belagavi news:
ಮಕ್ಕಳಿಗೆ ಮೊಬೈಲ್ ನೀಡುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಪೋಷಕರಲ್ಲಿ ಇನ್ನೂ ಸಂಪೂರ್ಣ ಜಾಗೃತಿ ಇಲ್ಲ ಎಂಬ ತಜ್ಞರ ಅಭಿಪ್ರಾಯ. ಆದರೆ ಇತ್ತೀಚಿನ ಹಲವು ಸಂಶೋಧನೆಗಳ ಆತಂಕಕಾರಿ ಅಂಶಗಳನ್ನು ಹೊರತರುತ್ತಿವೆ. ವಿಶೇಷವಾಗಿ ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹೆಚ್ಚು ಸ್ಕ್ರೀನ್ ಟೈಮ್ ಗೆ ಒಳಗಾದರೆ ಅವರ ಮೆದುಳಿನ ಬೆಳವಣಿಗೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧ್ಯಯನಗಳು ಸೂಚಿಸುತ್ತಿವೆ.
18 ತಿಂಗಳ ಒಳಗಿನ ಮಕ್ಕಳಲ್ಲಿ ಅತಿಯಾದ ಸ್ಕ್ರೀನ್ ಬಳಕೆ autism spectrum disorder ಲಕ್ಷಣದೊಂದಿಗೆ ಸಂಬಂಧ ಹೊಂದಿರುವುದಾಗಿ ಕೆಲ ಸಂಶೋಧನೆಗಳಲ್ಲಿ ಗಮನಿಸಲಾಗಿದೆ. ಈ ಬಗ್ಗೆ ಶೆಫಾಲಿ ಗುಲಾಟಿ ಅವರು ಮಹತ್ವದ ಮಾಹಿತಿ ನೀಡಿದ್ದು, ಮಕ್ಕಳಲ್ಲಿ ಮೊಬೈಲ್ ಬಳಕೆಯನ್ನು ನಿಯಂತ್ರಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. ಒಟ್ಟಾರೆ, ತಜ್ಞರ ಸಲಹೆಯಂತೆ ಆರಂಭಿಕ ವಯಸ್ಸಿನ ಮಕ್ಕಳಿಗೆ, ಸ್ಕ್ರೀನ್ ಎಕ್ಸ್ ಪೋಜರ್ ಕಡಿಮೆ ಮಾಡುವುದು ಅವರ ಆರೋಗ್ಯಕರ ಮೆದುಳಿನ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದೆ.
autism spectrum disorder ಎಂದರೆ ಮಕ್ಕಳ ನರ ಸಂಬಂಧಿತ ಬೆಳವಣಿಗೆಗೆ ಸಂಬಂಧಿಸಿದ ಒಂದು ಸ್ಥಿತಿ. ಇದು ಮಕ್ಕಳ ಸಂವಹನ, ವರ್ತನೆ ಮತ್ತು ಸಾಮಾಜಿಕ ಸಂಪರ್ಕದ ಮೇಲೆ ಪರಿಣಾಮ ಬೀರುತ್ತದೆ. ಇಂಥ ಮಕ್ಕಳು ಮಾತನಾಡುವುದು, ಇತರರೊಂದಿಗೆ ಸಂವಹನ ನಡೆಸುವುದು ಅಥವಾ ಸಾಮಾಜಿಕ ಸೂಚನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸಾಮಾನ್ಯ ಮಕ್ಕಳಿಗಿಂತ ಭಿನ್ನವಾಗಿ ಪ್ರತಿಕ್ರಿಸಬಹುದು.
ಸಂಶೋಧನೆಗಳ ಪ್ರಕಾರ, ಅತಿಯಾದ ಸ್ಕ್ರೀನ್ ಟೈಮ್-ವಿಶೇಷವಾಗಿ ಮೊಬೈಲ್ ಮತ್ತು ಟಿವಿ ಬಳಕೆ-ಮಕ್ಕಳ ವರ್ತನೆ ಮತ್ತು ಸಮಾನ ಕೌಶಲ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ಕೆಲವು ಅಧ್ಯಯನಗಳಲ್ಲಿ ದೀರ್ಘ ಕಾಲ ಸ್ಕ್ರೀನ್ ಬಳಕೆ ಇರುವ ಮಕ್ಕಳಲ್ಲಿ ಆಟಿಸಂಗೆ ಸಂಬಂಧಿಸಿದ ಲಕ್ಷಣಗಳು ಹೆಚ್ಚು ಕಾಣಿಸಬಹುದು ಎಂಬುವುದು ಗಮನಿಸಲಾಗಿದೆ. ವಿಶೇಷವಾಗಿ ಬಾಲಕರಲ್ಲಿ ಈ ಲಕ್ಷಣವು ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ. ಅತಿಯಾದ ಸ್ಕ್ರೀನ್ ಬಳಕೆ ಮಕ್ಕಳ ಭಾಷಾ ಬೆಳವಣಿಗೆ ಮತ್ತು ಸಾಮಾಜಿಕೌಶಲ್ಯವನ್ನು ನಿಧಾನಗೊಳಿಸಬಹುದು ಎಂಬುವುದು ಸಂಶೋಧನೆ ಗಳಲ್ಲಿನ ಪ್ರಮುಖ ಅಂಶವಾಗಿದೆ. ಒಟ್ಟಾರೆ, ಸದ್ಯರು ಹೇಳುವಂತೆ ಮಕ್ಕಳಿಗೆ ಕ್ರೀಮ್ ಟೈಮ ನಿಯಂತ್ರಣ ಅತ್ಯಂತ ಮುಖ್ಯವಾಗಿದ್ದು, ನೈಜ ಸಮಾನ ಮತ್ತು ಆಟದ ಚಟುವಟಿಕೆಗಳು ಅವರ ಸಮಗ್ರ ಬೆಳವಣಿಗೆ ಸಹಕಾರಿಯಾಗುತ್ತವೆ.
ಇಂದಿನ ಡಿಜಿಟಲ್ ಯುಗದಲ್ಲಿ ಚಿಕ್ಕ ಮಕ್ಕಳಿಗೂ ಮೊಬೈಲ್ ಬಳಕೆ ಸಾಮಾನ್ಯವಾಗಿತ್ತಿರುವುದರಿಂದ ಆರೋಗ್ಯ ತಜ್ಞರು ಹಲವು ಬಾರಿ ಎಚ್ಚರಿಕೆ ನೀಡುತ್ತಿದ್ದಾರೆ. ಎಐಐಎಂಎಸ್ ನಡೆಸಿದ ಸಂಶೋಧನೆಯ ಪ್ರಕಾರ, ಅತಿಯಾದ ಸ್ಕ್ರೀನ್ ಟೈಮ್ ಮಕ್ಕಳ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ. ವಿಶೇಷವಾಗಿ ಚಿಕ್ಕ ವಯಸ್ಸಿನಲ್ಲಿ ಹೆಚ್ಚು ಸ್ಕ್ರೀನ್ ಬಳಕೆಯಿಂದ "ವರ್ಚುಯಲ್ ಆಟಿಸಂ"ಎಂಬ ಅಪಾಯ ಹೆಚ್ಚಾಗಬಹುದು ಎಂಬುದು ಗಮನಾರ್ಹ ಅಂಶವಾಗಿದೆ. ಈ ಕುರಿತು ಶೇಫಾಲಿ ಗುಲಾಟಿ ಅವರು ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮೊಬೈಲ್ ಬಳಕೆ ಹೆಚ್ಚಾದರೆ ಮೆದುಳಿನ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಸಂಶೋಧನೆಗಳಲ್ಲಿಯೂ 18 ತಿಂಗಳೊಳಗಿನ ಮಕ್ಕಳಲ್ಲಿ ಹೆಚ್ಚು ಸ್ಕ್ರೀನ್ ಆಟಿಸಂಗೆ ಸಂಬಂಧಿಸಿದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಬಹುದು ಎಂಬ ಅಂಶವನ್ನು ಗಮನಿಸಲಾಗಿದೆ. ಒಟ್ಟಾರೆ, ತಜ್ಞರ ಅಭಿಪ್ರಾಯದಂತೆ ಆರಂಭಿಕ ವಯಸ್ಸಿನ ಮಕ್ಕಳಿಗೆ ಸ್ಕ್ರೀನ್ ಟೈಮ್ ನಿಯಂತ್ರಿಸುವುದು ಅವರ ಆರೋಗ್ಯಕರ ಮಾನಸಿಕ ಮತ್ತು ಮೆದುಳಿನ ಬೆಳವಣಿಗೆಗೆ ಅತ್ಯಂತ ಅಗತ್ಯವಾಗಿದೆ.
ಪೋಷಕರಿಗೆ ತಜ್ಞರು ನೀಡಿರುವ ಪ್ರಮುಖ ಸಲಹೆ ಪ್ರಕಾರ, ಮಕ್ಕಳೊಂದಿಗೆ ನೇರ ಸಂವಹನವನ್ನು ಹೆಚ್ಚಿಸುವುದು ಅತ್ಯಂತ ಅಗತ್ಯ. ಮಕ್ಕಳನ್ನು ಶಾಂತವಾಗಿಡಲು ಮೊಬೈಲ್ ಅಥವಾ ಸ್ಕ್ರೀನ್ ನೀಡುವ ಅಭ್ಯಾಸವನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು ಎಂದು ತಜ್ಞರು ಎಚ್ಚರಿಸುತ್ತಾರೆ. ಮಕ್ಕಳ ಸ್ಕ್ರೀನ್ ಟೈಮನ್ನು ಹಂತ ಹಂತವಾಗಿ ಕಡಿಮೆ ಮಾಡುವುದರಿಂದ ಅವರ ವರ್ತನೆ ಮತ್ತು ಸಂವಹನ ಕೌಶಲ್ಯಗಳಲ್ಲಿ ಉತ್ತಮ ಬದಲಾವಣೆ ಕಾಣಬಹುದು. ಜೊತೆಗೆ, ಮಕ್ಕಳಲ್ಲಿ ಆಟಿಸಂ ಸಂಬಂಧಿತ ಲಕ್ಷಣಗಳು ಕಂಡು ಬಂದರೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಅತ್ಯಂತ ಮುಖ್ಯ ಎಂದು ಸಲಹೆ ನೀಡಲಾಗಿದೆ.
ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದು, ಆಟ ಮತ್ತು ನೈಜ ಸಂವಹನವನ್ನು ಉತ್ತೇಜಿಸುವುದು ಅವರ ಮಾನಸಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಒಟ್ಟಾರೆ ಕ್ರೀಮ್ ಬಳಕೆಯನ್ನು ನಿಯಂತ್ರಿಸಿ ನೈಜ ಸಂವಹನ ಹೆಚ್ಚಿಸುವುದು ಮಕ್ಕಳ ಆರೋಗ್ಯಕರ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ.
Also Read: