<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಟ್ರಂಪ್ ಬೇಟಿಯಲ್ಲಿ ಮೋದಿ ಕಳವಳ : 'ನಿರಪರಾಧ ಭಾರತೀಯರೂ ಬಲಿಯಾಗಿದ್ದಾರೆ'

ಟ್ರಂಪ್ ಬೇಟಿಯಲ್ಲಿ ಮೋದಿ ಕಳವಳ : 'ನಿರಪರಾಧ ಭಾರತೀಯರೂ ಬಲಿಯಾಗಿದ್ದಾರೆ'
Summary: Prime Minister Narendra Modi expressed concern in the presence of US President Donald Trump over the rising tension in the Strait of Hormuz and the disruption to maritime trade. Modi said that the situation in the strait, which is a key route for global trade and energy supplies, is a matter of concern and said that the safety of Indian sailors and the security of sea routes are of utmost importance to India.

belagavi news :

ಟ್ರಂಪ್ ಎದುರೇ ಭಾರತೀಯ ನಾವಿಕರ ಸಾವಿನ ವಿಚಾರ ಪ್ರಸ್ತಾಪಿಸಿದ ಮೋದಿ

ಓಮನ್ ಕೊಲ್ಲಿ ಪ್ರದೇಶದಲ್ಲಿ ಇತ್ತೀಚಿಗೆ ನಡೆದ ಅಮೆರಿಕಾದ ದಾರಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟನೇ ಕುರಿತು ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದರು. ನಾವಿಕರ ಸುರಕ್ಷತೆ ಮತ್ತು ಸಮುದ್ರ ಮಾರ್ಗಗಳ ಭದ್ರತೆ ಎಲ್ಲಾ ರಾಷ್ಟ್ರಗಳ ಪ್ರಮುಖ ಜವಾಬ್ದಾರಿಯಾಗಬೇಕು ಎಂದು ಅವರು ಒತ್ತಿ ಹೇಳಿದರು.

ಫ್ರಾನ್ಸ್ ನ ಇವಿಯನ್ ನಲ್ಲಿ ನಡೆದ ಜಿ 7 ನಾಯಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜಾಗತಿಕ ಸಮುದ್ರ ವ್ಯಾಪಾರ ಮತ್ತು ಇಂಧನ ಸಾಗಾಣಿಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ವಿಶೇಷವಾಗಿ ಗಮನ ಸೆಳೆದರು. ತಮ್ಮ ಪಕ್ಷದಲ್ಲಿ ಕುಳಿತಿದ್ದ ಅಮೇರಿಕಾ ಅಧ್ಯಕ್ಷ ಟ್ರಂಪ್ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಪ್ರದೇಶದಲ್ಲಿನ ಉದ್ವಿಗ್ನತೆ ಜಾಗತಿಕ ಆರ್ಥಿಕತೆಗೆ ಬಾರಿ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದರು.

Sponsored

ಭಾರತೀಯ ನಾಗಕರ ಜೀವ ಹಾನಿಯಂತಹ ಘಟನೆಗಳು ಕಳವಳಕಾರಿ ಎಂದು ಮೋದಿ, ಸಮುದ್ರ ಮಾರ್ಗಗಳಲ್ಲಿ ಸುರಕ್ಷತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಜಾಗತಿಕ ಮಟ್ಟದಲ್ಲಿ ಸಮನ್ವಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಹಾರ್ಮುಜ್ ಜಲಸಂಧಿಯಲ್ಲಿನ ಅಸ್ಥಿರತೆ ವ್ಯಾಪಾರ, ಇಂಧನ ಸರಬರಾಜು ಮತ್ತು ಅಂತರಾಷ್ಟ್ರೀಯ ಸಾಗಾಣಿಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂಬುದನ್ನು ಅವರು ಉಲ್ಲೇಖಿಸಿದರು.

ಜಿ7 ವೇದಿಕೆಯಲ್ಲಿ ಮೋದಿ ಮಾಡಿದ ಈ ಪ್ರಸ್ತಾಪವು ಜಾಗತಿಕ ಭದ್ರತೆ, ಸಮುದ್ರ ಮಾರ್ಗಗಳ ಸುರಕ್ಷತೆ ಮತ್ತು ಭಾರತೀಯ ನಾಗರಿಕರ ರಕ್ಷಣೆಯ ಬಗ್ಗೆ ಭಾರತದ ಕಾಳಜಿಯನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ.

"ಹಾರ್ಮುಜ್ ಜಲಸಂಧಿಯಲ್ಲಿನ ಅಸ್ಥಿರತೆಯು ಅಪಾರ ಮಾನವ ಮತ್ತು ಆರ್ಥಿಕ ನಷ್ಟ ಉಂಟು ಮಾಡುತ್ತಿದೆ. ಅಂತರಾಷ್ಟ್ರೀಯ ಕಡಲ ವ್ಯಾಪಾರ ಮಾರ್ಗಗಳನ್ನು ರಕ್ಷಿಸಬೇಕಿದೆ. ಸಮುದ್ರ ಮಾರ್ಗಗಳು ಸುರಕ್ಷಿತವಾಗಿರಬೇಕು. ನಾವಿಕರು ಯಾವುದೇ ಭಯವಿಲ್ಲದೆ ತಮ್ಮ ಕೆಲಸ ನಿರ್ವಹಿಸಬಹುದು ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕು" ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ಭಾರತೀಯ ನಾವಿಕರ ಸಾವಿಗೆ ಭಾರತ ಆಕ್ರೋಶ; ಅಮೇರಿಕಾ ವಿರುದ್ಧ ತೀವ್ರ ಪ್ರತಿಭಟನೆ

Sponsored

ಉಮಾನ್ ಕೊಲ್ಲಿಯಲ್ಲಿ ಪಲಾವ್ ಧ್ವಜ ಹೊಂದಿದ ತೈಲ ಪೂರೈಕೆ ಹಡಗು ' ಸೆಟ್ಟೆ ಬೆಲ್ಲೋ' ಮೇಲೆ ಅಮೆರಿಕಾದ ನೌಕಾಪಡೆ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟ ಘಟನೆ ಅಂತರಾಷ್ಟ್ರೀಯ ಮಧ್ಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಹಡಗಿನಲ್ಲಿ ಒಟ್ಟು 28 ಸಿಬ್ಬಂದಿ ಇದ್ದು, ಅವರಲ್ಲಿ 24 ಭಾರತೀಯರು, ಇಬ್ಬರು ಪಾಕಿಸ್ತಾನಿಗಳು, ಒಬ್ಬ ಉಕ್ರೇನಿಯನ್ ಹಾಗೂ ಒಬ್ಬ ರಷ್ಯನ್ ಪ್ರಜೆಯಾಗಿದ್ದರು. ತೈಲಸಾಗನೇ ವೇಳೆ ಅಮೆರಿಕ ವಿಧಿಸಿದ ದಿಗ್ಬಂಧನವನ್ನು ಹಡಗು ಉಲ್ಲಂಘಿಸಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅಮೆರಿಕ ನೌಕಾಪಡೆ ಕಾರ್ಯಾಚರಣೆ ನಡೆಸಿದ್ದಾಗಿ ವರದಿಯಾಗಿದೆ. ಆದರೆ ಈ ದಾಳಿಯಲ್ಲಿ ಭಾರತೀಯ ನಾವಿಕರು ಪ್ರಾಣ ಕಳೆದುಕೊಂಡಿರುವುದು ಭಾರತೀಯ ತೀವ್ರ ಆಕಾಶಕ್ಕೆ ಕಾರಣವಾಗಿದೆ.

ಘಟನೆಯ ಬಳಿಕ ಭಾರತ ಸರ್ಕಾರ ಕಠಿಣ ಪ್ರತಿಕ್ರಿಯೆ ನೀಡಿದ್ದು, ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಹಿರಿಯ ಅಧಿಕಾರಿ ಜೇಸನ್ ಮಿಕ್ಸ್ ಅವರನ್ನು ಎರಡು ಬಾರಿ ಕರೆಸಿ ಅಧಿಕೃತ ಪ್ರತಿಭಟನೆ ದಾಖಲಿಸಿದೆ. ನಿರಾಯುಧ ವಾಣಿಜ್ಯ ಹಡಗುಗಳ ಮೇಲೆ ಇಂತಹ ದಾಳಿಗಳು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಭಾರತೀಯ ಸ್ಪಷ್ಟಪಡಿಸಿದೆ.

ಇದೇ ವೇಳೆ ವಿದೇಶಾಂಗ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಹಾರ್ಮುಜ್ ಜನಸಂದಿ ಮತ್ತು ಕೊಲ್ಲಿ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳನ್ನು ಖಂಡಿಸಿ, ಇವು ಜಾಗತಿಕ ಸಮುದ್ರ ವ್ಯಾಪಾರ ಹಾಗೂ ನಾಯಕರ ಸುರಕ್ಷತೆಯ ಗಂಭೀರ ಬೆದರಿಕೆ ಎಂದು ಹೇಳಿದ್ದಾರೆ. ಈ ಕುರಿತು ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೋ ರುಬಿಯೋ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ಭಾರತೀಯ ನಾವಿಕರ ಸಾವಿನ ಬಗ್ಗೆ ಭಾರತದ ತೀವ್ರ ಕರಾವಳಿ ಮತ್ತು ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದಾರೆ.

ಇದರ ನಡುವೆ, ಹಾರ್ಮುಜ್ ಜಲಸಂದಿಯಿಂದ ಸಂಚರಿಸುವ ಭಾರತೀಯ ಹಡಗುಗಳ ಮೇಲೆ ಇರಾನ್ ದ್ರೋಣ್ ದಾಳಿ ನಡೆಸುತ್ತಿದೆ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಿಸಿದರು. ಆದರೆ ಈ ಆರೋಪಗಳನ್ನು ಇರಾನ್ ಸಂಪೂರ್ಣವಾಗಿ ತಳಿ ಹಾಕಿದ್ದು, ಅವುಗಳಿಗೆ ಯಾವುದೇ ಆಧಾರವಿಲ್ಲ ಎಂದು ಸ್ಪಷ್ಟಪಡಿಸಿದೆ.

Sponsored

ಕೊಲ್ಲಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಜಾಗತಿಕ ವ್ಯಾಪಾರ, ಇಂಧನ ಸರಬರಾಜು ಮತ್ತು ಸಮುದ್ರ ಭದ್ರತೆ ಕುರಿತ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದು, ಭಾರತೀಯ ನಾವಿಕರ ಸುರಕ್ಷತೆಯ ಪ್ರಶ್ನೆ ಮತ್ತು ಪ್ರಮುಖ ಚರ್ಚೆಯ ವಿಷಯವಾಗಿದೆ.

Also Read:

ಹಣ ಖಾಲಿ,ಗ್ಯಾರಂಟಿ ಗೊಂದಲ' - ಸರ್ಕಾರದ ವಿರುದ್ಧ ವಿಜಯೇಂದ್ರ ತೀವ್ರ ಟೀಕೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online