Belagavi News:
ಬೆಂಗಳೂರು ನಗರದ ಐತಿಹಾಸಿಕ ಲಾಲ್ ಬಾಗ್ ನಲ್ಲಿ ತೋಟಗಾರಿಕೆ ಇಲಾಖೆ ಆಯೋಜಿಸಿರುವ ಮಾವು ಮತ್ತು ಹಲಸು ಮೇಳಕ್ಕೆ ಸಾರ್ವಜನಿಕರಿಂದ ಬಾರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜೂನ್ 26 ರವರೆಗೆ ನಡೆಯಲಿರುವ ಈ ಮೇಳದಲ್ಲಿ 2 ನೂರಕ್ಕೂ ಹೆಚ್ಚು ಮಳೆಗಳನ್ನು ತೆರೆಯಲಾಗಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ರೈತರು ಮಧ್ಯವರ್ತಿಗಳ ಹಾವಳಿ ಇಲ್ಲದೆ ರಾಜ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.
ಮೇಳದಲ್ಲಿ ಬಾದಾಮಿ, ರಸ ಪೂರಿ, ತೋತಾಪುರಿದಂತೆ ಹಲವು ಬಗೆಯ ಮಾವಿನ ತಳಿಗಳು ಲಭ್ಯವಿದ್ದು, ಮಾವಿನ ಐಸ್ ಕ್ರೀಮ್, ಜ್ಯೂಸ್ ಹಾಗೂ ಹಲಸಿನ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ಭೇಟಿ ನೀಡುವವರನ್ನು ಆಕರ್ಷಿಸುತ್ತಿದ್ದವು.
ರೈತರಿಗೆ ನೇರ ಮಾರುಕಟ್ಟೆ ಒದಗಿಸುವ ಜೊತೆಗೆ ಗ್ರಾಹಕರಿಗೆ ಗುಣಮಟ್ಟದ ಹಣ್ಣುಗಳನ್ನು ಕೈಗೆಟಕುವ ದರದಲ್ಲಿ ನೀಡುವ ಉದ್ದೇಶದಿಂದ ಆಯೋಜಿಸಿರುವ ಈ ಮೇಳಕ್ಕೆ ಪ್ರತಿದಿನ ಸಾವಿರಾರು ಮಂದಿ ಭೇಟಿ ನೀಡುತ್ತಿದ್ದಾರೆ.
ಲಾಲ್ ಬಾಗ್ ಮಾವು ಹಲಸು ಮೇಳದಲ್ಲಿ ಮಲ್ಗೋಬಾ , ಮಲ್ಲಿಕ್ಕ ಮಾವಿನ ಧಮಾಕ :
ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಮಾವು ಮತ್ತು ಹಲಸು ಮೇಳದಲ್ಲಿ ಮಲ್ಗೋಬಾ ಮಲ್ಲಿಕಾ, ಬಾದಾಮಿ ತೋತಾಪುರಿ ಹಾಗೂ ಕಸ್ತೂರಿ ಸೇರಿದಂತೆ ಹತ್ತಾರು ಜನಪ್ರಿಯ ಮಾವಿನ ತಳಿಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಅದರಲ್ಲೂ, ಮಲ್ಗೋಬಾ ಮಲ್ಲಿಕಾ ಮತ್ತು ವಿವಿಧ ರೀತಿಯ ಮಾವಿನ ಹಣ್ಣುಗಳಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದ್ದು, ಗ್ರಾಹಕರು ಸಾಲಿನಲ್ಲಿ ನಿಂತು ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ತಾಜಾ ಹಣ್ಣುಗಳು ಲಭ್ಯವಾಗುತ್ತಿರುವುದು ಮೇಳದ ಪ್ರಮುಖ ಆಕರ್ಷಣೆಯಾಗಿದೆ. ವಿಶೇಷ ರಿಯಾಯಿತಿಗಳೊಂದಿಗೆ ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸುವ ಅವಕಾಶ ಸಿಕ್ಕಿರುವುದರಿಂದ ಕುಟುಂಬ ಸಮೇತರಾಗಿ ಸಾವಿರಾರು ಮಂದಿ ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ತರಲಾಗಿರುವ ತಾಜಾ ಮಾವು ಹಾಗೂ ಹಲಸಿನ ಉತ್ಪನ್ನಗಳು ಮೇಳಕ್ಕೆ ಮತ್ತಷ್ಟು ಮೆರಗು ತಂದಿದ್ದು, ಜೂನ್ ತಿಂಗಳ ಈ ವಿಶೇಷ ಮೇಳ ಹಣ್ಣು ಪ್ರಿಯರ ನೆಚ್ಚಿನ ತಾಣವಾಗಿ ಮಾರ್ಪಟ್ಟಿದೆ.
ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಮಾವು ಮತ್ತು ಹಲಸು ಮೇಳದಲ್ಲಿ ಕೇವಲ ವಿವಿಧ ತಳಿಯ ಮಾವು ಮತ್ತು ಹಲಸಿನ ಹಣ್ಣುಗಳಷ್ಟೇ ಅಲ್ಲದೆ, ಮಾವಿನಹಳ್ಳಿನಿಂದ ತಯಾರಿಸಲಾದ ವಿಶೇಷ ಆಹಾರ ಪದಾರ್ಥಗಳು ಹಾಗೂ ತಂಪು ಪಾನೀಯಗಳು ಕೂಡ ಜನರನ್ನು ಆಕರ್ಷಿಸುತ್ತಿವೆ. ಮಾವಿನ ಐಸ್ ಕ್ರೀಮ್, ಲಸ್ಸಿ, ಜ್ಯೂಸ್ ಮತ್ತು ಮಿಲ್ಕ್ ಶೇಕ್ ಗಳಿಗೆ ಬಾರಿ ಬೇಡಿಕೆ ಕಂಡುಬಂದಿದ್ದು, ಬಿಸಿಲಿನ ಬೇಗೆಯಿಂದ ನಿರಾಳವಾಗಲು ಜನರು ಇವುಗಳನ್ನು ಸವಿದು ಸಂಭ್ರಮಿಸುತ್ತಿದ್ದಾರೆ.
ಮೇಲಕ್ಕೆ ಆಗಮಿಸಿದ ಕುಟುಂಬಗಳು ಹಾಗೂ ಯುವಕರು ಈ ವಿಶೇಷ ಮಾವಿನ ಉತ್ಪನ್ನಗಳ ರುಚಿಯನ್ನು ಆಸ್ವಾದಿಸಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ವ್ಯಾಪಾರಿ ಕೀರ್ತನ ಸೇರಿದಂತೆ ಹಲವರು ಗ್ರಾಹಕರಿಂದ ದೊರೆಯುತ್ತಿರುವ ಉತ್ತಮ ಪ್ರತಿಕ್ರಿಯೆ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು ಮೇಳಕ್ಕೆ ವಾತಾವರಣ ಇನ್ನಷ್ಟು ಉತ್ಸಾಹಭರಿತವಾಗಿದೆ. ಹಣ್ಣುಗಳ ಕರಿದಿಯ ಜೊತೆಗೆ ವಿವಿಧ ಮಾವಿನ ಉತ್ಪನ್ನಗಳ ಸವಿಯು ಲಾಲ್ಬಾಗ್ ಮಾವು ಮತ್ತು ಹಲಸು ಮೇಳದ ಪ್ರಮುಖ ಆಕರ್ಷಣೆಯಾಗಿ ಪರಿಣಮಿಸಿದೆ.
ಲಾಲ್ ಬಾಗ್ ನಲ್ಲಿ ನಡೆಯುತ್ತಿರುವ ಮಾವು ಮತ್ತು ಹಲಸು ಮೇಳದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ರೈತರು ಭಾಗವಹಿಸಿ ತಮ್ಮ ತಾಜಾ ಹಣ್ಣುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ ರೈತರಿಂದಲೇ ಗುಣಮಟ್ಟದ ಹಣ್ಣುಗಳನ್ನು ಖರೀದಿಸುವ ಅವಕಾಶ ಸಿಕ್ಕಿರುವುದರಿಂದ ಮೇಳಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ.
ರೈತ ಮತ್ತು ಗ್ರಾಹಕರನ್ನು ನೇರವಾಗಿ ಸಂಪರ್ಕಿಸುವ ಈ ಮೇಳವು ಎರಡು ವರ್ಗಗಳಿಗೆ ಲಾಭದಾಯಕ ವೇದಿಕೆಯಾಗಿದ್ದು, ಲಾಲ್ ಬಾಗ್ ನಲ್ಲಿ ಹಣ್ಣುಪ್ರಿಯರ ಸಂಭ್ರಮಕ್ಕೆ ಸಾಕ್ಷಿಯಾಗಿದೆ.
Also Read:
KCET Result 2026: ಫಲಿತಾಂಶ ಪ್ರಕಟಕ್ಕೆ ಕ್ಷಣಗಣನೆ, 12 ಗಂಟೆಗೆ ಘೋಷಣೆ