<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Education

ಮೆಡಿಕಲ್ ಸೀಟ್ ಹೆಸರಿನಲ್ಲಿ ಮೋಸ! ವಿದ್ಯಾರ್ಥಿಗಳು, ಪೋಷಕರಿಗೆ KEA ನಿರ್ದೇಶಕರ ಎಚ್ಚರಿಕೆ

ಮೆಡಿಕಲ್ ಸೀಟ್ ಹೆಸರಿನಲ್ಲಿ ಮೋಸ! ವಿದ್ಯಾರ್ಥಿಗಳು, ಪೋಷಕರಿಗೆ KEA ನಿರ್ದೇಶಕರ ಎಚ್ಚರಿಕೆ
Summary: In the wake of increasing attempts to cheat students and parents in the name of management seats in medical courses, the Karnataka Examinations Authority (KEA) has issued a significant warning. The KEA director has clarified that do not believe the words of middlemen, agents and unauthorized persons who claim to ensure seats in the management quota.

belagavi news :

ಮೋಸ ಹೋಗ್ಬೇಡಿ: ಮೆಡಿಕಲ್ ಕೋರ್ಸ್ ಮ್ಯಾನೇಜ್ಮೆಂಟ್ ಸೀಟ್ ಬಗ್ಗೆ KEA ನಿರ್ದೇಶಕರ ಮಹತ್ವದ ಎಚ್ಚರಿಕೆ

ಮುಖ್ಯಾಂಶಗಳು:

Sponsored

ಮೆಡಿಕಲ್ ಕೋರ್ಸ್ ಸಂಬಂಧಿಸಿದ ಮ್ಯಾನೇಜ್ಮೆಂಟ್ ಹಾಗೂ NRI ಸೀಟ್ ಹಂಚಿಕೆ

ಮೆಡಿಕಲ್, ಡೆಂಟಲ್, ಆಯುಷ್ ಸೀಟು ನೀಟ್ ರ್ಯಾಂಕ್ ಆಧರಿಸಿ ಕೆಇಎ ಮೂಲಕ ಅಲರ್ಟ್

ಮಾಧ್ಯಮ ಮೂಲಕ ಮಾಹಿತಿ ನೀಡಿದ ಕೆಇಎ ನಿರ್ದೇಶಕ H ಪ್ರಸನ್ನ

ಮೆಡಿಕಲ್ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಮ್ಯಾನೇಜ್ಮೆಂಟ್ ಮತ್ತು NRI ಕೋಟಾ ಸೀಟ್ ಗಳ ಹೆಸರಿನಲ್ಲಿ ನಡೆಯುವ ವಂಚನೆಗಳ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA ನಿರ್ದೇಶಕ H. Prasanna ಎಚ್ಚರಿಕೆ ನೀಡಿದ್ದಾರೆ.

Sponsored

ಮೆಡಿಕಲ್ ಸೀಟ್ ಹೆಸರಿನಲ್ಲಿ ವಂಚನೆಗೆ ಎಚ್ಚರ! (KEA) ನಿರ್ದೇಶಕರಿಂದ ಮಹತ್ವದ ಮಾಹಿತಿ

ಬೆಂಗಳೂರು: ಉನ್ನತ ಶಿಕ್ಷಣ ಪ್ರವೇಶ ಪ್ರಕ್ರಿಯೆಯ ವೇಳೆ ಸೀಟ್ ಮಾಫಿಯಾ ಮತ್ತು ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಎಚ್ಚರಿಕೆಯಿಂದಿರಬೇಕಾಗಿದೆ. ವಿಶೇಷವಾಗಿ ವೈದಿಕೀಯ ಕೋರ್ಸ್ ಗಳಿಗೆ ಸಂಬಂಧಿಸಿದ ಮ್ಯಾನೇಜ್ಮೆಂಟ್ ಹಾಗೂ NRI ಸೀಟ್ ಗಳನ್ನು ನೇರವಾಗಿ ಕಾಲೇಜ್ ಗಳು ನೀಡುತ್ತವೆ ಎಂಬ ತಪ್ಪು ಕಲ್ಪನೆಯಿಂದ ಅನೇಕರು ಲಕ್ಷಾಂತರ ರೂಪಾಯಿ ಹಣ್ಣು ಕಳೆದುಕೊಂಡಿರುವ ಉದಾಹರಣೆಗಳಿವೆ.

ಮ್ಯಾನೇಜ್ಮೆಂಟ್ ಅಥವಾ NRI ಕೋಟಾದಲ್ಲಿ ಸೀಟ್ ಖಚಿತಪಡಿಸುತ್ತೇವೆ ಎಂದು ಹೇಳುವ ಮಧ್ಯವರ್ತಿಗಳು, ಏಜೆಂಟ್ ಗಳು ಹಾಗೂ ಅನಧಿಕೃತ ವ್ಯಕ್ತಿಗಳ ಮಾತುಗಳನ್ನು ನಂಬಿ, ಹಣ ಪಾವತಿಸುವುದರಿಂದ ವಂಚನೆಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಪ್ರವೇಶ ಪ್ರಕ್ರಿಯೆಯ ಕುರಿತ ಅಧಿಕೃತ ಮಾಹಿತಿಯನ್ನು ಮಾತ್ರ ಪರಿಶೀಲಿಸಿ, ಮಾನ್ಯ ಕೌನ್ಸೆಲಿಂಗ್ ವ್ಯವಸ್ಥೆಯ ಮೂಲಕವೇ ಸೀಟ್ ಪಡೆಯಬೇಕು ಎಂದು ಶಿಕ್ಷಣ ತಜ್ಞರು ಸಲಹೆ ನೀಡುತ್ತಿದ್ದಾರೆ.

ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಆಯುಷ್ ಕೋರ್ಸ್ ಗಳ ಪ್ರವೇಶ ಪ್ರಕ್ರಿಯೆ ಕುರಿತು ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕೃತ ಪ್ರಕಟಣೆಗಳನ್ನು ಮಾತ್ರ ನಂಬುವುದು ಅತ್ಯಂತ ಮುಖ್ಯವಾಗಿದೆ.

Sponsored

ಮೆಡಿಕಲ್, ಡೆಂಟಲ್ ಹಾಗು ಆಯುಷ್ ಕೋರ್ಸ್ ಗಳ ಮ್ಯಾನೇಜ್ಮೆಂಟ್ ಸೀಟ್ಗಳ ಹೆಸರಿನಲ್ಲಿ ನಡೆಯುವ ವಂಚನೆಗಳ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಿರ್ದೇಶಕ H. Prasanna ಮಹತ್ವದ ಸ್ಪಷ್ಟನೆ ನೀಡಿದ್ದಾರೆ.

ಅವರ ಪ್ರಕಾರ, ಇಂಜಿನಿಯರಿಂಗ್ ಕೋರ್ಸ್ ಗಳಲ್ಲಿ ಮಾತ್ರ ನಿರ್ದಿಷ್ಟ ಪ್ರಮಾಣದ ಮ್ಯಾನೇಜ್ಮೆಂಟ್ ಕೋಟಾ ಸೀಟ್ ಗಳ ವ್ಯವಸ್ಥೆ ಇದೆ. ಆದರೆ ಮೆಡಿಕಲ್, ಡೆಂಟಲ್ ಮತ್ತು ಆಯುಷ್ ಕೋರ್ಸ್ ಗಳ ಸೀಟ್ ಹಂಚಿಕೆ ರಾಷ್ಟ್ರೀಯ ವೈದ್ಯಕೀಯ ನಿಯಮಗಳು ಹಾಗೂ ಸುಪ್ರೀಂ ಕೋರ್ಟ್ ನಿರ್ದೇಶನಗಳ ಅನ್ವಯ NEET ರ್ಯಾಂಕ್ ಆಧಾರದ ಮೇಲೆಯೇ ನಡೆಯುತ್ತದೆ.

ಎಲ್ಲ ಮ್ಯಾನೇಜ್ಮೆಂಟ್ ಹಾಗೂ NRI ಸೀಟ್ ಗಳ ಹಂಚಿಕೆಯು KEA ಮೂಲಕವೇ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ನಡೆಯುವುದರಿಂದ, " ಮೆಡಿಕಲ್ ಮ್ಯಾನೇಜ್ಮೆಂಟ್ ಸೀಟ್ ಕೊಡಿಸುತ್ತೇನೆ" , " ನೇರ ಪ್ರವೇಶ ಮಾಡಿಸುತ್ತೇನೆ" ಎಂದು ಹೇಳುವ ವ್ಯಕ್ತಿಗಳು ಅಥವಾ ಏಜೆಂಟ್ ಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ಪೋಷಕರು ಎಚ್ಚರಿಕೆಯಿಂದಿರಬೇಕು ಎಂದು ಅವರು ತಿಳಿಸಿದ್ದಾರೆ.

ಸೀಟ್ ಗಾಗಿ ಹಣ ಪಡೆದು ಪ್ರವೇಶ ಕಚಿತಪಡಿಸುತ್ತೇವೆ ಎಂಬ ಆಮಿಷಗಳಿಗೆ ಒಳಗಾಗದೆ, KEA ಪ್ರಕಟಿಸುವ ಅಧಿಕೃತ ಮಾಹಿತಿ ಮತ್ತು ಕೌನ್ಸಿಲಿಂಗ್ ಪ್ರಕ್ರಿಯೆ ಹೆಣ್ಣು ಮಾತ್ರ ಅನುಸರಿಸುವಂತೆ ಎಚ್. ಪ್ರಸನ್ನ ಮನವಿ ಮಾಡಿದ್ದಾರೆ. ಇದು ಪ್ರವೇಶದ ಹೆಸರಿನಲ್ಲಿ ನಡೆಯುವ ವಂಚನೆಗಳಿಂದ ರಕ್ಷಿಸಿಕೊಳ್ಳಲು ಅತ್ಯಂತ ಮುಖ್ಯವಾಗಿದೆ.

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online