Belagavi News:
ಮಹಾರಾಷ್ಟ್ರ ರಾಜಕೀಯದಲ್ಲಿ ಉದ್ದವ್ ಠಾಕ್ರೆ ಬಣಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ದೆಹಲಿಯಲ್ಲಿ ಉದ್ದವಾ ಠಾಕ್ರೆ ಕರೆದಿದ್ದ ಮಹತ್ವದ ಸಂಸದರ ಸಭೆಗೆ 6 ಲೋಕಸಭಾ ಸದಸ್ಯರು ಗೈರಾಗಿರುವುದು ಶಿವಸೇನೆ ಬಣದ ಒಳಗಿನ ಬಿರುಕು ಮತ್ತಷ್ಟು ಸ್ಪಷ್ಟವಾಗಿದೆ.
ಮೂಲಗಳ ಪ್ರಕಾರ, ಈ ಬೆಳವಣಿಗೆಯನ್ನು 'ಆಪರೇಷನ್ ಟೈಗರ್' ಭಾಗವಾಗಿ ನೋಡಲಾಗುತ್ತಿದ್ದು, ಕೆಲವು ಸಂಸದರನ್ನು ಎನ್‌ಡಿಎ ಬಣಕ್ಕೆ ಎಳೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ. ಈ ಮೂಲಕ ಕೇಂದ್ರದಲ್ಲಿ ಎನ್ ಡಿಎ ಬಲ ಹೆಚ್ಚಿಸುವ ತಂತ್ರ ನಡೆಯುತ್ತಿದೆ ಎನ್ನಲಾಗಿದೆ.
ಸಭೆಗೆ ಗೈರಾದ ಸಂಸದರು ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು, ಅವರ ವಿರುದ್ಧ ಅನರ್ಹತೆ ಕ್ರಮ ಕೈಗೊಳ್ಳಲು ಶಿವಸೇನೆ ನಾಯಕತ್ವ ಇದ್ದತೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಸಂಸದರು ಪಕ್ಷಾಂತರ ಮಾಡಿದ್ದ ಘಟನೆ ನಂತರ, ಇದೀಗ ಮಹಾರಾಷ್ಟ್ರದ ಶಿವಸೇನೆ ( ಉದ್ದವ್, ಬಾಳಾಸಾಹೇಬ್ ಠಾಕ್ರೆ) ಬಣದಲ್ಲೂ ದೊಡ್ಡ ಮಟ್ಟದ ವಿಭಜನೆ ದೃಢವಾಗಿರುವುದು ದೇಶ ರಾಜಕೀಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಈ ಬೆಳವಣಿಗೆ ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರ ಹಾಗೂ ರಾಷ್ಟ್ರೀಯ ರಾಜಕೀಯ ಸಮೀಕರಣಗಳ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಏನಿದು 'ಆಪರೇಷನ್ ಟೈಗರ್'? ಮಹಾರಾಷ್ಟ್ರ ರಾಜಕೀಯದಲ್ಲಿ ಭೂಕಂಪದ ಹಿಂದಿನ ರಹಸ್ಯ ಕಾರ್ಯಾಚರಣೆ :
ಮಹಾರಾಷ್ಟ್ರ ರಾಜಕೀಯದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಚರ್ಚೆಗೆ ಕಾರಣವಾಗಿರುವ 'ಆಪರೇಷನ್ ಟೈಗರ್' ಇದೀಗ ಮತ್ತೊಂದು ರಾಜಕೀಯ ಭೂಕಂಪಕ್ಕೆ ಕಾರಣವಾಗಿದೆ. ಉದ್ದವ್ ಠಾಕ್ರೆ ಬಣದ ಸಂಸದರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಈ ರಹಸ್ಯ ಕಾರ್ಯಾಚರಣೆಗೆ ದೇಶದ ರಾಜಕೀಯ ವಲಯದಲ್ಲಿ ಸಾಕಷ್ಟು ಗಮನ ಸೆಳೆಯಲಾಗಿದೆ.
ಮೂಲಗಳ ಪ್ರಕಾರ, 'ಆಪರೇಷನ್ ಟೈಗರ್' ಅಡಿಯಲ್ಲಿ ಶಿವಸೇನೆ ಬಣದ ಸಂಸದರನ್ನು ಕಳೆದು ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಹಾಗೂ ಬಿಜೆಪಿ ನಾಯಕತ್ವ NDA ಮೈತ್ರಿಕೂಟಕ್ಕೆ ಸೇರಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಬೆಳವಣಿಗೆಗೆ ಪ್ರಮುಖ ಕಾರಣವಾಗಿ ಕೇಂದ್ರ ರಾಜಕೀಯ ಸಮೀಕರಣಗಳನ್ನು ಉಲ್ಲೇಖಿಸಲಾಗುತ್ತಿದೆ. ಲೋಕಸಭೆಯಲ್ಲಿ ಕೆಲವು ಮಹತ್ವದ ಮಸೂದೆಗಳನ್ನು ಅಂಗೀಕರಿಸಲು NDA ಗೆ ಇನ್ನು ಸುಮಾರು 46 ಸಂಸದರ ಕೊರತೆ ಇತ್ತು ಎಂದು ಮೂಲಗಳು ಸೂಚಿಸುತ್ತಿವೆ.
ಈ ಹಿನ್ನೆಲೆಯಲ್ಲಿ ಉದ್ದವಾ ಠಾಕ್ರೆ ಬಣದ ಆರು ಸಂಸದರನ್ನು ಬೆಳೆಯುವ ಮೂಲಕ ಶಿಂದೆ - ಬಿಜೆಪಿ ಮೈತ್ರಿಕೂಟ ಕೇಂದ್ರದಲ್ಲಿ ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ.
ಈ ಬೆಳವಣಿಗೆ ಶುಭ ಸೇನೆ ಒಳಗಿನ ಒಡಕು ಮತ್ತಷ್ಟು ಗಾಢವಾಗಿದ್ದು, ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಅಧಿಕಾರ ಸಮೀಕರಣಗಳ ಸೂಚನೆ ನಡೆಯುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಶಿವಸೇನೆ ಸಭೆಗೆ 4 ಸಂಸದರು ಹಾಜರು - ವಿಪ್ ಉಲ್ಲಂಘಿಸಿ ಆರು ಸಂಸದರು ಗೈರು - ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಬಿರುಕು:
ಮಹಾರಾಷ್ಟ್ರ ರಾಜಕೀಯದಲ್ಲಿ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆ ಬಣದಲ್ಲಿ ಒಳಭಾಗದ ಅಸಮಾಧಾನ ಮತ್ತೊಮ್ಮೆ ಬಹಿರಂಗವಾಗಿದೆ. ದೆಹಲಿಯಲ್ಲಿ ನಡೆದ ಪಕ್ಷದ ಮಹತ್ವದ ಸಂಸದರ ಸಭೆಗೆ ಕೇವಲ ನಾಲ್ಕು ಸಂಸದರು ಮಾತ್ರ ಹಾಜರಾಗಿದ್ದು, ಇನ್ನು 6 ಸಂಸದರು ವಿಪ್ ಉಲ್ಲಂಘಿಸಿ ಧೈರ್ ಆಗಿರುವುದು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಪಕ್ಷದ ಸಭೆಗೆ ಕಡ್ಡಾಯ ಹಾಜರಾತಿಗಾಗಿ ನಿನ್ನಲ್ಲೇ ಮೂರು ಸಾಲಿನ ವಿಪ್ ಬಾರಿ ಮಾಡಲಾಗಿತ್ತು. ಆದರೂ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಸಭೆಯಲ್ಲಿ ನಿರೀಕ್ಷಿತ ಸಂಖ್ಯೆಯಲ್ಲಿ ಸದಸ್ಯರು ಭಾಗವಹಿಸದಿರುವುದು ಪಕ್ಷದ ಒಳಗಿನ ಒಡಕು ಮತ್ತಷ್ಟು ಗಾಢವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸಭೆಗೆ ಹಾಜರಾದ ಸಂಸದರು:
ಪಕ್ಷದ ಸಭೆಯಲ್ಲಿ ಹಾಜರಾಗಿದವರು :
1. ಸಂಜಯ್ ರಾವತ್
2. ಅನಿಲ್ ದೇಸಾಯಿ
3. ಅರವಿಂದ್ ಸಾವಂತ್
4. ರಾಜಭಾವು ವಾಜೆ
ವಿಪ್ ಉಲ್ಲಂಘಿಸಿ ಗೈರಾದ ಸಂಸದರು - ಪಕ್ಷದ ಆದೇಶವನ್ನು ಧಿಕ್ಕರಿಸಿ ಸಭೆಯಿಂದ ದೂರ ಉಳಿದ ಸಂಸದರು:
1. ಸಂಜಯ್ ದಿನಾ ಪಾಟೀಲ್
2. ಸಂಜಯ್ ದೇಶಮುಖ್
3. ಸಂಜಯ್ (ಬಂದು) ಜಾಧವ್
4. ಓಂರಾಜೆ ನಿಂಬಾಳ್ಕರ್
5. ಸಂಜಯ್ ವಕ್ಚಾೌರೆ
6. ನಾಗೇಶ್ ಪಾಟೀಲ್ ಅಶ್ಟಿಕರ್
ಈ ಬೆಳವಣಿಗೆಯನ್ನು ಮಹಾರಾಷ್ಟ್ರ ರಾಜಕೀಯದಲ್ಲಿ ದೊಡ್ಡ ರಾಜಕೀಯ ಬಂಡಾಯದ ಸಂಕೇತವಾಗಿ ನೋಡಲಾಗುತ್ತಿದ್ದು, ಶಿವಸೇನೆ ಬಣದಲ್ಲಿ ಮತ್ತಷ್ಟು ವಿಭಜನೆ ಸಂಭವಿಸಬಹುದು ಎಂಬ ಚರ್ಚೆ ಜೋರಾಗಿದೆ.
ಪಕ್ಷದ ವಿಪ್ ಉಲ್ಲಂಘನೆ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅನರ್ಹತೆ ಕ್ರಮ ಕೈಗೊಳ್ಳುವ ಸಾಧ್ಯತೆಗಳು ಇರುವುದಾಗಿ ರಾಜಕೀಯ ವಲಯದಲ್ಲಿ ಊಹಾಪಗಳು ಹರಡಿವೆ.
ಉದ್ದವ್ ಠಾಕ್ರೆ ಬಣದ ಮುಂದಿನ ನಡೆ ಏನು? ಬಂಡಾಯಕ್ಕೆ ಅನರ್ಹತೆ ತೂಗುಗತ್ತಿ :
ಮಹಾರಾಷ್ಟ್ರ ರಾಜಕೀಯದಲ್ಲಿ ಶಿವ ಸೇನೆ ಬಣದ ಒಳಭಾಗದ ಬಿಕಟ್ಟು ಮತ್ತಷ್ಟು ತೀವ್ರಗೊಂಡಿದೆ. ಪಕ್ಷದ ವಿಪ್ ಉಲ್ಲಂಘಿಸಿ ಸಭೆಗೆ ಗೈರಾದ ಆರು ಸಂಸದರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಉದ್ದವ್ ಠಾಕ್ರೆ ನೇತೃತ್ವದ ಬಣ ಸಜ್ಜಾಗಿದೆ.
ಮೂಲಗಳ ಪ್ರಕಾರ, ಮೊದಲು ಈ ಬಂಡಾಯ ಸಂಸದರಿಗೆ 'ಶೋಕಾಸ್ ನೋಟಿಸ್' ಜಾರಿ ಮಾಡುವ ಸಾಧ್ಯತೆ ಇದೆ. ನಂತರ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವಂತೆ ಲೋಕಸಭಾ ಸ್ಪೀಕರ್ ಗೆ ಅಧಿಕೃತ ದೂರು ಸಲ್ಲಿಸಲು ಪಕ್ಷ ನಿರ್ಧರಿಸಿರುವುದಾಗಿ ತಿಳಿದುಬಂದಿದೆ. ಈ ಮೂಲಕ ಮಹಾರಾಷ್ಟ್ರ ರಾಜಕೀಯದ ಹೈಡ್ರಾಮ ಈಗ ದೆಹಲಿಯ ಸಂಸತ್ ಅಂಗಳಕ್ಕೆ ತಲುಪಿದೆ.
ಉದ್ದವ್ ಠಾಕ್ರೆ ಬಣದಲ್ಲಿ 9 ಸಂಸದರು ; ಬಂಡಾಯವೇ 6:
ಶಿವಸೇನೆ ಬಣದಲ್ಲಿ ಒಟ್ಟು ಒಂಬತ್ತು ಲೋಕಸಭಾ ಸಂಸದರು ಇದ್ದಾರೆ. ಪಕ್ಷಾಂತರ ವಿರೋಧಕ ಕಾಯ್ದೆ ಪ್ರಕಾರ, ಅನರ್ಹತೆಯಿಂದ ತಪ್ಪಿಸಿಕೊಳ್ಳಲು ಕನಿಷ್ಠ ಮೂರನೇ ಎರಡರಷ್ಟು ಅಂದರೆ ಆರು ಸಂಸದರು ಒಟ್ಟಾಗಿ ಪಕ್ಷ ತೊರೆಯಬೇಕಾಗುತ್ತದೆ. ಇದೀಗ ಬಂಡಾಯಗಾರರು ನಿಖರವಾಗಿ ಇದೇ ಸಂಖ್ಯೆಯನ್ನು ತಲುಪಿರುವುದು ರಾಜಕೀಯಕ್ಕಾಗಿ ಮಹತ್ವ ಪಡೆದುಕೊಂಡಿದೆ.
2022 ರಲ್ಲಿ ಏಕನಾಥ್ ಶಿಂಧೆ ನೇತೃತ್ವದಲ್ಲಿ ಶಾಸಕರ ವಿಭಜನೆ ನಡೆದ ರೀತಿಯಲ್ಲೇ, ಈಗ ಸಂಸದರ ಮಟ್ಟದಲ್ಲಿ ಇದೇ ರೀತಿಯ ಬೆಳವಣಿಗೆ ಸಂಭವಿಸಿರುವುದು ಉದ್ದವ್ ಠಾಕ್ರೆ ಬಳಕೆ ದೊಡ್ಡ ರಾಜಕೀಯ ಹೊಡೆತವಾಗಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಶಿವ ಸೇನೆ ಮತ್ತು ರಾಷ್ಟ್ರೀಯ ರಾಜಕೀಯ ಸಮೀಕರಣಗಳ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
Also Read:
ಪ್ಯಾರಿಸ್ ಗೆ ಪ್ರಧಾನಿ ಮೋದಿ ಭೇಟಿ ; ಭಾರತ - ಫ್ರಾನ್ಸ್ ಬಾಂಧವ್ಯಕ್ಕೆ ಮತ್ತಷ್ಟು ಬಲ