<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಇಂದಿನಿಂದ 3 ದಿನ ಬೆಳಗಾವಿಯಲ್ಲಿ ಮಾವು ಮೇಳ : ರೈತರಿಂದ ನೇರವಾಗಿ ತಾಜಾ ಮಾವು ಮಾರಾಟ

ಇಂದಿನಿಂದ 3 ದಿನ ಬೆಳಗಾವಿಯಲ್ಲಿ ಮಾವು ಮೇಳ : ರೈತರಿಂದ ನೇರವಾಗಿ ತಾಜಾ ಮಾವು ಮಾರಾಟ
Summary: A three-day mango fair has begun in Belgaum from today, with fresh mangoes being sold directly from farmers to consumers. There is huge demand for the king of fruits, mango, and consumers are flocking to buy quality mangoes at low prices.

Belagavi news:

ಬೆಳಗಾವಿಯಲ್ಲಿ ಹೊಸದಾಗಿ ಇಂದಿನಿಂದ ಮೂರು ದಿನಗಳ ಕಾಲ ಮಾವು ಮೇಳವನ್ನು ತೋಟಗಾರಿಕಾ ಇಲಾಖೆ ಹಮ್ಮಿಕೊಂಡಿದ್ದು, ರೈತರಿಂದ ನೇರವಾಗಿ ಗ್ರಾಹಕರಿಗೆ ತಾಜಾ ಮಾವು ಮಾರುಕಟ್ಟೆ ಅವಕಾಶ ಕಲ್ಪಿಸಲಾಗಿದೆ. ಬೆಳಗಾವಿ, ಧಾರವಾಡ ಜಿಲ್ಲೆಗಳ ಜೊತೆಗೆ ಮಹಾರಾಷ್ಟ್ರದ ಕೆಲ ರೈತರಿಗೂ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ವೇದಿಕೆ ನೀಡಲಾಗಿದೆ.

ನಗರದ ಕ್ಲಬ್ ರಸ್ತೆಯ ಹ್ಯೂಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ಈ ಮೇಳದಲ್ಲಿ ವಿವಿಧ ರೀತಿಯ ಮಾವಿನ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ನಡೆಯುತ್ತಿದೆ."ಯಾವ ಹಣ್ಣು ತಗೋಳ್ಳಿ, ಯಾವ ಹಣ್ಣು ಬಿಡಲಿ" ಎನ್ನುವಷ್ಟು ವೈವಿಧ್ಯಮಯ ವೆರೈಟಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಬಂಗಾರದ ಬಣ್ಣದಲ್ಲಿ ಕಂಗೊಳಿಸುವ ಹಣ್ಣುಗಳ ರಾಜ ಮಾವು ಮೇಳಕ್ಕೆ ಬಂದಿರುವವರ ಗಮನ ಸೆಳೆಯುತ್ತಿದ್ದಾನೆ.

ಮಹಿಳಾ ಗ್ರಾಹಕರು ಮಾವಿನ ವಾಸನೆ ನೋಡಿ ಹಣ್ಣುಗಳನ್ನು ಆಯ್ಕೆ ಮಾಡುತ್ತಿರುವುದು ಮೇಳದ ವಿಶೇಷ ದೃಶ್ಯವಾಗಿತ್ತು."ರಾಸಾಯನಿಕ ಮುಕ್ತ, ನೈಸರ್ಗಿಕ ಹಣ್ಣು"ಎಂದು ಹೇಳಿಕೊಂಡು ವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ.

Sponsored

ಈ ಮಾವು ಮೇಳಕ್ಕೆ ಇಂದು ಬೆಳಿಗ್ಗೆ ಐಪಿಜಿ ಚೇತನ್ ಸಿಂಗ್ ರಾಥೋಡ್ ಅವರು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಭೂಷಣ್ ಭರಸೆ, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂದೆ, ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಮಾಂತೇಶ್ ಮುರುಗೋಡ್ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.

ಭಾನುವಾರದವರೆಗೆ ನಡೆಯಲಿರುವ ಈ ಮೇಳದಲ್ಲಿ ಮಾವುಪ್ರಿಯರು ತಮ್ಮ ಇಷ್ಟದ ಹಣ್ಣುಗಳನ್ನು ನೇರವಾಗಿ ರೈತರಿಂದ ಖರೀದಿಸಿ ಸೇವಿಸಲು ಅವಕಾಶವಿದೆ. ಕಡಿಮೆ ದರದಲ್ಲಿ ತಾಜಾ ಮತ್ತು ಗುಣಮಟ್ಟದ ಮಾವು ಸಿಗುವುದರಿಂದ ಗ್ರಾಹಕರದಲ್ಲಿ ಉತ್ತಮ ಪ್ರತಿಕ್ರಿಯೆ ಕಂಡು ಬರುತ್ತಿದೆ.

ಬೆಳಗಾವಿಯಲ್ಲಿ ಮಾವು ಮೇಳಕ್ಕೆ ಭರ್ಜರಿ ಪ್ರತಿಕ್ರಿಯೆ:

ಬೆಳಗಾವಿಯಲ್ಲಿ ತೋಟಗಾರಿಕಾ ಇಲಾಖೆ ಹಮ್ಮಿಕೊಂಡಿರುವ ಮೂರು ದಿನಗಳ ಮಾವು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ರೈತರಿಂದ ನೇರವಾಗಿ ಗ್ರಾಹಕರಿಗೆ ರಾಸಾಯನಿಕ ಮುಕ್ತ ಹಣ್ಣುಗಳ ಮಾರಾಟ ನಡೆಯುತ್ತಿದೆ. ಈ ಮೇಳದಲ್ಲಿ ಒಟ್ಟು 24 ಸ್ಟಾಲ್ ಗಳನ್ನು ಹಾಕಲಾಗಿದ್ದು, ಅದರಲ್ಲಿ 22 ಸ್ಟಾಲ್ ಗಳಲ್ಲಿ ಬೆಳಗಾವಿ, ಧಾರವಾಡ ಹಾಗೂ ಮಹಾರಾಷ್ಟ್ರದ ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ.

Sponsored

ವಿಶೇಷವೆಂದರೆ ಸಾವಯವ ಪದ್ಧತಿಯಲ್ಲಿ ಬೆಳೆದ ಮಾವುಗಳನ್ನು ರೈತರು ಸ್ವತಃ ಮಾರಾಟ ಮಾಡುತ್ತಿರುವುದು ಗ್ರಾಹಕರ ಗಮನ ಸೆಳೆಯುತ್ತಿದೆ. ಕಳೆದ ನಾಲ್ಕು ವರ್ಷಗಳಿಂದ ತೋಟಗಾರಿಕಾ ಇಲಾಖೆ ರೈತರು ವ್ಯಾಪಾರಿಗಳಾಗುವಂತೆ ಪ್ರೋತ್ಸಾಹ ನೀಡುತ್ತಿದ್ದು, ಇದರ ಭಾಗವಾಗಿ "ಬೆಳಗಾವಿ ಮಾವು"ಎಂಬ ಬ್ರ್ಯಾಂಡ್ ನಿರ್ಮಿಸಲಾಗಿದ್ದು ಮಾರುಕಟ್ಟೆಯಲ್ಲಿ ಉತ್ತಮ ಗುರುತನ್ನು ಪಡೆಯುತ್ತಿದೆ.

ಮೇಳದಲ್ಲಿ ಆಪೂಸ್, ರತ್ನಗಿರಿ, ದೇವಗಡ, ಪೈರಿ, ಮಲ್ಲಿಕಾ, ಮಲಗೋವಾ, ಬಿಟ್ಕಿ ಸೇರಿದಂತೆ ವಿವಿಧ ವಿವಿಧ ಮಾವುಗಳು ಮಾರಾಟಕ್ಕಿದ್ದು, ಸುಮಾರು 40 ವಿಧದ ಹಣ್ಣುಗಳನ್ನು ಪ್ರದರ್ಶನಕ್ಕೂ ಇಡಲಾಗಿದೆ. ಹಣ್ಣುಗಳ ದರವನ್ನು 400 ರಿಂದ 700 ರವರೆಗೆ ನಿಗದಿಪಡಿಸಲಾಗಿದೆ.

ತೋಟಗಾರಿಕಾ ಇಲಾಖೆ ಜಂಟಿ ನಿರ್ದೇಶಕ ಮಹಾಂತೇಶ್ ಮುರಗೋಡ್ ಅವರು ಮಾತನಾಡಿ, "ಮಾವು ಮೇಡಂ ಇವತ್ತಿನಿಂದ ಮೂರು ದಿನಗಳ ಕಾಲ ಬೆಳಗ್ಗೆ 9:00 ಯಿಂದ ಸಂಜೆ 8 ಗಂಟೆಯವರೆಗೆ ನಡೆಯಲಿದೆ. ನೈಸರ್ಗಿಕವಾಗಿ ಬೆಳೆದ ಹಣ್ಣುಗಳಲ್ಲಿ ವಿಟಮಿನ್ ಎ ಸೇರಿದಂತೆ ಪೋಷಕಾಂಶಗಳು ಹೆಚ್ಚಾಗಿವೆ. ಜನರಿಂದ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ದೊರೆತಿದೆ" ಎಂದು ತಿಳಿಸಿದ್ದಾರೆ.

ಅವರು ಮುಂದುವರೆದು,"ರೈತರು ತಮ್ಮ ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡಿದರೆ ಹೆಚ್ಚು ಲಾಭ ಪಡೆಯಬಹುದು. ಅದಕ್ಕಾಗಿ ಇಲಾಖೆ ಅಗತ್ಯ ಮಾರ್ಗದರ್ಶನ ನೀಡಲು ಸಿದ್ಧವಾಗಿದೆ"ಎಂದು ಹೇಳಿದರು.

Sponsored

ಕಿತ್ತೂರು ತಾಲೂಕಿನ ಹೊನ್ನಾಪುರ ರೈತ ಮಲ್ಲಿಕಾರ್ಜುನ ಅವರು ಮಾತನಾಡಿ, ತೋಟಗಾರಿಕಾ ಇಲಾಖೆಯ ಈ ಪ್ರಯತ್ನದಿಂದ ರೈತರಿಗೆ ನೇರ ಮಾರುಕಟ್ಟೆ ಸಿಗುತ್ತಿದೆ ಎಂದು ಹೇಳಿದರು. "ಆಪೂಸ್, ಕೆಸರ, ಫೈರಿ ಸೇರಿದಂತೆ ಹಲವು ವೆರೈಟಿಗಳಿವೆ. ಈ ಬಾರಿ ಇಳುವರಿ ಕಡಿಮೆಯಾದರು, ಜನರ ಪ್ರತಿಕ್ರಿಯೆ ಸಂತೋಷ ತಂದಿದೆ"ಎಂದು ಹೇಳಿದರು.

ಅವರು ಮುಂದುವರೆದು, ಮಹಾರಾಷ್ಟ್ರ, ಆಂಧ್ರ ಪ್ರದೇಶ್, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಏಕಕಾಲದಲ್ಲಿ ಹಣ್ಣು ಮಾರುಕಟ್ಟೆಗೆ ಬಂದಿರುವುದರಿಂದ ದರ ಸ್ವಲ್ಪ ಕಡಿಮೆಯಾಗಿದೆ ಎಂದರೂ, ರಾಸಾಯನಿಕ ಮುಕ್ತ ಹಣ್ಣುಗಳಿಗೆ ಜನರಲ್ಲಿ ಹೆಚ್ಚುತ್ತಿರುವ ಬೇಡಿಕೆ ಸಂತೋಷ ತಂದಿದೆ ಎಂದು ಅಭಿಪ್ರಾಯಪಟ್ಟರು.

ಒಟ್ಟಾರೆ, ರೈತರಿಂದ ನೇರವಾಗಿ ಗ್ರಾಹಕರಿಗೆ ತಾಜಾ ಮತ್ತು ನೈಸರ್ಗಿಕ ಮಾವು ದೊರೆಯುತ್ತಿರುವುದು ಈ ಮೇಳವೂ ಬೆಳಗಾವಿಯಲ್ಲಿ ಮಾವುಪ್ರಿಯರಿಗೆ ವಿಶೇಷ ಅನುಭವವನ್ನು ನೀಡುತ್ತಿದೆ.

ಬೆಳಗಾವಿಯ ಮಾವು ಮೇಳದಲ್ಲಿ ರೈತರಿಂದ ನೇರ ಮಾರಾಟ:

Sponsored

ಬೆಳಗಾವಿಯಲ್ಲಿ ತೋಟಗಾರಿಕಾ ಇಲಾಖೆಯು ಹಮ್ಮಿಕೊಂಡಿರುವ ಮೂರು ದಿನಗಳ ಮಾವು ಮೇಳವು ಭರ್ಜರಿ ಸಂಭ್ರಮದಲ್ಲಿ ನಡೆಯುತ್ತಿದೆ. ರೈತರಿಂದ ನೇರವಾಗಿ ತಾಜಾ, ನೈಸರ್ಗಿಕ ಮಾವು ಮಾರಾಟವಾಗುತ್ತಿದ್ದು, ಗ್ರಾಹಕರು ತಾವು ಇಚ್ಚಿಸಿರುವ ವೆರೈಟಿ ಹಣ್ಣುಗಳನ್ನು ಖರೀದಿಸಲು ಮುಗಿಬಿದ್ದಿದ್ದಾರೆ.

ಕ್ಲಬ್ ರಸ್ತೆಯ ಹ್ಯೂಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ಮೇಳದಲ್ಲಿ ರೈತರು ತಮ್ಮ ಹಣ್ಣುಗಳನ್ನು ತಾವು ಸ್ವತಃ ಮಾರಾಟ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಮಾವು ಮೇಳದಲ್ಲಿ ಪಾಲ್ಗೊಳ್ಳುತ್ತಿರುವ ರೈತ ರಾಜೇಶ್ ಸಾವಳೇಕರ್ ಅವರು,"ನಮ್ಮ 32 ಎಕರೆ ಮಾವಿನ ತೋಟದಿಂದ ಪ್ರತಿವರ್ಷ ಸುಮಾರು 70 ಟನ್ ಹಣ್ಣು ಪಡೆಯುತ್ತೇವೆ. ಹಣ್ಣು 50 ಗ್ರಾಂ ಇದ್ದಾಗಲೇ ಪೇಪರ್ ಬ್ಯಾಂಗಿಂಗ್ ಮಾಡುತ್ತೇವೆ, ತಂಪು ವಾತಾವರಣದಲ್ಲಿ ಇಡುವುದರಿಂದ ಹಣ್ಣು ರುಚಿ, ಬಣ್ಣ ಉತ್ತಮವಾಗುತ್ತದೆ. ದೇಶ ಮತ್ತು ವಿದೇಶಗಳಿಗೆ ಮಾರಾಟ ಮಾಡುತ್ತೇವೆ. ಆನ್ಲೈನ್ ಬುಕ್ ಮಾಡಿದರೆ ಮನೆಗೆ ತಲುಪಿಸುತ್ತೇವೆ"ಎಂದು ಹೇಳಿದರು.

ಗ್ರಾಹಕರು ಮೇಳದಲ್ಲಿ ಖುಷಿ ವ್ಯಕ್ತಪಡಿಸಿದ್ದಾರೆ. ಮಂಜುಶ್ರೀ ಎಂಬುವವರು,"ರೈತರಿಂದ ನೇರವಾಗಿ ನೈಸರ್ಗಿಕವಾಗಿ ಬೆಳೆದ ಹಣ್ಣುಗಳನ್ನು ಖರೀದಿಸಬಹುದಾಗಿದೆ. ಎಲ್ಲ ವಿಧವಾದ ಹಣ್ಣು ಖರೀದಿಸಿದ್ದೇವೆ, ನಾಳೆ ಮತ್ತಷ್ಟು ಕರಗಿಸಲು ಬರುವೆವು. ಹಣ್ಣುಗಳ ರಾಜ ಮಾವು ಎಲ್ಲರಿಗೂ ಇಷ್ಟ"ಎಂದು ಹರ್ಷ ವ್ಯಕ್ತಪಡಿಸಿದರು.

ಹೀಗೆ ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಮಾವು ಮೇಳದಲ್ಲಿ ಭಾಗವಹಿಸಿದ ಮಹಿಳೆಯರು ಮತ್ತು ಪುರುಷರು ತಮ್ಮದೇ ಆದಂತಹ ಈ ಮಾವು ಮೇಳದ ಬಗ್ಗೆ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಮಾವುಗಳು ತುಂಬಾ ರುಚಿಯಾಗಿದೆ ಮತ್ತು ನಮಗೆ ಬೇಕಾದ ದರದಲ್ಲಿ ಮತ್ತು ಬೇಕಾದ ವಿಧಗಳು ಇಲ್ಲಿ ಲಭ್ಯವಿವೆ ಎಂದು ಹೇಳಿದರು. ಒಟ್ಟಾರೆಯಾಗಿ ಈ ಮೂರು ದಿನದ ಮಾವು ಮೇಳವು ರೈತರಿಗೆ ತಾವು ಬೆಳೆದ ಹಣ್ಣುಗಳ ಮಾರಾಟಕ್ಕೆ ತುಂಬಾ ಸಹಾಯಕವಾಗುತ್ತದೆ.

Sponsored

ಜೊತೆಗೆ ನೈಸರ್ಗಿಕ ಹಣ್ಣುಗಳನ್ನು ಖರೀದಿಸುವಂತಹ ಅವಕಾಶವು ಗ್ರಾಹಕರಿಗೆ ಸಿಗುತ್ತದೆ ಇದು ಒಂದು ಉತ್ತಮ ಕಾರ್ಯವಾಗಿದೆ ಎಂದು ಹೇಳಬಹುದು. ನಿಮಗೂ ಕೂಡ ಸಮಯವಿದ್ದರೆ ಇಂದಿನಿಂದ ಮೂರು ದಿನಗಳಲ್ಲಿ ಅಂದರೆ ದಿನಾಂಕ 10ನೇ ತಾರೀಖಿನ ಒಳಗಾಗಿ ನೀವು ಕೂಡ ಒಮ್ಮೆ ಈ ಮಾವು ಮೇಳಕ್ಕೆ ಭೇಟಿ ಕೊಟ್ಟು ನಿಮಗೆ ಬೇಕಾದ ರೀತಿಯ ಹಣ್ಣುಗಳನ್ನು ನೀವು ಖರೀದಿಸಬಹುದು. ನೈಸರ್ಗಿಕ ಹಣ್ಣುಗಳು ನಿಮ್ಮ ಆರೋಗ್ಯಕ್ಕೂ ಒಳ್ಳೆಯದು.

Also Read:

Bengaluru Metro Update: ಮೇ 10 ರಂದು ಸಂಚಾರ ವ್ಯತ್ಯಯ, ಪ್ರಯಾಣಿಕರಿಗೆ ಸೂಚನೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online