belagavi news :
Motorola Edge 70 Max India Launch: ಟೆಕ್ ಕಂಪನಿ " ಮೊಟೊರೊಲಾ" ತನ್ನ ಜನಪ್ರಿಯ Edge 70 ಸರಣಿಯ ಐದನೇ ಮಾದರಿಯಾದ Motorola Edge 70 Max ಸ್ಮಾರ್ಟ್ ಫೋನ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಪ್ರೀಮಿಯಂ ವಿನ್ಯಾಸ, ಶಕ್ತಿಶಾಲಿ ಕಾರ್ಯಕ್ಷಮತೆ ಹಾಗೂ ದೊಡ್ಡ ಬ್ಯಾಟರಿಯೊಂದಿಗೆ ಬಂದಿರುವ ಈ ಫೋನ್ ಗ್ರಾಹಕರ ಗಮನ ಸೆಳೆಯುತ್ತಿದೆ.
ಮೊಟೊರೊಲಾ ಎಡ್ಜ್ 70 ಮ್ಯಾಕ್ಸ್ ಸ್ಮಾರ್ಟ್ ಫೋನ್ ಪ್ಯಾಂಟೋನ್ ಸಹಯೋಗದಲ್ಲಿ ವಿನ್ಯಾಸಗೊಳಿಸಿದ ಮೂರು ಆಕರ್ಷಕ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಫೋನ್ ಉನ್ನತ ಕಾರ್ಯಕ್ಷಮತೆಯ " ಆಕ್ಟಾ- ಕೋರ್ ಸ್ನಾಪ್ ಡ್ರಾಗನ್ 8 ಸೀರಿಸ್ ಚಿಪ್ ಸೆಟ್" ಹೊಂದಿದ್ದು, ವೇಗದ ಕಾರ್ಯಾಚರಣೆ ಮತ್ತು ಉತ್ತಮ ಗೇಮಿಂಗ್ ಅನುಭವ ನೀಡುವ ಗುರಿ ಹೊಂದಿದೆ.
ಸ್ಮಾರ್ಟ್ ಫೋನ್ ನಲ್ಲಿ " ಆಂಡ್ರಾಯ್ಡ್ 16 ಆಧಾರಿತ ಹ್ಯಾಲೋ UI" ಸಾಫ್ಟ್ ವೇರ್ ನೀಡಲಾಗಿದೆ. 6.8 ಇಂಚಿನ ಎಕ್ಸ್ ಟ್ರೀಮ್ AMOLED ಡಿಸ್ಪ್ಲೇ 144Hz ರಿಫ್ರೆಶ್ ರೇಟ್ ಹಾಗೂ 7,000 ನಿಟ್ಸ್ ಪೀಕ್ ಬ್ರೈಟ್ ನೆಸ್ ಬೆಂಬಲ ಇದರ ಪ್ರಮುಖ ವೈಶಿಷ್ಟ್ಯಗಳಾಗಿವೆ.
Motorola Edge 70 Max ಬೆಲೆ ಮತ್ತು ವೇರಿಯಂಟ್ ಗಳು
ಮೊಟೊರೊಲಾ ಎಡ್ಜ್ 70 ಮ್ಯಾಕ್ಸ್ ಎರಡು ಸ್ಟೋರೇಜ್ ವೇರಿಯಂಟ್ ಗಳಲ್ಲಿ ಬಿಡುಗಡೆಯಾಗಿದೆ:
8GB RAM + 256GB ಸ್ಟೋರೇಜ್: ರೂ, 54,999
12GB RAM + 256GB ಸ್ಟೋರೇಜ್ ರೂ, 59,999
ಲಾಂಚ್ ಆಫರ್ ಭಾಗವಾಗಿ ಆಯ್ದ ಬ್ಯಾಂಕ್ ಗಳ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸುವ ಗ್ರಾಹಕರಿಗೆ ರೂ. 5,000 ಇನ್ ಸ್ಟಂಟ್ ಬ್ಯಾಂಕ್ ಡಿಸ್ಕೌಂಟ್ ನೀಡಲಾಗುತ್ತಿದೆ.
ಕ್ಯಾಮೆರಾ ಮತ್ತು ಬ್ಯಾಟರಿ ಫೀಚರ್ಸ್
ಫೋಟೋಗ್ರಫಿಗಾಗಿ Motorola Edge 70 Max ನಲ್ಲಿ 50MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ- ವೈಡ್ ಆಂಗಲ್ ಕ್ಯಾಮೆರಾ ಹಾಗೂ ಸೆಲ್ಫಿಗಾಗಿ 32 MP ಫ್ರಂಟ್ ಕ್ಯಾಮೆರಾ ನೀಡಲಾಗಿದೆ.
ಫೋನ್ ನ ಪ್ರಮುಖ ಆಕರ್ಷಣೆ ಅದರ 7,100mAh ಬೃಹತ್ ಬ್ಯಾಟರಿ ಆಗಿದ್ದು, ಒಂದೇ ಚಾರ್ಜ್ ನಲ್ಲಿ 58 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡುತ್ತದೆ ಎಂದು ಕಂಪನಿ ಹೇಳಿದೆ. ಇದು 90W ವೈರ್ಡ್ ಫಾಸ್ಟ್ ಚಾರ್ಜಿಂಗ್ 25W ವೈರ್ ಲೆಸ್ ಚಾರ್ಜಿಂಗ್ ಮತ್ತು 5W ರಿವರ್ಸ್ ವೈರ್ಡ್ ಚಾರ್ಜಿಂಗ್ ಬೆಂಬಲಿಸುತ್ತದೆ.
ಇತರ ವೈಶಿಷ್ಟ್ಯಗಳು
Motorola Edge 70 Max * IP68 ಮತ್ತು IP69 ರೇಟಿಂಗ್ ಗಳೊಂದಿಗೆ ಬರುತ್ತಿದ್ದು, ಧೂಳು ಮತ್ತು ನೀರಿನಿಂದ ರಕ್ಷಣೆ ನೀಡುತ್ತದೆ. ಕನೆಕ್ಟಿವಿಟಿ ವಿಭಾಗದಲ್ಲಿ 5G,4G LTE, Wi-Fi 7,ಬ್ಲೂಟೂತ್ 6, USB Type-C, GPS, GLONASS, Galieo, NavIC, BeiDou ಮತ್ತು QZSS ಬೆಂಬಲ ಹೊಂದಿದೆ.
ಈ ಸ್ಮಾರ್ಟ್ ಫೋನ್ ನ ಮಾರಾಟವು ಜುಲೈ 20 ರಿಂದ ಫ್ಲಿಪ್ ಕಾರ್ಟ್ ಮತ್ತು ಮೊಟೊರೊಲಾ ಅಧಿಕೃತ ವೆಬ್ಸೈಟ್ ಮೂಲಕ ಆರಂಭವಾಗಲಿದೆ.