Belagavi news:
ಹೇಗ್ (ನೆದರ್ಲ್ಯಾಂಡ್ಸ್): ಬ್ರಿಟಿಷರಂತೆ ಭಾರತವನ್ನು ಆಳಿದ್ದ ಡಚ್ಚರು ಚೋಳ ಸಾಮ್ರಾಜ್ಯದ ಕಾಲದ ಅತಿ ಮಹತ್ವದ ಹಾಗೂ ಐತಿಹಾಸಿಕ ತಾಮ್ರ ಫಲಕಗಳನ್ನು ಶತಮಾನಗಳ ಹಿಂದೆ ಕೊಂಡೊಯ್ದಿದ್ದರು. ಇದೀಗ ಅವ ಮತ್ತೆ ಭಾರತಕ್ಕೆ ವಾಪಸ್ಸಾಗಿವೆ.
ನೆದರ್ಲ್ಯಾಂಡ್ಸ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಲ್ಲಿನ ಸರ್ಕಾರವು ಈ ಐತಿಹಾಸಿಕ ಫಲಕಗಳನ್ನು ಅಧಿಕೃತವಾಗಿ ಹಸ್ತಾಂತರಿಸಿದೆ. ಈ ಕ್ರಮವನ್ನು ಭಾರತ - ನೆದರ್ಲ್ಯಾಂಡ್ಸ್ ನಡುವಿನ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಸಂಬಂಧಗಳನ್ನು ಒಳಪಡಿಸುವ ಮಹತ್ವದ ಹೆಜ್ಜೆಯಾಗಿ ಪರಿಗಣಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆರು ದಿನಗಳ ಬಹು ರಾಷ್ಟ್ರ ಪ್ರವಾಸ ಕೈಗೊಂಡಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್, ನೆದರ್ಲ್ಯಾಂಡ್ಸ್, ಸ್ವೀಡನ್, ನಾರ್ವೆ ಮತ್ತು ಇಟಲಿ ದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಪ್ರವಾಸದ ಆರಂಭದಲ್ಲಿ ಅವರು ಯುಎಇಗೆ ಭೇಟಿ ನೀಡಿದ್ದರು. ಇಂದು ಅವರು ನೆದರ್ಲ್ಯಾಂಡ್ಸ್ ಗೆ ಆಗಮಿಸಿದ್ದಾರೆ.
ನೆದರ್ಲ್ಯಾಂಡ್ಸ್ ನ ರಾಜಧಾನಿ ಆಮ್ ಸ್ಟರ್ ಡ್ಯಾಮ್ ನಲ್ಲಿರುವ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ ಸಂದರ್ಭದಲ್ಲಿ ಅವರಿಗೆ ಭವ್ಯ ಸ್ವಾಗತ ಕೋರಲಾಯಿತು. ಅಲ್ಲಿನ ಪ್ರಧಾನಿ ರಾಬ್ ಜೆಟ್ಟನ್ ಅವರು ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ನೆದರ್ಲ್ಯಾಂಡ್ಸ್ ನಲ್ಲಿ ವಾಸಿಸುವ ಭಾರತೀಯ ವಲಸಿಗರು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಆಯೋಜಿಸಿದ್ದರು. ಗರ್ಬಾ, ಕುಚಿಪುಡಿ, ಭರತನಾಟ್ಯ, ಮೋಹಿನಿಯಾಟ್ಟಂ ಹಾಗೂ ಕಥಕ್ ಸೇರಿದಂತೆ ವಿವಿಧ ಭಾರತೀಯ ನೃತ್ಯ ಶೈಲಿಗಳನ್ನು ಪ್ರದರ್ಶಿಸಿ ಪ್ರಧಾನಿ ಮೋದಿ ಅವರಿಗೆ ಅಭೂತಪೂರ್ವ ಸ್ವಾಗತ ನೀಡಿದರು.
ತರುವಾಯ, ಪ್ರಧಾನಿ ಮೋದಿ ದಿ ಹೇಗ್ ನಗರದಲ್ಲಿ ಭಾರತೀಯ ವಲಸಿದರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಭುವನೇ ಅಲ್ಲಿ ಅವರು ಸಭೆಯನ್ನುದ್ದೆಶಿಸಿ ಮಾತನಾಡಿದರು. ಈ ಭೇಟಿಯ ಸಮಯದಲ್ಲಿ, ನೆದರ್ಲ್ಯಾಂಡ್ಸ್ ಪ್ರಧಾನಿ ರಾಬ್ ಜೆಟ್ಟನ್ ಮತ್ತು ಭಾರತೀಯ ಪ್ರಧಾನಿ ನರೇಂದ್ರ ಮೋದಿ ನಡುವೆ ರಾಜತಾಂತ್ರಿಕ ಸಂಬಂಧಗಳ ಕುರಿತು ದ್ವಿಪಕ್ಷಿಯ ಮಾತುಗಳು ನಡೆದವು.
ತಾಮ್ರ ಫಲಕ ಮರಳಿಸಿದ ಸರ್ಕಾರ: ಇದೆ ವೇಳೆ, 11 ನೇ ಶತಮಾನದ ಚೋಳ ಯುಗದ ಐತಿಹಾಸಿಕ ತಾಮ್ರ ಫಲಕಗಳನ್ನು ತನ್ನಲ್ಲಿ ಸಂರಕ್ಷಿಸಿಕೊಂಡಿದ್ದ ನೆದರ್ಲ್ಯಾಂಡ್ಸ್ ಸರ್ಕಾರಿ ಇದೀಗ ಅವುಗಳನ್ನು ಭಾರತಕ್ಕೆ ಹಸ್ತಾಂತರಿಸುವ ನಿರ್ಧಾರ ಕೈಗೊಂಡಿದೆ. ಈವರೆಗೆ ಈ ಫಲಕ ಗಳನ್ನು ನೆದರ್ಲ್ಯಾಂಡ್ಸ್ ನ ಲೈಡೆನ್ ವಿಶ್ವವಿದ್ಯಾಲಯನಲ್ಲಿ ಸಂರಕ್ಷಿಸಲಾಗಿತ್ತು .
ಒಟ್ಟು 21 ದೊಡ್ಡ ಹಾಗೂ 3 ಸಣ್ಣ ತಾಮ್ರ ಫಲಕಗಳು ಚೋಳರ ಕಾಲದ ಐತಿಹಾಸಿಕ ಮತ್ತು ಸಂಸ್ಕೃತಿಯನ್ನು ವಿವರಿಸುವ ಪ್ರಮುಖ ದಾಖಲೆಗಳಾಗಿವೆ. ತಮಿಳು ಭಾಷೆಯಲ್ಲಿ ಕೆತ್ತಲಾಗಿರುವ ಈ ಫಲಕಗಳನ್ನು19 ನೇ ಶತಮಾನದಲ್ಲಿ ಡಚ್ ಅಧಿಕಾರಿಗಳು ಭಾರತದಿಂದ ನೆದರ್ಲ್ಯಾಂಡ್ಸ್ ಗೆ ಕೊಂಡೊಯ್ದಿದ್ದರು. ಬಳಿಕ ಅವುಗಳನ್ನು ಲೈಡೆನ್ ವಿಶ್ವವಿದ್ಯಾಲಯದಲ್ಲಿ ಸಂಗ್ರಹಿಸಿ ಇಡಲಾಯಿತ್ತು.
ಈ ಐತಿಹಾಸಿಕ ವಸ್ತುಗಳ ವಾಪಸ್ಸು ಭಾರತ - ನೆದರ್ಲ್ಯಾಂಡ್ಸ್ ನಡುವಿನ ಸಾಂಸ್ಕೃತಿಕ ಸಂಬಂಧಗಳಿಗೆ ಮಹತ್ವದ ಮೈಲಿಗಲ್ಲು ಎಂದು ಪರಿಗಣಿಸಲಾಗಿದೆ.
ಭಾರತಕ್ಕೆ ಮರಳಿ ಸಿಕ್ಕ ಫಲಕಗಳು: ಈ ಬಗ್ಗೆ ಪ್ರಧಾನಿ ಮೋದಿ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. "ಎಲ್ಲಾ ಭಾರತೀಯರಿಗೆ ಸಂತೋಷದ ಕ್ಷಣ, 11 ನೇ ಶತಮಾನದ ಚೋಳ ಯುಗದ ತಾಮ್ರ ಫಲಕಗಳನ್ನು ನೆದರ್ ಲ್ಯಾಂಡ್ಸ್ ಸರ್ಕಾರ ಭಾರತಕ್ಕೆ ಮರಳಿಸಿದೆ. ಇವುಗಳನ್ನು ಭಾರತಕ್ಕೆ ತರಲಾಗುವುದು ಎಂದು ತಿಳಿಸಿದ್ದಾರೆ.
ದಚ್ಚರ ವಶದಲ್ಲಿದ್ದ ಭಾರತದ ದಾಖಲೆಗಳನ್ನು ಮರಳಿ ತರಲು 2012 ರಿಂದಲೂ ಪ್ರಯತ್ನ ನಡೆಸಲಾಗಿತ್ತು. ಈ ಫಲಕಗಳು ಮಹಾನ್ ಚಕ್ರವರ್ತಿ ಒಂದನೇ ರಾಜೇಂದ್ರ ಚೋಳರ ಕಾಲದ್ದಾಗಿವೆ.
Also Read: