<?= $pageTitle ?>
Logo
ಮುಖಪುಟ ಓದುವುದು ಕೇಳು
Trending

ಅಡ್ಡ ಮತದಾನದ ರಹಸ್ಯ ಬಯಲಾಗಲಿ, ಧರ್ಮಸ್ಥಳದಲ್ಲಿ ವಿಜಯೇಂದ್ರ ಹೇಳಿಕೆ

ಅಡ್ಡ ಮತದಾನದ ರಹಸ್ಯ ಬಯಲಾಗಲಿ, ಧರ್ಮಸ್ಥಳದಲ್ಲಿ ವಿಜಯೇಂದ್ರ ಹೇಳಿಕೆ
Summary: I will call a legislative meeting this week and find out who betrayed the party and the mother. Strict action will be taken against those who crossed the line," said BJP state president B.Y. Vijayendra

belagavi news :

ಈ ವಾರದಲ್ಲಿ ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸುವ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರೊಂದಿಗೆ ಚರ್ಚೆ ನಡೆಸುವುದಾಗಿ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.

ಮಲ್ಲೇಶ್ವರಂನಲ್ಲಿ ಯೋಗ ದಿನಾಚರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಅಡ್ಡ ಮತದಾನ ಮಾಡಿದವರು ಯಾರು ಎಂಬುದು ಶ್ರೀ ಕ್ಷೇತ್ರದಲ್ಲೇ ಗೊತ್ತಾಗಲಿ. ಈ ವಾರದಲ್ಲಿ ಸಭೆ ಕರೆದು ಪಕ್ಷಕ್ಕೆ ದ್ರೋಹ ಮಾಡಿದ ಶಾಸಕರು ಯಾರು ಎಂಬುದನ್ನು ಪತ್ತೆ ಮಾಡುತ್ತೇನೆ. ನನ್ನನ್ನು ಸೇರಿಸಿ ಎಲ್ಲರ ಮೇಲು ಅನುಮಾನ ಮೂಡಿಸಿರುವುದರಿಂದ ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ"

ಜನರ ಆಶೀರ್ವಾದದಿಂದ ಆಯ್ಕೆಯಾದ ಶಾಸಕರು ಪಕ್ಷದ ನಿಷ್ಠೆಯನ್ನು ಕಾಪಾಡಬೇಕು ಎಂದು ಹೇಳಿದ ವಿಜಯೇಂದ್ರ, ಅಡ್ಡ ಮತದಾನ ಪ್ರಕರಣದ ಬಗ್ಗೆ ಸ್ಪಷ್ಟತೆ ತರಲು ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎಂಬ ಸುಳಿವು ನೀಡಿದರು.

ಬಿಜೆಪಿ ಮತದಾನ ವಿವಾದಕ್ಕೆ ಹೊಸ ತಿರುಗು! "ತಾರಕ್ ಮೂರು ಶಾಸಕರ ಮೇಲೂ ಅನುಮಾನ" ಎಂದ ವಿಜಯೇಂದ್ರ.

ಬಿಜೆಪಿಯಿಂದ ನಾಲ್ಕು ಅಡ್ಡ ಮತದಾನಗಳು ನಡೆದಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ತೀವ್ರಗೊಂಡಿರುವ ನಡುವೆಯೇ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಹತ್ವದ ಹೇಳಿಕೆ ನೀಡಿದ್ದಾರೆ.

"ನಮ್ಮ ಕಾರ್ಯಕರ್ತರು ಕೆಲವು ಶಾಸಕರ ನಡುವಳಿಕೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಹೀಗಿರುವುದರಿಂದ ಎಲ್ಲಾ 63 ಶಾಸಕರ ಮೇಲೂ ಅನುಮಾನ ಮೂಡುವಂತಾಗಿದೆ. ಈ ಬಗ್ಗೆ ನಿನ್ನೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರಿಗೆ ಕರೆ ಮಾಡಿ ಸಂಪೂರ್ಣ ಮಾಹಿತಿ ನೀಡಿದ್ದೇನೆ. ಶೀಘ್ರದಲ್ಲೇ ನಾನು ಹಾಗೂ ಆರ್.ಅಶೋಕ್ ದೆಹಲಿಗೆ ತೆರಳಿ ಪಕ್ಷದ ವರಿಷ್ಠರೊಂದಿಗೆ ಚರ್ಚೆ ನಡೆಸುತ್ತೇವೆ" ಎಂದು ವಿಜಯೇಂದ್ರ ಹೇಳಿದರು.

ಇದೆ ವೇಳೆ, "ನಾವು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಾಗಿ ಗೆದ್ದಿದ್ದೇವೆ. ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವ ಮತ್ತು ಮುಖ ನೋಡಿ ಜನರು ಮತ ನೀಡಿದ್ದಾರೆ. ಅಡ್ಡ ಮತದಾನದ ವಿಚಾರ ಕಾರ್ಯಕರ್ತರ ಮನಸ್ಸಿಗೆ ನೋವುಂಟು ಮಾಡಿದೆ" ಎಂದರು.

ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, "ಯಾರು ಪುಕ್ಸಟ್ಟೆಯಾಗಿ ಅಡ್ಡ ಮತದಾನ ಹಾಕಿರುವುದಿಲ್ಲ" ಎಂದು ಅರ್ಥಗರ್ಭಿತವಾಗಿ ಹೇಳಿದರು.

"ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದು ತೋರಿಸಲಿ, ಆಮೇಲೆ ಮಾತನಾಡುತ್ತೇನೆ"- ವಿಜಯೇಂದ್ರ ತಿರುಗೇಟು!

ಪಕ್ಷದ ನಾಯಕತ್ವ ಬದಲಾವಣೆ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಗೆ ಯೋಗ ವಿಪಕ್ಷ ನಾಯಕನ ಸ್ಥಾನ ನೀಡಬೇಕು ಎಂಬ ಕುಮಾರ್ ಬಂಗಾರಪ್ಪ ಅವರ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

"ಯಾರು ಪುಕ್ಸಟ್ಟೆ ಹೇಳಿಕೆ ಕೊಡುತ್ತಿದ್ದಾರೋ, ಅವರು ಮೊದಲು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಬಂದು ಗೆದ್ದು ತೋರಿಸಲಿ. ಆ ಬಳಿಕ ವಿಪಕ್ಷ ನಾಯಕನ ಸ್ಥಾನ ಕೇಳುವ ಬಗ್ಗೆ ಮಾತನಾಡಬಹುದು" ಎಂದು ವಿಜಯೇಂದ್ರ ಸವಾಲು ಹಾಕಿದರು.

ಇದೇ ವೇಳೆ, ಇತ್ತೀಚಿನ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಗೆ ಅಡ್ಡ ಮತದಾನ ದೊಡ್ಡ ಹೊಡೆತ ನೀಡಿದ್ದು ಕಾಂಗ್ರೆಸ್ ತನ್ನ ಐದು ಅಭ್ಯರ್ಥಿಗಳನ್ನು ಗೆಲ್ಲಿಸಿ ರಾಜಕೀಯ ಮೈಲುಗೈ ಸಾಧಿಸಿದೆ. ಬಿಜೆಪಿ ಮತ್ತು ಜೆಡಿಎಸ್ ಶಾಸಕರ ಅಡ್ಡ ಮತದಾನವೇ ಈ ಫಲಿತಾಂಶಕ್ಕೆ ಕಾರಣ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿದೆ.

ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಹೊಸ ಬೆಳವಣಿಗೆ ನಡೆಯುತ್ತಿರುವ ನಡುವೆ, ವಿಜಯೇಂದ್ರ ಅವರ ಈ ಹೇಳಿಕೆ ಬಿಜೆಪಿ ಹೊಳ ಮತ್ತಷ್ಟು ಕಾವು ತಂದಿದೆ.

ಮೈತ್ರಿ ಪಾಳಯಕ್ಕೆ ಭಾರಿ ಶಾಕ್! 11 ಶಾಸಕರ ಅಡ್ಡ ಮತದಾನದಿಂದ ಕಾಂಗ್ರೆಸ್ ಗೆ ಭರ್ಜರಿ ಗೆಲುವು.

ವಿಧಾನ ಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಗೆ ಅನಿರೀಕ್ಷಿತ ಆಘಾತ ಎದುರಾಗಿದ್ದು, ಕಾಂಗ್ರೆಸ್ ರಾಜಕೀಯ ಲೆಕ್ಕಾಚಾರವನ್ನು ಯಶಸ್ವಿಯಾಗಿ ಜಾರಿಗೊಳಿಸಿ ತನ್ನ ಎಲ್ಲಾ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಯಶಸ್ವಿಯಾಗಿದೆ.

ಮೂಲಗಳ ಪ್ರಕಾರ, ಕಾಂಗ್ರೆಸ್ ಪರ ಒಟ್ಟು 11 ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಅಡ್ಡ ಮತದಾನ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಬಿಜೆಪಿಯ ಮೂವರು ಶಾಸಕರು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಪರ ಮತ ಚಲಾಯಿಸಿದರೆ, ಪಕ್ಷದ ಅಧಿಕೃತ ಬಿಜೆಪಿ ಲಿಂಗರಾಜ್ ಪಾಟೀಲ್ ಗೆ ನಿರೀಕ್ಷಿತ ಮತಗಳು ಸಿಗಲಿಲ್ಲ.

ತನ್ನ ಇಬ್ಬರು ಅಭ್ಯರ್ಥಿಗಳಿಗೆ ತಲಾ 30 ಮತಗಳನ್ನು ನೀಡುವಂತೆ ಬಿಜೆಪಿ ವಿಪ್ ನೀಡಿದರು, ರಘು ಕೌಟಿಲ್ಯ ಗೆ 29 ಮತಗಳು ಮಾತ್ರ ಲಭಿಸಿದ್ದು, ಒಂದು ಮತ ಅಸಿಂಧು ವಾಗಿದೆ.

ಮತ್ತೊಂದೆಡೆ, ಲಿಂಗರಾಜ್ ಪಾಟೀಲ್ ಗೆ ಕೇವಲ 27 ಮತಗಳು ಮಾತ್ರ ಸಿಕ್ಕಿವೆ. ಅವರ ಪಾಲಿನ ಮೂರು ಮತಗಳು ಕಾಂಗ್ರೆಸ್ ಕಡೆ ತಿರುಗಿರುವುದು ಬಿಜೆಪಿ ನಾಯಕತ್ವಕ್ಕೆ ದೊಡ್ಡ ತಲೆನೋವು ಆಗಿ ಪರಿಣಮಿಸಿದೆ. ಜೆಡಿಎಸ್ ಅಭ್ಯರ್ಥಿ ಗೋವಿಂದ ರಾಜು ಅವರಿಗೂ ನಿರಾಸೆ ಎದುರಾಗಿದ್ದು, 18 ಶಾಸಕರ ಬಲ ಹೊಂದಿದ್ದ ಪಕ್ಷಕ್ಕೆ ಕೇವಲ 14 ಮತಗಳು ಮಾತ್ರ ಲಭಿಸಿದೆ. ಏಳನೇ ಸ್ಥಾನಕ್ಕಾಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಜೆಡಿಎಸ್ ಗೆ ಇದು ಬಾರಿ ಹಿನ್ನಡೆಯಾಗಿದೆ.

ಇದ್ದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಒಟ್ಟು 151 ಮತಗಳು ದೊರೆತಿದ್ದು, ಮೇಲ್ಮನೆ ಚುನಾವಣೆಯಲ್ಲಿ ಪಕ್ಷದ ಪ್ರಾಬಲ್ಯ ಮತ್ತೊಮ್ಮೆ ಸಾಬೀತಾಗಿದೆ. ಅಡ್ಡ ಮತದಾನದ ಹಿಂದಿರುವ ಶಾಸಕರು ಯಾರು ಎಂಬ ಪ್ರಶ್ನೆ ಈಗ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

Also Read:

ಕೊಲ್ಕತ್ತಾದಲ್ಲಿ ಮೋದಿ ಯೋಗ : ದೇಶದ ಗಮನ ಸೆಳೆದ ಕಾರ್ಯಕ್ರಮ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online