹೋದ್ಯೋಗಿಗಳು ಮತ್ತು ಆಪ್ತರು ಸಹ ಸಾಥ್ ನೀಡಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಮಾಜಿ ಸಚಿವರಾದ C.S. ಪುಟ್ಟರಾಜು ಹಾಗೂ S.R. ಮಹೇಶ್, ವಿಧಾನ ಪರಿಷತ್ ಸದಸ್ಯ Bhojegowda, ಶಾಸಕ Sharanagouda Kandakur, ಮಾಜಿ ಶಾಸಕ Magadi Manjunath, H.M.Ramesh Gowda ಸೇರಿದಂತೆ 30ಕ್ಕೂ ಹೆಚ್ಚು ಭಕ್ತರ ತಂಡ ಈ ಪವಿತ್ರ ಯಾತ್ರೆಯಲ್ಲಿ ಭಾಗಿಯಾಗಿದೆ.
ಭಕ್ತಿ, ಶ್ರದ್ಧೆ ಮತ್ತು ಸಾಂಪ್ರದಾಯದ ಸಮ್ಮಿಲನವಾಗಿರುವ ಈ ಯಾತ್ರೆಯಲ್ಲಿ ಎಲ್ಲರೂ ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ ವತ್ರಾಚರಣೆಯೊಂದಿಗೆ ಸಾಗುತ್ತಿದ್ದು ರಾಜಕೀಯ ವಲಯದಲ್ಲೂ ಈ ಯಾತ್ರೆ ವಿಶೇಷ ಗಮನ ಸೆಳೆಯುತ್ತಿದೆ ಕುಮಾರಸ್ವಾಮಿ ನೇತೃತ್ವದ ತಂಡದ ಈ ಆಧ್ಯಾತ್ಮಿಕ ಪಯಣ ಭಕ್ತರ ಮೆಚ್ಚುಗೆ ಪಾತ್ರವಾಗಿದ್ದು ಶಬರಿಮಲೆ ಸನ್ನಿಧಿಯಲ್ಲಿ ವಿಶೇಷ ಪೂಜೆಗಳನ್ನು ಪಾಲ್ಗೊಳ್ಳುವ ಸಜ್ಜಾಗಿದೆ.
Also Read:
ಧಾರಾಕಾರ ಮಳೆಯಲ್ಲಿ ರಸ್ತೆಗಿಳಿದು ಕಾಕ್ರೋಚ್ ಜನತಾ ಪಾರ್ಟಿ ಕಾರ್ಯಕರ್ತರ ಪ್ರತಿಭಟನೆ