Belagavi News:
ವಿಧಾನಪರಿಷತ್ ಚುನಾವಣೆಯಲ್ಲಿ ಕನಿಷ್ಠ ಐದು ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಕಾಂಗ್ರೆಸ್ ಭರ್ಜರಿ ರಾಜಕೀಯ ತಂತ್ರ ರೂಪಿಸಿದೆ. ಪಕ್ಷದ ಒಳಗೆ ಮತಗಳ ಲೆಕ್ಕಾಚಾರ, ಸ್ಥಳೀಯ ಸಮೀಕರಣಗಳು ಹಾಗೂ ಸಂಘಟನಾ ಬಲವನ್ನು ಹೆಚ್ಚಿಸುವತ್ತ ವಿಶೇಷ ಗಮನ ಹರಿಸಲಾಗುತ್ತಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಚುನಾವಣಾ ತಂತ್ರಗಾರಿಕೆ ರೂಪಿಸಲಾಗಿದ್ದು, ಶಾಸಕರ ಒಗ್ಗಟ್ಟು, ಪಕ್ಷದ ಮತ ಬ್ಯಾಂಕ್ ಬಲಪಡಿಸುವುದು ಹಾಗೂ ಪ್ರಮುಖ ಕ್ಷೇತ್ರಗಳಲ್ಲಿ ಸೂಕ್ಷ್ಮ ನಿರ್ವಹಣೆ ಮಾಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪರಿಷತ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ನಿರಂತರ ಸಮಾಲೋಚನೆ ನಡೆಯುತ್ತಿದ್ದು, ಪ್ರತಿ ಕ್ಷೇತ್ರದ ಸಂಖ್ಯಾ ಸಮೀಕರಣವನ್ನು ಪರಿಶೀಲಿಸಿ ಅಭ್ಯರ್ಥಿಗಳ ಆಯ್ಕೆ ಹಾಗೂ ಪ್ರಚಾರ ತಂತ್ರಗಳನ್ನು ಅಂತಿಮಗೊಳಿಸಲಾಗುತ್ತಿದೆ.
ರಾಜಕೀಯ ವಲಯದಲ್ಲಿ ಈ ಬೆಳವಣಿಗೆ ಮಹತ್ವ ಪಡೆದುಕೊಂಡಿದ್ದು, ಪರಿಷತ್ ಚುನಾವಣೆಯ ಫಲಿತಾಂಶ ರಾಜ್ಯ ರಾಜಕೀಯ ಸಮೀಕರಣಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಪರಿಷತ್ ಚುನಾವಣೆ ರಂಗೇರಿಕೆ - ಅಡ್ಡ ಮತದಾನ ಭೀತಿ ನಡುವೆ ಕಾಂಗ್ರೆಸ್ ಗೆ 5 ಸ್ಥಾನ ಗುರಿ :
ಕರ್ನಾಟಕ ವಿಧಾನ ಪರಿಷತ್ ಚುನಾವಣೆ ರಂಗೇರಿದ್ದು, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಭರ್ಜರಿ ತಂತ್ರಗಳನ್ನು ರೂಪಿಸುತ್ತಿವೆ. ಅಡ್ಡ ಮತದಾನ ಭೀತಿ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಚುರುಕುಗೊಂಡಿದ್ದು, ರೆಸಾರ್ಟ್ ಪಾಲಿಟಿಕ್ಸ್ ಕೂಡ ಮತ್ತೆ ಸದ್ದು ಮಾಡುತ್ತಿದೆ.
ನಾಳೆ (ಜೂನ್ 18) ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ 5 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಕಾಂಗ್ರೆಸ್ ಪಕ್ಷ ಬಲವಾದ ರಣತಂತ್ರ ಹೂಡಿದೆ. ಪಕ್ಷದ ಒಳಗಿನ ಮತಗಳನ್ನು ಒಂದೇ ಕಡೆ ಕಾಯ್ದಿರಿಸಿಕೊಳ್ಳುವುದು, ಶಾಸಕರ ಒಗ್ಗಟ್ಟು ಕಾಯ್ದುಕೊಳ್ಳುವುದು ಹಾಗೂ ಸೂಕ್ಷ್ಮ ಮತಗಳ ಲೆಕ್ಕಾಚಾರ ನಡೆಸುವುದು ಪ್ರಮುಖ ತಂತ್ರವಾಗಿದೆ ಎಂದು ಮೂಲಗಳು ತಿಳಿಸಿವೆ.
ರಾಜಕೀಯ ವಲಯದಲ್ಲಿ ಈ ಚುನಾವಣೆಯು ಅತ್ಯಂತ ಪ್ರತಿಷ್ಠೆಯ ಹೋರಾಟವಾಗಿ ಪರಿಗಣಿಸಲಾಗುತ್ತಿದ್ದು, ಪ್ರತಿಯೊಂದು ಮತಕ್ಕೂ ಮಹತ್ವ ಹೆಚ್ಚಿದೆ. ಅಡ್ಡ ಮತದಾನ ತಪ್ಪಿಸಲು ಪಕ್ಷಗಳು ತಮ್ಮ ವಿಶ್ವಾಸ ಕರನ್ನು ನಿಗ ವಹಿಸಿ ಇರಿಸುವ ಸಾಧ್ಯತೆಗಳು ಹೆಚ್ಚಾಗಿವೆ.
ಪರಿಷತ್ ಫಲಿತಾಂಶ ರಾಜ್ಯ ರಾಜಕೀಯ ಸಮೀಕರಣಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಎಲ್ಲ ಪಕ್ಷಗಳಿಗೂ ಈ ಚುನಾವಣೆ ನಿರ್ಣಾಯಕವಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Karnataka MLC Election - ಕಾಂಗ್ರೆಸ್ ಗೆ ಐದು ಸ್ಥಾನ ಗುರಿ ; ಶಾಸಕರಿಗೆ ರೆಸಾರ್ಟ್ ನಿಂದ ನೇರ ವಿಧಾನಸೌಧಕ್ಕೆ ಮತದಾನ ವ್ಯವಸ್ಥೆ:
ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಪಾಲಿನ 4 ಸ್ಥಾನಗಳ ಜೊತೆಗೆ ಇನ್ನೊಂದು ಹೆಚ್ಚುವರಿ ಸ್ಥಾನವನ್ನು ಗೆಲ್ಲುವ ಗುರಿಯೊಂದಿಗೆ ಭರ್ಜರಿ ತಂತ್ರವನ್ನು ರೂಪಿಸಿದೆ. ಅಡ್ಡ ಮತದಾನ ಭೇಟಿ ಹಿನ್ನೆಲೆಯಲ್ಲಿ ಪಕ್ಷದ ಶಾಸಕರನ್ನು ಕಟ್ಟುನಿಟ್ಟಿನ ನಿಗಾದಲ್ಲಿ ಇರಿಸಿದೆ.
ಮೂಲಗಳ ಪ್ರಕಾರ ಕೈ ಶಾಸಕರು ನಾಳೆ (ಜೂನ್ 18) ರಂದು ನೇರವಾಗಿ ರೆಸಾರ್ಟ್ ನಿಂದ ವಿಧಾನಸೌಧಕ್ಕೆ ತೆರಳಿ ಮತದಾನ ಮಾಡಲಿದ್ದಾರೆ. ಯಾವುದೇ ಅಡ್ಡ ಮತದಾನ ಅಥವಾ ಗೊಂದಲ ಉಂಟಾಗದಂತೆ ಪ್ರತಿ ಅಭ್ಯರ್ಥಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಅಭ್ಯರ್ಥಿಗಳ ಸುರಕ್ಷತೆ ಹಾಗೂ ಸಮೂಹವಾಗಿ ಸಂಚಾರಕ್ಕಾಗಿ ಐದು ಪ್ರತ್ಯೇಕ ಬಸ್ ಗಳ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಅಭ್ಯರ್ಥಿಯ ಬೆಂಬಲಿಗ ಶಾಸಕರನ್ನು ಸಮನ್ವಯವಾಗಿ ಕರೆದೊಯ್ಯುವ ಯೋಜನೆ, ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.
ರೆಸಾರ್ಟ್ ಪೊಲಿಟಿಕ್ಸ್ ಮತ್ತೆ ಸದ್ದು ಮಾಡುತ್ತಿದ್ದು, ಮತದಾನ ದಿನದವರೆಗೂ ಶಾಸಕರ ಒಗ್ಗಟ್ಟನ್ನು ಕಾಯ್ದುಕೊಳ್ಳುವುದು ಕಾಂಗ್ರೆಸ್ ನ ಪ್ರಮುಖ ತಂತ್ರವಾಗಿದೆ. ಈ ಚುನಾವಣೆಯ ಫಲಿತಾಂಶ ರಾಜ್ಯ ರಾಜಕೀಯ ಸಮೀಕರಣಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಎಲ್ಲಾ ಪಕ್ಷಗಳು ತೀವ್ರ ಕಸರತ್ತು ನಡೆಸುತ್ತಿವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಕಾಂಗ್ರೆಸ್ ನಲ್ಲಿ ಮತಗಳ ವರ್ಗಿಕರಣ ; ಐದು ಅಭ್ಯರ್ಥಿಗಳಿಗೆ ಪ್ರತ್ಯೇಕ ಲೆಕ್ಕಾಚಾರ, ಅಡ್ಡ ಮತದಾನಕ್ಕೆ ಕಠಿಣ ನಿಗಾ:
ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಲು ಸೂಕ್ಷ್ಮ ಮತ ಲೆಕ್ಕಾಚಾರ ಹಾಗೂ ಸಂಘಟಿತ ಕಾರ್ಯತಂತ್ರವನ್ನು ಜಾರಿಗೆಗೊಳಿಸಿದೆ. ಪಕ್ಷದೊಳಗೆ ಶಾಸಕರನ್ನು ವರ್ಗೀಕರಿಸಿ, ಪ್ರತಿಯೊಬ್ಬರು ಯಾವ ಅಭ್ಯರ್ಥಿಗೆ ಮತ ಹಾಕಬೇಕು ಎಂಬುದನ್ನು ಸ್ಪಷ್ಟವಾಗಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಾಹಿತಿ ಪ್ರಕಾರ, ಇವರು ಅಭ್ಯರ್ಥಿಗಳಿಗಾಗಿ ಮತ ಹಂಚಿಕೆ ತಂತ್ರ ರೂಪಿಸಲಾಗಿದ್ದು, ಮೂರು ಅಭ್ಯರ್ಥಿಗಳಿಗೆ ತಲಾ 28 ಮತಗಳು ಹಾಗೂ ಇಬ್ಬರು ಅಭ್ಯರ್ಥಿಗಳಿಗೆ ತಲಾ 29 ಮತಗಳು ನೀಡುವಂತೆ ಸದ್ಯಕ್ಕೆ ಯೋಚಿಸಲಾಗಿದೆ. ಈ ಲೆಕ್ಕಾಚಾರದ ಮೂಲಕ ಎಲ್ಲಾ ಅಭ್ಯರ್ಥಿಗಳ ಗೆಲುವು ಖಚಿತಪಡಿಸುವ ಪ್ರಯತ್ನ ನಡೆಯುತ್ತಿದೆ.
ಅಡ್ಡ ಮತದಾನ ಅಥವಾ ಯಾವುದೇ ಅಸಮಂಜಸತೆ ಉಂಟಾದರೆ ತಕ್ಷಣವೇ ಪತ್ತೆಹಚ್ಚಲು ಈ ರೀತಿಯ ವ್ಯವಸ್ಥೆ ರೂಪಿಸಲಾಗಿದೆ ಎಂದು ತಿಳಿದುಬಂದಿದೆ. ಪ್ರತಿ ಶಾಸಕರನ್ನು ಅವರ ಮತದಾನದ ಯೋಜನೆಯಂತೆ ವರ್ಗೀಕರಿಸಲಾಗಿದ್ದು, ಅದರ ಆಧಾರದಲ್ಲೇ ವಿಧಾನಸೌಧಕ್ಕೆ ಪ್ರತ್ಯೇಕ ಬಸ್ ಗಳಲ್ಲಿ ಕರೆದೊಯ್ಯಲಾಗುತ್ತಿದೆ.
ರಾಜಕೀಯ ವಲಯದಲ್ಲಿ ಈ ತಂತ್ರವನ್ನು "ಮೈಕ್ರೋ ಮ್ಯಾನೇಜ್ಮೆಂಟ್ ಸ್ಟ್ರಾಟಜಿ" ಎಂದು ವಿಶ್ಲೇಷಿಸಲಾಗುತ್ತಿದ್ದು, ಪರಿಷತ್ ಚುನಾವಣೆಯಲ್ಲಿ ಒಂದು-ಒಂದು ಮತಕ್ಕೂ ಮಹತ್ವ ನೀಡಲಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
Also Read:
ನೀಟ್ ವಿವಾದ ತೀವ್ರ: ಕೋಟಾದಲ್ಲಿ ರಾಹುಲ್ ಗಾಂಧಿ ವಿದ್ಯಾರ್ಥಿಗಳೊಂದಿಗೆ ಸಂವಾದ, ಕಾಂಗ್ರೆಸ್ - ಬಿಜೆಪಿ ವಾಕ್ಸಮರ