Belagavi News:
ಕೊಲ್ಕತ್ತಾ (ಪಶ್ಚಿಮ ಬಂಗಾಳ): ಭಾರಿ ಅನಾಹುತವೊಂದು ಕೂದಲೇನೆ ಅಂತರದಲ್ಲಿ ತಪ್ಪಿದ ಘಟನೆ ಶುಕ್ರವಾರ ಕೊಲ್ಕತ್ತಾ ವಿಮಾನ ನಿಲ್ದಾನದಲ್ಲಿ ನಡೆದಿದೆ. 140ಕ್ಕೂ ಪ್ರಯಾಣಿಕರಿದ್ದ ಇಂಡಿಕೋ ವಿಮಾನಕ್ಕೆ ಸಿಡಿಲು ಬಡಿದಿದ್ದರೂ, ಅದೃಷ್ಟ ವಶಾತ್ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ.
ಮೂಲಗಳ ಪ್ರಕಾರ, ಕೊಲ್ಕತ್ತಾದಿಂದ ಅಗರ್ತಲಾಕ್ಕೆ ತೆರಳುತ್ತಿದ್ದ ಇಂಡಿಗೂ ಸಂಸ್ಥೆಯ GE 6068 ವಿಮಾನವು ಗುಡುಗು-ಮಿಂಚು ಸಹಿತ ಸುರಿದ ಭಾರಿ ಮಳೆಯ ನಡುವೆ ಸಿಡಿಲಿನ ಹೊಡೆತಕ್ಕೆ ಒಳಗಾಯಿತು. ಘಟನೆಯ ನಂತರ ಸುರಕ್ಷತಾ ಕಾರಣಗಳಿಂದ ವಿಮಾನವು ತಕ್ಷಣ ಸೇವೆಯಿಂದ ಸ್ಥಗಿತಗೊಳಿಸಲಾಯಿತು.
ಸಿಡಿಲಿನ ಪರಿಣಾಮವಾಗಿ ಮಾನ ಯಾನ ಸಂಸ್ಥೆಯ ಇಬ್ಬರು ಸಿಬ್ಬಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ.
ನಿಡಿಲು ಬಡಿದ ಸಮಯದಲ್ಲಿ A320 ನಿಯೋ ವಿಮಾನದಲ್ಲಿ ಕಾರ್ಯಾಚರಣೆಯ ಸಿಬ್ಬಂದಿ ಸೇರಿದಂತೆ 140ಕ್ಕೂ ಹೆಚ್ಚು ಜನರಿದ್ದರು. ಸುರಕ್ಷತಾ ಪರಿಶೀಲನೆಗಾಗಿ ವಿಮಾನವನ್ನು ನಿಲ್ದಾಣದಲ್ಲಿ ಇರಿಸಲಾಗಿದ್ದು. ಬಳಿಕ ಪ್ರಯಾಣಿಕರನ್ನು ಮತ್ತೊಂದು ವಿಮಾನದಲ್ಲಿ ಅಗರ್ತಲಾಕ್ಕೆ ಕಳುಹಿಸಲಾಯಿತು. ಈ ಘಟನೆ ಕುರಿತು ಇಂಡಿಗೋ ವಿಮಾನಯಾನ ಸಂಸ್ಥೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಸಂಸ್ಥೆ ನಿರಾಕರಿಸಿದೆ ಎಂದು ವರದಿಯಾಗಿದೆ.
ವಿಮಾನಗಳಿಗೆ ಸಿಡಿಲು ಬಡಿಯುವುದು ಅಪರೂಪದ ಘಟನೆ ಅಲ್ಲದಿದ್ದರೂ, ಇಂತಹ ಸಂದರ್ಭಗಳಿಲ್ಲಿ ಆಧುನಿಕ ವಿಮಾನಗಳ ಸುರಕ್ಷತಾ ವ್ಯವಸ್ಥೆಗಳು ಪ್ರಯಾಣಿಕರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ಘಟನೆಯಲ್ಲೂ ಯಾವುದೇ ಪ್ರಾಣಾಪಾಯ ಸಂಭವಿಸದೇ ಎಲ್ಲರೂ ಸುರಕ್ಷಿತವಾಗಿ ಪಾರಾಗಿರುವುದು ನೆಮ್ಮದಿಯ ವಿಷಯವಾಗಿದೆ.
ಕೊಲ್ಕತ್ತಾದಿಂದ ಅಗರ್ತಲಾಕ್ಕೆ ತೆರಳಬೇಕಿದ್ದ ಇಂಡಿಗೋ ಸಂಸ್ಥೆಯ 6E 6068 ವಿಮಾನಕ್ಕೆ ಬೋರ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡಿದ್ದ ವೇಳೆ ಸಿಡಿಲು ಬಡಿದಿದೆ. ಘಟನೆಯ ಪರಿಣಾಮ ವಿಮಾನದ ವಿದ್ಯುತ್ ವ್ಯವಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು. ಸುರಕ್ಷತಾ ಕಾರಣಗಳಿಂದ ವಿಮಾನವನ್ನು ತಕ್ಷಣ ಸೇವೆಯಿಂದ ಹಿಂಪಡೆಯಲಾಯಿತು.
ಮುನ್ನೆಚ್ಚರಿಕ ಕ್ರಮವಾಗಿ ವಿಮಾನಯಾನ ಸಂಸ್ಥೆಯು ಎಲ್ಲಾ ಪ್ರಯಾಣಿಕರನ್ನು ಕೆಳಗಿಳಿಸಿತು. ಬಳಿಕ ಪ್ರಯಾಣಿಕರನ್ನು ಮತ್ತೊಂದು A321 ವಿಮಾನ (VT-ICD) ಮೂಲಕ ಅಗರ್ತಲಾಕ್ಕೆ ಕಳುಹಿಸಲಾಯಿತು ಎಂದು ವರದಿಯಾಗಿದೆ.
ಮೂಲಗಳ ಪ್ರಕಾರ, ಬೆಳಗ್ಗೆ 9:20ಕ್ಕೆ ಹೊರಡಬೇಕಿದ್ದ ವಿಮಾನವು ಸಿಡಿಲಿನ ಘಟನೆಯಿಂದ ವಿಳಂಬಗೊಂಡಿದ್ದು. ಮಧ್ಯಾಹ್ನ 12:50ಕ್ಕೆ ಪ್ರಯಾಣಿಕರೊಂದಿಗೆ ಹೊರಟಿದೆ. ಸಿಡಿಲಿನ ಪರಿಣಾಮ ಇಬ್ಬರು ಸಿಬ್ಬಂದಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಇದಕ್ಕೂ ಮಧ್ಯ, ಕೊಲ್ಕತ್ತಾ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಗುಡುಗು-ಮಿಂಚು ಸಹಿತ ಭಾರಿ ಮಳೆಯಾಗುತ್ತಿದೆ. ಹಲವೆಡೆ ರಸ್ತೆಗಳ ಮೇಲೆ ನೀರು ನಿಂತ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಹವಾಮಾನ ವೈಪರೀತ್ಯದ ನಡುವೆಯೇ ಈ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.
ವಿಮಾನಗಳಿಗೆ ನೀಡಿಲು ಬಡಿಯುವುದು ಅಪರೂಪದ ಸಂಗತಿ ಅಲ್ಲ. ಆದರೆ ಆಧುನಿಕ ವಿಮಾನಗಳ ಸುರಕ್ಷತಾ ತಂತ್ರಜ್ಞಾನ ಮತ್ತು ತುರ್ತು ನಿರ್ವಹಣಾ ಕ್ರಮಗಳಿಂದ ಈ ಬಾರಿ ದೊಡ್ಡ ಅನಾಹುತ ತಪ್ಪಿದೆ. ಘಟನೆಯ ಕುರಿತು ಇಂಡಿಗೋ ಸಂಸ್ಥೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
Also Read:
ಯೋಗಿ ಆದಿತ್ಯನಾಥ್ ರಿಂದ ತೀವ್ರ ವಾಗ್ದಾಳಿ : ಅಯೋಧ್ಯೆಗೆ ಹೋಗದವರು ರಾಮ ಭಕ್ತರಂತೆ ನಟಿಸುತ್ತಿದ್ದಾರೆ